Evening Digest: ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ ಎಂದ ಮುತಾಲಿಕ್: ಹಲ್ಲಿ ಮೇಲೆ ಅತ್ಯಾಚಾರ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  'ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ' : ಇನ್ಮುಂದೆ ಒಂದು ಹಿಂದೂ ಹುಡುಗಿಯನ್ನು (Hindu Girl) ಹಾರಿಸಿಕೊಂಡು ಹೋದ್ರೆ ನೀವು 10 ಮುಸ್ಲಿಂ ಹುಡುಗಿಯನ್ನು (Muslim Girl) ಹಾರಿಸಿಕೊಂಡು ಹೋಗಿ ಎಂದು ಬಹಿರಂಗ ಸಮಾವೇಶದಲ್ಲಿ ಹಿಂದೂ ಯುವಕರಿಗೆ ಪ್ರಮೋದ್ ಮುತಾಲಿಕ್ (Pramod Mutalik) ಕರೆ ಕೊಟ್ಟಿದ್ದಾರೆ. ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ (Convention) ಪ್ರಮೋದ್ ಮುತಾಲಿಕ್ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಹಿಂದು ಯುವತಿಯರನ್ನು ಲವ್ ಜಿಹಾದ್ (Love Jihad) ಮಾಡಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ವ್ಯವಸ್ಥಿತವಾಗಿ ಮೋಸ ಮಾಡಲಾಗುತ್ತಿದೆ. ಮೋಸದಿಂದ ಹೆಣ್ಣು ಮಕ್ಕಳನ್ನು ಮತಾಂತರ ಮಾಡಲಾಗುತ್ತಿದೆ. ಸಂಘರ್ಷಕ್ಕೆ ಎಡೆ ಮಾಡಿಕೊಡಬೇಡಿ, ನಿಮ್ಮ ಮಕ್ಕಳಿಗೆ ಬುದ್ಧಿ ಹೇಳಿ" ಅಂತ ಮುಸ್ಲಿಂ ಮುಖಂಡರಿಗೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

  ಅನೇಕರು ಅಂಬೇಡ್ಕರ್ ಹೆಸರೇಳಿ ಮೇಲೆ ಬಂದಿದ್ದಾರೆ- ಸಿಎಂ

  ಇಂದು ಭಾರತ ಸಂವಿಧಾನ ಶಿಲ್ಪಿ ಅಂಬೇಡ್ಕರ್​ ಜಯಂತಿ (Ambedkar Jayanti), ಈ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಅಂಬೇಡ್ಕರ್​ ಪ್ರಶಸ್ತಿ ಪ್ರದಾನ (Awards awarded) ಕಾರ್ಯಕ್ರಮ ನಡೆಯಿತು. ಈ ವೇಳೆ ಸಭೆಯಲ್ಲಿ ಮಾತಾಡಿದ ಸಿಎಂ ಬಸವರಾಜ​ ಬೊಮ್ಮಾಯಿ (CM Basavaraj Bommai) ಅವರು,​ ಅಪಾರವಾದ ಜ್ಞಾನ ನಮ್ಮ ಸಂವಿಧಾನದಲ್ಲಿದೆ. ಸಮಾಜದಲ್ಲಿರೋ ಎಲ್ಲ ಸಮಸ್ಯೆಗೂ ಉತ್ತರ ಸಂವಿಧಾನದಲ್ಲಿದೆ. ಸೂರ್ಯ, ಚಂದ್ರ ಇರೋವರೆಗೂ ನಮ್ಮ ಸಂವಿಧಾನ (Constitution) ಹಾಗೂ ಅಂಬೇಡ್ಕರ್ ಹೆಸರೂ ಕೂಡ ಇರುತ್ತೆ ಎಂದು ಹೇಳಿದ್ರು. ಅನೇಕರು ಅಂಬೇಡ್ಕರ್​ ಹೆಸರಲ್ಲಿ ಉತ್ತಮ ಸ್ಥಾನ ಪಡೆದು ಮರೆತಿದ್ದಾರೆ ಬಹಳಷ್ಟು ಜನ ಅಂಬೇಡ್ಕರ್ ಹೆಸರಲ್ಲಿ ಮೇಲೆ ಮೇಲೆ ಹೋಗಿದ್ದಾರೆ. ಉತ್ತಮ ಸ್ಥಾನಗಳನ್ನು ಪಡೆದು ಸಮಾಜ ಮರೆತಿದ್ದಾರೆ ಇವರೆಲ್ಲಾ ಪಟ್ಟಭದ್ರ ಹಿತಾಸಕ್ತರು. ಈ ಪಟ್ಟಭದ್ರ ಹಿತಾಸಕ್ತಿಗಳು ದೇಶವನ್ನು ಹಾಳು ಮಾಡ್ತಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

  ಹಲ್ಲಿ ಮೇಲೆ ಅತ್ಯಾಚಾರ

  ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಅಸಹ್ಯಕರ ಘಟನೆಯೊಂದು (Bizarre Incident) ಮಹಾರಾಷ್ಟ್ರದಿಂದ (Maharashtra) ವರದಿಯಾಗಿದೆ. ನಾವು ಈ ಹಿಂದೆ ಮಹಿಳೆಯರ ಮೇಲೆ ಕಾಮಾಂಧರು ಸಾಮೂಹಿಕ ಬಲಾತ್ಕಾರ (Gangrape) ಮಾಡಿರುವ ಅನೇಕ ಘಟನೆಗಳನ್ನು ಕೇಳಿದ್ದೇವೆ. ಅಷ್ಟೇ ಏಕೆ, ನಾಚಿಕೆಯಿಲ್ಲದ ಕಾಮ ಪಿಶಾಚಿಗಳು ಪ್ರಾಣಿಗಳ ಮೇಲೆಯೂ ಅತ್ಯಾಚಾರ ಮಾಡಿರುವ ಅಸಭ್ಯ ಘಟನೆಗಳೂ ಸಹ ವರದಿಯಾಗಿವೆ. ಆದರೆ, ಮಹಾರಾಷ್ಟ್ರದ ಗೋಥನೆ ಎಂಬ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಾಲ್ ಪ್ರಭೇದದ ದೈತ್ಯ ಹಲ್ಲಿಯೊಂದರ ಮೇಲೆ ನಾಲ್ಕು ಜನ ಕಾಮುಕರು ಅತ್ಯಾಚಾರ ಮಾಡಿರುವ ಅಸಹ್ಯಕರ ಘಟನೆ ಬೆಳಕಿಗೆ ಬಂದಿದೆ.

  ನಾಲ್ವರ ಸಜೀವ ದಹನ

  ವಾರಣಾಸಿಯ ಭೇಲುಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಶ್ಫಾಕ್ ನಗರ ಕಾಲೋನಿಯಲ್ಲಿರುವ ಸೀರೆ  ನೇಯ್ಗೆ ಫ್ಯಾಕ್ಟರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ ನಿಂದ ಬೆಂಕಿ ಕಾಣಿಸಿಕೊಂಡು ತಂದೆ ಮತ್ತು ಮಗ ಸೇರಿದಂತೆ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳ ಬರುವ ಮುನ್ನ ಸ್ಥಳೀಯರು ಹರಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಇಲ್ಲವಾದರೆ ಅನಾಹುತ ಇನ್ನೂ ದೊಡ್ಡದಾಗುತ್ತಿತ್ತು. ಮದನಪುರದ ವ್ಯಕ್ತಿಯೊಬ್ಬರು ಅಶ್ಫಾಕ್ ನಗರದ ಮನೆಯೊಂದರಲ್ಲಿ ಸೀರೆ ಫಿನಿಶ್ ಮಾಡುವ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಡುಗೆ ಮಾಡುವಾಗ ಬೆಂಕಿ ಹೊತ್ತಿಕೊಂಡಿರಬಹುದು. ಘಟನೆ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.

  ಬುಕ್ ಮೈ ಶೋ -IMDB ಗಳಲ್ಲಿಯೂ KGF 2 ಹವಾ

  ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಬುಕ್​ ಮೈ ಶೋ ಮತ್ತು IMDB ರೇಟಿಂಗ್​ ನಲ್ಲಿ ಕೆಜಿಎಫ್ 2 ಸಾಧನೆ ಮಾಡಿದೆ. ಹೌದು, ಇಂದು (ಏಪ್ರಿಲ್ 14) ಸಂಜೆ 5 ಗಂಟೆ ಸಮಯಕ್ಕೆ ಬುಕ್​ ಮೈ ಶೋ ನಲ್ಲಿ ಸಿನಿಮಾಗೆ 33.9 ಸಾವಿರ ಜನರು ರೇಟಿಂಗ್ ನೀಡಿದ್ದಾರೆ. ಚಿತ್ರ ರೇಟಿಂಗ್ ಶೇ.95ರಷ್ಟಿದ್ದೆ. ಇನ್ನು, ಅದೇ ರೀತಿ IMDB ರೇಟಿಂಗ್​ ನಲ್ಲಿಯೂ ಚಿತ್ರದ ಹವಾ ಜೋರಾಗಿದ್ದು, ಇಂದು (ಏಪ್ರಿಲ್ 14) ಸಂಜೆ 5 ಗಂಟೆಗೆ 6.6 ಸಾವಿರ ಮಂದಿ ಚಿತ್ರಕ್ಕೆ ರೇಟಿಂಗ್​ ನೀಡಿದ್ದು, 9.8/10 ಇದೆ. ಮುಂದಿನ ದಿನಗಳಲ್ಲಿ ಈ ರೇಟಿಂಗ್ ಬದಲಾವಣೆ ಕಾಣಲಿದೆ.
  Published by:Kavya V
  First published: