Evening Digest: ಹೆಂಡ್ತಿ ಹೆಣ್ಣಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ ಗಂಡ: ಮಹಿಳೆಯರಿಗೆ ಉಚಿತ ಬಸ್ ಪಾಸ್? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಹೆಂಡ್ತಿ ಹೆಣ್ಣಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ ಗಂಡ : ಇಲ್ಲೊಂದು ಕಡೆ ಗಂಡ ವಿಚಿತ್ರ ಸಮಸ್ಯೆಯೊಂದನ್ನು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿದ್ದಾನೆ. ತನ್ನ ಹೆಂಡ್ತಿಗೆ ಯೋನಿಯೇ ಇಲ್ಲ ಎನ್ನುವುದು ಈತನ ದೂರು. ಹೆಣ್ಣಾದ ಮೇಲೆ ಯೋನಿ ಇಲ್ಲದಿರುತ್ತದೆಯೇ ಎನ್ನಬೇಡಿ, ಇವನಂತೂ ಆರೋಪ ಮಾಡಿ ಕೋರ್ಟ್ (Court) ಮೆಟ್ಟಿಲು ಹತ್ತಿಯೇಬಿಟ್ಟಿದ್ದಾನೆ. ತನ್ನ ಪತ್ನಿ ಪುರುಷ ಜನನಾಂಗವನ್ನು (Penis) ಹೊಂದಿರುವುದರಿಂದ ಈ ಮೂಲಕ ತನಗೆ ವಂಚನೆ ಮಾಡಿದ್ದಕ್ಕಾಗಿ ಕ್ರಿಮಿನಲ್ (Criminal) ಮೊಕದ್ದಮೆ ಹೂಡಬೇಕು ಎಂಬ ಗಂಡನ ಮನವಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ (Supreme Court) ಸಮ್ಮತಿಸಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Viral News: ಹೆಂಡ್ತಿ ಹೆಣ್ಣಲ್ಲ ಗಂಡು, ಆಕೆಗೆ ಶಿಶ್ನವಿದೆ ಎಂದು ಕೋರ್ಟ್​ ಮೆಟ್ಟಿಲೇರಿದ ಗಂಡ

ಮಹಿಳೆಯರಿಗೆ ಉಚಿತ ಬಸ್ ಪಾಸ್?
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ (Assembly Election), ಒಂದು ವರ್ಷ ಬಾಕಿ ಇದೆ. ಈಗಾಗಲೇ ಎಲ್ಲ ಪಕ್ಷಗಳು ರಾಜಕೀಯದಾಟ ಶುರುಮಾಡಿಕೊಂಡಿವೆ. ಚುನಾವಣೆ ದೃಷ್ಟಿಯಲ್ಲೇ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಜನರ ಮನವೊಲಿಕೆಗೆ ಮುಂದಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ (Congress), ಜೆಡಿಎಸ್ (JDS) ಕೂಡ ಮತದಾರರ (Voters) ಮನವೊಲಿಕೆಗೆ ಮುಂದಾಗಿದೆ. ಇತ್ತ ಆಡಳಿತ ಪಕ್ಷ ಬಿಜೆಪಿ ಸಹ ಮುಂದಿನ ಬಾರಿ ತಾವೇ ಅಧಿಕಾರಕ್ಕೆ ಬರಲು ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಜೊತೆಗೆ ರಾಜ್ಯದ ಜನರಿಗೆ ಹಲವು ಭರವಸೆಗಳನ್ನು ನೀಡುತ್ತಾರೆ. ಇದೀಗ ಸಾರಿಗೆ ಸಚಿವ ಶ್ರೀರಾಮುಲು (B. Shriramulu) ಸಹ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ (Free Bus Pass) ನೀಡೋದಾಗಿ ಹೇಳಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:SriRamulu: ಮಹಿಳೆಯರಿಗೆ ಉಚಿತ ಬಸ್ ಪಾಸ್, ಸಚಿವ ಬಿ.ಶ್ರೀರಾಮುಲು ಹೇಳಿಕೆ

ಜಾತ್ರೆ ವೇಳೆ ಯುವತಿಯನ್ನು ಎಳೆದಾಡಿ ತಬ್ಬಿಕೊಂಡು ಲೈಂಗಿಕ ಕಿರುಕುಳ
ಮಧ್ಯಪ್ರದೇಶದಲ್ಲಿ ಯುವಕರ ಗುಂಪು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ನೂರಾರು ಜನರ ಎದುರೇ ಬಾಲಕಿಯ ಮೇಲೆ ದೌರ್ಜನ್ಯ ನಡೆದಿದೆ. ರಸ್ತೆಯಲ್ಲಿ ಎಲ್ಲರೂ ನೋಡುತ್ತಿರುವಾಗಲೇ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಒಬ್ಬರ ನಂತರ ಒಬ್ಬರು ಹುಡುಗಿಯ ಮೇಲೆ ಬಿದ್ದು ಮೃಗದಂತೆ ಹಿಂಸಿಸಿರು ಪೈಶಾಚಿಕ ಘಟನೆ ನಡೆದಿದೆ. ಕೆಲ ಯುವಕರು ಕಿರುಕುಳ ನೀಡುತ್ತಿದ್ದರೆ.. ಇನ್ನು ಕೆಲವರು ಅದನ್ನು ವಿಡಿಯೋ ಮಾಡಿದ್ದಾರೆ. ಮಧ್ಯಪ್ರದೇಶದ ಅಲಿರಾಜ್ಪುರದಲ್ಲಿ ಬುಡಕಟ್ಟು ಜನಾಂಗದವರು ಆಚರಿಸುತ್ತಿದ್ದ ಭಗೋರಿಯಾ ಹಬ್ಬದ ವೇಳೆ ಯುವಕರ ಗುಂಪು ಬಾಲಕಿಗೆ ಕಿರುಕುಳ ನೀಡಿದೆ. ಒಬ್ಬರ ನಂತರ ಒಬ್ಬರಂತೆ ಬಾಲಕಿಯನ್ನು ಬಲವಂತವಾಗಿ ಹಿಡಿದು ಲೈಂಗಿಕ ದೌರ್ಜನ್ಯ ಎಸಗಲಾಯಿತು. ಬಾಲಕಿ ಕಿರುಚಾಡುತ್ತಾ, ಅಸಹಾಯಕ ಸ್ಥಿತಿಯಲ್ಲಿದ್ದರೂ ಯಾರೂ ಸಹಾಯಕ್ಕೆ ಬಂದಿಲ್ಲ. ಸಹಾಯ ಮಾಡಲು ಮುಂದೆ ಬರದೆ ವಿಡಿಯೋ ಮಾಡುವುದರಲ್ಲಿ ನಿರತರಾಗಿರೋದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ.

ನವೀನ್ ಮೃತದೇಹ ತರಲು PM Modi ಮಹತ್ವದ ಸೂಚನೆ
ಭಾರತದ ಭದ್ರತಾ ಸನ್ನದ್ಧತೆ ಮತ್ತು ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಸಭೆಯಲ್ಲಿ ಉಕ್ರೇನ್ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾದ ಆಪರೇಷನ್ ಗಂಗಾ - ಮಿಷನ್ನ ವಿವರಗಳನ್ನು ಒಳಗೊಂಡಂತೆ ಉಕ್ರೇನ್ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರಧಾನಿ ಮೋದಿ ಅವರಿಗೆ ವಿವರಿಸಲಾಯಿತು. ಖಾರ್ಕಿವ್ನಲ್ಲಿ ಸಾವನ್ನಪ್ಪಿದ ಕರ್ನಾಟಕದ ಹಾವೇರಿಯ ನವೀನ್ ಶೇಖರಪ್ಪ ಅವರ ಪಾರ್ಥಿವ ಶರೀರವನ್ನು ಮರಳಿ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಮೋದಿ ನಿರ್ದೇಶನ ನೀಡಿದ್ದಾರೆ.

ಪರ್ಸ್ ಕದ್ದು ಸಿಕ್ಕಿಬಿದ್ದ ನಟಿ
ಬೆಂಗಾಲಿ (Bengali) ಚಿತ್ರರಂಗದ ( Movie Industry) ಖ್ಯಾತ ನಟಿ ರೂಪಾ ದತ್ತಾ (Actress Rupa Dutta) ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ರೂಪಾ ದತ್ತಾ ಅವರನ್ನು ಪಿಕ್ ಪಾಕೆಟ್ (pickpocketing) ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಕೋಲ್ಕತ್ತಾ (Kolkata) ಅಂತಾರಾಷ್ಟ್ರೀಯ ಪುಸ್ತಕ ಮೇಳ ( International Book Fair) ದಲ್ಲಿ ಈ ಘಟನೆ ನಡೆದಿದೆ. ಜೇಬುಗಳ್ಳತನ ಆರೋಪದ ಮೇಲೆ ನಟಿ ರೂಪಾ ದತ್ತಾ ಬಂಧಿತರಾಗಿದ್ದಾರೆ. ವಿಧಾನನಗರ ಉತ್ತರ ಪೊಲೀಸ್ ಠಾಣೆಯ ಮೂಲಗಳ ಪ್ರಕಾರ, ಶನಿವಾರ ನಟಿ ರೂಪಾ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಮಹಿಳೆಯೊಬ್ಬರು ಡಸ್ಟ್ಬಿನ್ಗೆ ಚೀಲವನ್ನು ಎಸೆಯುತ್ತಿರುವುದನ್ನು ನೋಡಿದ ಪೊಲೀಸರಿಗೆ ಆಕೆಯ ಬಗ್ಗೆ ಅನುಮಾನ ಬಂದಿತ್ತು. ನಂತರ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
Published by:Kavya V
First published: