Evening Digest: ನನ್ನ ಕ್ಷೇತ್ರದಲ್ಲಿ ಮಾಂಸ ತಿನ್ನಂಗಿಲ್ಲ ಎಂದ ಬಿಜೆಪಿ ಶಾಸಕ: ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರು! ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ನನ್ನ ಕ್ಷೇತ್ರದಲ್ಲಿ ಮಾಂಸ ತಿನ್ನಂಗಿಲ್ಲ ಎಂದ ಬಿಜೆಪಿ ಶಾಸಕ : ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದ ಕಿಶೋರ್ (MLA Nand Kishor) ಅವರು ಮಾಂಸದ ಅಂಗಡಿಗಳ ಮೇಲೆ ನಿಷೇಧ ಹೇರುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮಾಂಸದ ಅಂಗಡಿಗಳು ವ್ಯಾಪಾರ ನಡೆಸಿದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು. ಲೋನಿಯಲ್ಲಿ ಒಂದೇ ಒಂದು ಮಾಂಸದ ಅಂಗಡಿ ಕಂಡು ಬಂದರೂ ನಾನು ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ.... ಲೋನಿಯಲ್ಲಿ ರಾಮರಾಜ್ಯವಿದೆ. ರಾಮರಾಜ್ಯದಲ್ಲಿ ಮಾಂಸದ ಅಂಗಡಿಗಳಿಗೆ ಅನುಮತಿ ನೀಡಬೇಕೇ? ಎಂದು ಅವರು ಕಾರ್ಯಕ್ರಮವೊಂದರಲ್ಲಿ ನೆರೆದಿದ್ದವರಿಗೆ ಕೇಳಿದರು. ಜನರು ಹಾಲು ಮತ್ತು ತುಪ್ಪವನ್ನು ಸೇವಿಸಬೇಕು ಎಂದೂ ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:ನನ್ನ ಕ್ಷೇತ್ರ ರಾಮರಾಜ್ಯ.. ಇಲ್ಲಿ ಮಾಂಸ ತಿನ್ನಂಗಿಲ್ಲ, ಇದನ್ನೇ ತಿನ್ನಬೇಕು: BJP MLA ವಿವಾದಾತ್ಮಕ ಹೇಳಿಕೆ

ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರು!
ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ (MLA G.T Deve Gowda) ಹಾಗೂ ಪಕ್ಷದ ವರಿಷ್ಠರ ನಡುವೆ ಮುಸುಕಿನ ಗುದ್ದಾಟ ನಡೀತಾ ಇರೋದು ಎಲ್ಲರಿಗೂ ಗೊತ್ತೇ ಇದೆ. ಜಿ.ಟಿ ದೇವೇಗೌಡ ಸಹ ವರಿಷ್ಠರ ಮೇಲಿನ ಅಸಮಾಧಾನದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದ್ರೆ ಜೆಡಿಎಸ್ ಪಕ್ಷ (JDS Party) ಬಿಡೋದಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ. ಹಲವು ದಿನಗಳಿಂದ ಕಾಂಗ್ರೆಸ್ (Congress) ಪಕ್ಷದ ಜೊತೆ ಸ್ನೇಹ ಹೊಂದಿದ್ದಾರೆ. ಒಳಗೊಳಗೆ ಚರ್ಚೆ ನಡೀತಿದೆ. ಅಷ್ಟೆ ಅಲ್ಲದೇ ಮೈಸೂರಿನಲ್ಲಿ ಕಾಂಗ್ರೆಸ್ ನಾಯಕರ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡು ಅಚ್ಚರಿ ಉಂಟು ಮಾಡಿದ್ರು ಇದೀಗ ದಿಢೀರ್ ಅಂತ ಕಾಂಗ್ರೆಸ್ ಜೊತೆ ಟಿಕೆಟ್ ಡೀಲ್ (Ticket Deal) ಬಗ್ಗೆ ಮಾತುಕತೆ ನಡೆಸಿರೋದಾಗಿ ಹೇಳಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Ticket Deal: ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರು! ಕಾಂಗ್ರೆಸ್ ಜೊತೆ ಜಿ.ಟಿ ದೇವೇಗೌಡ ‘ಟಿಕೆಟ್ ಡೀಲ್‘

ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಗೆ ಸಮನ್ಸ್ ಜಾರಿ
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ (Phone Tapping Case) ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ((Devendra Fadnavis) ಅವರಿಗೆ ಮುಂಬೈ ಪೊಲೀಸರು (Mumbai Police) ಸಮನ್ಸ್ (Summoned) ಜಾರಿ ಮಾಡಿದ್ದಾರೆ. ನಿಗದಿತ ದಿನಾಂಕದಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿಕೊಳ್ಳುತ್ತೇನೆ ಎಂದು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಫಡ್ನವೀಸ್ ಹೇಳಿದ್ದಾರೆ. ಮುಂಬೈ ಪೊಲೀಸರು ಸೆಕ್ಷನ್ 160 ಸಿಆರ್ಪಿಸಿ ಅಡಿಯಲ್ಲಿ ನನಗೆ ನೋಟಿಸ್ ಕಳುಹಿಸಿದ್ದಾರೆ, ನಾಳೆ (ಭಾನುವಾರ) ಬೆಳಿಗ್ಗೆ 11 ಗಂಟೆಗೆ ಬಿಕೆಸಿ ಸೈಬರ್ ಪೊಲೀಸ್ ಠಾಣೆಯಲ್ಲಿ ತಮ್ಮ ಮುಂದೆ ಹಾಜರಾಗುವಂತೆ ಕೇಳಿದ್ದಾರೆ. ನಾನು ಅಲ್ಲಿಗೆ ಹೋಗಿ ನನ್ನ ಹೇಳಿಕೆಯನ್ನು ದಾಖಲಿಸುತ್ತೇನೆ ಎಂದು ಫಡ್ನವಿಸ್ ಸಮನ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ಕಾಂಗ್ರೆಸ್ಗೆ ಕ್ಯಾನ್ಸರ್ ಬಂದಿದೆ ಅದಕ್ಕೆ ಔಷಧಿ ಇಲ್ಲ‘
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ್ತಿದ್ದು, ಬಿಜೆಪಿ ನಾಯಕರು (BJP Leaders) ಆಳಿಗೊಂದು ಕಲ್ಲು ಎಂಬಂತೆ ರಾಜ್ಯ ಕಾಂಗ್ರೆಸ್ ನಾಯಕರ (Congress Leaders) ಕಾಲೆಳೆಯೋಕೆ ಶುರು ಮಾಡಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲೂ ವಿಧಾನಸಭೆ ಚುನಾವಣೆ (Assembly Elections) ನಡೆಯಲಿದ್ದು, ಎಲ್ಲಾ ಪಕ್ಷಗಳಲ್ಲೂ ಚುನಾವಣಾ ಪ್ಲ್ಯಾನ್ ಜೋರಾಗಿದೆ. ಈ ನಡುವೆ ರಾಜೀನಾಮೆ (Resignation) ಪರ್ವ ಕೂಡು ಶುರುವಾದಂತೆ ಕಾಣ್ತಿದೆ. ಹಿರಿಯ ನಾಯಕ ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷ ತೊರೆದಿರೋ ಬಗ್ಗೆ ಮಾತಾಡಿದ ಬಿಜೆಪಿ ಶಾಸಕ ಸಿ.ಟಿ ರವಿ (C.T Ravi), ಈಗ ಕಾಂಗ್ರೆಸ್ಸಿಗೆ ಕ್ಯಾನ್ಸರ್ ವ್ಯಾಪಿಸಿದೆ, ಅದಕ್ಕೆ ಚಿಕಿತ್ಸೆ ಇಲ್ಲ. ಕ್ಯಾನ್ಸರ್ ವ್ಯಾಪಿಸಿದ ಮೇಲೆ ಇಡೀ ದೇಹವನ್ನ ಕೊಲ್ಲುತ್ತೆ ಅಂತ ಕಾಂಗ್ರೆಸ್ ಪಕ್ಷದ ಬಗ್ಗೆ ವ್ಯಂಗ್ಯವಾಗಿ ಮಾತಾಡಿದ್ದಾರೆ.

ಅಪ್ಪು ಸಿನಿಮಾಗೆ ಪ್ರಶಸ್ತಿ
ಕನ್ನಡಿಗರ ನೆಚ್ಚಿನ ಅಪ್ಪು ದೈಹಿಕವಾಗಿ ದೂರವಾದರೂ ಮಾನಸಿಕವಾಗಿ ದಿನೇ ದಿನೇ ಇನ್ನಷ್ಟು ಆಪ್ತವಾಗುತ್ತಲೇ ಇದ್ದಾರೆ. ಅವರ ಸಾಧನೆಗೆ ಸಂದ ಮನ್ನಣೆ ದಿನ ಕಳೆದಂತೆ ಹೆಚ್ಚುತ್ತಿದೆ. ಇದೀಗ ಪುನೀತ್ ರಾಜ್ಕುಮಾರ್ (Power Star Puneeth Rajkumar)ಅವರಿಗೆ ಇನ್ನೊಂದು ಮನ್ನಣೆ ದೊರೆತಿದೆ. ಪುನೀತ್ ರಾಜ್ಕುಮಾರ್ ನಟನೆಯ ಯುವರತ್ನ 2021ರ ಸಾಲಿನ ಕನ್ನಡದ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿಯನ್ನು (Yuvarathnaa Puneeth Rajkumar) ಮುಡಿಗೇರಿಸಿಕೊಂಡಿದೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFES) ಯುವರತ್ನನಿಗೆ (Yuvarathnaa Kannada Film) ಗೌರವ ಸಂದಿದೆ. ಕರ್ನಾಟಕ ರಾಜ್ಯಪಾಲ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪುನೀತ್ ರಾಜ್ಕುಮಾರ್ ಅವರ ಚಿತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇನ್ನೂ ಹಲವು ಕನ್ನಡ ಚಿತ್ರಗಳಿಗೆ ಮನ್ನಣೆ ದೊರೆತಿದೆ. ದರ್ಶನ್ ಅಭಿನಯದ ‘ರಾಬರ್ಟ್ ಚಿತ್ರಕ್ಕೆ ಎರಡನೇ ಅತ್ಯುತ್ತಮ ಮನರಂಜನಾ ಚಿತ್ರ ಸ್ಥಾನ, ಸುದೀಪ್ ಅಭಿನಯದ ‘ಕೋಟಿಗೊಬ್ಬ’ ಚಿತ್ರಕ್ಕೆ ಮೂರನೇ ಸ್ಥಾನ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ದೊರೆತಿದೆ.
Published by:Kavya V
First published: