Evening Digest: ವಾರಣಾಸಿಯಲ್ಲೇ ಬಿಜೆಪಿಗೆ ಸೋಲು: ಇಬ್ರಾಹಿಂಗೆ ಒಲಿಯಿತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ವಾರಣಾಸಿಯಲ್ಲೇ ಬಿಜೆಪಿಗೆ ಸೋಲು : ಬಿಜೆಪಿ (BJP) ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ (Uttar Pradesh Legislative Council polls) ಮುನ್ನಡೆ ಸಾಧಿಸಿದೆ ಆದರೆ ಪ್ರಮುಖ ವಾರಣಾಸಿ (Varanasi seat) ಸ್ಥಾನವನ್ನು ಕಳೆದುಕೊಂಡಿದೆ. ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಶನಿವಾರ ರಾಜ್ಯದಲ್ಲಿ ಸರಾಸರಿ ಶೇ.98.11 ಮತದಾನ ದಾಖಲಾಗಿದ್ದು, ರಾಯ್ ಬರೇಲಿಯಲ್ಲಿ ಅತಿ ಹೆಚ್ಚು ಶೇ.99.35 ಹಾಗೂ ಗೋರಖ್‌ಪುರದಲ್ಲಿ ಅತಿ ಕಡಿಮೆ ಶೇ.96.50ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇತ್ತೀಚೆಗಷ್ಟೇ ನಡೆದ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿರುವ ಆಡಳಿತಾರೂಢ ಬಿಜೆಪಿಗೆ, ಸದನದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲು, ಆ ಮೂಲಕ ಉಭಯ ಸದನಗಳಲ್ಲಿ ಬಹುಮತವನ್ನು ಸಾಧಿಸಲು ಇದು ಒಂದು ಅವಕಾಶವಾಗಿದೆ.

  ಇಬ್ರಾಹಿಂಗೆ ಒಲಿಯಿತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ

  ಕಾಂಗ್ರೆಸ್​ (Congress) ಬಿಟ್ಟು ಜೆಡಿಎಸ್​ ಗೂಡು ಸೇರಿರೋ ಸಿ.ಎಂ ಇಬ್ರಾಹಿಂ (C.M Ibrahim) ಅವರಿಗೆ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನ ನೀಡೋದಾಗಿ ಜೆಡಿಎಸ್​ ವರಿಷ್ಠರು ಹಾಗೂ ಮಾಜಿ ಪ್ರಧಾನಿ H.D ದೇವೇಗೌಡ (H.D Deve Gowda) ಅವರು ಘೋಷಣೆ ಮಾಡಿದ್ದಾರೆ. ರಾಮನಗರದಲ್ಲಿ (Ramanagara) ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತಾಡಿದ ಅವ್ರು, ಇದೇ 17 ಕ್ಕೆ ಸಿ.ಎಂ.ಇಬ್ರಾಹಿಂರನ್ನ ಪಕ್ಷದ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡ್ತೇನೆ ಎಂದು ಹೇಳಿದ್ದಾರೆ. ಈಗ ಹೆಚ್.ಕೆ.ಕುಮಾರಸ್ವಾಮಿ  ರಾಜ್ಯಾಧ್ಯಕ್ಷರಾಗಿದ್ದಾರೆ ಅವರಿಗೆ ಪಕ್ಷದಲ್ಲಿ ಮತ್ತೊಂದು ಹುದ್ದೆಯನ್ನು ನೀಡಲಾಗುತ್ತೆ ಎಂದ್ರು. ಇದಕ್ಕೆ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಸಹ ಒಪ್ಪಿದ್ದಾರೆ ಎಂದು ದೇವೇಗೌಡರು ತಿಳಿಸಿದ್ದಾರೆ.

  ಕೆ.ಎಸ್​ ಈಶ್ವರಪ್ಪ ತಲೆದಂಡ ಬಹುತೇಕ ಫಿಕ್ಸ್!?

  ನನ್ನ ಸಾವಿಗೆ ಗ್ರಾಮೀಣ ಸಚಿವ ಕೆ.ಎಸ್​ ಈಶ್ವರಪ್ಪ (K. Eshwarappa) ಅವರೇ ಕಾರಣ ಎಂದು ಡೆತ್​ ನೋಟ್ (Death Note)​ ಬರೆದಿಟ್ಟು ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆಗೆ ಶರಣಾಗಿದ್ಧಾರೆ. ಇದು ಸಚಿವ ಕೆ.ಎಸ್​ ಈಶ್ವರಪ್ಪ ಅವರಿಗೆ ಸಂಕಷ್ಟ ತಂದಿಟ್ಟಿದೆ. ಇನ್ನು 2-3 ತಿಂಗಳಿಂದ ರಾಜ್ಯದಲ್ಲಿ ಒಂದೊಂದೆ ವಿವಾದ ಹುಟ್ಟುತ್ತಿದ್ದು, ಬಿಜೆಪಿ ಸರ್ಕಾರಕ್ಕೆ (BJP Government) ದೊಡ್ಡ ತಲೆನೋವಾಗಿತ್ತು. ವಿವಾದಗಳಿಗೆಲ್ಲಾ ಪ್ರತಿಕ್ರಿಯಿಸದೇ ಮೌನವಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ವಿರುದ್ಧ ಕಾಂಗ್ರೆಸ್​ (Congress) ಕೆಂಡಕಾರಿತ್ತು. ಇದೀಗ ಸಂತೋಷ್ ಸಾವು, ಈಶ್ವರಪ್ಪ ಮೇಲಿನ ಗಂಭೀರ ಆರೋಪ, ಸಿಎಂ ಬೊಮ್ಮಾಯಿ  ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಈಶ್ವರಪ್ಪ ಅವರು ರಾಜೀನಾಮೆ ಕೊಡಲೇಬೇಕೆಂದು ಕಾಂಗ್ರೆಸ್​ನವರು ಪಟ್ಟು ಹಿಡಿದಿದ್ದಾರೆ.

  ಕೋಮು ಗಲಭೆ ಆರೋಪಿಗಳ ಆಸ್ತಿ ನೆಲಸಮ!

  ಮಧ್ಯಪ್ರದೇಶದ ಖಾರ್ಗೋನ್ ಎಂಬಲ್ಲಿ ( Khargone in Madhya Pradesh) ಭಾನುವಾರ ರಾಮನವಮಿಯ ಸಂದರ್ಭದಲ್ಲಿ ಕೋಮು ಗಲಭೆಗೆ (Communal Clashes) ಸಂಬಂಧಿಸಿದಂತೆ, ಮಾರನೆಯ ದಿನ ಸೋಮವಾರ 84 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಆಡಳಿತವು, ಕೋಮು ಗಲಭೆ ನಡೆದ 24 ಗಂಟೆಗಳ ಒಳಗೆ, ಈ ಹಿಂಸಾಚಾರದಲ್ಲಿ ಭಾಗಿಯಾಗಿರುವ ಶಂಕಿತರಿಗೆ ಸೇರಿದ ಆಸ್ತಿಗಳು ಮತ್ತು ಮನೆಗಳನ್ನು ಕೆಡವಿ ಹಾಕಿತು. ಸೋಮವಾರ ನಗರದಲ್ಲಿ ಕರ್ಫ್ಯೂ ಜಾರಿಯಾಗಿತ್ತು. ಖಾರ್ಗೋನ್‍ನಲ್ಲಿ 45 ಆಸ್ತಿಗಳನ್ನು ನೆಲಸಮ ಮಾಡಲಾಗಿದೆ ಎಂದು ಇಂದೋರ್‌ನ ವಿಭಾಗೀಯ ಆಯುಕ್ತ ಪವನ್ ಶರ್ಮಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

  ಟಿವಿಯಲ್ಲೇ ಜೇಮ್ಸ್ ಸಿನಿಮಾ ನೋಡಿ

  ಪ್ರೇಕ್ಷಕರು ಸಹ ಸಿನಿಮಾ ಮಂದಿರಗಳಿಗೆ (Theater) ಹೋಗದೆ ಅನೇಕ ಚಿತ್ರಗಳನ್ನು ತಮ್ಮ ಮನೆಯಲ್ಲಿ ಕುಳಿತು ಈ ಒಟಿಟಿ ಮಾಧ್ಯಮಗಳಲ್ಲಿಯೇ ನೋಡಿ ಆನಂದಿಸುತ್ತಿದ್ದಾರೆ. ಒಟಿಟಿ ಬಂದ ಮೇಲೆ ಸಿನಿಮಾ ನೋಡುವವರ ಸಂಖ್ಯೆ ಸಹ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.ಈ ವಾರ ಯಾವ್ಯಾವ ಸಿನಿಮಾಗಳನ್ನು ಬಿಟ್ಟಿದ್ದಾರೆ ಅಂತ ಚೆಕ್ ಮಾಡುತ್ತಲೇ ಇರುತ್ತಾರೆ, ನಿಮ್ಮ ಕೆಲಸವನ್ನು ಸುಲಭ ಮಾಡಲು ನಾವು ಈ ವಾರ ಯಾವ ಚಿತ್ರಗಳು OTT ನಲ್ಲಿ ಪ್ರೀಮಿಯರ್ ಆಗುತ್ತಿವೆ ಎಂಬ ವಿವರ ಹೊತ್ತು ತಂದಿದ್ದೇವೆ. ಜೇಮ್ಸ್ ಕನ್ನಡದ ದಿವಂಗತ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ. ಅಪ್ಪು ಹುಟ್ಟಿದ ದಿನವಾದ ಮಾರ್ಚ್ 17ರಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ಕನ್ನಡ ಪ್ರೇಕ್ಷಕರು ತಮ್ಮ ನೆಚ್ಚಿನ ಸೂಪರ್‌ಸ್ಟಾರ್‌ಗೆ ಗೌರವ ಸಲ್ಲಿಸುವ ಮೂಲಕ ಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಿಸಿದ್ದಾರೆ.
  Published by:Kavya V
  First published: