Evening Digest: ಮಕ್ಕಳಲ್ಲಿ ನಿಗೂಢ ಟೊಮೆಟೋ ಜ್ವರ ಪತ್ತೆ: ಡಿಕೆಶಿ ವಿರುದ್ಧ ದನಿ ಎತ್ತಿದ ರಮ್ಯಾ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮಕ್ಕಳಲ್ಲಿ ನಿಗೂಢ ಟೊಮೆಟೋ ಜ್ವರ ಪತ್ತೆ: ಕೇರಳ (Kerala) ರಾಜ್ಯ ಇದೀಗ ಮತ್ತೊಂದು ನಿಗೂಢ ಕಾಯಿಲೆಗೆ (Mysterious Disease) ಏಕಾಏಕಿ ಸಾಕ್ಷಿಯಾಗಿದೆ. ಅದುವೆ 'ಟೊಮೆಟೋ ಜ್ವರ' (Tomato flu). ಮಾಧ್ಯಮ ವರದಿಗಳ ಪ್ರಕಾರ, ಅಪರೂಪದ ವೈರಲ್ ಕಾಯಿಲೆಯು ರಾಜ್ಯದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80 ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿಸಿದೆ. ಟೊಮೇಟೊ ಜ್ವರದ ಎಲ್ಲಾ ಪ್ರಕರಣಗಳು ಕೊಲ್ಲಂ ಜಿಲ್ಲೆಯಲ್ಲಿ ವರದಿಯಾಗಿವೆ. ಮಾಧ್ಯಮ ವರದಿಗಳ ಪ್ರಕಾರ, ಟೊಮೆಟೊ ಜ್ವರವು ಸೋಂಕಿತ ಮಗುವಿನ ದೇಹದ ಮೇಲೆ ದದ್ದುಗಳು ಮತ್ತು ಗುಳ್ಳೆಗಳನ್ನು ಉಂಟುಮಾಡುತ್ತದೆ. ದದ್ದುಗಳ ಬಣ್ಣವು ಕೆಂಪು ಬಣ್ಣದ್ದಾಗಿರುವುದರಿಂದ, ಗುರುತಿಸಲಾಗದ ಜ್ವರಕ್ಕೆ 'ಟೊಮ್ಯಾಟೊ ಜ್ವರ' ಎಂದು ಹೆಸರಿಸಲಾಗಿದೆ. ಟೊಮೆಟೊ ಜ್ವರದ ಹಿಂದಿನ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Tomato flu: ಕೇರಳದ ಮಕ್ಕಳಲ್ಲಿ ನಿಗೂಢ ಟೊಮೆಟೋ ಜ್ವರ ಪತ್ತೆ: ಏನಿದರ ಲಕ್ಷಣಗಳು? ನೆರೆ ರಾಜ್ಯಗಳಲ್ಲಿ ಹೈಅಲರ್ಟ್!

ಡಿಕೆಶಿ ವಿರುದ್ಧ ದನಿ ಎತ್ತಿದ ರಮ್ಯಾ

ಸಚಿವ ಅಶ್ವತ್ಥ್​ ನಾರಾಯಣ್​ (Ashwath Narayan)  ಮಾಜಿ ಸಚಿವ ಎಂಬಿ ಪಾಟೀಲ್ (MB Patil)​ ಭೇಟಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)  ಹೇಳಿಕೆಗೆ ಮಾಜಿ ಸಂಸದೆ, ನಟಿ ರಮ್ಯಾ (Ramya) ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಕ್ಷಣೆಗಾಗಿ ಅಶ್ವತ್ಥ್​ ನಾರಾಯಣ್​ ಎಂಬಿ ಪಾಟೀಲ್​ ಮೊರೆ ಹೋಗಿರುವ ಸಾಧ್ಯತೆ ಇದೆ ಎಂಬ ತಮ್ಮ ಪಕ್ಷದ ನಾಯಕರ ಹೇಳಿಕೆಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಎಂಬಿ ಪಾಟೀಲ್​ ಪರ ಬ್ಯಾಟಿಂಗ್ ನಡೆಸಿರುವ ಅವರು, ಇದೊಂದು ಸೌಹರ್ದಯುತ ಭೇಟಿ ಆಗಿರಬಹುದು. ಡಿ.ಕೆ. ಶಿವಕುಮಾರ್ ಅವರು ಎಂಬಿ ಪಾಟೀಲ್ ಅವರ ಬಗ್ಗೆ ನೀಡಿರುವ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:DK Shivakumar​ ಹೇಳಿಕೆಗೆ ರಮ್ಯಾ ಅಚ್ಚರಿ; ಎಂಬಿ ಪಾಟೀಲ್ ಕಟ್ಟಾ ಕಾಂಗ್ರೆಸ್ಸಿಗ ಎಂದ ಮಾಜಿ ಸಂಸದೆ

ದಲಿತ ಅಧಿಕಾರಿಯನ್ನು ಬಲಿ ಹಾಕಲು ರಾಷ್ಟ್ರೀಯ ಪಕ್ಷಗಳ ಷಡ್ಯಂತ್ರ

ಕರ್ನಾಟಕದಲ್ಲಿ (Karnataka) ಸೇವೆ ಸಲ್ಲಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿಯೋರ್ವರು (Senior IPS Officer Resign)  ರಾಜೀನಾಮೆ ಸಲ್ಲಿಸಿದ್ದಾರೆ. ಅವಧಿಪೂರ್ವ ವರ್ಗಾವಣೆ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿದ್ದ  ರವೀಂದ್ರನಾಥ್ (Dr. P Ravindranath Resign) ರಾಜೀನಾಮೆ ಸಲ್ಲಿಸಿದ್ದಾರೆ. ರವೀಂದ್ರನಾಥ್ ರಾಜೀನಾಮೆ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಪ್ರತಿಕ್ರಿಯಿಸಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿಗಳು, ಸರ್ಕಾರ ಅವರ ರಾಜೀನಾಮೆಯನ್ನು (Resignation) ಅಂಗೀಕರಿಸಬಾರದು ಎಂದು ಆಗ್ರಹಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಯಮಬಾಹಿರ ವರ್ಗಾವಣೆ ಮಾಡಿದ್ದರಿಂದ ಬೇಸತ್ತು ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಪಿ.ರವೀಂದ್ರನಾಥ್ ಅವರ ರಾಜೀನಾಮೆಯನ್ನು ರಾಜ್ಯ ಸರಕಾರ ಅಂಗೀಕಾರ ಮಾಡಬಾರದು ಎಂದು ಹೇಳಿದ್ದಾರೆ.

ಒಂದು ಕುಟುಂಬ, ಒಂದು ಟಿಕೆಟ್

ಸತತವಾಗಿ ಎರಡು ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಮಕಾಡೆ ಮಲಗಿರುವ ಕಾಂಗ್ರೆಸ್ ಪಕ್ಷ (Congress Party) ಮುಂಬರುವ 2024ರ ಚುನಾವಣೆಯಲ್ಲಿ ಭರ್ಜರಿ ಗೆಲುವು (Victory) ಸಾಧಿಸಲು ಸಿದ್ಧತೆಯನ್ನು ಈಗಾಗ್ಲೇ ಆರಂಭಿಸಿದೆ. ಅಧಿವೇಶನ, ಉನ್ನತ ಮಟ್ಟದ ಸಭೆ (High level meeting) ಅಂತಾ ಹಲವಾರು ಕಾರ್ಯತಂತ್ರಗಳನ್ನು (Strategy) ರೂಪಿಸುತ್ತಿದೆ. ಪ್ರಸ್ತುತ ಒಂದು ಕುಟುಂಬ-ಒಂದು ಟಿಕೆಟ್ (One family- one ticket) ನಿಯಮವು ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆಯಲಿರುವ ಕಾಂಗ್ರೆಸ್ಸಿನ (Congress) ಮಹತ್ವದ ಅಧಿವೇಶನದಲ್ಲಿ ಚರ್ಚೆಯ ಬಿಂದುವಾಗುವ ಸಾಧ್ಯತೆ ಇದೆ. ಪಕ್ಷವು ತನ್ನ ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಕಾರ್ಯತಂತ್ರಗಳನ್ನು ರೂಪಿಸಲು ಮತ್ತು ಸಮಾಲೋಚಿಸಲು ಪಕ್ಷದ ಗಣ್ಯರು ಈ ವಾರಾಂತ್ಯದಲ್ಲಿ ಸಭೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಕ್ಕಳೊಂದಿಗೆ ಟೈಗರ್ ಆಟವಾಡಿದ Yash

ರಾಕಿಂಗ್ ಸ್ಟಾರ್ ಯಶ್ (Yash) ಸದ್ಯ ಕೆಜಿಎಫ್ 2 (KGF 2) ಸಕ್ಸಸ್ ನಲ್ಲಿದ್ದಾರೆ. ಇದರ ಖುಷಿಯಲ್ಲಿ ಅವರು ಸಧ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕೆಜಿಎಫ್-2ನ ಭರ್ಜರಿ ಸಕ್ಸಸ್ ನಲ್ಲಿರುವ ಯಶ್ ಇದೀಗ ಮನೆಯಲ್ಲಿ ಮಕ್ಕಳ ಜೊತೆಯಲ್ಲಿ ಅರಾಮವಾಗಿ ಕಾಲಕಳೆಯುತ್ತಿದ್ದಾರೆ. ಎಷ್ಟೇ ಬ್ಯೂಸಿಯಾಗಿದ್ದರೂ ಎಂದಿಗೂ ಕುಟುಂಬಕ್ಕೆ ಕೆಲ ಸಮಯವನನ್ನು ಮೀಸಲಿಡುವ ರಾಕಿ ಬಾಯ್ ಇಂದು ಸಹ ಕುಟುಂಬದವರೊಂದಿಗೆ ಕಾಲಕಳೆದಿದ್ದಾರೆ. ಅಲ್ಲದೇ ಮಕ್ಕಳಾದ ಐರಾ ಮತ್ತು ಯಥರ್ವ ಜೊತೆ ಸಂತಸದಿಂದ ಎಂಜಾಯ್ ಮಾಡಿದ್ದಾರೆ. ಈ ವೇಳೆಯ ವಿಡಿಯೋವನ್ನು ಯಶ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ (Instagram) ಹಂಚಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ಇದಲ್ಲದೇ ಯಶ್ ಮಗಳು ಐರಾ ಕೆಲ ದಿನಗಳ ಹೀಮದೆ ರಾಕ್ ರಾಕ್ ರಾಕಿ ಎಂಬ ವಿಡಿಯೋವನ್ನು ಸಹ ಹಂಚಿಕೊಂಡಿದ್ದು, ಫ್ಯಾಮಿಲಿ ಜೊತೆ ಸಖತ್ ಎಂಜಾಯ್ ಮೂಡ್​ ನಲ್ಲಿ ರಾಕಿ ಬಾಯ್ ಇದ್ದಾರೆ.
Published by:Kavya V
First published: