Evening Digest: ಪಾಕ್​​ಗೆ ಹೊಸ ಪ್ರಧಾನಿ ಆಯ್ಕೆ: PM ಮೋದಿಗೆ 24 ಗಂಟೆಗಳ ಗಡುವು ನೀಡಿದ ತೆಲಂಗಾಣ ಸಿಎಂ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಪಾಕ್ ಗೆ ಹೊಸ ಪ್ರಧಾನಿ ಆಯ್ಕೆ: ಮೂರು ಬಾರಿಯ ಪಾಕಿಸ್ತಾನದ ಪ್ರಧಾನಿ ಆಗಿದ್ದ ನವಾಜ್ ಷರೀಫ್ ಅವರ ಕಿರಿಯ ಸಹೋದರ, ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ (Shehbaz Sharif) ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ (Pakistan New PM) ಆಯ್ಕೆಯಾಗಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕ ಶಾ ಮಹಮೂದ್ ಖುರೇಷಿ ಅವರು ಭಾನುವಾರದಂದು ತಮ್ಮ ನಾಮನಿರ್ದೇಶನ ಪತ್ರಗಳನ್ನು ಅನುಮೋದಿಸುವುದರೊಂದಿಗೆ ಪ್ರಧಾನಿ ಹುದ್ದೆಗೆ ಕಣದಲ್ಲಿದ್ದರು. ಅಧಿವೇಶನಕ್ಕೆ ಮುಂಚಿತವಾಗಿ, ರಾಷ್ಟ್ರೀಯ ಅಸೆಂಬ್ಲಿಯ ಪಿಟಿಐ ಸದಸ್ಯರು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದರು, ಷರೀಫ್ ಅವರಿಗಿದ್ದ ಅಡ್ಡಿ ತೆರವಾಗಿ ಪ್ರಧಾನಿ ಹುದ್ದೆಗೇರಿದ್ದಾರೆ.

ಮೋದಿಗೆ 24 ಗಂಟೆಗಳ ಗಡುವು ನೀಡಿದ ತೆಲಂಗಾಣ ಸಿಎಂ
ರೈತರಿಂದ ಅಕ್ಕಿ ಖರೀದಿಸುವ (Purchase of Rice from Farmers) ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (Telangana Chief Minister K Chandrashekar Rao) ಅವರು ಪ್ರಧಾನಿ ಮೋದಿ (PM Modi) ಅವರಿಗೆ ನೇರ ಸವಾಲು ಹಾಕಿದ್ದಾರೆ. ‘ಮೋದಿ ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ... ಕೈಮುಗಿದು ಪ್ರಧಾನಿ ಮತ್ತು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರಿಗೆ ನಾನು ಹೇಳುತ್ತೇನೆ. ದಯವಿಟ್ಟು ನಮ್ಮ ಆಹಾರ ಧಾನ್ಯಗಳನ್ನು ಖರೀದಿಸಿ. ನಾನು ನಿಮಗೆ 24 ಗಂಟೆಗಳ ಕಾಲಾವಕಾಶ ನೀಡುತ್ತೇನೆ, ಅದರ ನಂತರ ನಾವು ನಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಗಡುವು ನೀಡಿ ಎಚ್ಚರಿಸಿದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:ನಾನು ಇನ್ನು 24 ಗಂಟೆ ಟೈಂ ಕೊಡ್ತೀನಿ ಅಷ್ಟೇ.. ಪ್ರಧಾನಿ ಮೋದಿಗೆ ತೆಲಂಗಾಣ ಸಿಎಂ KCR ಸವಾಲು!

ಸಿದ್ದರಾಮಯ್ಯ ಎಡವಟ್ಟಿನ ಮಾತಿಗೆ ಕಾರ್ಯಕರ್ತರೇ ಫುಲ್ ಶಾಕ್
ಬಿಜೆಪಿಯ (BJP) ವಿರುದ್ಧ ವಾಗ್ದಾಳಿ ನಡೆಸೋ ಬರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಎಂಥಾ ಎಡವಟ್ಟಿನ ಹೇಳಿಕೆಯನ್ನು (Awkward Statement) ನೀಡಿದ್ದಾರೆ ಗೊತ್ತಾ? ಕಾಂಗ್ರೆಸ್ನನ್ನೇ ಕಿತ್ತು ಒಗೆಯಿರಿ ಎಂದಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ (Congress) ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ (Protest) ನಡೆಸುತ್ತಿದ್ದು, ಈ ವೇಳೆ ಮಾತಾಡಿದ ಸಿದ್ದರಾಮಯ್ಯ ಎಡವಟ್ಟಿನ ಹೇಳಿಕೆ ನೀಡಿದ್ದಾರೆ. ರಾಜ್ಯ ಉಳಿಸುವುದಕ್ಕೆ, ದೇಶದ ಉಳಿಸುವುದಕ್ಕೆ, ಸಂವಿಧಾನ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷವನ್ನು ಕಿತ್ತು ಒಗೆಯಬೇಕು ಎಂದು ಸಿದ್ದರಾಮಯ್ಯ ಹೇಳ್ತಿದ್ದಂತೆ ನೆರೆದಿದ್ದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಗಾಬರಿಯಾಗಿ ಸರ್ ಏನ್ ಹೇಳಿದ್ದೀರಾ ಎಂದು ಕೂಗಿದ್ರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Congress Protest: ‘ದೇಶ ಉಳಿಸಲು ಕಾಂಗ್ರೆಸ್​ನನ್ನು ಕಿತ್ತು ಒಗೆಯಬೇಕು’; ಸಿದ್ದರಾಮಯ್ಯ ಎಡವಟ್ಟಿನ ಮಾತಿಗೆ ಕಾರ್ಯಕರ್ತರೇ ಫುಲ್ ಶಾಕ್

ಬೆಂಗಳೂರಿನ ಮತ್ತೊಂದು ಸ್ಕೂಲ್ ಗೆ ಬಾಂಬ್ ಬೆದರಿಕೆ
ಎರಡು ದಿನದ ಹಿಂದಷ್ಟೆ 6 ಶಾಲೆಗಳಿಗೆ ಬಾಂಬ್ ಇಟ್ಟಿರೋದಾಗಿ ಅನಾಮಿಕ ಬೆದರಿಕೆ ಮೇಲ್ (Threat Mail) ಬಂದಿತ್ತು, ಇದೀಗ ಮತ್ತೆ ಬೆದರಿಕೆ ಮೇಲ್ ಬಂದಿದೆ. ಪ್ರತಿಷ್ಠಿತ ಶಾಲೆ ಬಿಷಪ್ ಕಾಟನ್ ಸ್ಕೂಲ್ಗೆ (Bishop Cotton School) ಬೆದರಿಕೆ ಮೇಲ್ ಬಂದಿದೆ. ಮೇಲ್ ನೋಡ್ತಿದ್ದಂತೆ ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಅಲರ್ಟ್ ಆದ ಕಬ್ಬನ್ ಪಾರ್ಕ್ ಪೊಲೀಸರು ( Cubbon Park Police) ಸ್ಥಳಕ್ಕೆ ದೌಡಾಯಿಸಿದ್ದು, ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಗೆ ಪರೀಕ್ಷೆ (Exam) ನಡೆಯುತ್ತಿರೋ ಸಮಯದಲ್ಲಿ ಇಂತಹ ಬಾಂಬ್ ಬೆದರಿಕೆ (Bomb Threat) ಮೇಲ್ಗಳು ಬರುತ್ತಿರೋದು ಶಾಲೆ ಹಾಗೂ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ಎಲ್ಲಾ ಭಾಷೆಗಳಲ್ಲೂ ಡಬ್ ಮಾಡಿದ ಕಲಾವಿದ ಅಂದರೆ ಪ್ರಕಾಶ್ ರಾಜ್ ಒಬ್ಬರೇ ಅಂತೆ
ಬಹುಭಾಷಾ ನಟ ಪ್ರಕಾಶ್ ರಾಜ್ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಲ್ಲಾ ಕಲಾವಿದರು ತಮ್ಮ ತಮ್ಮ ಭಾಷೆಯಲ್ಲಿ ಮಾತ್ರ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರಂತೆ. ಆದರೆ ಪ್ರಕಾಶ್ ರಾಜ್ ಹಾಗಲ್ಲವಂತೆ. ಅವರು ಏನು ಮಾಡಿದರು ಎನ್ನುವ ಬಗ್ಗೆ ಖುದ್ದು ರಾಕಿಂಗ್ ಸ್ಟಾರ್ ಯಶ್ ಅವರೇ ಹೇಳಿದ್ದಾರೆ. ಅತೀ ಹೆಚ್ಚು ಭಾಷೆಯಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು ಪ್ರಕಾಶ್ ರೈ. ಅಷ್ಟೂ ಭಾಷೆಗೂ ಪ್ರಕಾಶ್ ರೈ ಅವರದ್ದೇ ಧ್ವನಿ ಇರಲಿದೆ ಎನ್ನುವುದು ವಿಶೇಷ. ಪ್ರಕಾಶ್ ರಾಜ್ ಬಹುಭಾಷಾ ನಟರಾಗಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ.
Published by:Kavya V
First published: