Evening Digest: ಮುಸ್ಲಿಂ ಬಾಲಕಿ ಕಾರ್ಯಕ್ರಮದ ವೇದಿಕೆ ಮೇಲೆ ಬರಬಾರದಾ? SSLC ಪರೀಕ್ಷೆ ಫಲಿತಾಂಶ ಯಾವಾಗ ಪ್ರಕಟ?: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮುಸ್ಲಿಂ ಬಾಲಕಿ ಕಾರ್ಯಕ್ರಮದ ವೇದಿಕೆ ಮೇಲೆ ಬರಬಾರದಾ? : ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ (Malappuram district) ಮುಸ್ಲಿಂ ವಿದ್ವಾಂಸರೊಬ್ಬರು (Muslim scholar) ಪ್ರಶಸ್ತಿ ಸ್ವೀಕರಿಸಲು ವೇದಿಕೆಯ ಮೇಲೆ ಬಾಲಕಿಯನ್ನು (Girl on Stage) ಆಹ್ವಾನಿಸಿದ್ದಕ್ಕಾಗಿ ಕಾರ್ಯಕ್ರಮದ ಸಂಘಟಕರನ್ನು (organisers) ಸಾರ್ವಜನಿಕವಾಗಿ ನಿಂದಿಸುತ್ತಿರುವ ಘಟನೆಯ ವಿಡಿಯೋ ಹೊಸ ವಿವಾದವನ್ನು ಹುಟ್ಟು ಹಾಕಿದೆ. ವಿದ್ವಾಂಸರಾದ ಎಂ ಟಿ ಅಬ್ದುಲ್ಲಾ ಮುಸಲಿಯಾರ್ ಅವರು ಜಿಲ್ಲೆಯ ರಾಮಪುರಂನಲ್ಲಿ ಮದ್ರಸಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಘಟಕರಲ್ಲಿ ಒಬ್ಬರು ಹುಡುಗಿಯನ್ನು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಆಹ್ವಾನಿಸಿದ್ದು ವೀಡಿಯೊದಲ್ಲಿ ಕಂಡು ಬರುತ್ತದೆ. ವೇದಿಕೆಯಲ್ಲಿ ಹಲವಾರು ಮುಸ್ಲಿಂ ವಿದ್ವಾಂಸರು ಉಪಸ್ಥಿತರಿದ್ದರು. ಈ ವೇಳೆ ವಿದ್ವಾಂಸರಾದ ಎಂ ಟಿ ಅಬ್ದುಲ್ಲಾ ಮುಸಲಿಯಾರ್ ಕಾರ್ಯಕ್ರಮದ ಸಂಘಟಕರ ಮೇಲೆ ಕೆಂಡಾಮಂಡಲರಾಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Muslim Scholar: ಪ್ರಶಸ್ತಿ ಸ್ವೀಕರಿಸಲು ಬಾಲಕಿ ವೇದಿಕೆಗೆ ಬಂದಿದ್ದಕ್ಕೆ ಕೆಂಡಾಮಂಡಲರಾದ ಮುಸ್ಲಿಂ ವಿದ್ವಾಂಸಕ

SSLC ಪರೀಕ್ಷೆ ಫಲಿತಾಂಶ ಯಾವಾಗ ಪ್ರಕಟ?

SSLC ಪರೀಕ್ಷೆ ರಿಸಲ್ಟ್ ಮೇ 3ನೇ ವಾರ ಪ್ರಕಟವಾಗಲಿದ್ದು, ಈಗಾಗಲೇ ಮೌಲ್ಯಮಾಪನ ಕೂಡ ಮುಗಿದಿದೆ ಎಂದು ಸಚಿವ ನಾಗೇಶ್ ಹೇಳಿದ್ದಾರೆ. ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಪರೀಕ್ಷೆ (Appointment of Assistant Professor) ಅಕ್ರಮ ರಾಜ್ಯದಲ್ಲಿ ಭಾರೀ ಸುದ್ದಿ ಮಾಡ್ತಿದೆ. ಇದೀಗ 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (School Teachers Recruitment)  ಪರೀಕ್ಷೆ ಮೇಲೆ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಶಿಕ್ಷಣ ಇಲಾಖೆ ತಲೆ ಕೆಡಿಸಿಕೊಂಡಿದೆ. ಶಿಕ್ಷಕರ ನೇಮಕಾತಿ ಕುರಿತು ಗೃಹ ಇಲಾಖೆಯ ಜೊತೆ ಶಿಕ್ಷಣ ಇಲಾಖೆ ಸಭೆ ನಡೆಯಿತು, ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಚಿವ ನಾಗೇಶ್ (Minister Nagesh)​, ಪರೀಕ್ಷೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ಲ ಎಂದು ಹೇಳಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:B.C Nagesh: ಮೇ 3ನೇ ವಾರ SSLC ರಿಸಲ್ಟ್​; ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಟಫ್​ ರೂಲ್ಸ್​

4ನೇ ಸಲ ರಾಜೀನಾಮೆ ನೀಡಿದ ಹಿರಿಯ ಐಪಿಎಸ್ ಅಧಿಕಾರಿ

ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿಯೋರ್ವರು (Senior IPS Officer Resign)  ರಾಜೀನಾಮೆ ಸಲ್ಲಿಸಿದ್ದಾರೆ. ಅವಧಿಪೂರ್ವ ವರ್ಗಾವಣೆ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿದ್ದ  ರವೀಂದ್ರನಾಥ್ (Dr. P Ravindranath Resign) ರಾಜೀನಾಮೆ ಸಲ್ಲಿಸಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಐಪಿಎಸ್ ಹುದ್ದೆಗೇರಿದ್ದ ಪ್ರಕರಣದಲ್ಲಿ (Fake Caste Certificate) ತನಿಖೆ ಆರಂಭಿಸಿದ್ದ ರವೀಂದ್ರನಾಥ್ ಅವರು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯಗೆ ನೊಟೀಸ್ ನೀಡಿದ್ದ ಬಳಿಕ ರವೀಂದ್ರನಾಥ್​ರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿತ್ತು. ಅವರನ್ನು ಕರ್ನಾಟಕ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆಗೊಳಿಸಲಾಗಿತ್ತು. ಸದ್ಯ ಅವರು ಈ ಹುದ್ದೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ದೇಶದ್ರೋಹ ಕಾನೂನು ಸಂಬಂಧ ನಾಳೆ ಉತ್ತರಿಸಿ, ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತಾಕೀತು

ದೇಶದ್ರೋಹ ಕಾನೂನನ್ನು (Sedition Law) ವಿರಾಮಗೊಳಿಸಬಹುದೇ ಮತ್ತು ಅದರ ಅಡಿಯಲ್ಲಿ ಆರೋಪಿಗಳನ್ನು ರಕ್ಷಿಸಬಹುದೇ ಎಂಬುದರ ಕುರಿತು ನಾಳೆಯೊಳಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ (Supreme Court) ಇಂದು ಕೇಂದ್ರ ಸರ್ಕಾರವನ್ನು (Central Government) ಕೇಳಿದೆ. ದೇಶದ್ರೋಹ ಕಾನೂನನ್ನು ಪ್ರಶ್ನಿಸುವ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸರ್ಕಾರವು ಹೆಚ್ಚಿನ ಸಮಯವನ್ನು ಕೋರಿದ ಒಂದು ದಿನದ ನಂತರ, ಅದನ್ನು ಪರಿಶೀಲಿಸಲು ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ಈಗಾಗಲೇ ದೇಶದ್ರೋಹದ ಆರೋಪಗಳನ್ನು ಎದುರಿಸುತ್ತಿರುವವರ ಬಗ್ಗೆ ಕಳವಳ ವ್ಯಕ್ತಪಡಿಸಿತು. ನಾವು ನಿಮಗೆ ಸರ್ಕಾರದಿಂದ ಸೂಚನೆಗಳನ್ನು ಪಡೆಯಲು ನಾಳೆ ಬೆಳಿಗ್ಗೆಯವರೆಗೆ ಸಮಯ ನೀಡುತ್ತೇವೆ. ಬಾಕಿ ಉಳಿದಿರುವ ಪ್ರಕರಣಗಳು ಮತ್ತು ಭವಿಷ್ಯದ ಪ್ರಕರಣಗಳು, ಕಾನೂನನ್ನು ಮರುಪರಿಶೀಲಿಸುವವರೆಗೆ ಸರ್ಕಾರವು ಹೇಗೆ ಕಾಳಜಿ ವಹಿಸುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್​​ ವಿ ರಮಣ ಹೇಳಿದರು.

KGF 2 ಸಿನಿಮಾ ನೋಡಿ ಫಿದಾ ಆದ ರಣವೀರ್​ ಸಿಂಗ್​!

ಕೆಜಿಎಫ್​ 2 ಸಿನಿಮಾ ನೋಡಿದ ಬೇರೆ ಭಾಷೆಯ ನಟ, ನಟಿಯರು ಸೋಷಿಯಲ್ ಮೀಡಿಯಾದಲ್ಲಿ ರಾಕಿ ಭಾಯ್​ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಇದೀಗ ಬಾಲಿವುಡ್​ ನಟ ರಣವೀರ್​ ಸಿಂಗ್​ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. 'ಕೆಜಿಎಫ್ 2' ಮತ್ತು ಯಶ್ ಬಗ್ಗೆ ಸಂದರ್ಶನವೊಂದರಲ್ಲಿ ಕೆಜಿಎಫ್​ 2 ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ. ಸಿನಿಮಾ ನೋಡಿದ ರಣವೀರ್​​ ಸಿಂಗ್ 'ಕೆಜಿಎಫ್ 2' ಮತ್ತು ಯಶ್‌ಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ರೀತಿಯ ಚಿತ್ರಗಳು ನನಗೆ ತುಂಬಾ ಇಷ್ಟ ಆಗುತ್ತವೆ ಎಂದು ಹೇಳಿದ್ದಾರೆ.
Published by:Kavya V
First published: