Evening Digest: ರೇಪ್​​ಗಿಂತ ಸಾವೇ ಮೇಲು ಎಂದ ಮಹಿಳೆ, ಆಸ್ಟೇಲಿಯಾದಲ್ಲಿ ಭಾರತೀಯನ ಸಾವು-ಇಂದಿನ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಪ್ರತಿ ದಿನ ರೇಪ್, ಇದಕ್ಕಿಂತ ಸಾವೇ ಮೇಲು ಎಂದ ತಾಲಿಬಾನ್ ಮಹಿಳೆ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಾಗಿನಿಂದ, ಆಫ್ಘನ್ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ. ತಾಲಿಬಾನ್ನ ಆಂತರಿಕ ಸಚಿವಾಲಯದ ಮಾಜಿ ವಕ್ತಾರ ಸಯೀದ್ ಖೋಸ್ತಿ ಈ ಹಿಂದೆ ಬಲವಂತವಾಗಿ ಮದುವೆಯಾಗಿ ಈಗ ಕಿರುಕುಳ ನೀಡುತ್ತಿರುವ ಅಫ್ಘಾನ್ ಮಹಿಳೆ ಇಲಾಹಾ ಇದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ. ವಾಸ್ತವವಾಗಿ, ಸಯೀದ್ ಖೋಸ್ತಿ ಅವರ ಪತ್ನಿ ಇಲಾಹಾ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ತೀವ್ರವಾಗಿ ವೈರಲ್ ಆಗುತ್ತಿದೆ. ಮದುವೆಯ ಬಳಿಕ ತನ್ನ ಮೇಲೆ ದೌರ್ಜನ್ಯ ಪ್ರಾರಂಭವಾಯಿತು. ಖಾರಿ ಸಯೀದ್ನೊಂದಿಗಿನ ತನ್ನ ಮದುವೆಯ ನಂತರ ಪ್ರತಿ ರಾತ್ರಿ ತನ್ನ ಮೇಲೆ ಅತ್ಯಾಚಾರ, ಥಳಿತ ಮತ್ತು ನಿಂದನೆ ಮಾಡಲಾಗುತ್ತಿದೆ ಎಂದು ಇಲಾಹಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರತಿ ರಾತ್ರಿ ರೇಪ್, ಕ್ಷಣ ಕ್ಷಣ ನರಳಾಟಕ್ಕಿಂತ ಒಂದೇ ಬಾರಿ ಸಾಯೋದು ಮೇಲು: ಮಹಿಳೆಯ ವಿಡಿಯೋ ವೈರಲ್

ಆಸ್ಟ್ರೇಲಿಯಾದಲ್ಲಿ ಭಾರತೀಯ ಗಾಯಕ ಅಪಘಾತದಲ್ಲಿ ದುರ್ಮರಣ

ಆಸ್ಟ್ರೇಲಿಯಾದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಪಂಜಾಬಿ ಗಾಯಕ ನಿರ್ವೈರ್ ಸಿಂಗ್ (Punjabi Singer Nirvair Singh Died) ಸಾವನ್ನಪ್ಪಿದ್ದಾರೆ. ಮೆಲ್ಬೋರ್ನ್ ಬಳಿ ಕಿಯಾ ಸೆಡಾನ್ನಿಂದ ಉಂಟಾದ ಮೂರು ವಾಹನಗಳ ಡಿಕ್ಕಿಯಲ್ಲಿ ಇಬ್ಬರು ಮಕ್ಕಳ ತಂದೆಯೂ ಆಗಿರುವ 42 ವರ್ಷದ ಗಾಯಕ ನಿರ್ವೈರ್ ಸಿಂಗ್ ಮೃತಪಟ್ಟಿದ್ದಾರೆ. ಆಸ್ಟ್ರೇಲಿಯಾದ ಡಿಗ್ಗರ್ಸ್ ರೆಸ್ಟ್ನಲ್ಲಿರುವ ಬುಲ್ಲಾ-ಡಿಗ್ಗರ್ಸ್ ರೆಸ್ಟ್ ರಸ್ತೆಯಲ್ಲಿ ಮಧ್ಯಾಹ್ನ 3.30 ಕ್ಕೆ ಈ ಅಪಘಾತ ಸಂಭವಿಸಿದೆ. ಸೆಡಾನ್ನ 23 ವರ್ಷದ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ನಾಳೆ ಮುರುಘಾ ಶ್ರೀ ಜಾಮೀನು ಅರ್ಜಿ ವಿಚಾರಣೆ, ಮುಂದುವರಿದ ಸಂಕಷ್ಟ

ಅತ್ಯಾಚಾರ ಕೇಸ್ ಸಂಬಂಧ ಮುರುಘಾ ಮಠದ ಮುರುಘಾ ಶ್ರೀಗಳಿಗೆ ಕಂಟಕ ಹೆಚ್ಚಾಗ್ತಿದೆ. ಬಂಧನಕ್ಕೆ ಒತ್ತಾಯ ಹೆಚ್ಚುತ್ತಿದೆ. ಚಿತ್ರದುರ್ಗ, ಮೈಸೂರಲ್ಲಿ ಪ್ರತಿಭಟನೆ ನಡೆದಿದೆ. ಮುರುಘಾ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ. ಇದರ ನಡುವೆ ಹಾಸ್ಟೇಲ್ ವಾರ್ಡನ್ ರಶ್ಮಿ, ಎಸ್.ಕೆ ಬಸವರಾಜನ್ ವಿರುದ್ಧ ಅತ್ಯಾಚಾರ ಯತ್ನ ಅಂತಾ ದೂರು ನೀಡಿದ್ದರು. ಈ ಕೇಸ್ನಲ್ಲಿ ಈಗ ಬಸವರಾಜ್​​ಗೆ ಜಾಮೀನು ದೊರೆತಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಕೆ. ಬಸವರಾಜನ್ ಮತ್ತು ಪತ್ನಿ ಸೌಭಾಗ್ಯಗೆ ನ್ಯಾಯಾಲಯ (Court) ಜಾಮೀನು (Bail) ಮಂಜೂರು ಮಾಡಿದೆ. ಮತ್ತೊಂದೆಡೆ ಮತ್ತೆ ಮೂವರು ಆರೋಪಿಗಳಿಂದಲೂ ಜಾಮೀನು ಅರ್ಜಿ ಸಲ್ಲಿಕೆಯಾಗಿದೆ.

ಗದಗದಲ್ಲಿ ತರಗತಿಗೆ ನುಗ್ಗಿದ ನೀರು, ವಿದ್ಯಾರ್ಥಿಗಳ ಪರದಾಟ

ಕರ್ನಾಟಕದಲ್ಲಿ ಎಡೆಬಿಡದೇ ಮಳೆಯಾಗುತ್ತಿದೆ. ಮಳೆಯಬ್ಬರಕ್ಕೆ (Heavy Rain) ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಗದಗದಲ್ಲಿ (Gadaga) ಮಳೆಗೆ ಅವಾಂತರವೇ ಸೃಷ್ಠಿಯಾಗ್ತಿದೆ. ವರುಣ ಆರ್ಭಟಕ್ಕೆ ತರಗತಿ ನಡೆಯುತ್ತಿದ್ದಾಗಲೇ ಶಾಲೆಗೆ ನೀರು ನುಗ್ಗಿದೆ. ಏಕಾಏಕಿ ಶಾಲೆಗೆ ನೀರು ನುಗ್ಗಿದ ಪರಿಣಾಮ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7 ತರಗತಿಯ ವಿದ್ಯಾರ್ಥಿಗಳ ಕೊಠಡಿಗಳಿಗೆ ಮಳೆ ನೀರು ನುಗ್ಗಿದೆ. ಕೊಡಗಿನಲ್ಲಿ ಮಳೆಗೆ ಬೈಕ್, ಕಾರು ಮುಳುಗಿದೆ. ರಾಜ್ಯದಲ್ಲಿ ಮಳೆ ಮುಂದುವರಿದಿದೆ.

ಇದನ್ನೂ ಓದಿ:  ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್, ಸೌಭಾಗ್ಯಗೆ ಜಾಮೀನು

ಶಿಕ್ಷಕರ ದಿನಾಚರಣೆಗೆ ಅಕ್ಷರಮಾಲೆ ಬರೆಯಿರಿ ಎಂದ ಕನ್ನಡತಿ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಒಂದು ರೀತಿಯಲ್ಲಿ ಕನ್ನಡ ಅಂದ್ರೆ ಭುವಿ, ಭುವಿ ಅಂದ್ರೆ ಕನ್ನಡ ಅನ್ನುವಂತಾಗಿದೆ. ಆ ಕನ್ನಡದ ಅಭಿಮಾನವನ್ನು ಭುವಿ ಧಾರಾವಾಹಿಗೆ ಮೀಸಲಿಟ್ಟಿಲ್ಲ. ನಿಜ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ. ಅ ಯಿಂದ ಅಃ ತನಕ ಬರೆದು ಆ ಪೋಸ್ಟ್​​ನ್ನು ಶೇರ್ ಮಾಡಿದ್ದಾರೆ. ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಇದೆ. ಅಕ್ಷರ ಕಲಿಸಿಕೊಟ್ಟ ಗುರುಗಳನ್ನು ನೆನೆದು ಅವರಿಗೆ ಗೌರವ ಸಲ್ಲಿಸೋಣ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
Published by:Thara Kemmara
First published: