Evening Digest: ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ: ಅಪ್ಪು ಫೋಟೋ ತೆಗೆಸಿದ್ದಕ್ಕೆ ಶಿವಣ್ಣ ಬೇಸರ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ: ರಾಜ್ಯದ ಹಲವೆಡೆ ಭಾರೀ ಮಳೆಯಾಗ್ತಿದೆ. ರಾಜಧಾನಿ ಬೆಂಗಳೂರಿನಲ್ಲೂ ಮಳೆಯಾಗಿದ್ದು, ಮಧ್ಯಾಹ್ನದಿಂದಲೇ ಹಲವೆಡೆ ಭಾರೀ ಮಳೆಯಾಗುತ್ತಿದೆ. ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಯಿತು. ವಿಧಾನಸೌಧ, ಕೆ.ಆರ್.ವೃತ್ತ, ಶಿವಾಜಿನಗರ, ಲಾಲ್ ಬಾಗ್ ರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ, ಜಯನಗರ, ವಿದ್ಯಾರಣ್ಯಪುರ ಜೆ.ಪಿ.ನಗರ, ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ, ಹೆಬ್ಬಾಳ, HAL ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ. ರಾಮನಗರ ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ತುಮಕೂರು ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ , ಶಿವಮೊಗ್ಗ ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ.

ಅಪ್ಪು ಫೋಟೋ ತೆಗೆಸಿದ್ದಕ್ಕೆ ಶಿವಣ್ಣ ಬೇಸರ

ಸ್ಯಾಂಡಲ್​ವುಡ್​(Sandalwood)ನ ಸರಳತೆಯ ಸಾಮ್ರಾಟ್​, ಅಭಿಮಾನಿಗಳ ಆರಾಧ್ಯದೈವ, ಕನ್ನಡ ಚಿತ್ರರಂಗದ ಬೆಟ್ಟದ ಹೂ, ಯುವಕರ ಪಾಲಿನ ಯುವರತ್ನ, ಅಪ್ಪು ಅಗಲಿಕೆಯ ನೋವನ್ನು ಇಂದಿಗೂ ಯಾರೂ ಮರೆತಿಲ್ಲ. ಎಂದಿಗೂ ಮರೆಯುವುದಿಲ್ಲ. ಅವರ ನೆನಪು, ಅವರ ನಗು ನಮ್ಮನ್ನು ಕಾಡಿ ಕೊಲ್ಲುತ್ತಿದೆ. ದೇವರು (God) ಅವರಿಗೆ ಮಾಡಿದ ಅನ್ಯಾಯವನ್ನು ನೆನೆದು ಅಭಿಮಾನಿಗಳು ಹಿಡಿಶಾಪ ಹಾಕಿದ್ದರು. ಕರುನಾಡಿನ ಪ್ರತಿ ಮನೆಯಲ್ಲೂ ಇನ್ನೂ ಮೌನ ಆವರಿಸಿದೆ. ಎಲ್ಲೆ ಹೋಗಲಿ, ಏನೇ ಮಾಡುತ್ತಿರಲಿ ಅಪ್ಪು (Appu) ಅವರ ನೆನಪು ಮರಳಿ ಮರಳಿ ನಮ್ಮ ಕಣ್ಮುಂದೆ ಬಂದು ಕಾಡುತ್ತಿದೆ. ಆದರೆ ಮೊನ್ನೆ ತಿರುಪತಿ (Tirupati) ಯಲ್ಲಿ ನಡೆದ ಒಂದು ಘಟನೆ ಅಪ್ಪು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಅಪ್ಪು ಅಭಿಮಾನಿಯೊಬ್ಬರ ಕಾರಿ (Car) ನ ಮೇಲಿದ್ದ ಅಪ್ಪು ಸ್ಟಿಕರ್​ (Appu Sticker) ಅನ್ನು ತಿರುಪತಿಯಲ್ಲಿ ತೆಗೆಸಿದ್ದರು. ಇದೀಗ ಈ ವಿಚಾರಕ್ಕೆ ಶಿವರಾಜ್​ಕುಮಾರ್​  (Shiva Rajkumar) ಪ್ರತಿಕ್ರಿಯೆ  ಕೊಟ್ಟಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Puneeth Rajkumar: ದೇಗುಲದಲ್ಲಿ ದೇವರಿಗೇ ಅವಮಾನ! ತಿರುಪತಿಯಲ್ಲಿ ಅಪ್ಪು ಫೋಟೋ ತೆಗೆಸಿದ್ದಕ್ಕೆ ಶಿವಣ್ಣ ಬೇಸರ

ಬೊಮ್ಮಾಯಿ RSSನಿಂದ ಬಂದವರಲ್ಲ ಅದಕ್ಕೆ ಅವರನ್ನು ಬದಲಾಯಿಸುತ್ತಾರೆ- ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಆರ್​​ಎಸ್ಎಸ್‌ನವರಲ್ಲ. ಹೀಗಾಗಿ ಅವರನ್ನು ಬದಲಾಯಿಸಲು ಆರ್​​ಎಸ್ಎಸ್‌ನವರು (RSS) ಹೊರಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ಮೈಸೂರಿನಲ್ಲಿರುವ (Mysore) ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಜನತಾ ಪರಿವಾರದವರು. ನಮ್ಮ ಜತೆಯಲ್ಲೇ ಇದ್ದವರು. ಆದರೆ ಅವರು ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ ಎಂದರು. ರಾಜ್ಯದಲ್ಲಿ ರಾಜ್ಯ ಸರ್ಕಾರ ಸತ್ತು ಹೋಗಿದೆ. ಸಿಎಂ, ಗೃಹ ಸಚಿವರು ಇಬ್ಬರೂ ಅಶಕ್ತರು. ಗೃಹ ಸಚಿವರು ಅತ್ಯಂತ ಅಸಮರ್ಥ ಸಚಿವ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇವರಿಗೆ ಆಡಳಿತ ಮಾಡುವುದಕ್ಕೆ ಬರುತ್ತಿಲ್ಲ. ಎಲ್ಲಾ ಪರೀಕ್ಷೆಗಳಲ್ಲೂ ದುಡ್ಡು ದುಡ್ಡು ಎನ್ನುತ್ತಿದ್ದಾರೆ. ದುಡ್ಡು ಕೊಟ್ಟು ಬಂದ ಅಧಿಕಾರಿಗಳು ಇವರ ಮಾತು ಕೇಳುತ್ತಿಲ್ಲ ಎಂದು ಕಿಡಿಕಾರಿದರು.ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ, ಆದರೆ ಸರ್ಕಾರಕ್ಕೆ ಅದನ್ನು ನಿಭಾಯಿಸಲು ಬರುತ್ತಿಲ್ಲ.

ಸಿದ್ದುಗೆ CM ತಿರುಗೇಟು

ಹಿಂದುಳಿದ ಮಠಗಳಿಗೆ ಸರ್ಕಾರದದಿಂದ ಅನುದಾನ ಬಿಡುಗಡೆ ಹಿನ್ನೆಲೆ‌ ಹಿಂದುಳಿದ, ದಲಿತ ಮಠಾಧೀಶರ (Dalita Matadeesha) ಒಕ್ಕೂಟದಿಂದ ಕೆಂಗೇರಿಯ (Kengeri) ರಾಮಾನುಜ ಮಠದಲ್ಲಿ ಕೃತಜ್ಞತೆ ಸಮಾರಂಭ ನಡೆಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಕೃತಜ್ಞತೆ ಸಲ್ಲಿಸಿದ್ರು. ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಭೈರತಿ ಬಸವರಾಜ್, ಕಾಗಿನೆಲೆ ಗುರು ಪೀಠದ ನಿರಂಜನಾಂದಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಭಾಗಿಯಾಗಿದ್ರು. ವೇದಿಕೆಗೆ ಬರ್ತಿದ್ದಂತೆ ಸ್ವಾಮೀಜಿಗಳು ಕುಳಿತುಕೊಳ್ಳುವ ದೊಡ್ಡ ಆಸನದಲ್ಲಿ ಕುಳಿತುಕೊಳ್ಳಲು ಸಿಎಂ ನಿರಾಕರಿಸಿದ್ರು. ನಿರಂಜನಾನಂದುಪುರಿ (Niranjanananda Swamiji)  ಸ್ವಾಮೀಜಿ ಒತ್ತಾಯ ಮಾಡಿದ್ರು, ಆಸನದಲ್ಲಿ ಕುಳಿತುಕೊಳ್ಳದೆ ಕೊನೆಗೆ ಸಾಮಾನ್ಯ ಆಸನದಲ್ಲಿ ಕುಳಿತುಕೊಂಡ್ರು. ಸಿಎಂ ಬಸವರಾಜ ಬೊಮ್ಮಾಯಿ ನಡೆಗೆ ಸ್ವಾಮೀಜಿಗಳು ಪ್ರಶಂಸೆ ವ್ಯಕ್ತಪಡಿಸಿದ್ದು, ನಮ್ಮ ಸಿಎಂ ಕಾಮನ್​ ಮ್ಯಾನ್​ (Common Man) ಎಂದ್ರು.

ಯಾವ ಮುಸ್ಲಿಂ ಮಹಿಳೆಯೂ ಗಂಡನಿಗೆ ಇನ್ನೂ 3 ಹೆಂಡತಿಯರಿರಲು ಬಯಸಲ್ಲ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam CM Himanta Biswa Sarma) ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (UCC - Uniform Civil Code) ಜಾರಿಗಾಗಿ ಬಲವಾಗಿ ಒತ್ತಾಯಿಸಿದರು. ಯಾವುದೇ ಮುಸ್ಲಿಂ ಮಹಿಳೆ ತನ್ನ ಪತಿ ಮೂರು ಹೆಂಡತಿಯರನ್ನು ಹೊಂದಲು ಬಯಸುವುದಿಲ್ಲ ಎನ್ನುವ ಮೂಲಕ ಮುಸ್ಲಿಮರ ಬಹುಪತ್ನಿತ್ವವನ್ನು ಟೀಕಿಸಿದರು. ನವದೆಹಲಿಯಲ್ಲಿ ಶರ್ಮಾ ಅವರು ಭಾನುವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಭೇಟಿ ಮಾಡಿದರು, ಅವರು ಇತ್ತೀಚೆಗೆ ತಮ್ಮ ಬಿಜೆಪಿ ಸರ್ಕಾರವು ಉತ್ತರ ರಾಜ್ಯದಲ್ಲಿ ಜಾರಿಗೆ ತರಲು ಯುಸಿಸಿಯ ಕರಡನ್ನು ಸಿದ್ಧಪಡಿಸುತ್ತದೆ ಎಂದು ಹೇಳಿದರು. ಭೇಟಿಯಾದ ಎಲ್ಲಾ ಮುಸ್ಲಿಮರು ಯುಸಿಸಿಯನ್ನು ಬಯಸುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದರು.
Published by:Kavya V
First published: