Evening Digest: ಹೇಗಿದ್ದಾರೆ ನಟ ಚಿಕ್ಕಣ್ಣ? ಸಿದ್ದರಾಮಯ್ಯಗೆ ಬಿಜೆಪಿ ಸವಾಲ್; ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ನನಗೇನು ಆಗಿಲ್ಲ ಎಂದ್ರು ಚಿಕ್ಕಣ್ಣ

ಸ್ಯಾಂಡಲ್​ವುಡ್​​ ನಲ್ಲಿ (Sandalwood) ಕಾಮಿಡಿ ಕಿಂಗ್ (Comedy King) ಎಂದು ಖ್ಯಾತರಾದವರು ಚಿಕ್ಕಣ್ಣ (Chikkanna) ಕೆಲವೊಂದು ಸಿನಿಮಾಗಳಲ್ಲಿ (Film) ಇವರೇ ಹೀರೋಗಿಂತ (Hero) ಹೆಚ್ಚಾಗಿ ಮಿಂಚಿದ್ದು ಉಂಟು. ಆದರೆ ಇದೀಗ ಅವರೇ ನಾಯಕನಾಗಿ ಒಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ಚಿತ್ರಕ್ಕೆ ‘ಉಪಾಧ್ಯಕ್ಷ‘ ಎಂದು ಸಹ ಟೈಟಲ್ ಇಡಲಾಗಿದೆ. ಸದ್ಯ ಈ ಚಿತ್ರದ ಶೂಟಿಂಗ್​ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದರ ನಡುವೆ ಚಿಕ್ಕಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ ಎಂದು ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಬಗ್ಗೆ ಚಿಕ್ಕಣ್ಣನವರಿಗೂ ಮಾಹಿತಿ ತಲುಪಿದ್ದು, ಶೂಟಿಂಗ್ ಸೆಟ್​ನಿಂದಲೇ ಇದೀಗ ಈ ಬಗ್ಗೆ ಚಿಕ್ಕಣ್ಣ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯಗೆ ಬಿಜೆಪಿ ಸವಾಲ್​

ಬೆಂಗಳೂರು (ಜು.2): ಸಿದ್ದರಾಮೋತ್ಸಕ್ಕೆ ಭಾರೀ ವಿರೋಧ ವ್ಯಕ್ತಪಡಿಸ್ತಿರೋ ಬಿಜೆಪಿ, ಮತ್ತೆ ಸಿದ್ದರಾಮಯ್ಯಗೆ (Siddaramaiah) ಸವಾಲು ಹಾಕಿದೆ. ಬಿಜೆಪಿಗೆ ನನ್ನನ್ನು ಕಂಡ್ರೆ ಭಯ ಎಂದಿದ್ದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ (BJP) ಸಿಡಿದೆದಿದ್ದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದರೆ ಈಗಲೇ ಡಿ.ಕೆ.ಶಿವಕುಮಾರ್ (D K Shivakumar) ವಿರುದ್ಧ ಸೆಟೆದು ನಿಲ್ಲಲಿ ಎಂದು ಬಿಜೆಪಿ ಸವಾಲು ಹಾಕಿದೆ. ಸರಣಿ ಟ್ವೀಟ್ (Tweet) ಮಾಡಿರುವ ಬಿಜೆಪಿ, ‘ತಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳಲು ತನ್ನದೇ ಪಟಾಲಂ ಜೊತೆಗೂಡಿ ವ್ಯಕ್ತಿ ಪೂಜೋತ್ಸವ ಮಾಡಿದರೆ ಅದನ್ನು ಶಕ್ತಿ ಪ್ರದರ್ಶನ ಎನ್ನುವುದಿಲ್ಲ. ಅದು ಉತ್ತರಕುಮಾರನ ಪೌರುಷ ಅಷ್ಟೇ. ತಾಕತ್ತು ಇದ್ದರೆ ಈಗಲೇ ಡಿಕೆಶಿ ವಿರುದ್ಧ ಸೆಟೆದು ನಿಲ್ಲಿ, ರಾಜಕೀಯ ಸಂದಿಗ್ಧತೆ ತಂದಿಡುವುದು ಸಾಮರ್ಥ್ಯವೇ’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: BJP Tweet: ಸಿದ್ದರಾಮಯ್ಯಗೆ ತಾಕತ್ತಿದ್ರೆ ಡಿ.ಕೆ ಶಿವಕುಮಾರ್ ವಿರುದ್ಧ ಸೆಟೆದು ನಿಲ್ಲಲಿ; ಬಿಜೆಪಿ ಸವಾಲ್

ದೇವೇಗೌಡರು ಭೀಷ್ಮಾಚಾರ್ಯರಿದ್ದಂತೆ- HDK

ಬೆಂಗಳೂರು (ಜು 7): ಕಾಂಗ್ರೆಸ್​ ಮಾಜಿ ಶಾಸಕ ಕೆ.ಎನ್​ ರಾಜಣ್ಣ (K.N Rajanna) ದೇವೇಗೌಡರ ಬಗ್ಗೆ ಆಡಿದ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಕೆ.ಎನ್ ರಾಜಣ್ಣ ವಿರುದ್ಧ ಪ್ರತಿಭಟನೆ (Protest) ಕೂಡ ನಡೆದಿದೆ. ಇತ್ತ ರಾಜಣ್ಣ ವಿರುದ್ಧ ಕುಮಾರಸ್ವಾಮಿ (Kumaraswamy) ಕೂಡ ಕಿಡಿಕಾರಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು (Deve Gowda) ಭೀಷ್ಮಾಚಾರ್ಯ ಇದ್ದಂತೆ. ಅವರಿಗೆ ಸಾವು ಅನ್ನೋದು ಅವರು ಬಯಸಿದಾಗಲೇ ಬರುತ್ತದೆಯೇ ಹೊರತು, ಯಾರೋ ಏನೋ ಹೇಳಿದಾಗ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಉದಯಪುರ ಹತ್ಯೆ ಆರೋಪಿಗಳ ಮೇಲೆ ಕೋರ್ಟ್​ ಆವರಣದಲ್ಲೇ ದಾಳಿ

ದೆಹಲಿ: ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ (Tailor Kanhaiya Lal) ಅವರ ಭೀಕರ ಹತ್ಯೆಯ ಇಬ್ಬರು ಆರೋಪಿಗಳ ಮೇಲೆ ಇಂದು ಜೈಪುರ ನ್ಯಾಯಾಲಯದ (Jaipur Court) ಹೊರಗೆ ದೊಡ್ಡ ಗುಂಪೊಂದು ದಾಳಿ ಮಾಡಿದೆ. ಜೈಪುರ ನ್ಯಾಯಾಲಯದ ಹೊರಗೆ ಗುಂಪೊಂದು ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ (Udaipur Murder) ಆರೋಪಿಗಳ ಮೇಲೆ ದಾಲಿ ನಡೆಸಿ, ಬಟ್ಟೆ ಹರಿದು ಹಾಕಿದೆ.  ನ್ಯಾಯಾಲಯವು ಇಂದು ಜುಲೈ 12 ರವರೆಗೆ ಟೈಲರ್ ಕನ್ಹಯ್ಯಾ ಲಾಲ್ ಅವರ ಹಂತಕರ ಕಸ್ಟಡಿಯನ್ನು ಎನ್‌ಐಎಗೆ ನೀಡಿದೆ. ಶನಿವಾರ ಜೈಪುರ ನ್ಯಾಯಾಲಯದಲ್ಲಿ ಕೋಪಗೊಂಡ ಜನಸಮೂಹವು ಟೈಲರ್ ಕನ್ಹಯ್ಯಾ ಲಾಲ್ ಅವರ ಕೊಲೆಯ ಆರೋಪಿಗಳ ಮೇಲೆ ದಾಳಿ ನಡೆಸಿದ ವಿಡಿಯೋ ಇಲ್ಲಿದೆ.

ಇದನ್ನೂ ಓದಿ: Udaipur Murder: ಉದಯಪುರ ಹತ್ಯೆ ಆರೋಪಿಗಳ ಮೇಲೆ ಕೋರ್ಟ್​ ಆವರಣದಲ್ಲೇ ದಾಳಿ; ವಿಡಿಯೋ ಇಲ್ಲಿದೆ

ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆ

ನೂಪುರ್ ಶರ್ಮಾ ಬೆಂಬರಲಿಸಿ ಪೋಸ್ಟ್ ಹಾಕಿದ್ದ ವ್ಯಕ್ತಿಯೊಬ್ಬರನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ಅಮಾನುಷವಾಗಿ ಹತ್ಯೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 21ರಂದು ಈ ಘಟನೆ ನಡೆದಿದ್ದು, ಮೆಡಿಕಲ್ ಶಾಪ್ ಮಾಲೀಕ, 54 ವರ್ಷದ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಎಂಬುವವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್‌ ಹಂಚಿಕೊಂಡಿದ್ದೇ ಉಮೇಶ್‌ ಕೊಲೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಉಮೇಶ್ ಕೋಲ್ಹೆ ಅವರು ಜೂ. 21 ರಂದು ರಾತ್ರಿ ತಮ್ಮ ಮೆಡಿಕಲ್ ಶಾಪ್‌ನಿಂದ ಕೆಲಸ ಮುಗಿಸಿ, ಶಾಪ್ ಬಾಗಿಲು ಹಾಕಿಕೊಂಡು ತಮ್ಮ  ಸ್ಕೂಟರ್‌ನಲ್ಲಿ ಮನೆಗೆ ವಾಪಸಾಗುತ್ತಿದ್ರು. ಆ ವೇಳೆ ನಡು ರಸ್ತೆ ಮೇಲೆ ಅವರ ಮೇಲೆ ಐದಕ್ಕೂ ಹೆಚ್ಚು ದುಷ್ಕರ್ಮಿಗಳು ದಾಳಿ ನಡೆಸಿದ್ದರು.
Published by:Pavana HS
First published: