ಪೆಟ್ರೋಲ್​ ಬಂಕ್​ ಡೀಲರ್​ ಶಿಪ್​ ಪಡೆಯುವುದು ಇನ್ನು ಸುಲಭ..! ಹೇಗೆ ಅಂತೀರಾ?

ಪೆಟ್ರೋಲ್​ ಪಂಪ್​ ಡೀಲರ್​ಶಿಪ್​ ಪಡೆಯಲು ನಿಮಗೆ ಸ್ವಂತ ಭೂಮಿ ಹಾಗೂ ಅಧಿಕ ಹಣ ಬೇಕಾಗಿಲ್ಲ. ಅದು ಹೇಗೆ ಅಂತೀರಾ ಇಲ್ಲಿದೆ ಮಾಹಿತಿ...

Seema.R | news18
Updated:December 11, 2018, 3:30 PM IST
ಪೆಟ್ರೋಲ್​ ಬಂಕ್​ ಡೀಲರ್​ ಶಿಪ್​ ಪಡೆಯುವುದು ಇನ್ನು ಸುಲಭ..! ಹೇಗೆ ಅಂತೀರಾ?
ಪ್ರಾತಿನಿಧಿಕ ಚಿತ್ರ
  • News18
  • Last Updated: December 11, 2018, 3:30 PM IST
  • Share this:
ನವದೆಹಲಿ (ಡಿ.11):  ಪೆಟ್ರೋಲ್​ ಬಂಕ್​ ಎಂದರೆ ಅದು ಒಂದು ರೀತಿಯ ಲಾಭಾದಾಯಕ ಹುದ್ದೆಯಂತೆ, ಅದರ ಲೈಸೆನ್ಸ್​ಗಾಗಿ ಉದ್ಯಮಿಗಳು ಮುಗಿಬೀಳುತ್ತಾರೆ. ಆ ರೀತಿಯಾಗಿ ನೀವು ಪೆಟ್ರೋಲ್​ ಬಂಕ್​ ಮಾಲೀಕರು ನೀವಾಗ ಬೇಕು ಎಂದರೆ ಇಲ್ಲಿದೆ ಸುವರ್ಣಾವಕಾಶ.

ಸರ್ಕಾರದ ಮಾಲೀಕತ್ವದ ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ಲಿಮಿಟೆಡ್​(ಐಒಸಿಎಲ್​) ತನ್ನ ಡೀಲರ್​ ಶಿಪ್​ ಅನ್ನು ದೇಶದಾದ್ಯಂತ ನೀಡಲು ಮುಂದಾಗಿದೆ, ಇದಕ್ಕಾಗಿ ಐಒಸಿ 27 ಸಾವಿರ ಹೊಸ ಅರ್ಜಿಯನ್ನು ಆಹ್ವಾನಿಸಿದೆ. ಈ ಪೆಟ್ರೋಲ್​ ಪಂಪ್​ ಡೀಲರ್​ಶಿಪ್​ ಪಡೆಯಲು ನಿಮಗೆ ಸ್ವಂತ ಭೂಮಿ ಹಾಗೂ ಅಧಿಕ ಹಣ ಬೇಕಾಗಿಲ್ಲ. ಅದು ಹೇಗೆ ಅಂತೀರಾ ಇಲ್ಲಿದೆ ಮಾಹಿತಿ

ಆನ್​ಲೈನ್​ನಲ್ಲಿ ಪ್ರಕ್ರಿಯೆ: www.petrolpumpdealerchayan.in. ವೆಬ್​ತಾಣದಲ್ಲಿ ಈ ಡೀಲರ್​ಶಿಪ್​ ಪಡೆಯುವ ಮಾಹಿತಿ ನೀಡಲಾಗಿದೆ, ಅಲ್ಲದೇ ಇದನ್ನು ಪಡೆಯಲು ಅನುಸರಿಸಬೇಕಾದ ನಿಯಮ ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ಇಲ್ಲಿ ನಮೂದಿಸಲಾಗಿದೆ, ಯಾರು ಆನ್​ಲೈನ್​ ಅರ್ಜಿಯನ್ನು ಸಲ್ಲಿಸುತ್ತಾರೆ, ಅವರು ಈ ಡೀಲರ್​ಶಿಪ್​ ಪಡೆಯುತ್ತಾರೆ. ಆನ್​ಲೈನ್​ ಅರ್ಜಿ ಹೇಗೆ ಸಲ್ಲಿಸಬೇಕು ಎಂಬ ಬಗ್ಗೆ ಕೂಡ ಮಾದರಿ ನೀಡಲಾಗಿದೆ. ಇದರಲ್ಲಿ ರಾಜ್ಯದ ಪ್ರಾದೇಶಿಕ ಕಚೇರಿಯ ವಿಳಾಸ ಹಾಗೂ ಫೋನ್​ ನಂಬರ್​ ನೀಡಲಾಗಿದೆ, ನಿಮಗೆ ಬೇಕಾದಲ್ಲಿ ಈ ಮೊಬೈಲ್​ ಸಂಖ್ಯೆಗೆ ಕರೆ ಮಾಡಿ ವಿಚಾರಿಸಬಹುದು. ಈ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಡಿ.24.

ಇದನ್ನು ಓದಿ: ಮದುವೆಯಾದ 21 ವರ್ಷದ ನಂತರ ಡೈವೋರ್ಸ್​ ಕೇಳಿದ ರಾಜಸ್ಥಾನದ ಬಿಜೆಪಿ ಶಾಸಕಿ, ರಾಜವಂಶಸ್ಥೆ ದಿಯಾ ಕುಮಾರಿ

ಯಾರು ಪೆಟ್ರೋಲ್​ ಪಂಪ್​ ತೆರೆಯಬಹುದು: ಭಾರತದ ಪ್ರಜೆಯಾಗಿರಬೇಕು. 21 ರಿಂದ 60 ವರ್ಷ ವಯಸ್ಸಿನವರಾಗಿರಬೇಕು. ಕನಿಷ್ಟ 10ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಸುಲಭ ಕಾನೂನು: ಈ ಹಿಂದೆ ಪೆಟ್ರೋಲ್​ ಪಂಪ್​ ಡೀಲರ್​ಶಿಪ್​ ಪಡೆಯಲು 25 ಲಕ್ಷ ಹಣ ಹಾಗೂ ಸ್ವಂತ ಭೂಮಿ ಹೊಂದಿರಬೇಕು ಎಂಬ ನಿಯಮವಿತ್ತು. ಆದರೆ ಈಗ ಬದಲಾದ ನಿಯಮದ ಪ್ರಕಾರ ಈ ನಿಯಮಗಳನ್ನು ಬದಲಾಯಿಸಲಾಗಿದೆ. ಒಂದು ವೇಳೆ ಭೂಮಿ ತೋರಿಸಬೇಕು ಎಂದರೆ, ನೀವು ಒಪ್ಪಂದ ಮಾಡಿಕೊಂಡ ಭೂಮಿಯನ್ನು ತೋರಿಸಿದರೆ ಸಾಕು .

ಐದು ರಾಜ್ಯಗಳ ಚುನಾವಣೆ ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
First published:December 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ