HOME » NEWS » National-international » EVEN TMC SURVEY SHOWS BJP WIN AMIT MALVIYA QUOTES PRASHANT KISHOR LEAKED AUDIO RHHSN

West Bengal Election 2021: ಟಿಎಂಸಿ ಸಮೀಕ್ಷೆ ಪ್ರಕಾರವೂ ಬಿಜೆಪಿಗೇ ಗೆಲುವು; ಬಿರುಗಾಳಿ ಎಬ್ಬಿಸಿದ ಪ್ರಶಾಂತ್ ಕಿಶೋರ್ ಆಡಿಯೋ!

ಇಂದು ಪಶ್ಚಿಮ ಬಂಗಾಳದ 4ನೇ ಹಂತದ ಚುನಾವಣೆ ನಡೆಯುತ್ತಿದ್ದು, 294ರ ಪೈಕಿ 44 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

news18-kannada
Updated:April 10, 2021, 5:37 PM IST
West Bengal Election 2021: ಟಿಎಂಸಿ ಸಮೀಕ್ಷೆ ಪ್ರಕಾರವೂ ಬಿಜೆಪಿಗೇ ಗೆಲುವು; ಬಿರುಗಾಳಿ ಎಬ್ಬಿಸಿದ ಪ್ರಶಾಂತ್ ಕಿಶೋರ್ ಆಡಿಯೋ!
ಸಿಎಂ ಮಮತಾ ಬ್ಯಾನರ್ಜಿ
  • Share this:
ಕೊಲ್ಕತ್ತಾ (ಏ. 10): ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ದೇಶದ ಉದ್ದಗಲಕ್ಕೂ ಭಾರೀ ಸದ್ದು ಮಾಡುತ್ತಿದೆ. ಪಂಚರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿಯಾದರೂ ಬಂಗಾಳದ ಚುನಾವಣಾ ಕಣ ರಂಗೇರಿದೆ. ಆಡಳಿತಾರೂಢ ಟಿಎಂಸಿ ವಿರುದ್ಧ ಜಯಭೇರಿ ಸಾಧಿಸಲು ಬಿಜೆಪಿ ಅವಿರತವಾಗಿ ಯತ್ನಿಸುತ್ತಿದೆ. ಹಲವು ಹಂತಗಳಲ್ಲಿ ನಡೆಯುತ್ತಿರುವ ಚುನಾವಣೆ ನಿತ್ಯ ಒಂದು ಹೈಡ್ರಾಮಾಗೆ ಸಾಕ್ಷಿಯಾಗುತ್ತಿದೆ. ಈಗ ಮೋದಿ V/S ದೀದಿ ಜಟಾಪಟಿ ಮಧ್ಯೆ ಕೇಸರಿ ಪಾಳಯ ಹೊಸ ದಾಳವನ್ನು ಉರುಳಿಸಿದೆ. ಸಿಎಂ ಮಮತಾ ಬ್ಯಾನರ್ಜಿಯವರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಆಡಿಯೋವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಆಡಿಯೋದಲ್ಲಿ ಟಿಎಂಸಿ ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರವೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೇ ಚುನಾವಣೆಯಲ್ಲಿ ಗೆಲ್ಲಲಿದೆ. ಮೋದಿಯವರ ಚಾರ್ಮ್ ಈ ಚುನಾವಣೆಯಲ್ಲೂ ಪ್ರಭಾವ ಬೀರಲಿದೆ ಎಂದು ಪ್ರಶಾಂತ್ ಕಿಶೋರ್ ಒಪ್ಪಿಕೊಂಡಿದ್ದಾರೆ. ಈ ಆಡಿಯೋ ತುಣಕನ್ನು ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್ ಮಾಳವಿಯಾ ರಿಲೀಸ್ ಮಾಡಿದ್ದಾರೆ.

ನಾಲ್ಕು ಆಡಿಯೋ ಕ್ಲಿಪ್​ಗಳನ್ನು ಟ್ವೀಟ್ ಮೂಲಕ ಬಿಡುಗಡೆ ಮಾಡಿರುವ ಅಮಿತ್ ಮಾಳವಿಯಾ, ಬಿಜೆಪಿಯ ಗೆಲುವನ್ನು ಟಿಎಂಸಿ ನೇಮಿಸಿಕೊಂಡಿರುವ ಚುನಾವಣಾ ಚಾಣಕ್ಯ ಎನಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಅವರೇ ಒಪ್ಪಿಕೊಂಡಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಆಂತರಿಕ ಚುನಾವಣಾ ಸಮೀಕ್ಷೆಯಲ್ಲೇ ಬಿಜೆಪಿ ಚುನಾವಣೆ ಗೆಲ್ಲಲಿದೆ ಎಂಬುವುದು ಗೊತ್ತಾಗಿದೆ. ಈ ವಿಷಯವನ್ನು ಕ್ಲಬ್​ಹೌಸ್ ಹೆಸರಿನ ಪತ್ರಕರ್ತರ ಗುಂಪೊಂದು ನಡೆಸಿದ ಚುನಾವಣೆ ಕುರಿತು ಚರ್ಚೆಯಲ್ಲಿ ಪ್ರಶಾಂತ್ ಅವರೇ ಖುದ್ದು ಬಾಯ್ಬಿಟ್ಟಿದ್ದಾರೆ ಎಂದು ಮಾಳವಿಯಾ ಆರೋಪಿಸಿದ್ದಾರೆ.

ಇದನ್ನು ಓದಿ: Sonia Gandhi: ಕೋವಿಡ್​ ಲಸಿಕೆ ರಫ್ತು ಪರಿಣಾಮ ದೇಶದಲ್ಲಿ ಕೊರತೆಯಾಗಿದೆ; ಸೋನಿಯಾ ಗಾಂಧಿ

ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ದೊಡ್ಡ ಜನಪ್ರಿಯತೆ ಗಳಿಸಿದ್ದಾರೆ. ಮೋದಿ ಅಲೆಯ ಮೇಲೆ ಮತಗಳ ಧ್ರುವಿಕರಣವಾಗಿದೆ. ಟಿಎಂಸಿ, ಕಾಂಗ್ರೆಸ್ ಮುಸ್ಲಿಮರ ಮತಗಳಿಕೆ ಓಲೈಕೆಯಲ್ಲೇ ತೊಡಗಿವೆ ಎಂದೂ ಪ್ರಶಾಂತ್ ಆಡಿಯೋದಲ್ಲಿ ಮಾತನಾಡಿದ್ದಾರೆ.
ಮಾಳವಿಯಾ ಆಡಿಯೋ ರಿಲೀಸ್​ಗೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, ನನಗೆ ಖುಷಿಯಾಗುತ್ತಿದೆ. ಬಿಜೆಪಿಗರು ತಮ್ಮ ನಾಯಕರ ಮಾತಿಗಿಂತ ನಾನು ಕ್ಲಬ್​ಹೌಸ್​ನಲ್ಲಿ ಮಾತನಾಡಿರುವುದನ್ನೇ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ನನ್ನ ಮಾತಿನ ಕೆಲವೇ ಕೆಲವು ತುಣುಕುಗಳನ್ನು ಈ ರೀತಿ ಬಿಡುಗಡೆ ಮಾಡುವುದಕ್ಕಿಂತ ಸಂಪೂರ್ಣ ಆಡಿಯೋವನ್ನು ಬಿಡುಗಡೆ ಮಾಡಿ. ಬಿಜೆಪಿ ರಿಲೀಸ್ ಮಾಡಿರುವ ಆಡಿಯೋದಲ್ಲಿನ ನನ್ನ ಮಾತಿಗೂ ಮುನ್ನ ಹಾಗೂ ನಂತರ ಸ್ಪಷ್ಟವಾಗಿ ಹೇಳಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 100ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಹೇಳಿದ್ದೇನೆ. ಆದರೆ ಬಿಜೆಪಿಯವರು ಆಯ್ದ ಆಡಿಯೋ ಭಾಗವನ್ನು ಮಾತ್ರ ಬಿಡುಗಡೆ ಮಾಡಿ ಮತದಾನದ ವೇಳೆ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಪ್ರತ್ಯಾರೋಪ ಮಾಡಿದ್ದಾರೆ.
Youtube Video
ಇಂದು ಪಶ್ಚಿಮ ಬಂಗಾಳದ 4ನೇ ಹಂತದ ಚುನಾವಣೆ ನಡೆಯುತ್ತಿದ್ದು, 294ರ ಪೈಕಿ 44 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

  • ವರದಿ: ಕಾವ್ಯಾ ವಿ

Published by: HR Ramesh
First published: April 10, 2021, 5:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories