News18 India World Cup 2019

ಭಾರತದಲ್ಲಿ ನನ್ನ ಧರ್ಮವೂ ಹಿಂದೂಮಯವಾಗಿದೆ: ನ್ಯಾ| ನಾರಿಮನ್


Updated:August 16, 2018, 4:01 PM IST
ಭಾರತದಲ್ಲಿ ನನ್ನ ಧರ್ಮವೂ ಹಿಂದೂಮಯವಾಗಿದೆ: ನ್ಯಾ| ನಾರಿಮನ್

Updated: August 16, 2018, 4:01 PM IST
- ನ್ಯೂಸ್18 ಕನ್ನಡ

ನವದೆಹಲಿ(ಆ. 16): ಭಾರತದಲ್ಲಿರುವಷ್ಟು ಪ್ರಬಲ ಜಾತಿ ವ್ಯವಸ್ಥೆ ವಿಶ್ವದಲ್ಲಿ ಬೇರೆಲ್ಲೂ ಇಲ್ಲ. ಹಿಂದೂ ಧರ್ಮದ ಬೇರಿನಂತಿರುವ ಜಾತಿ ವ್ಯವಸ್ಥೆಯು ಭಾರತದ ಯಾವ ಧರ್ಮವನ್ನೂ ಬಿಟ್ಟಿಲ್ಲ. ದೇಶವನ್ನು ಪ್ರವೇಶಿಸಿರುವ ಪ್ರತಿಯೊಂದು ಧರ್ಮದಲ್ಲೂ ಜಾತಿ ವ್ಯವಸ್ಥೆ ಹೊಕ್ಕಿಕೂತಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರೋಹಿಂಗ್ಟನ್ ಎಫ್. ನಾರಿಮನ್ ಕೂಡ ಈ ಮಾತನ್ನು ಒಪ್ಪುತ್ತಾರೆ. ಮರುಪರಿಶೀಲನಾ ಅರ್ಜಿಯೊಂದರ ವಿಚಾರಣೆ ವೇಳೆ ನಾರಿಮನ್ ಈ ಕುರಿತು ಮಾತನಾಡುತ್ತಿದ್ದರು.

“ನನ್ನ ಧರ್ಮದ ಮೂಲವಿರುವ ದೇಶದಲ್ಲಿ ಯಾವುದೇ ಜಾತಿ ಪದ್ಧತಿ ಇಲ್ಲ. ಆದರೆ, ಭಾರತದಲ್ಲಿ ಇದೆ. ಇಲ್ಲಿ ನೀವು ಅರ್ಚಕನಾಗಬೇಕಾದರೆ ಅರ್ಚಕನ ಮಗನಾಗಿ ಹುಟ್ಟಬೇಕಾಗುತ್ತದೆ. ನಾನು ಅರ್ಚಕ ಕುಟುಂಬದಲ್ಲಿ ಜನಿಸದೇ ಹೋಗಿದ್ದರೆ ಅರ್ಚಕನಾಗಲು ಸಾಧ್ಯವಾಗುತ್ತಿರಲಿಲ್ಲ. ಆ ಮಟ್ಟಿಗೆ ನನ್ನ ಧರ್ಮವು ಹಿಂದೂಮಯವಾಗಿದೆ,” ಎಂದು ನ್ಯಾ| ನಾರಿಮನ್ ಅಭಿಪ್ರಾಯಪಟ್ಟಿದ್ದಾರೆ.

ರೋಹಿಂಗ್ಟನ್ ನಾರಿಮನ್ ಅವರು ಇರಾನ್ ಮೂಲದ ಪಾರ್ಸಿ ಧರ್ಮದವರಾಗಿದ್ದಾರೆ. ಭಾರತದಲ್ಲಿರುವ ಹಿಂದೂ, ಇಸ್ಲಾಮ್, ಕ್ರೈಸ್ತ, ಜೈನ, ಪಾರ್ಸಿ, ಬೌದ್ಧ ಇತ್ಯಾದಿ ಧರ್ಮಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಜಾತಿ ವ್ಯವಸ್ಥೆ ಹಾಸುಹೊಕ್ಕಾಗಿದೆ.

ಎಸ್ಸಿ/ಎಸ್ಟಿ ಸಮುದಾಯದ ಮೀಸಲಾತಿಗೆ ಒಂದಿಷ್ಟು ಷರುತ್ತುಗಳನ್ನ ವಿಧಿಸಿ 2006ರಲ್ಲಿ ಸುಪ್ರೀಂಕೊರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಇಂದು ಸಿಜೆಐ ದೀಪಕ್ ಮಿಶ್ರಾ ನೇತೃತ್ವದಲ್ಲಿ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಯಿತು. ಈ ಸಾಂವಿಧಾನಿಕ ಪೀಠದಲ್ಲಿ ನ್ಯಾ| ನಾರಿಮನ್, ನ್ಯಾ| ಸಂಜಯ್ ಕವಲ್ ಮತ್ತು ನ್ಯಾ| ಜೋಸೆಫ್ ಕುರಿಯನ್ ಅವರೂ ಇದ್ದರು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮರುಪರಿಶೀಲನೆಯಾಗಬೇಕು ಎಂಬುದು ಸರಕಾರದ ವಾದವಾಗಿದೆ. ಸರಕಾರದ ಪರವಾಗಿ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಸಾಂವಿಧಾನದ ಪೀಠದೆದುರು ವಾದ ಮಂಡಿಸಿದರು.

ನಾರಿಮನ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನ್ಯಾ| ಜೋಸೆಫ್ ಕುರಿಯನ್ ಅವರ ಸಮುದಾಯದಲ್ಲಿನ ಜಾತಿ ವ್ಯವಸ್ಥೆಯನ್ನೂ ಛೇಡಿಸಿದರು. ಜೋಸೆಫ್ ಅವರ ಸಮುದಾಯದವರು ಇತ್ತೀಚಿನವರೆಗೂ ತಮ್ಮ ಗೋತ್ರ ಬಿಟ್ಟು ಬೇರೆಯವರೊಂದಿಗೆ ವಿವಾಹ ಮಾಡುತ್ತಿರಲಿಲ್ಲವೆಂಬ ವಿಚಾರವನ್ನ ಉಲ್ಲೇಖಿಸಿದರು.
First published:August 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...