ಧ್ವೇಷದ ಅಲೆಯಲ್ಲಿ ಬಿಜೆಪಿಗೆ ಅಧಿಕಾರ ಬೇಕಿಲ್ಲ; ಗೆದ್ದರೂ ಅದು ನಮಗೆ ಗೆಲುವಲ್ಲ: ರಾಜನಾಥ್ ಸಿಂಗ್

ಬಿಜೆಪಿಯಾಗಲೀ, ಪ್ರಧಾನಿ ಮೋದಿಯಾಗಲೀ ದುರುದ್ದೇಶ ಹೊಂದಿದ್ದೇ ಆಗಿದ್ದಲ್ಲಿ ಸರ್ಕಾರವು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಸ್ಲೋಗನ್ ಹೇಳುತ್ತಿರಲಿಲ್ಲ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್

ರಕ್ಷಣಾ ಸಚಿವ ರಾಜನಾಥ್ ಸಿಂಗ್

 • News18
 • Last Updated :
 • Share this:
  ನವದೆಹಲಿ(ಜ. 30): ಸಿಎಎ, ಎನ್​ಆರ್​ಸಿ ವಿಚಾರದಲ್ಲಿ ದೇಶಾದ್ಯಂತ ಮುಸ್ಲಿಮ್ ಸಮುದಾಯ ಆತಂಕಗೊಂಡಿರುವುದು ಅವರ ವ್ಯಾಪಕ ಪ್ರತಿಭಟನೆಗಳಿಂದ ವ್ಯಕ್ತವಾಗಿದೆ. ಅಲ್ಪಸಂಖ್ಯಾತ ಸಮುದಾಯದ ಕಳವಳವನ್ನು ದೂರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು ಕಡಿಮೆಯೇ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ದೆಹಲಿ ಚುನಾವಣಾ ಪ್ರಚಾರದ ವೇಳೆ ಈ ವಿಚಾರವನ್ನು ಪ್ರಸ್ತಾಪಿಸಿ ಅಲ್ಪಸಂಖ್ಯಾತರಿಗೆ ಧೈರ್ಯದ ಮಾತುಗಳನ್ನಾಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ. ಹೊಸ ಕಾಯ್ದೆಯಿಂದ ಭಾರತೀಯ ನಾಗರಿಕರಿಗೆ ಏನೂ ಸಮಸ್ಯೆ ಆಗುವುದಿಲ್ಲ ಎಂದು ರಕ್ಷಣಾ ಸಚಿವರು ಆಶ್ವಾಸನೆ ನೀಡಿದ್ದಾರೆ.

  ಆದರ್ಶ ನಗರದಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಧ್ವೇಷದ ನೆಲೆಯಲ್ಲಿ ಅಧಿಕಾರ ಪಡೆಯುವುದು ಬಿಜೆಪಿಗೆ ಬೇಕಾಗಿಲ್ಲ ಎಂದು ಹೇಳಿದ್ಧಾರೆ. “ಧ್ವೇಷದ ಕಾರಣದಿಂದ ಸಿಗುವ ಗೆಲುವು ನಮಗೆ ಬೇಕಿಲ್ಲ. ನಾವು ಗೆದ್ದರೂ ಅದನ್ನು ಗೆಲುವೆಂದು ಸ್ವೀಕರಿಸುವುದಿಲ್ಲ” ಎಂದಿದ್ದಾರೆ.

  ಸಿಎಎ, ಎನ್​ಆರ್​ಸಿ ವಿಚಾರದಲ್ಲಿ ಮುಸ್ಲಿಮರಿಗೆ ವಿಪಕ್ಷಗಳು ಭಯ ಹುಟ್ಟಿಸುತ್ತಿವೆ ಎಂದೂ ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ಕಿಡಿಕಾರಿದ್ಧಾರೆ. ಶಾಹೀನ್ ಬಾಗ್​ನಲ್ಲಿ ಪ್ರತಿಭಟನೆ ಆಯೋಜಿಸಿರುವ ಕೆಲವರು ಮುಸ್ಲಿಮರಿಂದ ಪೌರತ್ವ ಕಿತ್ತುಕೊಳ್ಳಲಾಗುತ್ತದೆ ಎಂದು ಅಪಪ್ರಚಾರ ಮಾಡಿ ಭಯ ಹುಟ್ಟಿಸುತ್ತಿದ್ದಾರೆ. ಮುಸಲ್ಮಾನರು ಸರ್ಕಾರದ ಉದ್ದೇಶವನ್ನು ಸಂಶಯಿಸಬಾರದು ಎಂದು ಕರೆ ನೀಡಿದ್ಧಾರೆ.

  ಇದನ್ನೂ ಓದಿ: ಮಹಾತ್ಮನನ್ನು ಕೊಂದು ನಾವು ಪಡೆದದ್ದಾದರೂ ಏನು?; ನೆಪಕ್ಕಷ್ಟೇ ಗಾಂಧಿಯನ್ನು ನೆನೆಯುವ ರಾಷ್ಟ್ರದಲ್ಲಿ ನಿಂತು!

  “ನೀವು ನಮಗೆ ವೋಟು ನೀಡುತ್ತೀರೋ ಇಲ್ಲವೋ ನನಗೆ ಗೊತ್ತಿಲ್ಲ. ನಮ್ಮ ಪ್ರಾಮಾಣಿಕತೆಯನ್ನು ನೀವು ಸಂದೇಹಿಸಬಾರದೆಂದು ಕೇಳಿಕೊಳ್ಳುತ್ತೇನೆ. ಈ ದೇಶದ ಪ್ರತಿಯೊಬ್ಬ ಭಾರತದ ನಾಗರಿಕನೇ. ಆತನ ಪೌರತ್ವವನ್ನು ಪ್ರಶ್ನಿಸುವುದರಿಲಿ, ಈ ದೇಶದ ಯಾವುದೇ ಮುಸ್ಲಿಮ್ ನಾಗರಿಕನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ರಕ್ಷಣಾ ಮಂತ್ರಿಯಾಗಿ ನಾನು ಭರವಸೆ ನೀಡುತ್ತೇನೆ” ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

  ಬಿಜೆಪಿಯಾಗಲೀ, ಪ್ರಧಾನಿ ಮೋದಿಯಾಗಲೀ ದುರುದ್ದೇಶ ಹೊಂದಿದ್ದೇ ಆಗಿದ್ದಲ್ಲಿ ಸರ್ಕಾರವು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ (ಪ್ರತಿಯೊಬ್ಬರ ಜೊತೆ ಪ್ರತಿಯೊಬ್ಬರ ಅಭಿವೃದ್ಧಿ) ಸ್ಲೋಗನ್ ಕೂಗುತ್ತಿರಲಿಲ್ಲ ಎಂದು ಹೇಳಿದ ರಾಜನಾಥ್ ಸಿಂಗ್, ದೇಶದ ವಿಪಕ್ಷಗಳು ಧ್ವೇಷದ ರಾಜಕಾರಣ ಮಾಡುತ್ತಿವೆ ಎಂದು ದೂರಿದ್ದಾರೆ.

  ಸಿಎಎ ವಿಚಾರವಾಗಿ ಈ ದೇಶದ ಯಾವೊಬ್ಬ ನಾಗರಿಕರೂ ಕೂಡ ಭಯಪಡಬೇಕಿಲ್ಲ ಎಂದು ಪ್ರಧಾನಿ ಮೋದಿ ಕೂಡ ಅನೇಕ ಬಾರಿ ಹೇಳಿದ್ಧಾರೆ. ಇದು ಪೌರತ್ವ ಕೊಡುವ ಕಾನೂನೇ ಹೊರತು ಪೌರತ್ವ ಕಿತ್ತುಕೊಳ್ಳುವುದಲ್ಲ ಎಂದು ಅಮಿತ್ ಷಾ ಕೂಡ ಅನೇಕ ಸಲ ಸ್ಪಷ್ಟಪಡಿಸಿದ್ದಾರೆ. ಆದರೂ ಕೂಡ ದೇಶಾದ್ಯಂತ ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಲೇ ಇರುವುದು ಗಮನಾರ್ಹವಾಗಿದೆ.

  70 ಸದಸ್ಯಬಲದ ದೆಹಲಿಯಲ್ಲಿ ಫೆ. 8ರಂದು ಚುನಾವಣೆ ನಡೆಯಲಿದ್ದು, 11ರಂದು ಫಲಿತಾಂಶ ಪ್ರಕಟವಾಗಲಿದೆ. ಹಲವು ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: