ಇನ್ಮುಂದೆ ಉದ್ಯೋಗದಲ್ಲಿದ್ದಾಗ ಸತ್ತರೆ ಕುಟುಂಬದವರಿಗೆ ಸಿಗಲಿದೆ ಪ್ರತಿ ತಿಂಗಳು ಪಿಂಚಣಿ

ಮಕ್ಕಳಿಗೆ 25 ವರ್ಷ ತುಂಬುವರೆಗೆ ಈ ಪೆನ್ಶನ್​ ಸಿಗಲಿದೆ. ಹಾಗೆಯೇ ನಾಮಿನಿಯು 6 ಲಕ್ಷದವರೆಗೆ ವಿಮೆಗಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

zahir | news18
Updated:February 12, 2019, 6:06 PM IST
ಇನ್ಮುಂದೆ ಉದ್ಯೋಗದಲ್ಲಿದ್ದಾಗ ಸತ್ತರೆ ಕುಟುಂಬದವರಿಗೆ ಸಿಗಲಿದೆ ಪ್ರತಿ ತಿಂಗಳು ಪಿಂಚಣಿ
@Etemaad Daily
zahir | news18
Updated: February 12, 2019, 6:06 PM IST
ಕೇಂದ್ರ ನೌಕರರ ಪಿಂಚಣಿ ಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ತರಲಾಗಿದೆ. ಹೊಸ ನಿಯಮದ ಪ್ರಕಾರ ಉದ್ಯೋಗಿಯೊಬ್ಬರು ಸೇವೆಯಲ್ಲಿರುವಾಗ ಮೃತಪಟ್ಟರೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಂತಹ ಕುಟುಂಬಗಳ ನೆರವಿಗೆ ಬರಲಿದೆ. ಏಕೆಂದರೆ ಯಾವುದೇ ವ್ಯಕ್ತಿಯು ಕೆಲಸಕ್ಕೆ ಸೇರಿದ ಒಂದು ತಿಂಗಳ ಬಳಿಕ ಸಾವನ್ನಪ್ಪಿದರೆ, ಅವರ ನಾಮಿನಿಗೆ ಪಿಂಚಣಿ ಸಿಗಲಿದೆ. ಉದ್ಯೋಗಿಯ ಕೆಲಸದ ಸಂಬಳದಂತೆ ಈ ಪಿಂಚಣಿಯನ್ನು ನಿರ್ಧರಿಸಲಾಗುತ್ತದೆ ಎಂದು EPFO ತಿಳಿಸಿದೆ.

ಇದರ ಹೊರತಾಗಿಯೂ ಮೃತರ ಇಬ್ಬರು ಮಕ್ಕಳಿಗೆ ಪ್ರತಿ ತಿಂಗಳು ಪಿಂಚಣಿಯ 25% ನೀಡಲಾಗುತ್ತದೆ. ಮಕ್ಕಳಿಗೆ 25 ವರ್ಷ ತುಂಬುವರೆಗೆ ಈ ಪೆನ್ಶನ್​ ಸಿಗಲಿದೆ. ಹಾಗೆಯೇ ನಾಮಿನಿಯು 6 ಲಕ್ಷದವರೆಗೆ ವಿಮೆಗಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಇದಲ್ಲದೇ ಇನ್ನು ಕೆಲ ನಿಯಮಗಳನ್ನುನೌಕರರ ಭವಿಷ್ಯ ನಿಧಿ ಸಂಸ್ಥೆ ಬದಲಿಸಿದ್ದು, ಅಂತಹ ನಿಯಮಗಳು ಯಾವುವು ಎಂದು ತಿಳಿಯೋಣ...

# ಪಿಎಫ್​ ಚಂದಾದಾರರು ಎರಡು ತಿಂಗಳ ಕಾಲ ನಿರುದ್ಯೋಗಿಯಾದರೆ ತನ್ನ ಹಣವನ್ನು ಹಿಂತೆಗೆದುಕೊಳ್ಳಬಹುದು.

# 5 ವರ್ಷಗಳಿಗಿಂತ ಹೆಚ್ಚಿನ ವರ್ಷ ನೀವು ವೇತನದಿಂದ ಪಿಎಫ್​ ಪಾವತಿಸಿದರೆ, ಆ ಹಣವನ್ನು ಪಡೆಯುವಾಗ ಆದಾಯ ತೆರಿಗೆ ಪಾವತಿಸಬೇಕಿಲ್ಲ.

# ಅನಾರೋಗ್ಯ ಅಥವಾ ಬಿಸಿನೆಸ್​ ಬಂದ್ ಆಗಿರುವುದರಿಂದ ನೌಕರಿಗೆ ಕುತ್ತುಂಟಾಗಿದ್ದರೆ, ಈ ವೇಳೆ ಕೂಡ ಪಿಎಫ್​ ಮೇಲೆ ತೆರಿಗೆ ಪಾವತಿ ಮಾಡಬೇಕಿಲ್ಲ.

# ಮನೆ ಖರೀದಿ/ನಿರ್ಮಾಣ, ವೈದ್ಯಕೀಯ ಚಿಕಿತ್ಸೆ, ನಿಮ್ಮ ಅಥವಾ ಕುಟುಂಬದ ಸದಸ್ಯರ ಮದುವೆ ವೇಳೆ ಕೂಡ ಪಿಎಫ್ ಹಣವನ್ನು​ ಹಿಂತೆಗೆದುಕೊಳ್ಳಬಹುದು.
Loading...

# ಕುಟುಂಬದ ಯಾರದಾದರೂ ಮದುವೆಗಾಗಿ ಪಿಎಫ್ ಫಂಡ್​ನಿಂದ ಶೇ.50 ರಷ್ಟು ಹಣವನ್ನು ಪಡೆಯಬಹುದು. ಆದರೆ ಈ ಅವಕಾಶ EPFOನಲ್ಲಿ ಏಳು ವರ್ಷದಿಂದ ಸದಸ್ಯರಾಗಿರುವವರಿಗೆ ಮಾತ್ರ.

# EPFOನಲ್ಲಿ ಏಳು ವರ್ಷಗಳ ಸದಸ್ಯತ್ವ ಹೊಂದಿದ್ದರೆ, 10ನೇ ತರಗತಿಯ ಬಳಿಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಡ್ಡಿಯೊಂದಿಗೆ ಪಿಂಚಣಿ ಮೊತ್ತದ ಶೇ.50 ರಷ್ಟು ಹಿಂಪಡೆಯಬಹುದು.
First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ