ದಾಳಿಯೇ ನಡೆಯದಿದ್ದರೆ ಪಾಕ್​ ಮುಂಜಾನೆ ಐದು ಗಂಟೆಗೆ ಟ್ವೀಟ್​ ಮಾಡುತ್ತಿತ್ತೇ; ನೆಟ್​ವರ್ಕ್18 ಸಂದರ್ಶನದಲ್ಲಿ ಮೋದಿ ಪ್ರಶ್ನೆ

ಬಾಲಕೋಟ್​ ದಾಳಿಗೆ ಸಾಕ್ಷಿ ಕೇಳುವ ಕೆಲಸವನ್ನು ಕೆಲವರು ಮಾಡಿದ್ದರು. ಈ ಬಗ್ಗೆ ಮೋದಿ ಅಸಮಾಧಾನ ಹೊರಹಾಕಿದ್ದು, ಈ ರೀತಿ ಮಾಡುವುದರಿಂದ ವೈರಿ ರಾಷ್ಟ್ರಕ್ಕೆ ಬಲ ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Rajesh Duggumane | news18
Updated:April 9, 2019, 4:54 PM IST
ದಾಳಿಯೇ ನಡೆಯದಿದ್ದರೆ ಪಾಕ್​ ಮುಂಜಾನೆ ಐದು ಗಂಟೆಗೆ ಟ್ವೀಟ್​ ಮಾಡುತ್ತಿತ್ತೇ; ನೆಟ್​ವರ್ಕ್18 ಸಂದರ್ಶನದಲ್ಲಿ ಮೋದಿ ಪ್ರಶ್ನೆ
ಪ್ರಧಾನಿ ನರೇಂದ್ರ ಮೋದಿ ಮತ್ತು ನೆಟ್​ವರ್ಕ್​18 ಮುಖ್ಯ ಸಂಪಾದಕ ರಾಹುಲ್​ ಜೋಶಿ
Rajesh Duggumane | news18
Updated: April 9, 2019, 4:54 PM IST
ನವದೆಹಲಿ (ಏ.9): ಜಮ್ಮು-ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಜೈಷ್​-ಇ-ಮೊಹ್ಮದ್​ ಸಂಘಟನೆಯ ಉಗ್ರ ನಡೆಸಿದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ 40 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿತ್ತು. ಆದರೆ, ವಿಪಕ್ಷಗಳು ಇದಕ್ಕೆ ಸಾಕ್ಷ್ಯ ಕೇಳಿದ್ದವು. ಪಾಕಿಸ್ತಾನ ಈ ದಾಳಿಯೇ ನಡೆದಿಲ್ಲ ಎಂದು ಹೇಳಿತ್ತು. ಈ ವಿಚಾರಕ್ಕೆ ಸಂಬಂಧಿಸಿ ನೆಟ್​ವರ್ಕ್​18 ಮುಖ್ಯ ಸಂಪಾದಕ ರಾಹುಲ್ ಜೋಶಿ ಅವರ ಜತೆಗಿನ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.

ದಾಳಿ ನಡೆದ ದಿನ ಮುಂಜಾನೆ ಐದು ಗಂಟೆಗೆ ಪಾಕಿಸ್ತಾನ ಟ್ವೀಟ್​ ಮಾಡಿತ್ತು. ಭಾರತ ದಾಳಿ ನಡೆಸಲು ಪ್ರಯತ್ನಿಸಿದೆ ಎಂದು ಹೇಳಿತ್ತು. ಭಾರತ ಈ ವಿಚಾರ ಬಹಿರಂಗ ಮಾಡುವುದರಳೊಗೆ ಪಾಕ್​ ಈ ಬಗ್ಗೆ ಘೋಷಣೆ ಮಾಡಿಯಾಗಿತ್ತು. ಈ ಬಗ್ಗೆ ಮಾತನಾಡಿರುವ ಮೋದಿ, "ಬಾಲಕೋಟ್​ ದಾಳಿಯ ಸಾಕ್ಷಿ ಕೇಳುವ ಮೂಲಕ ವಿಪಕ್ಷಗಳು ಪಾಕಿಸ್ತಾನದ ವೈಖರಿಯನ್ನು ಬೆಂಬಲಿಸಿವೆ. ನಾವು ಹೇಳುವುದರ ಒಳಗಾಗಿಯೇ ಪಾಕಿಸ್ತಾನ ಟ್ವೀಟ್​ ಮಾಡುವ ಮೂಲಕ ಏರ್​ಸ್ಟ್ರೈಕ್​ ಆಗಿದ್ದನ್ನು ಒಪ್ಪಿಕೊಂಡಿತ್ತು. ದಾಳಿಯೇ ನಡೆಯದಿದ್ದರೆ ಪಾಕಿಸ್ತಾನ ಮುಂಜಾನೆ ಐದು ಗಂಟೆಗೆ ಟ್ವೀಟ್​ ಮಾಡುತ್ತಿತ್ತೇ ,” ಎಂದು ಮೋದಿ ಪ್ರಶ್ನಿಸಿದರು.

ಇದನ್ನೂ ಓದಿ: ಕಳೆದ ಬಾರಿಗಿಂತ ಈ ಸಲ ಎನ್​​ಡಿಎ ಹೆಚ್ಚಿನ ಸೀಟು ಗೆಲ್ಲಲಿದೆ; ನ್ಯೂಸ್​-18 ಎಕ್ಸ್​​ಕ್ಲೂಸಿವ್​​ ಸಂದರ್ಶನದಲ್ಲಿ ಪ್ರಧಾನಿ ಮೋದಿ!

ಭಾರತೀಯ ವಾಯುಸೇನೆ ನಡೆಸಿದ ಏರ್​ಸ್ಟ್ರೈಕ್​ ಬಗ್ಗೆ ವಿಪಕ್ಷಗಳು ತೀವ್ರ ಅನುಮಾನ ವ್ಯಕ್ತಪಡಿಸಿದ್ದವು. ಈ ದಾಳಿಗೆ ಸಾಕ್ಷಿ ಕೇಳುವ ಕೆಲಸವನ್ನು ಕೆಲವರು ಮಾಡಿದ್ದರು. ಈ ಬಗ್ಗೆ ಮೋದಿ ಅಸಮಾಧಾನ ಹೊರಹಾಕಿದ್ದು, ಈ ರೀತಿ ಮಾಡುವುದರಿಂದ ವೈರಿ ರಾಷ್ಟ್ರಕ್ಕೆ ಬಲ ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಪುಲ್ವಾಮಾ ದಾಳಿ ನಡೆದ ದಿನವೇ ನಾನು ಪಾಕಿಸ್ತಾನ ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದ್ದೆ. ನಾವು ಪ್ರತೀಕಾರ ತೆಗೆದುಕೊಳ್ಳಲು ಶಾರ್ಟ್​ಕಟ್​ ಬಳಸುವುದಿಲ್ಲ, ಕಳೆದ ಬಾರಿಯಂತೆ ಸರ್ಜಿಕಲ್​ ಸ್ಟ್ರೈಕ್​ ನಡೆಸುವುದಿಲ್ಲ ಎಂದು ಹೇಳಿದ್ದೆವು. ಹಾಗಾಗಿ ನಾವು ಏರ್​ಸ್ಟ್ರೈಕ್​ ನಡೆಸಿದೆವು,” ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು ಚೀನಾ ಮಾತ್ರ; ನೆಟ್​ವರ್ಕ್​18 ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು
Loading...

First published:April 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...