• Home
  • »
  • News
  • »
  • national-international
  • »
  • Recruitment: ಆಫರ್ ಲೆಟರ್ ಕೊಟ್ಟು ಸುಮ್ಮನಾದ ಟೆಕ್ ಕಂಪನಿ! ಕಾರಣ ಏನು?

Recruitment: ಆಫರ್ ಲೆಟರ್ ಕೊಟ್ಟು ಸುಮ್ಮನಾದ ಟೆಕ್ ಕಂಪನಿ! ಕಾರಣ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪದವೀಧರರನ್ನು ಕಂಪನಿಗೆ ಸೇರಿಸಿಕೊಳ್ಳಲು ಏಕೆ ಟೆಕ್ ಮೇಜರ್‌ಗಳಾದ ವಿಪ್ರೋ, ಇನ್ಫೋಸಿಸ್ ಮತ್ತು ಟಿಸಿಎಸ್ ವಿಳಂಬ ಮಾಡುತ್ತಿದೆ ಎಂಬುವುದೇ ಈಗಿನ ಒಂದು ಯಕ್ಷಪ್ರಶ್ನೆಯಾಗಿದೆ.

  • Share this:

ಟೆಕ್‌ ದೈತ್ಯ ಕಂಪನಿಗಳಾದ ವಿಪ್ರೋ (Wipro), ಇನ್ಫೋಸಿಸ್ (Infosys) ಮತ್ತು ಟಿಸಿಎಸ್‌ ಈ ವರ್ಷ (Year) ಭರ್ಜರಿ ನೇಮಕಾತಿಯನ್ನೇನೋ ಘೋಷಿಸಿದ್ದವು. ಆದರೆ ನಂತರದ  ಕಂಪನಿಗೆ ಉದ್ಯೋಗಿಗಳನ್ನು ಸೇರಿಸಿಕೊಳ್ಳುವ ಪ್ರಕ್ರಿಯೆ ತುಂಬಾನೇ ನಿಧಾನಗತಿಯಲ್ಲಿ (Slow) ಸಾಗುತ್ತಿದೆ ಎಂಬ ಆರೋಪವು ಕೇಳಿಬರುತ್ತಿದೆ. ಈ ಬಗ್ಗೆ ಉದ್ಯೋಗಿಗಳು ಕೂಡ ದೊಡ್ಡ ಮಟ್ಟದಲ್ಲಿ ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಪದವೀಧರರನ್ನು ಕಂಪನಿಗೆ (Company)  ಸೇರಿಸಿಕೊಳ್ಳಲು ಏಕೆ ಟೆಕ್ ಮೇಜರ್‌ಗಳಾದ ವಿಪ್ರೋ, ಇನ್ಫೋಸಿಸ್ ಮತ್ತು ಟಿಸಿಎಸ್ ವಿಳಂಬ ಮಾಡುತ್ತಿದೆ ಎಂಬುವುದೇ ಈಗಿನ ಒಂದು ಯಕ್ಷಪ್ರಶ್ನೆಯಾಗಿದೆ.


ಆನ್‌ಬೋರ್ಡಿಂಗ್ ಪ್ರಕ್ರಿಯೆಗೆ ಹೆಚ್ಚೆಚ್ಚು ಸಮಯ ತೆಗೆದುಕೊಳ್ಳುತ್ತಿರುವ ಕಂಪನಿಗಳ ಈ ವಿಳಂಬ ನಡೆ ಸಂಸ್ಥೆಗಳಿಗೆಯೇ ದೊಡ್ಡ ಹೊಡೆತ ಎನ್ನಲಾಗುತ್ತಿದೆ. ಈ ವಿದ್ಯಾಮಾನ ಹೀಗೆ ಮುಂದುವರಿದರೆ ಪ್ರಮುಖ ಐಟಿ ಪದವೀಧರರು ಕೈತಪ್ಪಿ ಹೋಗುವ ಸಾಧ್ಯತೆ ಇದೆ ಎಂಬ ಮಾತುಗಳು ಉದ್ಯಮದಲ್ಲಿ ಕೇಳಿಬರುತ್ತಿವೆ.


ಈ ಆನ್‌ಬೋರ್ಡಿಂಗ್ ವಿಳಂಬಗಳು ಆರು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಉದ್ಯೋಗಿಗಳು ಕಂಪನಿಯ ಆಫರ್‌ ತೊರೆದು ಬೇರೊಂದು ಉದ್ಯೋಗ ಹುಡುಕುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಕಂಪನಿಗಳ ಈ ನಿಧಾನಗತಿಯ ಪ್ರಕ್ರಿಯೆ ಮುಂದೆ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ ಮೇಲೂ ಪರಿಣಾಮ ಬೀರಬಹುದು ಎಂದು ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ.


ಸಾಮಾಜಿಕ ಮಾಧ್ಯಮದಲ್ಲಿ ಬೇಸರ


ಬಿಸಿನೆಸ್‌ಲೈನ್‌ನ ವರದಿಯ ಪ್ರಕಾರ, ಈ ಎಲ್ಲಾ ದೈತ್ಯ ಐಟಿ ಸಂಸ್ಥೆಗಳಿಂದ ಆಫರ್‌ಗಳನ್ನು ಪಡೆದ ಫ್ರೆಶರ್‌ಗಳು ಮೂರರಿಂದ ಐದು ತಿಂಗಳ ನಂತರವೂ ಆನ್‌ಬೋರ್ಡಿಂಗ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಆಫರ್ ಲೆಟರ್ ಅಥವಾ ಮಾತುಕತೆಯಾಗಿ ಒಂದು ಸೂಚನೆಯನ್ನು ಸಹ ಸ್ವೀಕರಿಸಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಯಾರಿಗೆ ಸಿಗಲಿದೆ? ಇಲ್ಲಿದೆ ವಿವರ


ಈ ಬಗ್ಗೆ ಮಾತನಾಡಿದ ಒಬ್ಬ ಇಂಜಿನಿಯರ್ ಲಿಂಕ್ಡ್‌ಇನ್‌ನಲ್ಲಿ ತನಗೆ ಮಾರ್ಚ್ 22 ರಂದು ಇನ್ಫೋಸಿಸ್‌ನಿಂದ ಕೆಲಸದ ಆಫರ್‌ ಬಂದಿತ್ತು. ಅದಾದ ನಂತರ ಇನ್ನೂ ಕಂಪನಿಯಿಂದ ಯಾವುದೇ ಹೆಚ್ಚಿನ ಸೂಚನೆ ಸ್ವೀಕರಿಸಲಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. "ನಾನು ತಿಂಗಳುಗಳಿಂದ ಕೆಲಸಕ್ಕೆ ಹಾಜರಾಗಲು ಕಾಯುತ್ತಿದ್ದೇನೆ. ನಾನು ಸಾಮಾಜಿಕ ಮಾಧ್ಯಮದ ಮೂಲಕವು ಅವರನ್ನು ಸಂಪರ್ಕಿಸಿದ್ದೇನೆ. ನನ್ನ ಐಡಿ ಮತ್ತು ಇಮೇಲ್ ವಿಳಾಸವನ್ನು ಕೇಳಿದ್ದು ಮಾತ್ರ, ಆಮೇಲೆ ನನಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ" ಎಂದು ತಿಳಿಸಿದ್ದಾರೆ.


"ಆಫರ್‌ ಲೆಟರ್‌ ಸಿಕ್ಕಿ ಆರು ತಿಂಗಳಾದರೂ, ಜಾಯ್ನಿಂಗ್‌ ಡೇಟ್‌ ತಿಳಿಸಿಲ್ಲ"


ಇನ್ಫೋಸಿಸ್‌ನಲ್ಲಿ ಸಿಸ್ಟಮ್ಸ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದ ಮತ್ತೊಬ್ಬ ಅಭ್ಯರ್ಥಿ, "ಏಪ್ರಿಲ್ 22 ರಂದು ಇನ್ಫೋಸಿಸ್‌ನಿಂದ ನನಗೆ ಆಫರ್ ಬಂದಾಗ ನನ್ನ ಕುಟುಂಬಕ್ಕೆ ಅಪಾರ ಸಂತೋಷವಾಗಿತ್ತು. ಅಂತಿಮವಾಗಿ ನನ್ನ ವಿದ್ಯಾರ್ಥಿ ಸಾಲವನ್ನು ಮರುಪಾವತಿಸಲು ನಾನು ಶಕ್ತನಾದೆ ಎಂದು ಖುಷಿ ಪಟ್ಟೆ. ಆದರೆ ಆಫರ್‌ ಲೆಟರ್‌ ಬಂದು ಆರು ತಿಂಗಳಾಗಿದೆ, ಮತ್ತು ಇನ್ನೂ ಕೂಡ ನನ್ನ ಜಾಯ್ನಿಂಗ್‌ ದಿನಾಂಕವನ್ನು ತಿಳಿಸದೇ ವಿಳಂಬ ಮಾಡುತ್ತಿದ್ದಾರೆ" ಎಂದು ತಿಳಿಸಿದ್ದಾರೆ.


"ವ್ಯಾಪಾರದ ಅವಶ್ಯಕತೆಗನುಗುಣವಾಗಿ ಸೇರಿಸಿಕೊಳ್ಳುತ್ತೇವೆ"


ಈ ವಿಳಂಬ ಪ್ರಕ್ರಿಯೆ ಬಗ್ಗೆ ಬಂದ ದೂರಿನನ್ವಯ ಸ್ಪಷ್ಟೀಕರಣ ನೀಡಿದ ಕಂಪನಿಗಳು "ನಮ್ಮ ವ್ಯಾಪಾರದ ಅವಶ್ಯಕತೆಗೆ ಅನುಗುಣವಾಗಿ ನಾವು ಉದ್ಯೋಗಿಗಳಿಗೆ ಜಾಯ್ನಿಂಗ್‌ ಡೇಟ್‌ ಅನ್ನು ವಿತರಿಸುತ್ತಿದ್ದೇವೆ, ಇದನ್ನು ದಯವಿಟ್ಟು ನೆನಪಿಟ್ಟುಕೊಳ್ಳಿ" ಎಂದು ತಿಳಿಸಿದೆ.


ಇನ್ಫೋಸಿಸ್ ಮಾತ್ರವಲ್ಲದೆ, ಟೆಕ್ ಮಹೀಂದ್ರಾ, ವಿಪ್ರೋ, ಎಚ್‌ಸಿಎಲ್ ಟೆಕ್ನಾಲಜೀಸ್‌ ಉದ್ಯೋಗಿಗಳನ್ನ ಆನ್‌ಬೋರ್ಡ್‌ ಮಾಡಲು ದೀರ್ಘಾವಧಿಯ ಸಮಯವನ್ನು ತೆಗೆದುಕೊಳ್ಳುತ್ತಿದೆ.


ಇದನ್ನೂ ಓದಿ: ಭಾರತದ ಜನಸಂಖ್ಯೆ ನಿಯಂತ್ರಣಕ್ಕೆ ಪ್ರತ್ಯೇಕ ನೀತಿ; ಮೋಹನ್ ಭಾಗವತ್


"ನಾನು HCL ಟೆಕ್‌ನಲ್ಲಿ ಸ್ಥಾನ ಪಡೆದು ಒಂದು ವರ್ಷವಾಗಿದೆ. ಅವರು ನನಗೆ ನಿಖರವಾದ ಸೇರ್ಪಡೆ ದಿನಾಂಕವನ್ನು ಒದಗಿಸುತ್ತಿಲ್ಲ ಮತ್ತು ನನ್ನ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿಲ್ಲ" ಎಂದು HCL ಟೆಕ್‌ಗೆ ಆಯ್ಕೆಯಾದ ಅಭ್ಯರ್ಥಿಯೊಬ್ಬರು ಹೇಳಿದರು.


ಈ ಬಗ್ಗೆ ಸಂಸ್ಥೆಯ ಪ್ರತಿನಿಧಿ ಹೊಸ ಉದ್ಯೋಗಿಗಳನ್ನು ಆನ್‌ಬೋರ್ಡಿಂಗ್ ಮಾಡುವಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಮತ್ತು ಎಲ್ಲವೂ ವೇಳಾಪಟ್ಟಿಯ ಪ್ರಕಾರ ಮುಂದುವರಿಯುತ್ತಿದೆ ಎಂದು ತಿಳಿಸಿರುವುದಾಗಿ ಅನಾಲಿಟಿಕ್ಸ್ ಇನ್‌ಸೈಟ್ ವರದಿ ಮಾಡಿದೆ. ಕಂಪನಿಗಳ ವಿಳಂಬ ಆನ್‌ಬೋರ್ಡಿಂಗ್ ಪ್ರಕ್ರಿಯೆ ಇತ್ತ ವಿದ್ಯಾರ್ಥಿಗಳ, ಉದ್ಯೋಗಾಂಕ್ಷಿಗಳ ಮೇಲೆ ಪರಿಣಾಮ ಬೀರುತ್ತಿದ್ದರೆ, ಅತ್ತ ಐಟಿ ಸಂಸ್ಥೆಗಳು ಈ ಪ್ರಕ್ರಿಯೆಗೆ ವ್ಯಾಪಕವಾದ ಆರ್ಥಿಕ ಅನಿಶ್ಚಿತತೆ ಮತ್ತು ಭಾರತದ ಐಟಿ ವಲಯದಲ್ಲಿ ನಿರಂತರವಾದ ಹೆಚ್ಚಿನ ಕ್ಷೀಣತೆಯ ದರವು ಕಾರಣವಾಗುತ್ತಿದೆ.

First published: