• Home
  • »
  • News
  • »
  • national-international
  • »
  • Kerala: 32 ವರ್ಷದ ಬಳಿಕವೂ ಕೇರಳದ ಸಚಿವರಿಗೆ ಕಾಡುತ್ತಿದೆಯಂತೆ ನೀಲಿ ಒಳ ಉಡುಪು! ಏನಿದು ಪ್ರಕರಣ?

Kerala: 32 ವರ್ಷದ ಬಳಿಕವೂ ಕೇರಳದ ಸಚಿವರಿಗೆ ಕಾಡುತ್ತಿದೆಯಂತೆ ನೀಲಿ ಒಳ ಉಡುಪು! ಏನಿದು ಪ್ರಕರಣ?

ಕೇರಳದ ಸಾರಿಗೆ ಸಚಿವ ಆಂಟೋನಿ ರಾಜು

ಕೇರಳದ ಸಾರಿಗೆ ಸಚಿವ ಆಂಟೋನಿ ರಾಜು

ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳ ಪರ ವಕೀಲರಾಗಿ ವಸ್ತು ಸಾಕ್ಷ್ಯವನ್ನು ಬದಲಾಯಿಸಿದ್ದ ಕೇರಳದ ಸಾರಿಗೆ ಸಚಿವ ಆಂಟೋನಿ ರಾಜುಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ. ಏಕೆಂದರೆ 32 ವರ್ಷಗಳ ಹಿಂದೆ ನಡೆದಿರುವ ಈ ಮಾದಕವಸ್ತು ಕಳ್ಳಸಾಗಣೆ ಪ್ರಕರಣವು ಆಂಟೋನಿ ರಾಜುಗೆ ಈಗ ಬಿಕ್ಕಟ್ಟನ್ನು ಸೃಷ್ಟಿಸಿದೆ

ಮುಂದೆ ಓದಿ ...
  • Share this:

ಮಾದಕವಸ್ತು ಕಳ್ಳಸಾಗಣೆ (Drug trafficking) ಪ್ರಕರಣದಲ್ಲಿ ಆರೋಪಿಗಳ ಪರ ವಕೀಲರಾಗಿ ವಸ್ತು ಸಾಕ್ಷ್ಯವನ್ನು ಬದಲಾಯಿಸಿದ್ದ ಕೇರಳದ ಸಾರಿಗೆ ಸಚಿವ ಆಂಟೋನಿ ರಾಜುಗೆ (Antony Raju) ಈಗ ಮತ್ತೆ ಸಂಕಷ್ಟ ಎದುರಾಗಿದೆ. ಏಕೆಂದರೆ 32 ವರ್ಷಗಳ ಹಿಂದೆ ನಡೆದಿರುವ ಈ ಮಾದಕವಸ್ತು ಕಳ್ಳಸಾಗಣೆ ಪ್ರಕರಣವು ಆಂಟೋನಿ ರಾಜುಗೆ ಈಗ ಬಿಕ್ಕಟ್ಟನ್ನು ಸೃಷ್ಟಿಸಿದೆ.  ಪ್ರಕರಣದಲ್ಲಿ ಸಿಕ್ಕ ಸಾಕ್ಷ್ಯಗಳಲ್ಲಿ ಪ್ರಮುಖವಾಗಿ ಕೊಳೆಯಾಗಿರುವ ನೀಲಿ ಒಳ ಉಡುಪು (Blue underwear) ರಾಜು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗ ಕೇರಳದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್‌ನ ಸಣ್ಣ ಮಿತ್ರ ಪಕ್ಷವಾದ ಜನಾಧಿಪತಿಯ ಕೇರಳ ಕಾಂಗ್ರೆಸ್‌ನ ನಾಯಕ, ಆಂಟೋನಿ ರಾಜು ಅವರು ತಿರುವನಂತಪುರಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಈಗ ಈ ಪ್ರಕರಣ ಮುನ್ನೆಲೆಗೆ ಬಂದು ಇವರ ರಾಜಕೀಯ ಜೀವನವನ್ನು ತಲೆಕೆಳಗೆ ಮಾಡಬಹುದು.


ಹಾಗಿದ್ರೆ ಈ ಪ್ರಕರಣದ ಒಂದು ಹಿನ್ನೋಟ ಇಲ್ಲಿದೆ:
ಈ ಡ್ರಗ್ ಪೆಡ್ಲಿಂಗ್ ಪ್ರಕರಣವು 1990ರಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಆಸ್ಟ್ರೇಲಿಯನ್ ಪ್ರಜೆ ಆಂಡ್ರ್ಯೂ ಸಾಲ್ವಟೋರ್ ಸೆರ್ವೆಲ್ಲಿ ತನ್ನ ಒಳ ಉಡುಪಿನಲ್ಲಿ ಮಾದಕ ವಸ್ತುಗಳನ್ನು ಅಡಗಿಸಿಟ್ಟಿದ್ದ ವಸ್ತುಗಳೊಂದಿಗೆ ಸಿಕ್ಕಿಬಿದ್ದ ಘಟನೆಗೆ ಸಂಬಂಧಿಸಿದೆ. ಆ ಸಮಯದಲ್ಲಿ ಆಂಟೋನಿ ರಾಜು ಅವರು ತಿರುವನಂತಪುರಂನಲ್ಲಿ ವಕೀಲ ಸೆಲಿನ್ ವಿಲ್ಫ್ರೆಡ್ ಅವರ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.


ಮಾದಕವಸ್ತು ಕಳ್ಳಸಾಗಣೆಯ ಪ್ರಕರಣದಲ್ಲಿ ಸಾಕ್ಷ್ಯವಾಗಿ ಸಿಕ್ಕಿ ಬಿದ್ದ ಈ ಒಳ ಉಡುಪು ಚಿಕ್ಕದಾಗಿದ್ದು ಮತ್ತು ಈ ಉಡುಪು ಆರೋಪಿಯದ್ದು ಅಲ್ಲ ಎಂದು ಅವರ ವಕೀಲರು ವಾದಿಸಿದ ನಂತರ ಆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ವಿದೇಶಿ ವ್ಯಕ್ತಿಯನ್ನು ಪ್ರಕರಣದಿಂದ ಖುಲಾಸೆ ಮಾಡಲಾಯಿತು. ಆದರೆ ಇದು ಸುಳ್ಳು ಎಂದು ತಿಳಿದಿದ್ದ ಡ್ರಗ್ಸ್ ದಂಧೆ ಪ್ರಕರಣದ ತನಿಖಾಧಿಕಾರಿ ಜಯಮೋಹನ್ ಅವರು ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಬಗ್ಗೆ ಆತಂಕ ವ್ಯಕ್ತಪಡಿಸಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದರ ನಂತರ ತಿರುವನಂತಪುರದ ವಂಚಿಯೂರು ಪೊಲೀಸರು 1994ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.


ಇದನ್ನೂ ಓದಿ: Bengal Minister Arrested: ಆಪ್ತನ ಮನೆಯಲ್ಲಿ 20 ಕೋಟಿ! ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಚಿವ ಅರೆಸ್ಟ್


ವಿಧಾನಸಭೆ ಚುನಾವಣೆಗೆ ಒಂದು ತಿಂಗಳ ಮೊದಲು ಅಂದರೆ 2006ರಲ್ಲಿ ಆಂಟೋನಿ ರಾಜು ವಿರುದ್ಧ ತನಿಖಾಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ ನಂತರ ಪ್ರಕರಣವು ಸಾರ್ವಜನಿಕ ಗಮನಕ್ಕೆ ಬಂದಿತು. ಈ ಪ್ರಕರಣಕ್ಕೆ ಸಿಕ್ಕ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಾದಾಗ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿತು.


ತನಿಖೆ ವೇಳೆ ಪೊಲೀಸರಿಗೆ ಸಿಕ್ಕ ಮಾಹಿತಿ ಏನು
ಚಾರ್ಜ್‌ಶೀಟ್‌ನ ಪ್ರಕಾರ, ರಾಜು ಅವರು ಹೇಳಿದ “ಕಡು ನೀಲಿ ಒಳ ಉಡುಪುಗಳನ್ನು ಒಳಗೊಂಡ ವಸ್ತುಗಳನ್ನು ನ್ಯಾಯಾಲಯದಿಂದ ಕದ್ದು ಸಂಗ್ರಹಿಸಿ, ನಂತರ ಆ ಒಳ ಉಡುಪಿನ ಸ್ಥಳದಲ್ಲಿ ಬೇರೆ ಗಾತ್ರದ ಒಳ ಉಡುಪು ಇರಿಸಿ ಅದನ್ನು ಬದಲಾಯಿಸಿದ ನಂತರ ಹಿಂದಿರುಗಿಸಿದರು. ಪ್ರಭಾರ ಗುಮಾಸ್ತನಿಗೆ ಲಂಚ ನೀಡಿ ನ್ಯಾಯಾಲಯದ ಕೊಠಡಿಯಿಂದ ಮುಖ್ಯ ಸಾಕ್ಷ್ಯವಾದ ಒಳ ಉಡುಪನ್ನು ಸಂಗ್ರಹಿಸಲಾಗಿದೆ ಎಂಬುದು ತನಿಖೆ ವೇಳೆ ಈ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.


ನ್ಯಾಯಾಲಯದ ಗುಮಾಸ್ತರಾಗಿದ್ದ ಜೋಸ್ ಅವರು ಆಂಟೋನಿ ರಾಜು ಅವರೊಂದಿಗೆ ಶಾಮೀಲಾಗಿ ವಸ್ತು ಸಾಕ್ಷ್ಯವನ್ನು ತಿರುಚಿದ್ದಾರೆ ಎಂದು ತನಿಖೆಯಲ್ಲಿ ಕಂಡು ಬಂದಿದೆ. ಇಬ್ಬರ ಮೇಲೂ ದಾಖಲೆಗಳನ್ನು ತಿದ್ದುವಿಕೆ, ವಂಚನೆ ಮತ್ತು ಸಾಕ್ಷ್ಯ ನಾಶದ ಆರೋಪಗಳನ್ನು ಹೊರಿಸಲಾಗಿದೆ. ಹಲವು ಬಾರಿ ಪ್ರಕರಣವನ್ನು ವಿಚಾರಣೆ ನಡೆಸಿದರೂ ಯಾವುದು ಪ್ರಯೋಜನವಾಗಿಲ್ಲ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ.


ಇದನ್ನೂ ಓದಿ: African Swine Fever: ಕೇರಳದಲ್ಲಿ ಸ್ವೈನ್ ಫ್ಲೂ ಪತ್ತೆ! ರಾಹುಲ್ ಗಾಂಧಿ ಕ್ಷೇತ್ರ ವಯನಾಡ್​ನಲ್ಲಿ 300 ಹಂದಿ ಹತ್ಯೆ


“ಸೆರ್ವೆಲ್ಲಿ ಅವರ ಬಂಧನದ ನಂತರ, ಸೆರ್ವೆಲ್ಲಿ ಅವರ ಕುಟುಂಬದ ಸದಸ್ಯರು ಭಾರತಕ್ಕೆ ಬಂದು ಇಲ್ಲಿ ನ್ಯಾಯಾಲಯದ ಅಧಿಕಾರಿಗೆ ಲಂಚವನ್ನು ನೀಡಿ, ಸಾಕ್ಷ್ಯಗಳನ್ನು ತಿರುಚಲು ಹೇಳಿದ್ದಾರೆ. ನ್ಯಾಯಾಲಯದ ಅಧಿಕಾರಿಯು ಬಂಧನದ ಸಮಯದಲ್ಲಿ ಸೆರ್ವೆಲ್ಲಿ ಧರಿಸಿದ್ದ ಒಳಉಡುಪುಗಳನ್ನು ಚಿಕ್ಕ ಗಾತ್ರದೊಂದಿಗೆ ಬದಲಾಯಿಸಿ ಈ ಪ್ರಕರಣಕ್ಕೆ ಮುಖ್ಯ ಸಾಕ್ಷ್ಯವನ್ನೆ ತಿರುಚಿದ್ದಾರೆ. ನಂತರದ ನ್ಯಾಯಾಲಯದ ವಿಚಾರಣೆಯಲ್ಲಿ ಪ್ರತಿವಾದವು ಆರೋಪಿಗೆ ಒಳಉಡುಪುಗಳನ್ನು ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ ಎಂಬ ಸಮಸ್ಯೆಯನ್ನು ಮಾಡಿತು ಮತ್ತು ಇದರ ಪರಿಣಾಮವಾಗಿ ಸೆರ್ವೆಲ್ಲಿಯು ದೋಷಮುಕ್ತನಾದನು.

Published by:Ashwini Prabhu
First published: