ಆಗ್ನೇಯ ಏಷ್ಯಾದ ದೇಶವಾದ ಫಿಲಿಪೈನ್ಸ್ನಲ್ಲಿರುವ ಒಂದು ಜನಾಂಗೀಯ ಗುಂಪು ಡೆನಿಸೋವನ್ ಪೂರ್ವಜರ ಜೆನೆಟಿಕ್ ಅಂಶ ಹೊಂದಿರುವುದಾಗಿ ಪ್ರದೇಶ ಅಧ್ಯಯನವು ವರದಿ ಮಾಡಿದೆ. ಅಧ್ಯಯನದ ವೇಳೆ ಸೈಬೀರಿಯನ್ ಗುಹೆಯಲ್ಲಿ ಸಿಕ್ಕ ಒಂದೇ ಮೂಳೆಯ ಆಧಾರದ ಮೇಲೆ ಮೊದಲು ಡೆನಿಸೋವನ್ ಪುರಾತನ ಮಾನವರ ಗುಂಪು ಎಂದು ಗುರುತಿಸಲಾಗಿತ್ತು. ಡೆನಿಸೋವನ್ ಗುಂಪಿನ ಜನರು ಆಧುನಿಕ ಮಾನವರು ಮತ್ತು ನಿಯಾಂಡರ್ತಲ್ಗಳಂತಹ ಇತರ ಪುರಾತನ ಮಾನವ ಜಾತಿಗಳೊಂದಿಗೆ ಸಹಸ್ರಾರು ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದವು ಎಂದು ಹಿಂದಿನ ಅಧ್ಯಯನಗಳು ಸೂಚಿಸಿವೆ. ಆ ಗುಂಪು ಅಂದಾಜು 30,000ದಿಂದ 50,000 ವರ್ಷಗಳ ಹಿಂದೆ ಗತಿಸಿ ಹೋದರು ಎಂದು ವರದಿಗಳ ಮೂಲಕ ತಿಳಿದುಬಂದಿದೆ.
ಈ ಸಂಶೋಧನೆಯನ್ನು ಪ್ರಸ್ತುತ ಬಯಾಲಜಿ ಜರ್ನಲ್ನಲ್ಲಿ ಪ್ರಕಟಿಸಲಾಗಿದ್ದು ಇದರಲ್ಲಿ 40ಕ್ಕೂ ಹೆಚ್ಚು ಲೇಖಕರು ಸೇರಿದ್ದಾರೆ ಮತ್ತು ಇದನ್ನು ಆಗಸ್ಟ್ 12ರಂದು ಪ್ರಕಟಿಸಲಾಯಿತು. ತಮ್ಮ ಸಂಶೋಧನೆಯಲ್ಲಿ, ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಆಧುನಿಕ ಮಾನವರು ಪುರಾತನ ಡೆನಿಸೋವನ್ಗಳೊಂದಿಗೆ ಹೇಗೆ ಸಂತಾನೋತ್ಪತ್ತಿ ಮಾಡಿದರು ಎಂಬುದಕ್ಕೆ ಪುರಾವೆ ಸಿಕ್ಕಿದೆ ಎಂದು ಉಲ್ಲೇಖಿಸಿದ್ದಾರೆ. ಅಧ್ಯಯನವು ದ್ವೀಪ ರಾಷ್ಟ್ರವಾದ ಫಿಲಿಪೈನ್ಸ್ನಲ್ಲಿ ಆಸ್ಟ್ರೇಲಿಯಾ ಮತ್ತು ಡೆನಿಸೋವನ್ಗಳ ನಡುವಿನ ಹಂಚಿಕೆಯ ಜನಸಂಖ್ಯಾ ಇತಿಹಾಸದ ವಿವರವನ್ನು ಸಂಶೋಧನೆ ವಿವರಿಸುತ್ತದೆ.
ಸಂಶೋಧನೆಯು ಆಧುನಿಕ ಫಿಲಿಪೈನ್ಸ್ ಪ್ರಾಚೀನ ಮನುಷ್ಯರು ಹೇಗೆ ವಾಸಿಸುತ್ತಿದ್ದರು ಎಂಬುದನ್ನು ಕಂಡುಕೊಳ್ಳುವ ಗುರಿ ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈಗಾಗಲೇ ಅಲ್ಲಿ ವಾಸಿಸುತ್ತಿರುವ ಡೆನಿಸೋವನ್ಗಳೊಂದಿಗೆ ನೆಗ್ರೀಟೋಸ್ ಸಂಪರ್ಕಕ್ಕೆ ಬಂದಿದ್ದಾರೆ ಹಾಗೂ ಅವರೊಂದಿಗೆ ವಾಸಿಸುತ್ತಿದ್ದಾರೆ ಎಂದು ಅಧ್ಯಯನಗಳು ತೋರಿಸಿವೆ ಮತ್ತು ಎರಡು ಗುಂಪುಗಳ ನಡುವೆ ಒಳ್ಳೆಯ ಸಂಬಂಧವಿದ್ದು ಸಂತಾನೋತ್ಪತ್ತಿ ಸಂಬಂಧವನ್ನು ಕೂಡ ಹೊಂದಿದೆ ಎಂದು ಅಧ್ಯಯನಗಳು ತಿಳಿಸಿವೆ. ಈ ಕಾರಣದಿಂದ, ಐತಾ ಮ್ಯಾಗ್ಬುಕಾನ್ನ ಪ್ರಸ್ತುತ ಜನಾಂಗೀಯ ಜನಸಂಖ್ಯೆ ಅದರ ಜೀನೋಮ್ನಲ್ಲಿ ಉನ್ನತ ಮಟ್ಟದ ಡೆನಿಸೋವನ್ ವಂಶಾವಳಿ ಹೊಂದಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.
ವಿಜ್ಞಾನಿಗಳು ಫಿಲಿಪೈನ್ಸ್ನ 118 ಜನಾಂಗಗಳಿಂದ 2.3 ಮಿಲಿಯನ್ ಜೀನೋಟೈಪ್ಗಳನ್ನು ವಿಶ್ಲೇಷಿಸಿದ್ದಾರೆ, ಇದರಲ್ಲಿ 25 ವಿಭಿನ್ನ ಸ್ವಯಂ-ಗುರುತಿಸಿದ ನೆಗ್ರಿಟೊ ಜನಸಂಖ್ಯೆ, ಮತ್ತು ಸಂಶೋಧನೆಗಾಗಿ ಆಸ್ಟ್ರೇಲಿಯಾದ ಪಾಪುವಾನ್ಸ್ ಮತ್ತು ಅಯ್ತಾ ಮ್ಯಾಗ್ಬುಕಾನ್ ನೆಗ್ರಿಟೋಸ್ನ ಹೆಚ್ಚಿನ ವ್ಯಾಪ್ತಿಯ ಜೀನೋಮ್ಗಳ ಜೊತೆಗೆ ಸಂಶೋಧಕರು ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಹಲವಾರು ಸ್ಥಳೀಯ ವಿಶ್ವವಿದ್ಯಾಲಯಗಳು ಹಾಗೂ ಫಿಲಿಪೈನ್ಸ್ ಸ್ಥಳೀಯ ಜನರ ಸಂಘಟನೆಗಳ ಸಹಯೋಗದೊಂದಿಗೆ ಅಧ್ಯಯನ ನಡೆಸಿದ್ದಾರೆ. ಅವರ ವಿಶ್ಲೇಷಣೆಯು ಅಯ್ತಾ ಮ್ಯಾಗ್ಬುಕಾನ್ ವಿಶ್ವದ ಅತ್ಯುನ್ನತ ಮಟ್ಟದ ಡೆನಿಸೋವನ್ ಪೂರ್ವಜರ ಜೆನೆಟಿಕ್ ಸಂಬಂಧ ಹೊಂದಿದೆ ಎಂದು ಸೂಚಿಸುತ್ತವೆ. ಆಸ್ಟ್ರೇಲಿಯನ್ನರು ಮತ್ತು ಪಾಪುವಾನ್ಗಳಿಗಿಂತ 30%ರಿಂದ 40% ಹೆಚ್ಚು ಜೆನೆಟಿಕ್ ಸಂಬಂಧ ಹೊಂದಿದೆ ಎಂದೂ ಅಧ್ಯಯನ ತಿಳಿಸಿದೆ.
ಸಂಶೋಧಕರು ತಮ್ಮ ಸಂಶೋಧನೆಯನ್ನು 2019ರಲ್ಲಿ ಪತ್ತೆಯಾದ ಹೋಮೋ ಲುಜೊನೆನ್ಸಿಸ್ ಎಂಬ ಸಣ್ಣ ಮಾನವ ಸಂಬಂಧದ ಆಧಾರದ ಮೇಲೆ ಆರಂಭಿಸಿದರು. ಆಧುನಿಕ ಮಾನವ ಜಾತಿಯ ಹೋಮೋ ಸೇಪಿಯನ್ಸ್ ಆಗಮನದ ಮೊದಲು, ಫಿಲಿಪೈನ್ಸ್ ಹಲವಾರು ಪ್ರಾಚೀನ ಜನರು ವಾಸಿಸುತ್ತಿದ್ದರು ಮತ್ತು ವಿವಿಧ ಗುಂಪುಗಳು ಜೆನೆಟಿಕ್ ಸಂಬಂಧ ಹೊಂದಿರಬಹುದು ಎಂದು ಅಧ್ಯಯನಗಳ ಫಲಿತಾಂಶಗಳಿಂದ ತಿಳಿದುಬಂದಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ