EPFO: ದೀಪಾವಳಿಗೂ ಮುಂಚೆ ಪಿಎಫ್ ಬಡ್ಡಿ ನಿಮ್ಮ ಕೈಸೇರೋದು ಪಕ್ಕಾ, ಎಲ್ಲಾ ದಾಖಲೆಗಳು ಸರಿ ಇಟ್ಟಿದ್ದೀರಾ ತಾನೆ?

FY 21 Interest: ಈ  ಹೊಸ ಕ್ರಮ ಕೊರೊನಾ ಕಾರಣದಿಂದ ಉದ್ಯೋಗ ಕಳೆದುಕೊಂಡ ಮತ್ತು  ಆದಾಯದಲ್ಲಿ ನಷ್ಟ ಅನುಭವಿಸಿದವರಿಗೆ ಸಂತೋಷವನ್ನುಂಟು ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (The Employees’ Provident Fund Organisation) ಹಬ್ಬದ ಸೀಸನ್‌ಗೆ ಲಕ್ಷಾಂತರ ಜನರನ್ನು ಹುರಿದುಂಬಿಸಲು ದೀಪಾವಳಿಗೂ ಮುನ್ನ FY 21 ರ ಬಡ್ಡಿದರವನ್ನು ಕ್ರೆಡಿಟ್ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.  ಇದರ ಮೂಲಕ  ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತಮ್ಮ ಡಿಯರ್ನೆಸ್ ಭತ್ಯೆ(Dearness Allowance)  ಮತ್ತು ಡಿಯರ್ನೆಸ್ ರಿಲೀಫ್ (Dearness Relief) ಹೆಚ್ಚಳ ಪಡೆಯುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಬಯಸದ ಇಬ್ಬರು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈ  ಹೊಸ ಕ್ರಮ ಕೊರೊನಾ ಕಾರಣದಿಂದ ಉದ್ಯೋಗ ಕಳೆದುಕೊಂಡ ಮತ್ತು  ಆದಾಯದಲ್ಲಿ ನಷ್ಟ ಅನುಭವಿಸಿದವರಿಗೆ ಸಂತೋಷವನ್ನುಂಟು ಮಾಡುತ್ತದೆ.  ಇಪಿಎಫ್‌ಒ ಕೇಂದ್ರ ಮಂಡಳಿಯು ಈ  ಬಡ್ಡಿದರಕ್ಕೆ ಅನುಮೋದನೆ ನೀಡಿದ್ದು, ನಿವೃತ್ತಿ ನಿಧಿಯ ವ್ಯವಸ್ಥಾಪಕರು ಹಣಕಾಸು ಸಚಿವಾಲಯದ ಅನುಮೋದನೆಗೆ ಕಾಯುತ್ತಿದ್ದಾರೆ, ಅಲ್ಲದೇ ಈ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡುವ ನಿರೀಕ್ಷೆಯಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

2020-21ರ 8.5% ಬಡ್ಡಿದರದೊಂದಿಗೆ ಮುಂದುವರಿಯಲು ಅಧಿಕಾರಿಗಳು ಹಣಕಾಸು ಸಚಿವಾಲಯದ ಅನುಮೋದನೆಯನ್ನು ಕೋರಿದ್ದಾರೆ. ಬಡ್ಡಿಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡಾಗ, ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಈ ಅಧಿಕಾರಿ ಹೇಳಿದ್ದಾರೆ.  ಹಣಕಾಸು ಸಚಿವಾಲಯದ ಅನುಮೋದನೆಯು ಕೇವಲ ಪ್ರೋಟೋಕಾಲ್‌ ಎಂದು ಕೆಲವರು ವಾದಿಸಿದರೂ, ಇಪಿಎಫ್‌ಒ ಅದರ ಅನುಮೋದನೆಯಿಲ್ಲದೆ ಬಡ್ಡಿದರವನ್ನು ಕ್ರೆಡಿಟ್ ಮಾಡಲು ಸಾಧ್ಯವಿಲ್ಲ.

ಇದನ್ನೂ ಓದಿ: ಅಂಚೆ ಕಚೇರಿಯ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಆದಾಯ ಬರುತ್ತೆ

ಇತರ ಅಧಿಕಾರಿಗಳ ಪ್ರಕಾರ ಇಪಿಎಫ್‌ಒ ತನ್ನ ಮಂಡಳಿಯ ನಿರ್ಧಾರ ಮತ್ತು ಆರ್ಥಿಕ ಸ್ಥಿತಿಯನ್ನು ಆಧರಿಸಿ ಮುಂದುವರಿಯುವ ನಿರೀಕ್ಷೆಯಲ್ಲಿದೆ. ಮಾರ್ಚ್‌ನಲ್ಲಿ, ಮಂಡಳಿಯು FY21 ಗಾಗಿ 8.5% ಬಡ್ಡಿದರವನ್ನು ಶಿಫಾರಸು ಮಾಡಿದೆ.  ಇನ್ನು EPFO ಹಿಂದಿನ ಹಣಕಾಸು ವರ್ಷದಲ್ಲಿ ಸುಮಾರು, 70,300 ಕೋಟಿ ಆದಾಯವನ್ನು ಗಳಿಸಿದ್ದು, ಇದರಲ್ಲಿ ಈಕ್ವಿಟಿ ಹೂಡಿಕೆಯ ಒಂದು ಭಾಗವನ್ನು ಮಾರಾಟ ಮಾಡಿರುವ ಸುಮಾರು 4,000 ಕೋಟಿಗಳು ಸೇರಿದೆ.

ಮಂಡಳಿಯ ಸಭೆಯ ನಂತರ ಈಕ್ವಿಟಿ ಮಾರುಕಟ್ಟೆಯು ಚೆನ್ನಾಗಿ ಬೆಳೆದಿದೆ. ನಮ್ಮ ಸ್ಟಾಕ್ ಎಕ್ಸ್‌ಪೋಶರ್ ಉತ್ತಮ ಗಳಿಕೆಗೆ ಕಾರಣವಾಗಿದೆ ಎಂದು ಕೆಲ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಬಿಎಸ್‌ಇ ಸೆನ್ಸೆಕ್ಸ್ ಮಾರ್ಚ್ 4 ರಂದು 51,000 ಕ್ಕಿಂತ ಸ್ವಲ್ಪ ಕಡಿಮೆ ಇತ್ತು ಮತ್ತು ಮಂಡಳಿಯ ಇತ್ತೀಚಿನ ಸಭೆ ನಡೆದಾಗ ಮತ್ತು ಸೆಪ್ಟೆಂಬರ್ 3 ರಂದು ಅದು 58,129.95 ರಷ್ಟಿತ್ತು.   ಈ ಬಡ್ಡಿದರದಲ್ಲಿ ಸಾಲದ ಹೂಡಿಕೆಯಿಂದ ಪಡೆದ ಬಡ್ಡಿಯ ಆದಾಯ ಮತ್ತು ಈಕ್ವಿಟಿ ಹೂಡಿಕೆಯಿಂದ ಪಡೆದ ಆದಾಯ ಎರಡು ಸೇರಿದೆ ಎಂದು ನಿವೃತ್ತಿ ನಿಧಿ ಸಂಸ್ಥೆ ತನ್ನ ಕೇಂದ್ರ ಮಂಡಳಿ ಸಭೆಯ ನಂತರ  ಮಾಹಿತಿ ನೀಡಿದೆ.

ಇದನ್ನೂ ಓದಿ: ನಿಮ್ಮ ಪಿಎಫ್ ಖಾತೆಗೆ 2.5 ಲಕ್ಷಕ್ಕಿಂತ ಹೆಚ್ಚು ಹಣ ಹೋಗ್ತಿದ್ಯಾ? ಹಾಗಿದ್ರೆ ನಿಮ್ಗೆ ಎರಡೆರಡು PF Account ಇರುತ್ತೆ

8.5% ಬಡ್ಡಿದರವು ಸಾಮಾನ್ಯ ಭವಿಷ್ಯ ನಿಧಿ (GPF) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (7.1%) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (6.8%) ಗಳಂತಹ ಉಳಿತಾಯ ಯೋಜನೆಗಳನ್ನು ಹೋಲುತ್ತದೆ ಎನ್ನಲಾಗುತ್ತಿದೆ.

ಕೊರೊನಾ ಸಮಯದಲ್ಲಿ ಲಕ್ಷಾಂತರ ಜನರು ತಮ್ಮ ಇಪಿಎಫ್‌ಒ ಉಳಿತಾಯದಿಂದ ಹಣವನ್ನು ಪಡೆದರು, ಆದರೆ  ಅದು ನಿವೃತ್ತಿ ನಿಧಿಯ ಆದಾಯಕ್ಕೆ ಸಮಸ್ಯೆಯಾಗಲಿಲ್ಲ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಮಾಧ್ಯಮ ವ್ಯವಹಾರಗಳ ಉಸ್ತುವಾರಿ ಹೊಂದಿರುವ ಕಾರ್ಮಿಕ ಸಚಿವಾಲಯದ ಯಾವ ಅಧಿಕಾರಿ ಪ್ರತಿಕ್ರಿಯೆ ನೀಡಿಲ್ಲ.

ಎನ್ಎಸ್ಇ 50 ಮತ್ತು ಬಿಎಸ್ಇ 30 ಸೂಚ್ಯಂಕಗಳ ಆಧಾರದ ಮೇಲೆ 2015-16 ರಿಂದ ಪಿಂಚಣಿ ನಿಧಿಯ ಇಕ್ವಿಟಿ ಹೂಡಿಕೆಯು ಇಪಿಎಫ್ಒಗೆ ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡಿದೆ. ಇಪಿಎಫ್‌ಒ 60 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಜನರನ್ನು  ಹೊಂದಿದ್ದು, ಮತ್ತು ಪ್ರತಿ ವರ್ಷ ಅದು ತನ್ನ ವಾರ್ಷಿಕ ಆದಾಯದ 15% ಅನ್ನು ಇಕ್ವಿಟಿಯಲ್ಲಿ ಮತ್ತು ಉಳಿದವುಗಳನ್ನು ಬೇರೆ ಯೋಜನೆಯಲ್ಲಿ ಹೂಡಿಕೆ ಮಾಡುತ್ತದೆ.
Published by:Sandhya M
First published: