ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಈ ಹಿಂದಿನ ಬಡ್ಡಿದರವನ್ನೇ ಮುಂದುವರೆಸಿದ್ದು. ಶೇ. 8.5ರಷ್ಟು ಬಡ್ಡಿಯನ್ನು ಕಾಯ್ದಿಕೊಂಡಿದೆ. ಈ ಮೂಲಕ ಠೇವಣಿದಾರರಿಗೆ ಸಂತಸದ ಸುದ್ದಿ ನೀಡಿದೆ. ಇಂದು ನಡೆದ ಸಭೆಯಲ್ಲಿ ಕೇಂದ್ರೀಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವರ್ಷ ಕೊರೋನಾ ವೈರಸ್ ಹಿನ್ನಲೆ ಸಾಕಷ್ಟು ಜನರು ತಮ್ಮ ಇಪಿಎಫ್ಒ ಹಣವನ್ನು ಹಿಂಪಡೆದಿದ್ದರು. ಇದರಿಂದ ಹಣದ ಹರಿವು ಕಡಿಮೆಯಾಗಿತ್ತು. ಈ ಹಿನ್ನಲೆ ಈ ಬಾರಿ ಇದರ ಮೇಲಿನ ಬಡ್ಡಿದರವನ್ನು ಕಡಿತ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಭವಿಷ್ಯನಿಧಿ ಠೇವಣಿಗಳ ಮೇಲಿನ ಬಡ್ಡಿಯನ್ನು ಯಥಾವತ್ತಾಗಿ ಕಾಯ್ದುಕೊಳ್ಳುವ ಮೂಲಕ ಠೇವಣಿದಾರರಿಗೆ ನೆಮ್ಮದಿ ನಿಟ್ಟುಸಿರುವ ಬಿಡುವಂತೆ ಆಗಿದೆ.
ಕೋವಿಡ್ನಿಂದಾಗಿ ಇಡೀ ದೇಶವೇ ಲಾಕ್ಡೌನ್ ಆದಾಗ ಜನರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. ಈ ವೇಳೆ ಅವರಿಗೆ ತಮ್ಮ ಭವಿಷ್ಯ ನಿಧಿಯ ಮೂರು ತಿಂಗಳ ವೇತನದ ಮುಗಂಡ ಹಣ ಪಡೆಯಲು ಅವಕಾಶ ನೀಡಲಾಗಿತ್ತು, ಅಲ್ಲದೇ, ಈ ಸಂದರ್ಭದಲ್ಲಿ ನಿವೃತ್ತ ನಿಧಿಯಲ್ಲಿ 56.70 ಲಕ್ಷವನ್ನು ಇಪಿಎಫ್ ಮರುಪಾವತಿ ಮಾಡಿತ್ತು. ಜೊತೆಗೆ ಮರುಪಾವತಿಸಲಾಗದ ಮುಂಗಡ ಹಣದಲ್ಲಿ 14.310 ಕೋಟಿ ಹಣವನ್ನು ಡಿಸೆಂಬರ್ವರೆಗೆ ಇತ್ಯರ್ಥ ಮಾಡಲಾಗಿದೆ.
ಕಳೆದ ವರ್ಷ ಮಾರ್ಚ್ನಲ್ಲಿ ಇಪಿಎಫ್ಒ ಭವಿಷ್ಯ ನಿಧಿ ಮೇಲಿನ ಠೇವಣಿ ಬಡ್ಡಿದರವನ್ನು ಕನಿಷ್ಟ 8.5ಕ್ಕೆ ಇಳಿಸಿತ್ತು. ಇನ್ನು 2018-19ರಲ್ಲಿ ಶೇ. 8.65ಕ್ಕೆ ಇಳಿಸಲಾಗಿತ್ತು. 2016-17ರಲ್ಲಿ ಶೇ. 8.65ರಷ್ಟು ಬಡ್ಡಿದರ ನೀಡಿದ್ದು, 2017-18ರಲ್ಲಿ ಶೇ. 8.55ರಷ್ಟು ಬಡ್ಡಿದರ ನೀಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ