ಇಡೀ ದೇಶ ಹಿಂದೂ ರಾಷ್ಟ್ರವಾಗುತ್ತ ಸಾಗಿದೆ: ಸುಪ್ರೀಂ ತೀರ್ಪಿಗೆ ಒವೈಸಿ ಅಸಮಾಧಾನ

ಸಂಘ ಪರಿವಾರದವರು ಇನ್ನೂ ಹಲವು ಮಸೀದಿಗಳ ಮೇಲೆ ಹಕ್ಕು ಚಲಾವಣೆಗೆ ಮುಂದಾಗಿಬಿಡಬಹುದು ಎಂಬ ಆತಂಕ ನನಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಭಿಪ್ರಾಯಪಟ್ಟಿದ್ದಾರೆ.

Vijayasarthy SN | news18
Updated:November 9, 2019, 5:16 PM IST
ಇಡೀ ದೇಶ ಹಿಂದೂ ರಾಷ್ಟ್ರವಾಗುತ್ತ ಸಾಗಿದೆ: ಸುಪ್ರೀಂ ತೀರ್ಪಿಗೆ ಒವೈಸಿ ಅಸಮಾಧಾನ
ಅಸಾದುದ್ದೀನ್ ಒವೈಸಿ
  • News18
  • Last Updated: November 9, 2019, 5:16 PM IST
  • Share this:
ನವದೆಹಲಿ(ನ. 09): ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಸ್ವಾಗತ ಮಾಡಿವೆ. ಆದರೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಸುಪ್ರೀಂ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವತ್ತಿನ ಕೋರ್ಟ್ ತೀರ್ಪಿನಿಂದ ನಂಬಿಕೆಯ ಎದುರು ಸತ್ಯಕ್ಕೆ ಸೋಲಾಗಿದೆ ಎಂದು ಬಣ್ಣಿಸಿದ ಅವರು, ದೇಶವು ಹಿಂದೂ ರಾಷ್ಟ್ರದ ಹಾದಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಇಡೀ ದೇಶವು ಹಿಂದೂ ರಾಷ್ಟ್ರ ಆಗುವತ್ತ ಸಾಗುತ್ತಿದೆ. ನಾನು ಶಾಂತಿಗೆ ವಿರುದ್ಧವಾಗಿಲ್ಲ. ಈ ದೇಶದಲ್ಲಿ ಏನೂ ಅವಘಡ ಆಗುವುದಿಲ್ಲ. ಶಾಂತಿ ಭಂಗ ಆಗಲ್ಲ. ಆದರೆ, ಸತ್ಯವನ್ನು ಮಾತನಾಡಲೇಬೇಕಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪು ಸಮಾಧಾನ ತಂದಿಲ್ಲ ಎಂದು ಕೇಳುವ ಹಕ್ಕು ನನಗಿಲ್ಲವಾ? ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಲ್ಲಿ ತೋರ್ಪಡಿಸುತ್ತಿದ್ದೇನೆ. ಆ ಜಾಗದಲ್ಲಿ ಮಸೀದಿ ಇದ್ದದ್ದು ನಿಜ. ಅದರಲ್ಲಿ ಯಾವುದೇ ರಾಜಿ ಎಲ್ಲ” ಎಂದು ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧ; ಹೇಗಿರಲಿದೆ ಗೊತ್ತಾ ಬೃಹತ್ ದೇಗುಲ?

“ಸುಪ್ರೀಂ ಕೋರ್ಟ್ ಅತ್ಯುಚ್ಚ ಎಂಬುದು ಹೌದಾದರೂ ಅದು ತಪ್ಪೇ ಮಾಡಲ್ಲ ಎನ್ನುವಂತಿಲ್ಲ. ಬಾಬರಿ ಮಸೀದಿ ಧ್ವಂಸ ಮಾಡಲು ಕಾರಣರಾದವರನ್ನು ಟ್ರಸ್ಟ್​ಗೆ ಹಾಕಲಾಗಿದೆ. ಇದನ್ನು ನೀವು ಪ್ರಮಾದ ಎನ್ನುತ್ತೀರೋ ಇನ್ನೇನೆನ್ನುತ್ತೀರೋ ಗೊತ್ತಿಲ್ಲ. ಆದರೆ, ಬಾಬರಿ ಮಸೀದಿಯನ್ನು ಆ ದಿನ ಧ್ವಂಸ ಮಾಡದೇ ಹೋಗಿದ್ದರೆ ಇವತ್ತು ಏನು ತೀರ್ಪು ಬರುತ್ತಿತ್ತು?” ಎಂದು ಒವೈಸಿ ಪ್ರಶ್ನಿಸಿದ್ಧಾರೆ.

ಸುಪ್ರೀಂ ನ್ಯಾಯಪೀಠವು ಮುಸ್ಲಿಮರ ಪಕ್ಷಕ್ಕೆ ಬಾಬರಿ ಮಸೀದಿ ಜಾಗಕ್ಕೆ ಪರ್ಯಾಯವಾಗಿ ಬೇರೆಡೆ 5 ಎಕರೆ ಜಮೀನು ನೀಡುವಂತೆ ನೀಡಿದ ತೀರ್ಪಿಗೂ ಒವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 3 ದಶಕಗಳಿಂದ ರಾಮಮಂದಿರ ಚಳವಳಿಯಲ್ಲಿ ತೊಡಗಿಸಿಕೊಂಡ ಶರದ್ ಶರ್ಮಾ ಆಯೋಧ್ಯೆ ವಿವಾದದ ಮಾಹಿತಿ ಕಣಜ

“ಮುಸ್ಲಿಮರ ವಿರುದ್ಧ ಪಕ್ಷಪಾತ ಮಾಡುತ್ತಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಮುಸ್ಲಿಮರು ಬಡವರೇ ಇರಬಹುದು. ಆದರೆ, ಅಲ್ಲಾಹುಗಾಗಿ ಭೂಮಿ ಖರೀದಿಸದಿರುವಷ್ಟು ಬಡ ಸ್ಥಿತಿಯಲ್ಲಿಲ್ಲ. ನಮಗೆ ಭಿಕ್ಷೆಯ ಭೂಮಿ ಬೇಕಿಲ್ಲ“ನಮ್ಮ ಕಾನೂನು ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಮಗೆ ನೀಡಲು ಮುಂದಾಗಿರುವ 5 ಎಕರೆ ಜಮೀನನ್ನು ನಾವು ತಿರಸ್ಕರಿಸಬೇಕು ಎಂಬುದು ನನ್ನ ಭಾವನೆ. ಆದರೆ, ಸಂಘ ಪರಿವಾರದವರು ಹಲವು ಮಸೀದಿಗಳ ಮೇಲೆ ಹಕ್ಕು ಚಲಾವಣೆಗೆ ಮುಂದಾಗಿಬಿಡಬಹುದು ಎಂಬ ಆತಂಕ ನನಗೆ ಕಾಡುತ್ತಿದೆ” ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ