• Home
  • »
  • News
  • »
  • national-international
  • »
  • Kerala: ಕಿರಾಣಿ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ತಗ್ಗಿಸಿದ ಎಂಟೆಕ್ ಪದವೀಧರ! ಹೇಗಿದೆ ನೋಡಿ ಇವರ ಗ್ರೀನ್‌ ಸ್ಟೋರ್?

Kerala: ಕಿರಾಣಿ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ತಗ್ಗಿಸಿದ ಎಂಟೆಕ್ ಪದವೀಧರ! ಹೇಗಿದೆ ನೋಡಿ ಇವರ ಗ್ರೀನ್‌ ಸ್ಟೋರ್?

ಎರ್ನಾಕುಲಂ ಮೂಲದ ಬಿಟ್ಟು ಜಾನ್

ಎರ್ನಾಕುಲಂ ಮೂಲದ ಬಿಟ್ಟು ಜಾನ್

2015 ರಲ್ಲಿ ಯುರೋಪ್ ಪ್ರವಾಸದಲ್ಲಿರುವಾಗ ಎರ್ನಾಕುಲಂ ಮೂಲದ ಬಿಟ್ಟು ಜಾನ್ ಕಲ್ಲಿಂಗಲ್ ಅವರು ಮೊದಲ ಬಾರಿಗೆ 'ಗ್ರೀನ್ ಸ್ಟೋರ್ಸ್' ಅನ್ನು ನೋಡಿ ಆಕರ್ಷಿತರಾದರು. ಈ ಪರಿಸರ ಸ್ನೇಹಿ ಕಿರಾಣಿ ಅಂಗಡಿಗೆ ಮನಸೋತ ಜಾನ್‌ ತಮ್ಮ ಊರಲ್ಲೂ ಸಹ ಇಂತದ್ದೇ ಒಂದು ಅಂಗಡಿ ತೆರೆಯಲು ಮುಂದಾದರು.

  • Trending Desk
  • 3-MIN READ
  • Last Updated :
  • New Delhi, India
  • Share this:

ಪ್ಲಾಸ್ಟಿಕ್‌ (Plastic) ಜಗತ್ತಿನ ಅತಿದೊಡ್ಡ ಕಂಟಕ. ನಗರ ಹಳ್ಳಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ಮಿತಿ ಇಲ್ಲದೇ ಬಳಕೆಯಲ್ಲಿದೆ. ಜಗತ್ತಿನಲ್ಲಿ ಪ್ರತಿನಿತ್ಯ ಕೋಟ್ಯಾಂತರ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್‌ ಪರಿಸರಕ್ಕೆ (Environment) ದೊಡ್ಡ ಹಾನಿ. ಪ್ಲಾಸ್ಟಿಕ್‌ ಬಳಕೆಯ ಪರಿಣಾಮ ಗೊತ್ತಿದ್ದರೂ ಸಹ ಜನ ಇನ್ನೂ ಸಹ ಕಿರಾಣಿ ಅಂಗಡಿ, ಹಾಲು (Milk), ತರಕಾರಿ (Vegetables) ತರಲು ಇನ್ನೂ ಅನೇಕ ಕಡೆ ಪ್ಲಾಸ್ಟಿಕ್‌ ಅನ್ನು ಕಡ್ಡಾಯವಾಗಿ ಬಳಕೆ ಮಾಡುತ್ತಲೇ ಇದ್ದಾರೆ. ಹೀಗೆ ಎಗ್ಗಿಲ್ಲದೇ ಪ್ಲಾಸ್ಟಿಕ್‌ ಬಳಕೆಯನ್ನು ಉತ್ತೇಜಿಸುವವರಿಗೆ ಇಲ್ಲೊಬ್ಬ ಕಿರಾಣಿ ಅಂಗಡಿಯ (Grocery Store) ಮಾಲೀಕ ನಿದರ್ಶನವಾಗಿದ್ದಾರೆ.


ಗ್ರೀನ್ ಸ್ಟೋರ್ಸ್ ಪರಿಚಯಿಸಿದ ಕೇರಳದ ಯುವಕ
2015 ರಲ್ಲಿ ಯುರೋಪ್ ಪ್ರವಾಸದಲ್ಲಿರುವಾಗ ಎರ್ನಾಕುಲಂ ಮೂಲದ ಬಿಟ್ಟು ಜಾನ್ ಕಲ್ಲಿಂಗಲ್ ಅವರು ಮೊದಲ ಬಾರಿಗೆ 'ಗ್ರೀನ್ ಸ್ಟೋರ್ಸ್' ಅನ್ನು ನೋಡಿ ಆಕರ್ಷಿತರಾದರು. ಈ ಪರಿಸರ ಸ್ನೇಹಿ ಕಿರಾಣಿ ಅಂಗಡಿಗೆ ಮನಸೋತ ಜಾನ್‌ ತಮ್ಮ ಊರಲ್ಲೂ ಸಹ ಇಂತದ್ದೇ ಒಂದು ಅಂಗಡಿ ತೆರೆಯಲು ಮುಂದಾದರು.




ಪ್ಲಾಸ್ಟಿಕ್‌ ಬಳಕೆ ತಗ್ಗಿಸಲು ಪಣ
ಬಿಟ್ಟು ಜಾನ್ ಕಲ್ಲಿಂಗಲ್ ಪ್ಲಾಸ್ಟಿಕ್‌ ಅನ್ನು ಹತೋಟಿಗೆ ತರಲು ಮತ್ತು ತನ್ನಿಂದ ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಬಳಕೆ ಜಾಗದಲ್ಲಿ ಮಣ್ಣಿನಲ್ಲಿ ಕರಗಬಲ್ಲ ಮತ್ತು ಮಣ್ಣಿಗೆ ಹಾನಿಯಾಗದ ವಸ್ತುಗಳನ್ನು ಬಳಕೆ ಮಾಡಬೇಕು ಎಂದು ನಿರ್ಧರಿಸಿದರು. ಜಾನ್‌ ಅವರ ಇದೇ ಆಶಯ ಈಗ ನಗರದಲ್ಲಿ ಪರಿಸರ ಸ್ನೇಹಿ ಕಿರಾಣಿ ಅಂಗಡಿಯ ಉದಯಕ್ಕೆ ಕಾರಣವಾಗಿದೆ.


ಜಾನ್‌ ಯುರೋಪ್‌ನಲ್ಲಿ ನೋಡಿದ ಹಾಗೆ ಅದೇ ರೀತಿಯ ಅಂಗಡಿಯನ್ನು ತೆರೆಯಲು ಮುಂದಾದರು. ಆದರೆ ಜಾನ್‌ ತಂದೆ ಆದಾಗ್ಲೇ ಒಂದು ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದ ಕಾರಣ, ಅದನ್ನೇ 'ಗ್ರೀನ್ ಸ್ಟೋರ್ಸ್ʼ ಆಗಿ ಪರಿವರ್ತಿಸಲು ನಿರ್ಧರಿಸಿದರು. ಜಾನ್‌ ಅವರ ಕಿರಾಣಿ ಅಂಗಡಿಯಲ್ಲಿ ಕೆಲವೇ ಕೆಲವು ವಸ್ತುಗಳನ್ನು ಬಿಟ್ಟು ಪ್ರಸ್ತುತ ಒಂದೆ ಒಂದು ತುಂಡು ಪ್ಲಾಸ್ಟಿಕ್ ಕೂಡ ಇಲ್ಲ. ಗ್ರಾಹಕರು ಕೂಡ ತಮ್ಮದೇ ಸ್ವಂತ ಬಟ್ಟೆ ಬ್ಯಾಗ್‌ ಅನ್ನು ತೆಗೆದುಕೊಂಡು ಬಂದು ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಅವರಿಗೆ ಹೇಳುತ್ತಾರೆ.


Recycling Unrecyclable Plastic University Of Michigan Studies Stg pvn
ಸಾಂದರ್ಭಿಕ ಚಿತ್ರ


ಬಟ್ಟೆ ಅಥವಾ ಪೇಪರ್‌ ಬ್ಯಾಗ್‌ ತರುವವರಿಗೆ ಆಫರ್
ಬಟ್ಟೆ ಅಥವಾ ಪೇಪರ್‌ ಬ್ಯಾಗ್‌ ಅನ್ನು ತರುವವರಿಗೆ ಜಾನ್‌ ತಮ್ಮ ಅಂಗಡಿಯಲ್ಲಿ ಖರೀದಿಸಿದ ವಸ್ತುಗಳ ಮೇಲೆ 2% ಡಿಸ್ಕೌಂಟ್‌ ಸಹ ನೀಡುತ್ತಿದ್ದಾರೆ. ಪ್ಲಾಸ್ಟಿಕ್‌ ಬಳಕೆಯನ್ನು ಗಣನೀಯವಾಗಿ ತಗ್ಗಿಸಲು ಡಿಸ್ಕೌಂಟ್‌ ಜೊತೆ ಗಾಜಿನ ಪಾತ್ರೆಗಳು ಮತ್ತು ಕಾಗದದ ಚೀಲಗಳನ್ನು ಒಂದಿಷ್ಟು ಮೊತ್ತವನ್ನು ಠೇವಣಿ ಮಾಡುವ ಮೂಲಕ ತೆಗೆದುಕೊಳ್ಳಬಹುದು ಮತ್ತು ಅದನ್ನು ಮುಂದಿನ ಖರೀದಿಯಲ್ಲಿ ಹಿಂತಿರುಗಿಸುವ ಒಂದು ಯೋಜನೆಯನ್ನು ಸಹ ಗ್ರಾಹಕರಿಗೆ ನೀಡಿದ್ದಾರೆ. ಅಂದರೆ ಯಾರು ಬ್ಯಾಗ್‌ ತಂದಿರುವುದಿಲ್ಲವೋ ಅಂತವರಿಗೆ ಅಂಗಡಿಯಲ್ಲಿಯೇ ಸ್ವಲ್ಪ ಹಣ ಠೇವಣಿ ಮಾಡಿಸಿಕೊಂಡು ಬ್ಯಾಗ್‌, ಗಾಜಿನ ಬಾಟಲಿ ನೀಡಲಾಗುತ್ತದೆ ಮತ್ತು ಮುಂದಿನ ಬಾರಿ ಬಂದಾಗ ಬ್ಯಾಗ್‌ ಅನ್ನು ಹಿಂದಿರುಗಿಸಿದರೆ ಆ ಠೇವಣಿ ಮೊತ್ತ ಹಿಂದಿರುಗಿಸಲಾಗುತ್ತದೆ.


ಇದನ್ನೂ ಓದಿ: Unrecyclable Plastic: ಅತ್ಯಂತ ವಿಷಕಾರಿ ಪ್ಲಾಸ್ಟಿಕ್ ಪಿವಿಸಿಯನ್ನು ಮರುಬಳಕೆ ಮಾಡಬಹುದು! ಮಿಶಿಗನ್ ವಿವಿ ಸಂಶೋಧನೆ


Single Use Plastic Ban fine was collected by bbmp for violations of rules
ಸಾಂದರ್ಭಿಕ ಚಿತ್ರ


33 ವರ್ಷದ ಎಂಟೆಕ್ ಪದವೀಧರರಾದ ಬಿಟ್ಟು ಜಾನ್ ಕಲ್ಲಿಂಗಲ್ ಅಂಗಡಿಗೆ ದಿನಕ್ಕೆ 300 ಗ್ರಾಹಕರು ಭೇಟಿ ನೀಡುತ್ತಾರೆ ಎಂದು ಹೇಳಿದ್ದಾರೆ. "ಕೆಲವು ಘನ ವಸ್ತುಗಳನ್ನು ಬಟ್ಟೆ ಮತ್ತು ಕಾಗದದ ಚೀಲಗಳಲ್ಲಿ ಮಾರಾಟ ಮಾಡಲಾಗುತ್ತದೆ, ಆದರೆ ಬಟ್ಟೆಯ ಕಂಡಿಷನರ್‌ಗಳು, ತೈಲಗಳು ಮತ್ತು ಇತರ ವಸ್ತುಗಳನ್ನು ಗಾಜಿನ ಬಾಟಲಿಯಲ್ಲಿ ಮಾರಾಟ ಮಾಡಲಾಗುತ್ತದೆ" ಎಂದು ಅವರು ಹೇಳುತ್ತಾರೆ.


12.5 ಲಕ್ಷ ಕೆಜಿ ಪ್ಲಾಸ್ಟಿಕ್ ಬಳಕೆ ತಗ್ಗಿಸಿದ ಹೆಗ್ಗಳಿಕೆ
ಅಂಗಡಿಯನ್ನು ಸ್ಥಾಪಿಸಿದ 2.5 ವರ್ಷಗಳಲ್ಲಿ, ಬಿಟ್ಟು ಅವರು 12.5 ಲಕ್ಷ ಕೆಜಿ ಪ್ಲಾಸ್ಟಿಕ್ ಅನ್ನು ಮಣ್ಣಿನ ಒಳಗೆ ಸೇರದಂತೆ ಉಳಿಸಿದ್ದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಜಿಲ್ಲೆಯ ಇನ್ನೊಂದು ಭಾಗದಲ್ಲಿ ಹೊಸ ಮಳಿಗೆ ತೆರೆದಿದ್ದು, ಮುಂದಿನ ವರ್ಷಗಳಲ್ಲಿ ವಿಸ್ತರಿಸುವ ಭರವಸೆ ಇದೆ.

Published by:Monika N
First published: