Kolkata: ಕೋಲ್ಕತ್ತಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು , ಬಾರಾ ಬಜಾರ್ನ ರಾಜಕತ್ರದಲ್ಲಿರುವ ಅಂಗಡಿಯೊಂದರಲ್ಲಿ ದಾಳಿ ನಡೆಸಲು ಪ್ರಯತ್ನಿಸಿದ ನಂತರ ಅಧಿಕಾರಿಗಳು ಮತ್ತು ಜಾರಿ ಶಾಖೆಯ (ಇಬಿ Enforcement Branch) ತಂಡದ ಮುಖ್ಯಸ್ಥರನ್ನು ಥಳಿಸಲಾಗಿದೆ ಮತ್ತು ಹಿಂದಕ್ಕೆ ಹೋಗುವಂತೆ ಬೆದರಿಸಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳ ತಂಡಕ್ಕೆ ತಮ್ಮ ಕೆಲಸವನ್ನು ಮಾಡಲು ಅನುಮತಿಸಲಿಲ್ಲ, ಜೊತೆಗೆ ಅಂಗಡಿಯವರಿಂದ ಕಾನೂನು ಬೆದರಿಕೆಗಳನ್ನು ಸಹ ಅಧಿಕಾರಿಗಳು ಎದುರಿಸಬೇಕಾಯಿತು, ಅಂಗಡಿಯ ಮೇಲೆ ಅವರು ದಾಳಿ ಮಾಡಲು ಹೋದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಜುಗಲ್ ಕಿಶೋರ್ ಧನ್ (Jugal Kishore Dna) ನೇತೃತ್ವದ ಕಾನೂನು ಜಾರಿ ತಂಡವು ಬಾರಾ ಬಜಾರ್ ಪ್ರದೇಶದ ಅಂಗಡಿಯ ಗೋಡೌನ್ ನಲ್ಲಿ ಕೆಲವು ವಿದೇಶಿ ಸಿಗರೇಟುಗಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿಗಳನ್ನು ಪಡೆದ ನಂತರ, ಆ ಪ್ರದೇಶಕ್ಕೆ ತಪಾಸಣೆಗಾಗಿ ಹೋಗಿದೆ ಹಾಗೂ ಗೋಡೌನ್ ತೆರೆಯಲು ಅಧಿಕಾರಿಗಳ ತಂಡವು ಅಂಗಡಿ ಮಾಲೀಕ ಚಂದನ್ ಪಾಲ್ ಚೌಧರಿಯನ್ನು ಕೇಳಿದೆ. ಆದಾಗ್ಯೂ, ಚೌಧರಿ ಅಂಗಡಿ ತೆರೆಯಲು ನಿರಾಕರಿಸಿದರು ಮತ್ತು ನಾಟಕ ಮಾಡಲು ಪ್ರಾರಂಭಿಸಿದ್ದಾನೆ.
ನಂತರ ಅವರ ಮಗ ಸಂದೀಪ್ ಪಾಲ್ ಚೌಧುರಿ (Sandeep Pal Chowdhury), ವಕೀಲ ಅಭಿಷೇಕ್ ಚಕ್ರವರ್ತಿ ಅವರೊಂದಿಗೆ ಸ್ಥಳಕ್ಕೆ ಬಂದಿದ್ದಾನೆ. ಕಟ್ಟಡವನ್ನು ಶೋಧಿಸಲು ಅನುಮತಿ ಪತ್ರ ನೀಡುವಂತೆ ವಕೀಲರು ಪೊಲೀಸರ ಬಳಿ ಕೇಳಿದ್ದಾರೆ, ವಕೀಲರ ಈ ಬೇಡಿಕೆಗೆ ಪೊಲೀಸರು ಆಕ್ಷೇಪಿಸಿದ್ದಾರೆ ಎಂದು ವರದಿಯಾಗಿದೆ.
ನಂತರ ವಕೀಲರು ತಮ್ಮ ದಾಖಲೆಗಳನ್ನು ಮತ್ತು ಸರ್ಚ್ ವಾರಂಟ್ ತೋರಿಸಲು ಪೊಲೀಸ್ ತಂಡವನ್ನು ಕೇಳಿದ್ದಾರೆ. ಇದಕ್ಕೆ, ಇಬಿ ಅಧಿಕಾರಿಗಳು ಈ ರೀತಿಯಾದ ತನ್ನ ಕಾರ್ಯಾಚರಣೆಗಳನ್ನು ನಡೆಸುವಾಗ ಯಾವುದೇ ರೀತಿಯ ಪೂರ್ವಾನುಮತಿ ಪಡೆಯಬೇಕಿಲ್ಲ ಎಂದು ತಿಳಿಸಿದೆ. ಅಕ್ರಮ ಸರಕುಗಳನ್ನು ಹುಡುಕಲು ಮತ್ತು ಮುಟ್ಟುಗೋಲು ಹಾಕಿಕೊಳ್ಳಲು ಸಂಪೂರ್ಣ ಪರವಾನಗಿ ಹೊಂದಿದೆ ಇದಕ್ಕೆ ಅನುಮತಿ ಬೇಕಿಲ್ಲ ಎಂದು ಉತ್ತರಿಸಿದ್ದಾರೆ.
ಇದಕ್ಕೆ, ವಕೀಲ ಚಕ್ರವರ್ತಿ ಅವರು ಕಾನೂನು ಪರಿಭಾಷೆಯಲ್ಲಿ ಅಧಿಕಾರಿಗಳಿಗೆ ಉತ್ತರಿಸಲು ಹೊರಟಿದ್ದಾರೆ ಮತ್ತು ಕಾನೂನಿನ ತಾಂತ್ರಿಕ ವಿವರಗಳ ಕುರಿತು ಇಬಿ ತಂಡದ ಬಳಿ ಜೋರು ಚರ್ಚೆ ನಡೆಸಿದ್ದಾರೆ. ವರದಿಗಳ ಪ್ರಕಾರ, ಅಂಗಡಿಯ ಮಾಲೀಕರಾದ ಪಾಲ್ ಚೌಧುರಿ ಅವರು ಕೆಲವು ರಾಜಕೀಯ ನಾಯಕರಿಗೆ ದೂರವಾಣಿ ಮೂಲಕ ಪದೇ ಪದೇ ಕರೆ ಮಾಡಿ ಚೆಕ್ ನಡೆಸುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ. ಅಂತಿಮವಾಗಿ, ತಂಡವು ತಮ್ಮ ತನಿಖೆಯನ್ನು ಪೂರ್ಣಗೊಳಿಸದೆ ಹಿಂದಕ್ಕೆ ಹೋಗಿದೆ, ಈ ರೀತಿ ಮಾಡದೆ ಅಧಿಕಾರಿಗಳಿಗೆ ಬೇರೆ ದಾರಿಯಿರಲಿಲ್ಲ ಎಂದು ವರದಿಯಾಗಿದೆ.
ಕುತೂಹಲಕಾರಿಯಾದ ಅಂಶ ಏನೆಂದರೇ, ಅಂಗಡಿಯ ನೆಲಮಾಳಿಗೆಯಲ್ಲಿ ವಿದೇಶಿ ಸಿಗರೇಟುಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪದಲ್ಲಿ ಪಾಲ್ ಚೌಧರಿ ಕುಟುಂಬದ ಸದಸ್ಯರ ಮೇಲೆ ಅಧಿಕಾರಿಗಳು ಆರೋಪ ಹೊರಿಸಿರುವುದು ಇದೇ ಮೊದಲಲ್ಲ. ಚಂದನ್ ಅವರ ಮಗ ಸಂದೀಪ್ ಪಾಲ್ ಚೌಧುರಿ ಕಳೆದ ಒಂದು ವರ್ಷದಿಂದ ಇದಕ್ಕೆ ಸಂಬಂಧಿಸಿದ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ