ಐಎನ್​​ಎಕ್ಸ್​​ ಪ್ರಕರಣ: ಇ.ಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಪಿ.ಚಿದಂಬರಂ!

ಇನ್ನು ಚಿದಂಬರಂ ಅರ್ಜಿ ಸಲ್ಲಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಿಬಿಐ ಮತ್ತು ಇ.ಡಿ ವಿಚಾರಣೆ ನಡೆಸಲು ಕೋರ್ಟ್​​ ಬಳಿ ಅನುಮತಿ ಕೋರಿದ್ದವು. ಕೊನೆಗೂ ಚಿದಂಬರಂ ವಿಚಾರಣೆ ನಡೆಸಲು ಕೋರ್ಟ್​ ಸಿಬಿಐಗೆ ಅನುಮತಿ ನೀಡಿತ್ತು. ಅಲ್ಲದೇ ವಿಚಾರಣೆಗೆ ಸಂಪೂರ್ಣ ಸಹಕರಿಸಿ ಎಂದು ಮಾಜಿ ಕೇಂದ್ರ ಸಚಿವರಿಗೆ ಕೋರ್ಟ್​​ ಸೂಚಿಸಿತ್ತು.

Ganesh Nachikethu | news18
Updated:February 9, 2019, 7:59 AM IST
ಐಎನ್​​ಎಕ್ಸ್​​ ಪ್ರಕರಣ: ಇ.ಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಪಿ.ಚಿದಂಬರಂ!
ಪಿ. ಚಿದಂಬರಂ
Ganesh Nachikethu | news18
Updated: February 9, 2019, 7:59 AM IST
ನವದೆಹಲಿ(ಫೆ.09): ಬಹುಕೋಟಿ ಹಗರಣ ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ಸಿನ ಹಿರಿಯ ಮುಖಂಡ ಪಿ. ಚಿದಂಬರಂ ಅವರು ಜಾರೀ ನಿರ್ದೇಶನಾಲ(ಇ.ಡಿ) ಮುಂದೆ ವಿಚಾರಣೆ ಹಾಜರಾಗಿದ್ದಾರೆ. ನಿನ್ನೆ ಶುಕ್ರವಾರ(ಫೆ.08) ಬೆಳಿಗ್ಗೆ 11ಕ್ಕೆ ಕೇಂದ್ರ ದೆಹಲಿಯಲ್ಲಿರುವ ಇ.ಡಿ. ಕಚೇರಿಗ ಆಗಮಿಸಿದ್ದು, ಅಧಿಕಾರಿಗಳು ಪ್ರಕರಣ ಸಂಬಂಧ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಜಾರೀ ನಿರ್ದೇಶನಾಲಯ ಅಧಿಕಾರಿಗಳಿಗೆ ಪಿ. ಚಿದಂಬರಂ ಅವರು ಎಲ್ಲಾ ರೀತಿಯಾಗಿ ಸಹಕರಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್​​ ಹಿರಿಯ ಮುಖಂಡ ಪಿ. ಚಿದಂಬರಂ ಅವರು, ಪ್ರಕರಣ ಕುರಿತಂತೆ ದೆಹಲಿ ಹೈಕೋರ್ಟ್‌ನಲ್ಲಿ ಮತ್ತಷ್ಟು ಪೂರಕ ದಾಖಲೆಗಳ ಜತೆಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿದ್ದ ಚಿದಂಬರಂ ಕಳೆದ ಜನವರಿ 25ರಂದು ಕೂಡ ಕೋರ್ಟ್‌ ಮೊರೆ ಹೋಗಿದ್ದರು. ಆದರೆ, ನ್ಯಾಯಾಧೀಶ ಸುನೀಲ್‌ ಗೌರ್‌ ಆದೇಶವನ್ನು ಕಾಯ್ದಿರಿಸಿದ್ದರು ಎನ್ನುತ್ತಿವೆ ಮೂಲಗಳು.

ಇನ್ನು ಅರ್ಜಿ ಸಲ್ಲಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಿಬಿಐ ಮತ್ತು ಇ.ಡಿ ವಿಚಾರಣೆ ನಡೆಸಲು ಕೋರ್ಟ್​​ ಬಳಿ ಅನುಮತಿ ಕೋರಿದ್ದವು. ಕೊನೆಗೂ ಚಿದಂಬರಂ ವಿಚಾರಣೆ ನಡೆಸಲು ಕೋರ್ಟ್​ ಸಿಬಿಐಗೆ ಅನುಮತಿ ನೀಡಿತ್ತು. ಐಎನ್‌ಎಕ್ಸ್‌ ಮೀಡಿಯಾ ಕಂಪನಿಯಲ್ಲಿ ವಿದೇಶಿ ಹೂಡಿಕೆಗೆ ಅನುಮತಿ ನೀಡುವ ವೇಳೆ ಅಂದು ಹಣಕಾಸು ಸಚಿವರಾಗಿದ್ದ ನೀವು ಅವ್ಯವಹಾರ ನಡೆಸಿದ್ದೀರಿ ಎಂಬ ಆರೋಪವಿದೆ. ಹೀಗಾಗಿ ವಿಚಾರಣೆಗೆ ಸಂಪೂರ್ಣ ಸಹಕರಿಸಿ ಎಂದು ಕೋರ್ಟ್​​ ಸೂಚಿಸಿತ್ತು.

ಏನಿದು ಪ್ರಕರಣ?: 2007ರಲ್ಲಿ ಪೀಟರ್ ಮತ್ತು ಇಂದ್ರಾಣಿ ಒಡೆತನದಲ್ಲಿದ್ದ ಐಎನ್​ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟು, 3.5 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪ ಪಿ.ಚಿದಂಬರಂ ಹಾಗೂ ಪುತ್ರ ಕಾರ್ತಿ ಚಿದಂಬರಂ ಮೇಲಿದೆ. ಈಗಾಗಲೇ ಪ್ರಕರಣದಲ್ಲಿ ಆರೋಪಿ ಇಂದ್ರಾಣಿ ಮುಖರ್ಜಿ ಅವರು, ದೆಹಲಿ ಹೋಟೆಲ್​​ವೊಂದರಲ್ಲಿ ಕಾರ್ತಿ ಚಿದಂಬರಂ ನನ್ನ ಭೇಟಿ ಮಾಡಿದ್ದರು. ಪಿಐಪಿಬಿ ವ್ಯವಹಾರಕ್ಕೆ ಅನುವು ಮಾಡಿಕೊಡಲು 1 ಮಿಲಿಯನ್ ಡಾಲರ್ 1 ಮಿಲಿಯನ್ ಡಾಲರ್ ಭೇಡಿಕೆ ಇಟ್ಟಿದ್ದರು ಎಂದು ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಚಿಂದಬರಂ ಮೇಲಿನ ಆರೋಪ: ಅಲ್ಲದೇ ನವದೆಹಲಿಯ ಕಚೇರಿಯಲ್ಲಿ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನ ಭೇಟಿ ಮಾಡಿದ್ದ ಪೀಟರ್ ಮತ್ತು ಇಂದ್ರಾಣಿ, ಐಎನ್​ಎಕ್ಸ್ ಮೀಡಿಯಾ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಇದೇವೇಳೆ, ಚಿದಂಬರಂ ಇದಕ್ಕೆ ಪ್ರತಿಯಾಗಿ ತಮ್ಮ ಮಗನ ಉದ್ಯಮಕ್ಕೆ ಅನುಕೂಲ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ.
First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...