Armenian and Azerbaijan: ಮತ್ತೆ ಮುಖಾಮುಖಿಯಾದ ಶತ್ರುದೇಶಗಳು! ಅಜೆರ್ಬೈಜಾನ್ ಮೇಲೆ ಅರ್ಮೇನಿಯನ್ ದಾಳಿ

ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ವಿಶ್ವ ಭೂಪಟದಲ್ಲಿ ಎರಡು ಸಣ್ಣ ದೇಶಗಳು (Small countries). 2020ರಲ್ಲಿ ನಾಗೋರ್ನೊ ಕರಬಖ್‌ನಲ್ಲಿ ಹಲವು ದಿನಗಳ ಕಾಲ ಈ ಉಭಯ ದೇಶಗಳ ನಡುವೆ ಭೀಕರ ಯುದ್ಧ ನಡೆದಿತ್ತು. ಪರಿಣಾಮವಾಗಿ ಎರಡೂ ಬಣಗಳ ಸುಮಾರು 5000 ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ ಮತ್ತೆ ವಿವಾದಿತ ಸ್ಥಳ ನಾಗೋರ್ನೊ ಕರಬಖ್ (Nagorno-Karabakh) ಬಳಿ ಅರ್ಮೇನಿಯನ್ ಪಡೆಗಳು ದಾಳಿಗೆ (Attack) ಬಂದಿರುವುದಾಗಿ ಮತ್ತು ಆ ದೇಶದ ಪಡೆಗಳನ್ನು ಅಜೆರ್ಬೈಜಾನ್ ಹತ್ತಿಕ್ಕಿರುವುದಾಗಿ ವರದಿಗಳು ತಿಳಿಸಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಅಜೆರ್ಬೈಜಾನ್ (Azerbaijan) ಮತ್ತು ಅರ್ಮೇನಿಯಾ (Armenia) ನಡುವಿನ ಕಿತ್ತಾಟ ಮುಗಿಯದ ಕಥೆಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಎರಡೂ ಪ್ರಾಂತ್ಯಗಳು ಸುಮಾರು 29 ದಿನಗಳವರೆಗೂ ಯುದ್ಧ ಮಾಡಿದ ನಂತರ ಮಧ್ಯರಾತ್ರಿ ಕದನ ವಿರಾಮ ಘೋಷಿಸಿದ್ದವು. ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ವಿಶ್ವ ಭೂಪಟದಲ್ಲಿ ಎರಡು ಸಣ್ಣ ದೇಶಗಳು (Small countries). 2020ರಲ್ಲಿ ನಾಗೋರ್ನೊ ಕರಬಖ್ನಲ್ಲಿ ಹಲವು ದಿನಗಳ ಕಾಲ ಈ ಉಭಯ ದೇಶಗಳ ನಡುವೆ ಭೀಕರ ಯುದ್ಧ ನಡೆದಿತ್ತು ಮತ್ತು ಪರಿಣಾಮವಾಗಿ ಎರಡೂ ಬಣಗಳ ಸುಮಾರು 5000 ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ ಮತ್ತೆ ವಿವಾದಿತ ಸ್ಥಳ ನಾಗೋರ್ನೊ ಕರಬಖ್ (Nagorno-Karabakh) ಬಳಿ ಅರ್ಮೇನಿಯನ್ ಪಡೆಗಳು ದಾಳಿಗೆ (Attack) ಬಂದಿರುವುದಾಗಿ ಮತ್ತು ಆ ದೇಶದ ಪಡೆಗಳನ್ನು ಅಜೆರ್ಬೈಜಾನ್ ಹತ್ತಿಕ್ಕಿರುವುದಾಗಿ ವರದಿಗಳು ತಿಳಿಸಿವೆ.

2020ರಲ್ಲಿ ನಡೆದ ಯುದ್ಧದಲ್ಲಿ ಅಜೆರ್ಬೈಜಾನ್ ಪ್ರತ್ಯೇಕತಾವಾದಿಗಳಿಂದ ನಿಯಂತ್ರಿಸಲ್ಪಟ್ಟ ಪ್ರದೇಶದ ಒಂದು ಭಾಗವನ್ನು ಗೆದ್ದುಕೊಂಡಿತ್ತು. ನಂತರದ ಕದನ ವಿರಾಮದ ನಿಯಮಗಳ ಅಡಿಯಲ್ಲಿ, ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪ್ರದೇಶದ ಉಳಿದ ಭಾಗವನ್ನು ರಕ್ಷಿಸಲು ರಷ್ಯಾದ ಶಾಂತಿಪಾಲಕರನ್ನು ನಿಯೋಜಿಸಲಾಯಿತು. ಎರಡೂ ಕಡೆಯವರು ಪರಸ್ಪರ ಉಲ್ಲಂಘನೆಯ ಆರೋಪ ಮಾಡುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈಗ ಮತ್ತೆ ಖ್ಯಾತೆ ತೆಗೆದಿರುವ ಅರ್ಮೇನಿಯನ್ ಅಜೆರ್ಬೈಜಾನ್ ದೇಶದ ಮೇಲೆ ಆಕ್ರಮಣ ಮಾಡಿದೆ.

ಅಜೆರ್ಬೈಜಾನ್ ದೇಶದ ಮೇಲೆ ಅರ್ಮೇನಿಯನ್ ಆಕ್ರಮಣ
ಅರ್ಮೇನಿಯಾ ವಿಧ್ವಂಸಕ ಕೃತ್ಯವನ್ನು ಎಸಗುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿ ಒಬ್ಬ ಸೈನಿಕನನ್ನು ಕೊಂದಿದೆ ಎಂದು ಅಜೆರಿ ರಕ್ಷಣಾ ಸಚಿವಾಲಯ ಹೇಳಿದೆ. ಇದರ ಜೊತೆಗೆ, ರಷ್ಯಾದ ಶಾಂತಿಪಾಲಕರ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಬೆಟ್ಟವನ್ನು ವಶಪಡಿಸಿಕೊಳ್ಳುವ ಅರ್ಮೇನಿಯನ್ ಪ್ರಯತ್ನವನ್ನು ಅಜೆರ್ಬೈಜಾನ್ ಪಡೆಗಳು ಹಿಮ್ಮೆಟ್ಟಿಸಿದೆ ಎಂದು ಹೇಳಲಾಗಿದೆ.

ದಾಳಿಯ ಸಂದರ್ಭದಲ್ಲಿ ಅರ್ಮೇನಿಯನ್ ಪಡೆಗಳಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂಬುವುದಾಗಿ ಅಜೆರ್ಬೈಜಾನ್ ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲಾ ಅರ್ಮೇನಿಯನ್ ಪಡೆಗಳನ್ನು ಪ್ರದೇಶದಿಂದ ಹಿಂದೆ ಸರಿಯುವಂತೆ ಕೇಳಿಕೊಳ್ಳಲಾಗಿದ್ದು, ಮಾತಿಗೆ ಬಗ್ಗದಿದ್ದರೆ ದಾಳಿ ಮಾಡುವುದಾಗಿ ತಿಳಿಸಿದ್ದಾರೆ.

ತೀವ್ರ ಕಳವಳ ವ್ಯಕ್ತಪಡಿಸಿದ ಯುಎಸ್
ಈ ಎಲ್ಲಾ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ ಅರ್ಮೇನಿಯಾದ ವಿದೇಶಾಂಗ ಸಚಿವಾಲಯವು ಅಜೆರ್ಬೈಜಾನ್ ಶಾಂತಿಪಾಲನಾ ಪಡೆಗಳ ನಿಯಂತ್ರಣದ ಪ್ರದೇಶಗಳಲ್ಲಿ ದಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಅಲ್ಲದೇ ಯೆರೆವಾನ್ ಅಂತರರಾಷ್ಟ್ರೀಯ ಸಮುದಾಯವು ಅಜೆರ್ಬೈಜಾನ್ ಆಕ್ರಮಣಕಾರಿ ನಡವಳಿಕೆ ಮತ್ತು ಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಬಯಸಿದೆ ಎಂದು ಹೇಳಿದೆ. ಐರೋಪ್ಯ ಒಕ್ಕೂಟವು ದಾಳಿಯನ್ನು ತಕ್ಷಣವೇ ಕೊನೆಗೊಳಿಸಲು ಕರೆ ನೀಡಿತು ಮತ್ತು ಎರಡೂ ಕಡೆಯವರು ಕದನ ವಿರಾಮವನ್ನು ಗೌರವಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: CWG 2022: ಕಾಮನ್ ವೆಲ್ತ್ ಗೇಮ್ಸ್ ನ್ನಲ್ಲಿ ಫೈಟಿಂಗ್! ಹೊಡೆದಾಡಿಕೊಂಡ ಹಾಕಿ ಆಟಗಾರರು

ಇನ್ನೂ ನಾಗೊರ್ನೊ-ಕರಾಬಖ್‌ನ ಸುತ್ತಲಿನ ಘಟನೆಗಳಿಂದ ಯುನೈಟೆಡ್ ಸ್ಟೇಟ್ಸ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಾವುನೋವುಗಳು ಮತ್ತು ಜೀವಹಾನಿ ಸೇರಿದಂತೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್ "ಉದ್ವೇಗಗಳನ್ನು ಕಡಿಮೆ ಮಾಡಲು ಮತ್ತು ಹಿಂಸಾಚಾರ ಉಲ್ಬಣಗೊಳ್ಳುವುದನ್ನು ತಪ್ಪಿಸಲು ನಾವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ." ಎಂದು ತಿಳಿಸಿದ್ದಾರೆ.

ಎರಡು ದೇಶಗಳ ನಡುವಿನ ವಿವಾದ ಏನು?
1990ರ ದಶಕದಲ್ಲಿ ಅರ್ಮೇನಿಯನ್ ಸೈನ್ಯವು ಕಳೆದುಕೊಂಡ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಅಜೆರ್ಬೈಜಾನ್ ವಾದಿಸುತ್ತಿದೆ. ಇದೇ ಈ ಎರಡೂ ದೇಶಗಳ ನಡುವಿನ ಯುದ್ಧಕ್ಕೆ ಕಾರಣವಾಗಿದೆ. ಹೌದು, ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಯುದ್ಧಕ್ಕೆ ಪ್ರಮುಖ ಕಾರಣವೆಂದರೆ ನಾಗೋರ್ನೊ-ಕರಬಖ್ ಪ್ರದೇಶ. ಅಜರ್ಬೈಜಾನ್ ಈ ಪ್ರದೇಶದ ಪರ್ವತ ಪ್ರದೇಶವನ್ನು ತನ್ನದೇ ಎಂದು ಕರೆದರೆ, ಅರ್ಮೇನಿಯಾ ಈ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದಿದೆ.

ಇದನ್ನೂ ಓದಿ:  China Military Drill: ತೈವಾನ್ ಕಡಲತಡಿಯಲ್ಲಿ ಚೀನಾದ ಕ್ಷಿಪಣಿಗಳ ಸಮರಾಭ್ಯಾಸ: ಮುಂದೇನಾಗುತ್ತೆ, ಯುದ್ಧ ಫಿಕ್ಸಾ?

1994ರಲ್ಲಿ ಹೋರಾಟ ಕೊನೆಗೊಂಡಾಗಿನಿಂದ ಈ ಪ್ರದೇಶವು ಅರ್ಮೇನಿಯಾದ ಆಕ್ರಮಣದಲ್ಲಿದೆ. 2016ರಲ್ಲಿಯೂ ಈ ಪ್ರದೇಶದ ಮೇಲೆ ಉಭಯ ದೇಶಗಳ ನಡುವೆ ರಕ್ತಸಿಕ್ತ ಯುದ್ಧ ನಡೆದಿದ್ದು, ಇದರಲ್ಲಿ 200 ಜನರು ಸಾವನ್ನಪ್ಪಿದ್ದಾರೆ. ಈಗ ಮತ್ತೊಮ್ಮೆ ಎರಡೂ ದೇಶಗಳು ಮುಖಾಮುಖಿಯಾಗಿಯಾಗಿದ್ದು, 2020ರ ಇತಿಹಾಸ ಮರುಕಳಿಸುವ ಭೀತಿ ಎದುರಾಗಿದೆ.
Published by:Ashwini Prabhu
First published: