Army Land: ಸೇನಾ ಭೂಮಿ ಅತಿಕ್ರಮಣ; ಈ 3 ರಾಜ್ಯಗಳಲ್ಲೇ ಹೆಚ್ಚಿನ ಒತ್ತುವರಿ

ರಕ್ಷಣಾ ಇಲಾಖೆಗೆ ಸೇರಿದ ಬರೋಬ್ಬರಿ 9500 ಎಕರೆಗೂ ಹೆಚ್ಚು ಸೇನಾ ಭೂಮಿಯನ್ನು ಒತ್ತುವರಿ ಮಾಡಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭೂಮಿ ಅತಿಕ್ರಮಣದ (Land Encroachment)  ಬಗ್ಗೆ ಆಗಾಗ್ಗ ವರದಿಗಳು ಆಗುತ್ತಿರುತ್ತವೆ. ದುರ್ಬಲ ಜನರಿಗೆ ಸೇರಿದ ಭೂಮಿಗಳನ್ನು ಪ್ರಬಲ ವ್ಯಕ್ತಿಗಳು ಅತಿಕ್ರಮಿಸಿರುವ ಸಂಬಂಧ ಅನೇಕ ಪ್ರಕರಣಗಳು ಈಗಾಗಲೇ ಇವೆ. ಆದರೆ, ಆಶ್ಚರ್ಯ ಎಂದರೆ ನಮ್ಮ ದೇಶದ ಶಕ್ತಿಯಾದ ರಕ್ಷಣಾ ಇಲಾಖೆಯ (Indian Army) ಭೂಮಿಯನ್ನೇ ಇದೀಗ ಅತಿಕ್ರಮಿಸುವ ಆರೋಪ ಕೇಳಿ ಬಂದಿದೆ. ರಕ್ಷಣಾ ಇಲಾಖೆಗೆ ಸೇರಿದ ಬರೋಬ್ಬರಿ 9500 ಎಕರೆಗೂ ಹೆಚ್ಚು ರಕ್ಷಣಾ ಭೂಮಿ ಒತ್ತುವರಿಯಾಗಿದೆ. ಈ ಸಂಬಂಧ ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆ ಭಾರತ ಸರ್ಕಾರದ ರಕ್ಷಣಾ ಸಚಿವಾಲಯವು ಉತ್ತರ ನೀಡಿದ್ದು, ಯಾವ ಯಾವ ರಾಜ್ಯದಲ್ಲಿ ಎಷ್ಟು ಭೂಮಿ ಒತ್ತುವರಿ ಆಗಿದೆ ಎಂಬುದನ್ನು ದಾಖಲೆ ಸಮೇತ ನೀಡಿದೆ. ಈ ವರದಿಯು ವಿವಿಧ ರಾಜ್ಯಗಳಲ್ಲಿ ಅತಿಕ್ರಮಣವಾಗಿರುವ ರಕ್ಷಣಾ ಇಲಾಖೆಯ ಭೂಮಿಯ ವಿವರಗಳನ್ನು ಒಳಗೊಂಡಿದೆ.

  ಈ ಮೂರು ರಾಜ್ಯದಲ್ಲೇ ಅತಿ ಹೆಚ್ಚು ಅತಿಕ್ರಮಣ
  ಸಂಸತ್ತನಲ್ಲಿ ನೀಡಿದ ವರದಿ ಅನ್ವಯ ದೇಶದ 30 ರಾಜ್ಯಗಳಲ್ಲಿ ರಕ್ಷಣಾ ಭೂಮಿಯ ಮೇಲಿನ ಅತಿಕ್ರಮಣದ ಆರೋಪ ಹೊಂದಿವೆ. ಅದರಲ್ಲಿ ಹೆಚ್ಚಿನ ಅತಿಕ್ರಮಣಗಳು ಮೂರು ರಾಜ್ಯಗಳು ಹೊಂದಿವೆ. ಅವು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ. ಈ ಮೂರು ರಾಜ್ಯಗಳಲ್ಲಿ ಒಟ್ಟು 4572 ಎಕರೆ ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ. ದೇಶದಲ್ಲಿ 9505 ಎಕರೆ ರಕ್ಷಣಾ ಭೂಮಿ ಒತ್ತುವರಿಯಾಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 1927 ಎಕರೆ ಸೇನಾ ಭೂಮಿಯನ್ನು ಅತಿಕ್ರಮಣ ಮಾಡಿದ್ದರೆ, ಮಧ್ಯಪ್ರದೇಶದಲ್ಲಿ 1660 ಎಕರೆ ಮತ್ತು ಮಹಾರಾಷ್ಟ್ರದಲ್ಲಿ ಒಟ್ಟು 985 ಎಕರೆ ಸೇನಾ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ನಾಲ್ಕನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಇದ್ದು, ಇಲ್ಲಿ ಸೇನೆಯ 560 ಎಕರೆ ಭೂಮಿ ಒತ್ತುವರಿಯಾಗಿದೆ.

  ಐದು ವರ್ಷಗಳಲ್ಲಿ ರಕ್ಷಣಾ ಇಲಾಖೆ ಮರಳಿ ಪಡೆದಿದ್ದು, ಇಷ್ಟೇ ಭೂಮಿ
  ತಮ್ಮ ಭೂಮಿಯನ್ನು ಅತಿಕ್ರಮಣದ ವಿರುದ್ಧ ಹೋರಾಡುತ್ತಿರುವ ಸೇನೆ ಕಳೆದ ಐದು ವರ್ಷದಲ್ಲಿ ಕೇಲವ 1000 ಎಕರೆ ಭೂಮಿ ಮರಳಿ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಗರಿಷ್ಠ ರಕ್ಷಣಾ ಭೂಮಿ ಅತಿಕ್ರಮಣಗೊಂಡಿರುವ ಮೂರು ರಾಜ್ಯಗಳಲ್ಲಿ, ಸ್ವಲ್ಪ ಭಾಗವನ್ನು ಪಡೆದಿದೆ. ಇದರಲ್ಲಿ ಉತ್ತರ ಪ್ರದೇಶದಲ್ಲಿ 435 ಎಕರೆ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದ್ದು, ಮಧ್ಯಪ್ರದೇಶದಲ್ಲಿ ಕೇವಲ 43 ಎಕರೆ ಮತ್ತು ಮಹಾರಾಷ್ಟ್ರದಲ್ಲಿ ಕೇವಲ 36 ಎಕರೆ ಭೂಮಿಯನ್ನು ಅತಿಕ್ರಮಣದಾರರಿಂದ ಹಿಂಪಡೆದಿದೆ

  ಕಂಟೋನ್ಮೆಂಟ್ ಪ್ರದೇಶದಲ್ಲಿ ಹೆಚ್ಚಿನ ಅತಿಕ್ರಮಣ
  ಸೇನಾ ಪಡೆಗಳು ಈ ಭೂಮಿಯಲ್ಲಿ ಇರುವಾಗಲೇ ಈ ಭೂಮಿಯನ್ನು ಹೇಗೆ ಅತಿಕ್ರಮಿಸಲಾಗುತ್ತಿದೆ ಎಂಬುದು ಅನೇಕರಲ್ಲಿ ಪ್ರಶ್ನೆ ಮೂಡಿದೆ, ಆದರೆ, ಅತಿಕ್ರಮಣಕ್ಕೆ ಒಳಗಾಗುತ್ತಿರುವ ಈ ಸೇನಾ ಭೂಮಿಗಳು ನಗರದಿಂದ ಹೊರವಲಯದ ಕಂಟೋನ್ಮೆಂಟ್​ ಪ್ರದೇಶದವುಗಳಾಗಿದೆ. ಇಲ್ಲಿ ಜನವಸತಿ ಪ್ರದೇಶವಾಗಿರುವುದಿಲ್ಲ. ಜೊತೆಗೆ ರಕ್ಷಣಾ ಇಲಾಖೆಯ ಈ ಜಮೀನು ಯಾವುದೇ ಸುರಕ್ಷತಾ ಬೇಲಿಯನ್ನು ಹೊಂದಿಲ್ಲದಿರುವುದರಿಂದ ಈ ಅಕ್ರಮ ನಡೆದಿದೆ.

  ಇದನ್ನು ಓದಿ: ಕೋವಿಡ್​ ಪ್ರಕರಣದಲ್ಲಿ ಏರಿಕೆ; ದೆಹಲಿಯಲ್ಲಿ Yellow alert ಜಾರಿ; ಏನಿದು ಹಳದಿ ಎಚ್ಚರಿಕೆ?

  ಈ ರೀತಿ ನಡೆಯುತ್ತೆ ಅತಿಕ್ರಮಣ
  ರಕ್ಷಣಾ ಇಲಾಖೆ ಭೂಮಿ ಒತ್ತುವರಿ ಪ್ರಕರಣ ಇದೇನು ಹೊಸದಲ್ಲ. ಈ ಹಿಂದೆ ಕೂಡ ಅನೇಕ ಸ್ಥಳೀಯರು ಈ ರೀತಿ ಸೇನಾ ಭೂಮಿ ಒತ್ತುವರಿ ಮಾಡಿದ ಪ್ರಕರಣ ವರದಿಯಾಗಿದೆ. ಕೆಲವ ಪ್ರಕರಣಗಳಲ್ಲಿ ಸೇನೆಯ ಅಧಿಕಾರಿಗಳು ಮತ್ತು ಅಧಿಕಾರಿಗಳು ಇಂತಹ ಅತಿಕ್ರಮಣದಾರರೊಂದಿಗೆ ಕೈಜೋಡಿಸಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಸೇನೆಯ ಭೂಮಿಯನ್ನು ಅತಿಕ್ರಮಿಸಲು, ಸೇನೆಯ ಸುತ್ತಲಿನ ಭೂಮಿಯನ್ನು ಖರೀದಿಸಲಾಗುತ್ತದೆ. ನಂತರ ನಿಧಾನವಾಗಿ ಅತಿಕ್ರಮಣಕಾರರು ಸೇನೆಗೆ ಸೇರಿದ ಭೂಮಿಯನ್ನು ಅತಿಕ್ರಮಿಸಲಾಗುವುದು

  ಯಾವ ರಾಜ್ಯಗಳು ಎಷ್ಟು ಎಕರೆ ಭೂಮಿ ಅತಿಕ್ರಮಣ ಮಾಡಿದೆ ಎಂಬ ಮಾಹಿತಿ ಇಲ್ಲಿದೆ  ರಾಜ್ಯಗಳುಅತಿಕ್ರಮಿತ ಭೂಮಿ(ಎಕರೆಯಲ್ಲಿ)
  ಉತ್ತರ ಪ್ರದೇಶ1927.0671
  ಮಧ್ಯಪ್ರದೇಶ1660.0222
  ಮಹಾರಾಷ್ಟ್ರ985.1292
  ಪಶ್ಚಿಮ ಬಂಗಾಳ559.555
  ಹರಿಯಾಣ504.4691
  ಬಿಹಾರ477.0717
  ರಾಜಸ್ಥಾನ476.4523
  ಅಸ್ಸಾಂ460.5397
  ನಾಗಾಲ್ಯಾಂಡ್357.53
  ಜಮ್ಮು ಮತ್ತು ಕಾಶ್ಮೀರ339.7839
  ಜಾರ್ಖಂಡ್304.912
  ಗುಜರಾತ್274.7971
  ಪಂಜಾಬ್239.4823
  ಛತ್ತೀಸ್‌ಗಢ165.768
  ದೆಹಲಿ147.451
  ಕರ್ನಾಟಕ131.7923
  ಆಂಧ್ರ ಪ್ರದೇಶ107.4125
  ತಮಿಳುನಾಡು92.8186
  ಅರುಣಾಚಲ ಪ್ರದೇಶ87.8141
  ತೆಲಂಗಾಣ60.4318
  ಉತ್ತರಾಖಂಡ51.7232
  ಹಿಮಾಚಲ ಪ್ರದೇಶ42.7618
  ಅಂಡಮಾನ್ ಮತ್ತು ನಿಕೋಬಾರ್23.98
  ಮೇಘಾಲಯ11.0855
  ಮಣಿಪುರ6.1308
  ಗೋವಾ5.1166
  ಕೇರಳ2.6739
  ತ್ರಿಪುರ1
  ಸಿಕ್ಕಿಂ0.2903
  ಲಕ್ಷದ್ವೀಪ0.08

  (ವರದಿ: ಅಮಿತ್​ ದೇಶ್​ಮುಖ್​)
  Published by:Seema R
  First published: