ಹೈದರಾಬಾದ್ ಅತ್ಯಾಚಾರಿಗಳ ಎನ್​ಕೌಂಟರ್​ ಪ್ರಕರಣ; ಹತ್ಯೆಯ ಸಾಚಾತನದ ಕುರಿತು ಇಂದಿನಿಂದಲೇ ತನಿಖೆ ಆರಂಭ

ಹಿರಿಯ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್​ ಅವರ ಈ ಕಾರ್ಯಾಚಾರಣೆ ಸಾರ್ವಜನಿಕ ವಲಯದಲ್ಲಿ ಜನ ಮನ್ನಣೆ ಗಳಿಸಿದ್ದರೂ ಇದರ ಹಿಂದೆ ಸಾಕಷ್ಟು ಕಾನೂನಿನ ತೊಡಕುಗಳಿವೆ. ಈ ಘಟನೆಯನ್ನು ತೆಲಂಗಾಣ ಹೈಕೋರ್ಟ್​ ಉಗ್ರವಾಗಿ ಖಂಡಿಸಿದ್ದು, ಸೋಮವಾರ ತುರ್ತು ವಿಚಾರಣೆ ಘೋಷಿಸಿದೆ.

ವಿಶ್ವನಾಥ್ ಸಜ್ಜನರ್.

ವಿಶ್ವನಾಥ್ ಸಜ್ಜನರ್.

  • Share this:
ಹೈದರಾಬಾದ್​ (ಡಿಸೆಂಬರ್​ 08); ಪಶುವೈದ್ಯೆ ಅತ್ಯಾಚಾರಿಗಳ ಎನ್​ಕೌಂಟರ್ ಪ್ರಕರಣದ ಸಾಚಾತನದ ಕುರಿತ ತನಿಖೆಯನ್ನು ಶಂಶಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ನೇತೃತ್ವದ ತಂಡ ಇಂದಿನಿಂದಲೇ ಆರಂಭಿಸಿದೆ.

ಇಂದು ಮುಂಜಾನೆಯೇ ಎನ್​ಕೌಂಟರ್​ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಅಲ್ಲದೆ, ಘಟನೆಯ ಮರಸೃಷ್ಟಿ ಮಾಡಿ ಮಹತ್ವದ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ ಎಂದು ವರದಿಯಾಗಿದೆ.

ಕಳೆದ ನವೆಂಬರ್​ 27 ರಂದು ಹೈದರಾಬಾದ್​ನಲ್ಲಿ ನಾಲ್ವರು ಲಾರಿ ಚಾಲಕರು ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಅಮಾನುಷವಾಗಿ ಕೊಲೆ ಮಾಡಿದ್ದರು.  ಈ ಪ್ರಕರಣ ದೇಶದಾದ್ಯಂತ ದೊಡ್ಡ ಮಟ್ಟದ ಜನಾಕ್ರೋಶಕ್ಕೆ ಕಾರಣವಾಗಿತ್ತು. ದೇಶದಾದ್ಯಂತ ಎಲ್ಲೆಡೆ ಪ್ರತಿಭಟಿಸಿದ ಸಾರ್ವಜನಿಕರು ಅತ್ಯಾಚಾರಿಗಳನ್ನು ಗುಂಡಿಟ್ಟು ಕೊಲ್ಲುವಂತೆ ಆಗ್ರಹಿಸಿದ್ದರು.

ಇದಕ್ಕೆ ಪೂರಕವಾಗಿ ಡಿಸೆಂಬರ್​ 06ರ ಮುಂಜಾನೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್ ತಮ್ಮ ತಂಡದೊಂದಿಗೆ ಘಟನೆ ಮರುಸೃಷ್ಟಿಗಾಗಿ ಅತ್ಯಾಚಾರ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲದೆ, ಆತ್ಮರಕ್ಷಣೆಯ ಹೆಸರಿನಲ್ಲಿ ಎನ್​ಕೌಂಟರ್​ ನಡೆಸಿ ನಾಲ್ಕೂ ಜನ ಅತ್ಯಾಚಾರಿಗಳನ್ನು ಹತ್ಯೆ ಮಾಡಿದ್ದರು.

ಹಿರಿಯ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್​ ಅವರ ಈ ಕಾರ್ಯಾಚಾರಣೆ ಸಾರ್ವಜನಿಕ ವಲಯದಲ್ಲಿ ಜನ ಮನ್ನಣೆ ಗಳಿಸಿದ್ದರೂ ಇದರ ಹಿಂದೆ ಸಾಕಷ್ಟು ಕಾನೂನಿನ ತೊಡಕುಗಳಿವೆ. ಈ ಘಟನೆಯನ್ನು ತೆಲಂಗಾಣ ಹೈಕೋರ್ಟ್​ ಉಗ್ರವಾಗಿ ಖಂಡಿಸಿದ್ದು, ಸೋಮವಾರ ತುರ್ತು ವಿಚಾರಣೆ ಘೋಷಿಸಿದೆ. ಅತ್ಯಾಚಾರಿಗಳ ಮೃತದೇಹವನ್ನು ಸಂರಕ್ಷಿಸುವಂತೆ ಪೊಲೀಸರಿಗೆ ತಾಕೀತು ಮಾಡಿದೆ. ಅಲ್ಲದೆ ಎನ್​ಕೌಂಟರ್ ಸಾಚಾತನದ ಬಗ್ಗೆ ತನಿಖೆಗೂ ಆದೇಶಿಸಿದೆ.

 

ತೆಲಂಗಾಣ ಸರ್ಕಾರ ಈ ಪ್ರಕರಣದ ತನಿಖೆಯ ಹೊಣೆಯನ್ನು ಪ್ರಸ್ತುತ ಶಂಶಾಬಾದ್ ನಗರದ ಉಪ ಪೊಲೀಸ್​ ಆಯುಕ್ತ ಪ್ರಕಾಶ್ ರೆಡ್ಡಿಗೆ ವಹಿಸಿದ್ದು, ಶೀಘ್ರದಲ್ಲಿ ಎನ್​ಕೌಂಟರ್ ಕುರಿತ ಸತ್ಯಾಸತ್ಯತೆಗಳು ಹೊರಬೀಳಲಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿಶ್ವನಾಥ್ ಸಜ್ಜನರ್​; 11 ವರ್ಷದಲ್ಲಿ 3 ಎನ್​ಕೌಂಟರ್​, ಒಂದೇ ರೀತಿಯಲ್ಲಿ ಹತ್ಯೆ ಮತ್ತು ವಿವರಣೆ; ಅನುಮಾನಕ್ಕೆ ಕಾರಣವಾದ ನಡೆ
First published: