news18-kannada Updated:June 11, 2020, 11:43 AM IST
ಸಾಂದರ್ಭಿಕ ಚಿತ್ರ
ಜಮ್ಮು(ಜೂ.11): ಜಮ್ಮು -ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಪಥಾನ್ಪೋರ ಹಳ್ಳಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವೆ ಇಂದು ಮುಂಜಾನೆ 2 ಗಂಟೆ ಸಮಯದಲ್ಲಿ ಎನ್ಕೌಂಟರ್ ನಡೆದಿದೆ.
ಸ್ವೀಕೃತ ಮಾಹಿತಿ ಪ್ರಕಾರ, ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಕಾಲ್ಕಿತ್ತಿದ್ದಾರೆ ಎಂದು ತಿಳಿದು ಬಂದಿದೆ. ರಹಸ್ಯ ಸ್ಥಳದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.
IPL 2020: ಐಪಿಎಲ್ ಆರಂಭ ಕುರಿತು ಮಹತ್ವದ ಮಾಹಿತಿ ತಿಳಿಸಿದ ಸೌರವ್ ಗಂಗೂಲಿ
ಈ ವೇಳೆ ಭಾರತೀಯ ಸೇನೆ ಉಗ್ರರ ಕಡೆ ಗುಂಡು ಹಾರಿಸಿದೆ. ಆಗ ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಎನ್ಕೌಂಟರ್ ನಡೆದ ಸ್ಥಳದಲ್ಲಿ ಉಗ್ರರು ಬಿಟ್ಟು ಹೋಗಿದ್ದ ಪಿಸ್ತೂಲ್, ಎಕೆ ರೈಫಲ್ಸ್, ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಾನುವಾರದಿಂದ ಈವರೆಗೆ ಕಾಶ್ಮೀರದಲ್ಲಿ ನಡೆದ ನಾಲ್ಕನೇ ಎನ್ಕೌಂಟರ್ ಇದಾಗಿದೆ. ಈ ಹಿಂದಿನ ಮೂರು ಎನ್ಕೌಂಟರ್ಗಳು ದಕ್ಷಿಣ ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ನಡೆದಿವೆ. ಈ ಎನ್ಕೌಂಟರ್ಗಳಲ್ಲಿ ಒಟ್ಟು 14 ಉಗ್ರರನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾರೆ.
First published:
June 11, 2020, 11:43 AM IST