ಪಠಾಣ್​ಕೋಠ್ ಹೆದ್ದಾರಿಯಲ್ಲಿ ಕಾಶ್ಮೀರಕ್ಕೆ ನುಸುಳಲು ಯತ್ನಿಸಿದ ಉಗ್ರರು; ಭಯೋತ್ಪಾದಕರ ತಂತ್ರವನ್ನು ಸದೆಬಡಿದ ಪೊಲೀಸ್​ ಇಲಾಖೆ

ಈ ಟ್ರಕ್ ಪಂಜಾಬ್​ನ ಪಠಾಣ್​ಕೋಟ್​ ಹೆದ್ದಾರಿ ಮೂಲಕ ಕಾಶ್ಮೀರದ ಕಡೆಗೆ ತೆರಳುತ್ತಿತ್ತು. ಹೀಗಾಗಿ ಈ ಉಗ್ರರು ಪಠಾಣ್​ಕೋಟ್​ ಅಂತಾರಾಷ್ಟ್ರೀಯ ಗಡಿಯಾದ ಬಮ್ಯಲ್ ಮೂಲಕ ಇಲ್ಲಿನ ಸ್ಥಳೀಯ ಸಹಾಯದಿಂದ ದೇಶದೊಳಗೆ ನುಸುಳಿರುವ ಸಾಧ್ಯತೆ ಇದೆ. ಈ ಕುರಿತು ಸಹ ತನಿಖೆ ನಡೆಸಲಾಗುತ್ತಿದೆ ಎಂದು ಜಮ್ಮುವಿನ ಪೊಲೀಸ್​ ಮಹಾ ನಿರ್ದೇಶಕ ಮುಕೇಶ್​ ಸಿಂಗ್ ತಿಳಿಸಿದ್ದಾರೆ.

MAshok Kumar | news18-kannada
Updated:September 12, 2019, 1:38 PM IST
ಪಠಾಣ್​ಕೋಠ್ ಹೆದ್ದಾರಿಯಲ್ಲಿ ಕಾಶ್ಮೀರಕ್ಕೆ ನುಸುಳಲು ಯತ್ನಿಸಿದ ಉಗ್ರರು; ಭಯೋತ್ಪಾದಕರ ತಂತ್ರವನ್ನು ಸದೆಬಡಿದ ಪೊಲೀಸ್​ ಇಲಾಖೆ
ಜಮ್ಮುವಿನಲ್ಲಿ ಉಗ್ರರಿಂದ ವಶಪಡಿಸಿಕೊಳ್ಳಲಾಗಿರುವ ಟ್ರಕ್.
  • Share this:
ಜಮ್ಮು (ಸೆಪ್ಟೆಂಬರ್.12); ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರು ಎಂದು ಶಂಕಿಸಲಾದ ಮೂವರು ವ್ಯಕ್ತಿಗಳನ್ನು ಬಂಧಿಸಿರುವ ಪೊಲೀಸರು ಅವರ ಬಳಿಯಿದ್ದ 6 ಎಕೆ-47 ರೈಫಲ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ದೇಶದ ವಿವಿಧ ಕಡೆಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಇತ್ತೀಚೆಗೆ ಎಲ್ಲಾ ರಾಜ್ಯಗಳ ಗೃಹ ಇಲಾಖೆಗೆ ಸೂಚನೆ ನೀಡಿತ್ತು. ಈ ಸೂಚನೆ ಬೆನ್ನಿಗೆ ಅತಿ ಸೂಕ್ಷ್ಮ ಪ್ರದೇಶವಾದ ಜಮ್ಮು- ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಹೀಗಾಗಿ ಭದ್ರತೆಯ ದೃಷ್ಟಿಯಿಂದ ಪೊಲೀಸರು ಇಂದು ಬೆಳಗ್ಗೆ 8.00 ಗಂಟೆಗೆ ಜಮ್ಮು-ಪಠಾಣ್​ಕೋಟ್​ ಹೆದ್ದಾರಿಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಟ್ರಕ್ ಒಂದನ್ನು ತಡೆಹಿಡಿದಿದ್ದಾರೆ. ಈ ವೇಳೆ ಟ್ರಕ್​ನಲ್ಲಿ ಎಕೆ-47 ಮಾದರಿಯ 6 ರೈಫಲ್​ಗಳು ಪತ್ತೆಯಾಗಿವೆ. ಟ್ರಕ್​ನಲ್ಲಿ ಮೂವರನ್ನು ಭಯೋತ್ಪಾದಕರು ಎಂದು ಸಂಶಯ ವ್ಯಕ್ತಪಡಿಸಲಾಗಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಮ್ಮುವಿನ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್ ತಿಳಿಸಿದ್ದಾರೆ.

"ಈ ಟ್ರಕ್ ಪಂಜಾಬ್​ನ ಪಠಾಣ್​ಕೋಟ್​ ಹೆದ್ದಾರಿ ಮೂಲಕ ಕಾಶ್ಮೀರದ ಕಡೆಗೆ ತೆರಳುತ್ತಿತ್ತು. ಹೀಗಾಗಿ ಈ ಉಗ್ರರು ಪಠಾಣ್​ಕೋಟ್​ ಅಂತಾರಾಷ್ಟ್ರೀಯ ಗಡಿಯಾದ ಬಮ್ಯಲ್ ಮೂಲಕ ಇಲ್ಲಿನ ಸ್ಥಳೀಯ ಸಹಾಯದಿಂದ ದೇಶದೊಳಗೆ ನುಸುಳಿರುವ ಸಾಧ್ಯತೆ ಇದೆ. ಈ ಕುರಿತು ಸಹ ತನಿಖೆ ನಡೆಸಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಆಂಧ್ರದಲ್ಲಿ ಟಿಡಿಪಿ-ವೈಎಸ್​​ಆರ್​​​ ಸಂಘರ್ಷ; ಮುಂದುವರೆದ ಚಂದ್ರಬಾಬು ನಾಯ್ಡು ಗೃಹಬಂಧನ; ಪ್ರಕ್ಷುಬ್ಧ ವಾತಾವರಣ

First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ