ಬಜೆಟ್ ಎಫೆಕ್ಟ್: ನಿಮ್ಮ ಸಂಬಳ ಮತ್ತು ಪಿಎಫ್​ಗೆ ಬೀಳಲಿದೆ ಕತ್ತರಿ

ಏಪ್ರಿಲ್​ನಿಂದ ಜಾರಿಗೆ ಬರಲಿರುವ ವೇಜ್ ಕೋಡ್ ಮತ್ತು ನಿನ್ನೆ ಪ್ರಕಟವಾದ ಬಜೆಟ್ ಎಫೆಕ್ಟ್​ನಿಂದ ತಿಂಗಳ ಸಂಬಳದ ಉದ್ಯೋಗಿಗಳಿಗೆ ಡಬಲ್ ಶಾಕ್ ಕಾದಿದೆ. ಕೈಸೇರುವ ಸಂಬಳ ಹಾಗೂ ಪಿಎಫ್ ಹಣ ಎರಡಕ್ಕೂ ಸಂಚಕಾರ ಬರಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ಸಂಬಳ ನೆಚ್ಚಿ ಜೀವನ ನಡೆಸುವವರಿಗೆ ಡಬಲ್ ಶಾಕ್ ಕಾದಿದೆ. ಕೇಂದ್ರ ಬಜೆಟ್​ನ ಕೆಲ ನಿರ್ಧಾರಗಳು ಹಾಗೂ ಹೊಸದಾಗಿ ಜಾರಿಯಾಗಿರುವ ವೇಜ್ ಕೋಡ್ ನಿಯಮಗಳಿಂದಾಗಿ ಉದ್ಯೋಗಿಯ ಕೈಸೇರುವ ತಿಂಗಳ ಸಂಬಳಕ್ಕೆ ಕತ್ತರಿ ಬೀಳಲಿದೆ. ಹಾಗೆಯೇ, ನಿವೃತ್ತಿ ಪಿಂಚಣಿಯ ಮೊತ್ತವೂ ತುಸು ಕಡಿಮೆಯಾಗಲಿದೆ. ಟ್ಯಾಕ್ಸ್ ಫ್ರೀ ರಿಟರ್ನ್ ಪಡೆಯಲು ಪ್ರಾವಿಡೆಂಟ್ ಫಂಡ್ ಮೇಲೆ ಮಾಡುವ ಹೂಡಿಕೆಗೆ ನಿನ್ನೆಯ ಬಜೆಟ್​ನಲ್ಲಿ 2.5 ಲಕ್ಷ ರೂಗೆ ಮಿತಿ ಹಾಕಲಾಗಿದೆ. ಅಂದರೆ ನಿಮ್ಮ ಪಿಎಫ್ ಖಾತೆಗೆ ಕಂಪನಿಗಳು ಹಾಕುವ ಹಣದ ಮೊತ್ತ ವರ್ಷಕ್ಕೆ 2.5 ಲಕ್ಷಕ್ಕಿಂತ ಹೆಚ್ಚು ಇದ್ದರೆ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ಕಳೆದ ಬಜೆಟ್​ನಲ್ಲಿ ಈ ಮಿತಿ ವರ್ಷಕ್ಕೆ 7.5 ಲಕ್ಷ ರೂ ಎಂದು ನಿಗದಿ ಮಾಡಲಾಗಿತ್ತು. ಈಗ ಈ ಮಿತಿ ಮೀರಿದರೆ ವಿಧಿಸಲಾಗುವ ತೆರಿಗೆಯು ಉದ್ಯೋಗಿಯಿಂದಲೇ ವಸೂಲಿ ಆಗುತ್ತದೆ. ಅಂದರೆ ಪಿಎಫ್ ಹಿಂಪಡೆಯುವಾಗ ಈ ತೆರಿಗೆಯನ್ನ ಕಡಿದುಕೊಳ್ಳಲಾಗುತ್ತದೆ.

  ಇನ್ನು, ಸಂಸತ್​ನ ಅನುಮೋದನೆ ಪಡೆದಿರುವ ವೇತನ ಸಂಹಿತೆ (ವೇಜ್ ಕೋಡ್) ಜಾರಿಗೆ ಬಂದರೆ ಅದೂ ಕೂಡ ಉದ್ಯೋಗಿಗೆ ತುಸು ಹಿನ್ನಡೆ ತರಬಹುದು. ಈ ಕಾಯ್ದೆ ಪ್ರಕಾರ ಕಂಪನಿ ತನ್ನ ಉದ್ಯೋಗಿಗೆ ನೀಡುವ ಸಂಬಳದಲ್ಲಿ ಭತ್ಯೆ ಪ್ರಮಾಣವನ್ನ ಶೇ. 50ಕ್ಕೆ ಮಿತಿಗೊಳಿಸಿದೆ. ಉದ್ಯೋಗಿಗೆ ನೀಡುವ ಪಿಎಫ್ ಪ್ರಮಾಣವನ್ನ ಹೆಚ್ಚಿಸಬೇಕಾಗುತ್ತದೆ. ಹೀಗಾಗಿ, ಅವರ ಸಂಬಳದಿಂದಲೇ ಈ ಹಣವನ್ನ ಕಂಪನಿಗಳು ಕಡಿದುಕೊಳ್ಳುತ್ತವೆ. ಇದರಿಂದ ಉದ್ಯೋಗಿಯ ಕೈ ಸೇರುವ ಸಂಬಳ ಇಳಿಕೆಯಾಗುತ್ತದೆ.

  ಇದನ್ನೂ ಓದಿ: Gold Price: ಬಜೆಟ್ ಘೋಷಣೆ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ದರ ಮತ್ತೆ ಏರಿಕೆ

  ಅತ್ತ, ವರ್ಷಕ್ಕೆ 2.5 ಲಕ್ಷಕ್ಕಿಂತ ಹೆಚ್ಚು ಪಿಎಫ್ ಮೊತ್ತ ಇದ್ದರೆ ಅದಕ್ಕೂ ಸರ್ಕಾರ ತೆರಿಗೆಯ ಕತ್ತರಿ ಹಾಕುತ್ತದೆ. ಇದು ಒಂದು ರೀತಿಯಲ್ಲಿ ಉದ್ಯೋಗಿ ಅಡಕತ್ತರಿಯಲ್ಲಿ ಸಿಕ್ಕ ಸ್ಥಿತಿಯಾಗಿದೆ. ಅತ್ತ ಕೈ ಸೇರುವ ಸಂಬಳವೂ ಕಡಿಮೆ, ಪಿಂಚಣಿ ಹಣವೂ ಕಡಿಮೆ ಆಗುತ್ತದೆ.
  Published by:Vijayasarthy SN
  First published: