news18-kannada Updated:March 5, 2020, 4:13 PM IST
ಇಪಿಎಫ್ ಕಚೇರಿ ಚಿತ್ರ
ನವದೆಹಲಿ(ಮಾ.05): ಕೇಂದ್ರ ಸರ್ಕಾರವು 2019-20ನೇ ಸಾಲಿನ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿಯ ಠೇವಣಿಗೆ ನೀಡಲಾಗುವ ಬಡ್ಡಿ ದರವನ್ನು ಶೇ. 0.15ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ. ಅಂದರೆ ಶೇ.8.65 ರಷ್ಟಿದ್ದ ಬಡ್ಡಿ ದರವನ್ನು ಶೇ. 8.50ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಇಂದು ಲೋಕಸಭೆಯಲ್ಲಿ ಹೇಳಿದ್ದಾರೆ.
ಹೊಸ ಬೆಳವಣಿಗೆಗಳೊಂದಿಗೆ ಇನ್ಮುಂದೆ ಸಂಬಳ ಪಡೆಯುವ ನೌಕರರು ತಮ್ಮ ಇಪಿಎಫ್ ಮೇಲಿನ ಬಡ್ಡಿದರವನ್ನು ಶೇ. 0.15ರಷ್ಟು ಕಡಿಮೆ ಪಡೆಯುತ್ತಾರೆ ಎನ್ನಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಶೇಕಡಾ 8.65ರಷ್ಟು ಇದ್ದ ಪಿಎಫ್ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸುವಂತೆ ಕಾರ್ಮಿಕ ಸಚಿವಾಲಯ ಶಿಫಾರಸು ಮಾಡಿತ್ತು. ಆದಾಗ್ಯೂ ಬಡ್ಡಿದರಗಳನ್ನು ಕಡಿಮೆ ಮಾಡದೇ ಮುಂದುವರೆಸಬಹುದು ಎಂಬ ಚರ್ಚೆ ಕೂಡ ನಡೆದಿತ್ತು. ಆದರೆ ಈಗ ಕೇಂದ್ರ ಇಪಿಎಫ್ ಬಡ್ಡಿ ದರ ಕಡಿತಗೊಳಿಸಿ ನೌಕರರಿಗೆ ಶಾಕ್ ನೀಡಿದೆ. ದೇಶಾದ್ಯಂತ ಸುಮಾರು 6 ಕೋಟಿ ಜನರು ಪಿಎಫ್ ಖಾತೆ ಹೊಂದಿದ್ದಾರೆ.
ಮಾರ್ಚ್ 20ರ ಬೆಳಗ್ಗೆ 5.30ಕ್ಕೆ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ದೆಹಲಿ ನ್ಯಾಯಾಲಯ ಮತ್ತೊಮ್ಮೆ ಆದೇಶ
- 2012-13ನೇ ಹಣಕಾಸು ವರ್ಷದಲ್ಲಿ ಶೇಕಡಾ 8.50ರಷ್ಟು ಇಪಿಎಫ್ ಬಡ್ಡಿದರ ಇತ್ತು.
- 2013-14ನೇ ಹಣಕಾಸು ವರ್ಷದಲ್ಲಿ ಶೇಕಡಾ 8.75 ರಷ್ಟು ಇಪಿಎಫ್ ಬಡ್ಡಿದರ ಇತ್ತು.
- 2014-15ನೇ ಹಣಕಾಸು ವರ್ಷ-ಶೇಕಡಾ 8.75 ರಷ್ಟು ಇಪಿಎಫ್ ಬಡ್ಡಿದರ ಇತ್ತು.
- 2015-16ನೇ ಹಣಕಾಸು ವರ್ಷದಲ್ಲಿ ಶೇ.8.80 ರಷ್ಟು ಇಪಿಎಫ್ ಬಡ್ಡಿದರ ಇತ್ತು.
- 2016-17ನೇ ಹಣಕಾಸು ವರ್ಷದಲ್ಲಿ ಶೇ.8.65 ರಷ್ಟು ಇಪಿಎಫ್ ಬಡ್ಡಿದರ ಇತ್ತು.
- 2017-18ನೇ ಹಣಕಾಸು ವರ್ಷದಲ್ಲಿ ಶೇ.8.55 ರಷ್ಟು ಇಪಿಎಫ್ ಬಡ್ಡಿದರ ಇತ್ತು.
- 2018-19ನೇ ಹಣಕಾಸು ವರ್ಷದಲ್ಲಿ ಶೇ.8.65 ರಷ್ಟು ಇಪಿಎಫ್ ಬಡ್ಡಿದರ ಇತ್ತು.
- 2019-20ನೇ ಹಣಕಾಸು ವರ್ಷ ಅಂದರೆ ಪ್ರಸಕ್ತ ಸಾಲಿನಲ್ಲಿ ಶೇ.8.50ಕ್ಕೆ ಇಪಿಎಫ್ ಬಡ್ಡಿದರವನ್ನು ಕಡಿತಗೊಳಿಸಲಾಗಿದೆ.
Karnataka Budget Updates: ರೈತರ ಪ್ರಗತಿ ಎಂದರೆ ಇದೇನಾ, ಹಸಿರು ಶಾಲು ಹಾಕ್ಕೊಂಡ್ರೆ ರೈತರು ಉದ್ದಾರ ಆಗ್ತಾರ?; ಬಿಎಸ್ವೈ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ
First published:
March 5, 2020, 4:13 PM IST