ಉದ್ಯೋಗಿಗಳಿಗೆ ದೀಪಾವಳಿಗೂ ಮುನ್ನವೇ PF ಮೇಲೆ 8.5% ಬಡ್ಡಿ? EPF ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ?

ಈ ತಿಂಗಳ ಕೊನೆಯಲ್ಲಿ ಸುಮಾರು 6 ಕೋಟಿಗಿಂತ ಹೆಚ್ಚಿನ ಉದ್ಯೋಗಿಗಳು ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಈ ತಿಂಗಳ ಅಂತ್ಯದ ವೇಳೆಗೆ ಈ ಪ್ರಯೋಜವನ್ನು ಪಡೆಯುತ್ತಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2020-21ರ ಆರ್ಥಿಕ ವರ್ಷಕ್ಕಾಗಿ ಭವಿಷ್ಯ ನಿಧಿ ಠೇವಣಿಗಳ ಬಡ್ಡಿಯನ್ನು ಶೀಘ್ರದಲ್ಲೇ ಜಮಾ ಮಾಡುವ ಸಾಧ್ಯತೆಯಿದೆ. ಈ ತಿಂಗಳ ಕೊನೆಯಲ್ಲಿ ಸುಮಾರು 6 ಕೋಟಿಗಿಂತ ಹೆಚ್ಚಿನ ಉದ್ಯೋಗಿಗಳು ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಈ ತಿಂಗಳ ಅಂತ್ಯದ ವೇಳೆಗೆ ಈ ಪ್ರಯೋಜವನ್ನು ಪಡೆಯುತ್ತಾರೆ. ಆರ್ಥಿಕ ವರ್ಷ 2020-21 ಕ್ಕಾಗಿ ನಿವೃತ್ತ ಸಂಸ್ಥೆಯು ಭವಿಷ್ಯ ನಿಧಿ ಡಿಪಾಸಿಟ್‌ಗಳಿಗೆ 8.5% ದಂತೆ ಬಡ್ಡಿ ದರವನ್ನು ಹಾಗೆಯೇ ಇರಿಸಿದ್ದು ಏನೂ ಬದಲಾವಣೆಗಳನ್ನು ನಡೆಸಿಲ್ಲ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಸದಸ್ಯರ ಹೆಚ್ಚಿನ ಹಿಂಪಡಿಯುವಿಕೆಗಳು (ವಿದ್‌ಡ್ರಾಲ್‌ಗಳು) ಹಾಗೂ ಕಡಿಮೆ ಕೊಡುಗೆಯನ್ನು ಆಧರಿಸಿ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ.

  ದೇಶದಲ್ಲಿ ಕೊರೋನ ವೈರಸ್ ಏಕಾಏಕಿ ಹರಡಿರುವ ಹಿನ್ನೆಲೆಯಲ್ಲಿ, EPFO ಕಳೆದ ಮಾರ್ಚ್‌ನಲ್ಲಿ 2019-20 ರ ಬಡ್ಡಿ ದರವನ್ನು ಏಳು ವರ್ಷಗಳ ಕನಿಷ್ಠ ಮಟ್ಟಕ್ಕೆ 8.5% ಗೆಇಳಿಸಿತ್ತು. 2018-19 ರಲ್ಲಿ ಬಡ್ಡಿದರ 8.65% ರಷ್ಟಿತ್ತು. EPFO ತನ್ನ ಚಂದಾದಾರರಿಗೆ 2017-18ಕ್ಕೆ 8.55% ಬಡ್ಡಿದರವನ್ನು ಒದಗಿಸಿದೆ. 2016-17ರಲ್ಲಿ ಬಡ್ಡಿ ದರ 8.65% ರಷ್ಟಿತ್ತು.

  ಎಲ್ಲಾ ಪಾಲುದಾರರಿಗೂ ಸಹಾಯ

  EPFO ಇತ್ತೀಚೆಗೆ ತಾನೇ ತನ್ನ ಸದಸ್ಯರಿಗೆ ನಿವೃತ್ತ ನಿಧಿಯಿಂದ ಹಿಂಪಡೆಯಲಾಗದ (ನಾನ್ ರಿಫಂಡೇಬಲ್) ಮುಂಗಡವಾಗಿ ಪಡೆಯಲು ಅನುಮತಿಸಿತ್ತು. ಮಾರ್ಚ್ 2020 ರಂದು ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (PMGKY) ಅಡಿಯಲ್ಲಿ ವಿಶೇಷ ಒದಗಿಸುವಿಕೆಯನ್ನು ಪರಿಚಯಿಸಿದ್ದು ಇದರಿಂದ EPF ಸದಸ್ಯರು ಮೂರು ತಿಂಗಳ ಮೂಲ ಪಾವತಿ ಹಾಗೂ DA (ತುಟ್ಟಿಭತ್ಯೆ) ಅಥವಾ 75% ದಷ್ಟು ತಮ್ಮ ಭವಿಷ್ಯ ನಿಧಿ ಹಣವನ್ನು ಮುಂಗಡವಾಗಿ ಪಡೆಯಲು ಅನುಮತಿಸುತ್ತದೆ. ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯ ಸಂದರ್ಭದಲ್ಲಿ ತನ್ನ ಚಂದಾದಾರರನ್ನು ಬೆಂಬಲಿಸಲು, EPFO ಈಗ ತನ್ನ ಸದಸ್ಯರಿಗೆ ಮರುಪಾವತಿಸಲಾಗದ ಎರಡನೇ COVID-19 ಅಡ್ವಾನ್ಸ್ ಪಡೆಯಲು ಅವಕಾಶ ನೀಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಸದಸ್ಯರ ಆರ್ಥಿಕ ಅಗತ್ಯವನ್ನು ಈಡೇರಿಸಲು ವಿಶೇಷ ವಿತ್​​ ‌ಡ್ರಾವಲ್ ಅನ್ನು ಮಾರ್ಚ್ 2020 ರಲ್ಲಿ ಪರಿಚಯಿಸಲಾಯಿತು ಎಂದು ಸಚಿವಾಲಯ ತಿಳಿಸಿದೆ. COVID-19 ಸಾಂಕ್ರಾಮಿಕದ ಕಷ್ಟದ ಸಮಯದಲ್ಲಿ, EPFO ತನ್ನ ಎಲ್ಲಾ ಪಾಲುದಾರರಿಗೆ ಸಹಾಯ ಹಸ್ತ ನೀಡಲು ಬದ್ಧವಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

  ಇದನ್ನೂ ಓದಿ: PPF Scheme: 1 ಸಾವಿರ ರೂಪಾಯಿ ಹೂಡಿಕೆಯಿಂದ ₹26 ಲಕ್ಷ ಗಳಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ

  ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು ಹೇಗೆ? 

  1)ಎಸ್‌ಎಮ್‌ಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು: ಸಾರ್ವತ್ರಿಕ ಖಾತೆ ಸಂಖ್ಯೆ (UAN) ಹೊಂದಿರುವ EPFO ಸದಸ್ಯರು, ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ "EPFOHO UAN ENG" ಅನ್ನು 7738299899 ಗೆ ಕಳುಹಿಸಬಹುದು. ಎಸ್ಎಂಎಸ್ ಅನ್ನು ಯಶಸ್ವಿಯಾಗಿ ಕಳುಹಿಸಿದ ನಂತರ, ಬಳಕೆದಾರರು ನಿಮ್ಮ ಪಿಎಫ್ ಖಾತೆ ಬ್ಯಾಲೆನ್ಸ್ ಸೇರಿದಂತೆ ಇಪಿಎಫ್ ಖಾತೆಯ ಮಾಹಿತಿ ಒಳಗೊಂಡಿರುವ ಸಂದೇಶವನ್ನು ಸ್ವೀಕರಿಸುತ್ತಾರೆ. EPFO ಸದಸ್ಯರು SMS ನಲ್ಲಿ ಆದ್ಯತೆಯ ಸಂವಹನದ ಭಾಷೆಯನ್ನು ಹೊಂದಿಸಬೇಕಾಗುತ್ತದೆ.

  2)ಮಿಸ್ ಕಾಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಅಧಿಕೃತ ಫೋನ್‌ಗೆ ಮಿಸ್ ಕಾಲ್ ನೀಡುವ ಮೂಲಕ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ನಿಮ್ಮ KYC ವಿವರಗಳೊಂದಿಗೆ UAN ಅನ್ನು ಸಂಯೋಜಿಸಿದಲ್ಲಿ ಮಾತ್ರ ಈ ಸೇವೆ ಲಭ್ಯವಿರುತ್ತದೆ.
  Published by:Kavya V
  First published: