ಬಸ್ಸು ಹಾಗೂ ರೈಲಿನ ಪ್ರಯಾಣಕ್ಕೆ ಹೋಲಿಸಿದರೆ, ವಿಮಾನ ಪ್ರಯಾಣ ದರ ಕಾಸ್ಟ್ಲಿ. ಯಾವುದೇ ವ್ಯಕ್ತಿಗಾದರೂ ಒಂದು ಬಾರಿಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಆಸೆ ಇರುತ್ತದೆ. ವಿಮಾನ (Flight) ನಿಲ್ದಾಣಗಳೆಂದರೆ ದೇವಸ್ಥಾನಗಳಷ್ಟೇ ಪ್ರಶಾಂತವಾಗಿರುವ ತಾಣವಾಗಿದ್ದು, ವಿಮಾನದ ಒಳಗೆ ಬಹಳ ನಿಶಬ್ಧವಾಗಿರುತ್ತದೆ. ಆದರೆ ಅಂತಹ ವಿಮಾನದಲ್ಲಿ ಇದೀಗ ಊಟದ (Food) ವಿಚಾರವಾಗಿ ಗಗನಸಖಿ (Air hostess) ಹಾಗೂ ಪ್ರಯಾಣಿಕರ (Passenger) ನಡುವೆ ವಾಗ್ವಾದ ನಡೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಂಡಿಗೋದ ( IndiGo) ಇಸ್ತಾನ್ಬುಲ್-ದೆಹಲಿ ವಿಮಾನದಲ್ಲಿ (Istanbul-Delhi flight) ಈ ಘಟನೆ ನಡೆದಿದ್ದು, ಸುಮಾರು 51 ಸೆಕೆಂಡ್ ಇರುವ ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Tempers soaring even mid-air: "I am not your servant"
An @IndiGo6E crew and a passenger on an Istanbul flight to Delhi (a route which is being expanded soon with bigger planes in alliance with @TurkishAirlines ) on 16th December : pic.twitter.com/ZgaYcJ7vGv
— Tarun Shukla (@shukla_tarun) December 21, 2022
ಡಿಸೆಂಬರ್ 19 ರಂದು ಅಚಾನಕ್ ಆಗಿ ಇಸ್ತಾಂಬುಲ್ನಿಂದ ದೆಹಲಿಗೆ ವಿಮಾನವನ್ನು ಬುಕ್ ಮಾಡಿದ್ದೆ. ದೀರ್ಘ ಪ್ರಯಾಣದ ವಿಮಾನವಾದ್ದರಿಂದ ಕೆಲವು ಪ್ರಯಾಣಿಕರು ಊಟದ ಸಮೇತ ಸೀಟು ಕಾಯ್ದಿರಿಸಿದ್ದರು ಗುರುಪ್ರೀತ್ ಸಿಂಗ್ ಹನ್ಸ್ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆಸನವಿಲ್ಲದಿದ್ದರೆ ಕುಳಿತುಕೊಳ್ಳಲು ಆಗುವುದಿಲ್ಲ. ಆದರೆ ಕೆಲ ಮಂದಿ ಆಸನವಿಲ್ಲದಿದ್ದರೂ ಅಡ್ಜೆಸ್ಟ್ ಮಾಡಿಕೊಂಡು ಬಿಡುತ್ತಾರೆ. ಆದರೆ ಊಟದ ವಿಚಾರದಲ್ಲಿ ಎಂದಿಗೂ ಶಾಮೀಲಾಗುವುದಿಲ್ಲ. ಇದೇ ವಿಚಾರವಾಗಿ ಓರ್ವ ವ್ಯಕ್ತಿ, ಗಗನಸಖಿಯೊಂದಿಗೆ ಹೇಗೆ ವರ್ತಿಸಿದನು ಮತ್ತು ಗಗನಸಖಿ ಪ್ರಯಾಣಿಕನೊಂದಿಗೆ ಹೇಗೆ ವರ್ತಿಸಿದಳು ಎಂಬುವುದನ್ನು ನಾನು ನನ್ನ ಕಣ್ಣಾರೆ ನೋಡಿದೆ ಎಂದಿದ್ದಾರೆ.
ಟ್ವೀಟ್ ಮೂಲಕ ಅಭಿಪ್ರಾಯ ಹಂಚಿಕೊಂಡ ಪ್ರಯಾಣಿಕ
ಸಾಮಾನ್ಯವಾಗಿ ವಿಮಾನದಲ್ಲಿ ಏನಿರುತ್ತದೆಯೋ ಅದನ್ನು ಮಹಿಳಾ ಸಿಬ್ಬಂದಿ ನೀಡುತ್ತಾರೆಯೇ ಹೊರತು ಪ್ರತ್ಯೇಕವಾಗಿ ನೀಡಲು ಅವರ ಬಳಿ ಏನು ಇರುವುದಿಲ್ಲ ಮತ್ತು ಪ್ರಯಾಣಿಕ ಇರುವುದು 5 ಸ್ಟಾರ್ ಹೋಟೆಲ್ನಲ್ಲಿ ಅಲ್ಲ ಎಂಬ ಪ್ರಜ್ಞೆ ಇರಬೇಕು.ಅಷ್ಟು ದೂರದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವ ಆಹಾರ ನೀಡಬೇಕು ಎಂಬುವುದನ್ನು ಸಿಬ್ಬಂದಿ ಮೊದಲೇ ಪರಿಶೀಲನೆ ನಡೆಸಿರುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ವೀಡಿಯೋದಲ್ಲಿ ಬಿಸಿಯಾದ ಊಟ ನೀಡಿಲ್ಲ ಎಂದು ಗಲಾಟೆ ಮಾಡಿದ ಪ್ರಯಾಣಿಕನ ಜೊತೆಗೆ ಗಗನಸಖಿ ವಾಗ್ವಾದ ನಡೆಸಿರುವುದನ್ನು ಕಾಣಬಹುದಾಗಿದೆ. ಬಿಸಿ ಊಟ ನೀಡದೇ ಇದ್ದಿದ್ದಕ್ಕೆ ಜೋರು ಧನಿಯಲ್ಲಿ ಗಗನಸಖಿಗೆ ಕೈ ಬೆರಳನ್ನು ತೋರಿಸಿ ವ್ಯಕ್ತಿ ಮಾತನಾಡುವುದನ್ನು ಮತ್ತು ಇದರಿಂದ ನೊಂದುಕೊಂಡು ಮಹಿಳೆ ಅಳುವುದನ್ನು ನೋಡಬಹುದಾಗಿದೆ.
ಊಟಕ್ಕಾಗಿ ಇಷ್ಟೆಲ್ಲ ಮಾತನಾಡಬೇಡಿ ಅಂದ ಗಗನಸಖಿ
ಪ್ರಯಾಣಿಕ “ಎಲ್ಲಮ್ಮ ನನ್ನ ಊಟ," ಎಂದು ಕೇಳಿದಾಗ ತಣ್ಣನೆಯ ಊಟ ತಂದು ಕೈಗೆ ನೀಡಿದ್ದಳು. ಊಟ ಮುಟ್ಟಿ ನೋಡಿದ್ದೇ ತಡ ಪ್ರಯಾಣಿಕ ಗರಂ ಆಗಿ "ಏನು ಇದು, ಇಷ್ಟೊಂದು ತಣ್ಣನೆಯ ಊಟ? ಬಿಟ್ಟಿ ಕೊಡ್ತಿದ್ದೀಯಾ? ಬಿಸಿ ಮಾಡಿಕೊಡು ಎಂದು ದಬಾಯಿಸಿದ್ದಾನೆ.
ಸರ್, ನೀವು ಬುಕ್ ಮಾಡಿರೋದು ಎಕನಾಮಿ ಕ್ಲಾಸ್ ವಿಮಾನ
ಆಗ ಗಗನಸಖಿ ಅಯ್ಯೋ ಸರ್, ನೀವು ಬುಕ್ ಮಾಡಿರುವುದು ಎಕಾನಮಿ ಕ್ಲಾಸ್ ವಿಮಾನ. ಬಿಸಿ ಮಾಡುವುದಕ್ಕೆ ಓವನ್ ಇಲ್ಲ. ಊಟಕ್ಕಾಗಿ ಇಷ್ಟೆಲ್ಲಾ ಮಾತನಾಡಬೇಡಿ ಎಂದು ಹೇಳಿದ್ದಾಳೆ. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕ ಇನ್ನೂ ನಾಲ್ವರು ಸಹಪ್ರಯಾಣಿಕರ ಜೊತೆ ಸೇರಿಕೊಂಡು ಗಗನಸಖಿಗೆ "ಸೇವಕಿ ನೀನು. ಹೇಳಿದಷ್ಟು ಕೇಳು ಎಂದು ದಬಾಯಿಸಿದ್ದಾನೆ. ಈ ವೇಳೆ ಗಗನಸಖಿ ಗಳಗಳನೇ ಅಳಲು ಆರಂಭಿಸಿದ್ದಾಳೆ.
ಇದನ್ನೂ ಓದಿ: Bomb Threat: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ, 20 ವರ್ಷದ ಯುವಕ ಅರೆಸ್ಟ್
ವಿಮಾನದಲ್ಲಿ ಕೆಲಸ ಮಾಡೋರು ನಿಮ್ಮ ಸೇವಕರಲ್ಲ
ನಂತರ ನಾಲ್ವರು ಸಿಬ್ಬಂದಿ ಬಂದು ಮಹಿಳೆಯನ್ನು ಸಮಾಧಾನಪಡಿಸಿ, ನೀವು ಅವಳಿಗೆ ಬೆರಳು ಮಾಡಿ ತೋರಿಸಿ, ಕಿರುಚಾಡಿದ್ದಕ್ಕೆ ಆಕೆ ಅಳುತ್ತಿದ್ದಾಳೆ. ದಯವಿಟ್ಟು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ನಾವು ವಿಮಾನದಲ್ಲಿ ಕೆಲಸ ಮಾಡುವ ಉದ್ಯೋಗಿಗಳೇ ಹೊರತು, ನಿಮ್ಮ ಸೇವಕರಲ್ಲ ಎಂದು ಕಿಡಿಕಾರಿದ್ದಾರೆ. ಕೊನೆಗೆ ಈ ಕಿತ್ತಾಟದಿಂದ ಪೈಲಟ್ಗೂ ಪ್ರಾಬ್ಲಮ್ ಆಗಬಹುದು ಎಂದು ಭಾವಿಸಿದ ಹಿರಿಯ ಸಿಬ್ಬಂದಿಯೊಬ್ಬರು ಮಧ್ಯ ಪ್ರವೇಶಿಸಿ ಎಲ್ಲರನ್ನೂ ಸಮಾಧಾನಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ