Union Budget 2023: ಕೆವೈಸಿ ಪ್ರಕ್ರಿಯೆ ಸರಳೀಕರಣಕ್ಕೆ ಒತ್ತು! ಡಿಜಿಟಲ್​ ವ್ಯವಸ್ಥೆ ಇನ್ನಷ್ಟು ಸುಲಭ

ಪ್ಯಾನ್​ಕಾರ್ಡ್​​

ಪ್ಯಾನ್​ಕಾರ್ಡ್​​

ಇದೀಗ ದೇಶದ ಬಜೆಟ್​ ಮಂಡನೆ 2023ರ ಪ್ರಕ್ರಿಯೆ ನಡೆಯುತ್ತಿದ್ದು, ಈ ಮಂಡನೆಯಲ್ಲಿ ಡಿಜಿಟಲ್ ವ್ಯವಸ್ಥೆ ಇನ್ನಷ್ಟು ಸುಲಭವಾಗುವಂತೆ ಮಾಡಲು ಎಲ್ಲಾ ಡಿಜಿಟಲ್​ ಡೇಟಾಗಳನ್ನು ಒಂದೇ ಫೈಲ್​ನಲ್ಲಿ ಸಿಗುವಂತೆ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕಾಗಿ ಇನ್ಮುಂದೆ ಪ್ಯಾನ್​ ಕಾರ್ಡ್​ ಮೂಲಕವೇ ಕೆವೈಸಿ ಪ್ರಕ್ರಿಯೆ ಸರಳೀಕರಣಕ್ಕೆ ಒತ್ತು ನೀಡಲಾಗುತ್ತಿದೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Delhi, India
  • Share this:

    ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಈ ವರ್ಷದ ಕೇಂದ್ರದ ಬಜೆಟ್​ ಮಂಡನೆಯನ್ನು ಮಾಡಿದರು ಈ ಮಂಡನೆಯಲ್ಲಿ  ಶಿಕ್ಷಣ ವಲಯ, ಪ್ರವಾಸೋದ್ಯಮ ವಲಯ, ಕೃಷಿ ವಲಯ (Agriculture), ಉದ್ಯೋಗ (Jobs), ಬ್ಯಾಂಕಿಂಗ್ ವಲಯ ಸೇರಿದಂತೆ ತಂತ್ರಜ್ಞಾನ ವಲಯಕ್ಕೂ ಮಹತ್ತರ ಕೊಡುಗೆಗಳನ್ನು ಘೋಷಣೆ ಈ ಬಾರಿಯ ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ. ವಿಶೇಷವಾಗಿ ಈ ವರ್ಷ ಡಿಜಿಟಲ್​ ಕ್ಷೇತ್ರಕ್ಕೆ (Digital) ಹೆಚ್ಚು ಒತ್ತು ನೀಡಿರುವುದನ್ನು ಕಾಣಬಹುದಾಗಿದೆ. ಅದೇ ರೀತಿ ಆರ್ಥಿಕತೆಯ ಬಗ್ಗೆಯೂ ಹೆಚ್ಚು ಒತ್ತನ್ನು ನೀಡಿದ್ದಾರೆ.


    ಕೆವೈಸಿ ಸರಳೀಕರಣಕ್ಕೆ ಒತ್ತು


    ಇದೀಗ ದೇಶದ ಸಾಮಾನ್ಯ ಬಜೆಟ್​ ಮಂಡನೆ ಪ್ರಕ್ರಿಯೆ ನಡೆಯುತ್ತಿದ್ದು, ಈ ಬಜೆಟ್​ನಲ್ಲಿ ಕೆವೈಸಿ ಪ್ರಕ್ರಿಯೆಯನ್ನು ಇನ್ನೂ ಸರಳವಾಗಿ ಕಾರ್ಯ ನಿರ್ವಹಿಸಲು ಪ್ಯಾನ್​ ಮೂಲಕವೇ ಸಾಧ್ಯವಾಗುವಂತೆ ಮಾಡುವುದಾಗಿ ಘೋಷಿಸಿದ್ದಾರೆ. ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಇನ್ನುಮುಂದೆ ಪ್ಯಾನ್ ಅನ್ನು ಗುರುತಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ ಹೇಳಿದರು.




    ಮುಂದಿನ ದಿನಗಳಲ್ಲಿ ಏಕೀಕೃತ ಫೈಲಿಂಗ್ ಪ್ರಕ್ರಿಯೆಯನ್ನು ಸೆಟಪ್ ಮಾಡಲಾಗುತ್ತದೆ. ಇನ್ನು ಒಂದೇ ಪೋರ್ಟಲ್ ಮೂಲಕ ಎಲ್ಲಾ ಡೇಟಾಗಳು ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.


    ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಹೆಚ್ಚಳ


    ಇದೀಗ ಭಾರತದಲ್ಲಿ ಮೊಬೈಲ್​ ಫೋನ್​ಗಳ ಉತ್ಪಾದನೆಯನ್ನು ಹೆಚ್ಚಳ ಮಾಡುವುದಾಗಿ ಈ ಬಾರಿಯ ಯೂನಿಯನ್ ಬಜೆಟ್​ 2023ರ ಬಜೆಟ್​ ಮಂಡನೆಯಲ್ಲಿ ತಿಳಿಸಿದ್ದಾರೆ. ಆದರೆ ಈ ಮಧ್ಯೆ ಮೊಬೈಲ್​ ಫೋನ್​, ಕ್ಯಾಮೆರಾ ಲೆನ್ಸ್​ ಆಮದು ಸುಂಕದಲ್ಲಿ ಬೆಲೆಯನ್ನು ಇಳಿಕೆ ಮಾಡಿದೆ. ಜೊತೆಗೆ ಎಲೆಕ್ಟ್ರಿಕ್​ ವಾಹನಗಳ ಬ್ಯಾಟರಿ ಆಮದು ಮಾಡಿಕೊಳ್ಳುವವರಿಗೂ ಗುಡ್​ನ್ಯೂಸ್ ಅನ್ನು ನೀಡಿದೆ. ಅದೇನೆಂದರೆ ಬ್ಯಾಟರಿನ್ನು ಆಮದು ಮಾಡಿಕೊಳ್ಳುವವರಿಗೂ ಆಮದು ಸುಂಕದಲ್ಲೂ ಬೆಲೆ ಇಳಿಕೆ ಮಾಡಿದೆ.


    ಡಿಜಿಟಲ್ ಮೂಲಕ ಪ್ರವಾಸೋದ್ಯಮ ವಲಯಕ್ಕೆ ಪ್ರೋತ್ಸಾಹ


    ಇನ್ನು ಈ ವರ್ಷದಲ್ಲಿ ಪ್ರವಾಸೋದ್ಯಮ ವಲಯವನ್ನು ಬಹಳಷ್ಟು ಅಭಿವೃದ್ಧಿ ಮಾಡುವ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ದೇಖೋ ಅಪ್ನಾ ದೇಶ‘ ಎಂಬ ಯೋಜನೆಯನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಇನ್ನು ಪ್ರವಾಸೋದ್ಯಮ ವಲಯವನ್ನು ಡಿಜಿಟಲೈಸ್​ ಮಾಡುವುದರ ಬಗ್ಗೆ ಘೋಷಣೆ ಮಾಡಿದ್ದಾರೆ ಜೊತೆಗೆ ಇದಕ್ಕೆ ಸಂಬಂಧಿಸದಂತೆ ಸರ್ಕಾರಿ ಅಪ್ಲಿಕೇಶನ್ ಒಂದನ್ನು ರಚಿಸಲಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರವಾಸಿಗರಿಗೆ ಇನ್ನು ಮುಂದಿನ ದಿನಗಳಲ್ಲಿ ಬಹಳಷ್ಟು ಸಹಕಾರಿಯಾಗುತ್ತದೆ.


    ಇದೇ ಮೊದಲ ಬಾರಿಗೆ ಬಜೆಟ್​ನಲ್ಲಿ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆ


    ಇದೇ ಮೊದಲ ಬಾರಿ ಕೇಂದ್ರ ಬಜೆಟ್​ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ದೇಶದ ವೈವಿಧ್ಯಮಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗಮನಿಸಿದರೆ ಭಾರತವು ಪ್ರವಾಸೋದ್ಯಮದಲ್ಲಿ ದೊಡ್ಡ ಹೆಸರನ್ನು ಹೊಂದಿದೆ. ಹೀಗಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇಂಡಿಯನ್ ಹೋಟೆಲ್‌ಗಳು, EIH ಮತ್ತು ಲೆಮನ್ ಟ್ರೀ ಹೋಟೆಲ್‌ಗಳು ಸೇರಿದಂತೆ ಹೋಟೆಲ್ ಕಂಪನಿಗಳತ್ತ ಸರ್ಕಾರ ಗಮನ ಹರಿಸಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರವಾಗಿದೆ.


    ಗ್ಯಾಜೆಟ್ಸ್​ಗಳ ಬೆಲೆ ಇಳಿಕೆ


    ಗ್ಯಾಜೆಟ್‌ಗಳ ಆಮದು ಸುಂಕದ ಬೆಲೆಯನ್ನು ಈ ಬಾರಿ ಬಜೆಟ್​ನಲ್ಲಿ 21 ರಿಂದ 12 ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಲಾಗಿದೆ. ಇದಲ್ಲದೆ ಮೊಬೈಲ್‌, ಸ್ಮಾರ್ಟ್‌ ಟಿವಿ, ಕ್ಯಾಮೆರಾ ಲೆನ್ಸ್‌, ಲಿಥೀಯಮ್‌ ಬ್ಯಾಟರಿ, ಟಿವಿ ಪ್ಯಾನೆಲ್, ಮೊಬೈಲ್​​ ಟೂಲ್ಸ್​​ಗಳ ಆಮದು ಸುಂಕದ ಬೆಲೆಯನ್ನು ಇಳಿಕೆ ಮಾಡುವುದಾಗಿ ತಿಳಿಸಿದ್ದಾರೆ.


    ಇದನ್ನೂ ಓದಿ: 2047ರ ವೇಳೆಗೆ ರಕ್ತಹೀನತೆಯನ್ನು ತೊಡೆದುಹಾಕಲು ಮಿಷನ್; ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?


    ಡಿಜಿಟಲ್​ ಪೇಮೆಂಟ್​ಗೆ ಪ್ರೋತ್ಸಾಹ


    ಡಿಜಿಟಲ್ ಪೇಮೆಂಟ್​ ಮಾಡುವವರಿಗೆ ಭಾರೀ ಉತ್ತೇಜನ ನೀಡುವುದಾಗಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಯುಪಿಐ ಪೇಮೆಂಟ್‌ ದೇಶದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳಲಿದೆ. ಹಾಗೆಯೇ ಬ್ಯಾಂಕ್‌ ಖಾತೆಗಳ ಬಡ್ಡಿ ದರಗಳಲ್ಲಿ ಇನ್ನಷ್ಟು ಹೆಚ್ಚಳವಾಗುತ್ತದೆ ಎಂದು ಘೋಷಿಸಿದ್ದಾರೆ.

    Published by:Prajwal B
    First published: