Co- Education: ಕೋ-ಎಡ್ ಪದ್ಧತಿಗೆ ಒತ್ತು: ಇನ್ಮುಂದೆ ಕೇರಳದಲ್ಲಿ ಬಾಲಕ, ಬಾಲಕಿಯರ ಪ್ರತ್ಯೇಕ ಶಾಲೆಗಳು ಕ್ಲೋಸ್

"ರಾಜ್ಯದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗಾಗಿ ಇರುವ ವಿಶೇಷ ಶಾಲೆಗಳನ್ನು ನಿಲ್ಲಿಸಲು ಮತ್ತು 2023-24ನೇ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳಲ್ಲಿ ಸಹ-ಶಿಕ್ಷಣವನ್ನು ಜಾರಿಗೆ ತರಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು" ಎಂದು ಆಯೋಗ ತಿಳಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ತಿರುವನಂತಪುರಂ(ಜು.29): ಕೇರಳದಲ್ಲಿ (Kerala) ಶೀಘ್ರವೇ ಬಾಲಕಿಯರ ಮತ್ತು ಬಾಲಕರ ಪ್ರತ್ಯೇಕ ಶಾಲೆಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಮುಂದಿನ ಶೈಕ್ಷಣಿಕ ವರ್ಷದೊಳಗೆ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು (Education Trust) ಮಿಶ್ರ ಶಾಲೆಗಳನ್ನಾಗಿ ಪರಿವರ್ತಿಸಲು ರಾಜ್ಯ ಮಕ್ಕಳ ಹಕ್ಕುಗಳ ಸಮಿತಿಯು (State Child Rights Committee) ಒಂದು ಮಹತ್ವದ ಆದೇಶ ನೀಡಿದೆ. 2023- 24ನೇ ಶೈಕ್ಷಣಿಕ ವರ್ಷದಿಂದ ಕೇರಳದಲ್ಲಿ ಬಾಲಕರು (Boys) ಮತ್ತು ಬಾಲಕಿಯರಿಗಾಗಿಯೇ (Girls) ಇರುವ ಶಾಲೆಗಳನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಮೂಲಕ ಇನ್ನು ಮುಂದೆ ಕೇರಳದಲ್ಲಿ ಕೇವಲ ಬಾಲಕಿಯರ ಶಾಲೆ (School) ಅಥವಾ ಬಾಲಕರಿಗೆ ಮಾತ್ರ ಮೀಸಲಿಟ್ಟ ಶಾಲೆಗಳು ಇರುವುದಿಲ್ಲ.

"ರಾಜ್ಯದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗಾಗಿ ಇರುವ ವಿಶೇಷ ಶಾಲೆಗಳನ್ನು ನಿಲ್ಲಿಸಲು ಮತ್ತು 2023-24ನೇ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳಲ್ಲಿ ಸಹ-ಶಿಕ್ಷಣವನ್ನು ಜಾರಿಗೆ ತರಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು" ಎಂದು ಆಯೋಗ ತಿಳಿಸಿದೆ.

ಕೋ-ಎಡ್ ಶಿಕ್ಷಣ ಜಾರಿಗೆ ಆದೇಶ
ಈ ಎಲ್ಲಾ ಶಾಲೆಗಳನ್ನು ಬಾಲಕ ಬಾಲಕಿಯರು ಒಟ್ಟಾಗಿ ಕಲಿಯುವ ಸಹ ಶಿಕ್ಷಣ ನೀಡುವ ಮಿಶ್ರ ಶಾಲೆ (ಕೋ-ಎಡ್) ಗಳಾಗಿ ಪರಿವರ್ತಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವ್ಯಕ್ತಿಯೊಬ್ಬರು ಸಲ್ಲಿಸಿದ ಮನವಿಯನ್ನು ಆಧರಿಸಿ, ಸಮಿತಿಯು ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಪ್ರಧಾನ ಕಾರ್ಯದರ್ಶಿ (ಸಾಮಾನ್ಯ ಶಿಕ್ಷಣ) ಮತ್ತು ಸಾರ್ವಜನಿಕ ಶಿಕ್ಷಣ ಮತ್ತು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಸ್‌ಸಿಇಆರ್‌ಟಿ) ನಿರ್ದೇಶಕರಿಗೆ ಆದೇಶಿಸಿದೆ.

ಆದೇಶದಂತೆ ಸಹಶಿಕ್ಷಣ ಪದ್ಧತಿ ಜಾರಿ ಕುರಿತು 90 ದಿನಗಳೊಳಗೆ ಆಯೋಗಕ್ಕೆ ವಿವರವಾದ ವರದಿ ಸಲ್ಲಿಸುವಂತೆ ಕೇಳಿಕೊಂಡಿದೆ. ಕೊಲ್ಲಂ ಜಿಲ್ಲೆಯ ಆಂಚಲ್‌ನ ಡಾ. ಐಸಾಕ್ ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಆಯೋಗ ಈ ಆದೇಶ ನೀಡಿದೆ. ವಿಶೇಷ ಶಾಲೆಗಳಲ್ಲಿ ಲಿಂಗ ಸಮಾನತೆಯನ್ನು ನಿರಾಕರಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಇದನ್ನೂ ಓದಿ: Droupadi Murmu: ವಿಡಿಯೋ ನೋಡಿ; ಯಕ್ಷಗಾನ ಶೈಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅಭಿನಂದನೆ

ಆಯೋಗವು ಅರ್ಜಿದಾರರ ವಾದದಲ್ಲಿ ಅರ್ಹತೆಯನ್ನು ಕಂಡುಕೊಂಡಿದ್ದು, ಕೇರಳದಲ್ಲಿ ಇನ್ನೂ ಬಾಲಕ ಮತ್ತು ಬಾಲಕಿಯರಿಗಾಗಿ ವಿಶೇಷ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದು ಕುತೂಹಲ ಮೂಡಿಸಿದೆ ಎಂದು ಆಯೋಗದ ಸದಸ್ಯ ರೆನಿ ಆಂಟೋನಿ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಸಹ-ಶಿಕ್ಷಣದ ಜೊತೆಗೆ ಮೂಲಸೌಕರ್ಯಗಳ ಬಗ್ಗೆ ಗಮನಹರಿಸಲು ಸೂಚನೆ
ಸಹ-ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವುದರ ಜೊತೆಗೆ, ಅಂತಹ ಶಾಲೆಗಳಲ್ಲಿ ಭೌತಿಕ ಪರಿಸ್ಥಿತಿಗಳು ಮತ್ತು ಶೌಚಾಲಯಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸುಧಾರಿಸಬೇಕು ಮತ್ತು ಸಹ ಶಿಕ್ಷಣದ ಅಗತ್ಯತೆಯ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಸಕ್ತ ಸಾಮಾಜಿಕ ಸನ್ನಿವೇಶದಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಶಾಲೆಗಳಲ್ಲಿ ಕಲಿಸುವ ಅಗತ್ಯವಿಲ್ಲ. ಇದಲ್ಲದೇ, ಅಂತಹ ಶಾಲೆಗಳ ಅಸ್ತಿತ್ವವನ್ನು ಮುಂದುವರಿದ ಶಿಕ್ಷಣ ಮತ್ತು ಮಾನಸಿಕ ಸಿದ್ಧಾಂತಗಳಿಂದ ದೂರವಿಡುವಂತೆ ಮಾತ್ರ ಕಾಣಬಹುದು. ಅಂತಹ ಶಾಲೆಗಳು ಅಸ್ತಿತ್ವದಲ್ಲಿರಲು ಯಾವುದೇ ಸಮರ್ಥನೆ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದೊಂದು ಅವೈಜ್ಞಾನಿಕ ಅಭ್ಯಾಸ ಕ್ರಮವಾಗಿದ್ದು, ಈ ಪದ್ಧತಿಯನ್ನು ಕೊನೆಗಾಣಿಸಲು ಸರಕಾರ ಹಿಂಜರಿಯಬಾರದು ಎಂದು ಸಾಮಾನ್ಯ ಶಿಕ್ಷಣ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಹೇಳಿದ್ದೇನು?
ಪಾಲಕ-ಶಿಕ್ಷಕರ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆಗಳ ವಸ್ತುಸ್ಥಿತಿಯನ್ನು ನಿರ್ಣಯಿಸಿದ ನಂತರವೇ ಇಂತಹ ಪರಿವರ್ತನೆ ಸಾಧ್ಯ ಎನ್ನಲಾಗಿದೆ. ವಿಶೇಷ ಶಾಲೆಗಳನ್ನು ಸಹ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವುದು ಸರ್ಕಾರದ ನೀತಿಯಾಗಿದೆ ಎಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಕೂಡ ಹೇಳಿದ್ದರು. ಎರಡನೇ ಪಿಣರಾಯಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 11 ವಿಶೇಷ ಶಾಲೆಗಳನ್ನು ಸಹ ಶಿಕ್ಷಣ ನೀಡುವ ಶಾಲೆಗಳಾಗಿ ಪರಿವರ್ತಿಸಲಾಗಿದೆ. ಹೆಚ್ಚಿನ ಶಾಲಾ ಅಧಿಕಾರಿಗಳು, ಪಿಟಿಎಗಳು ಮತ್ತು ಸ್ಥಳೀಯ ಸಂಸ್ಥೆಗಳು ಇದೇ ರೀತಿಯ ಬೇಡಿಕೆಗಳನ್ನು ಮುಂದಿಟ್ಟರೆ ಹೆಚ್ಚಿನ ಶಾಲೆಗಳನ್ನು ಪರಿವರ್ತಿಸಲಾಗುವುದು ಎಂದು ಅವರು ಜುಲೈ 4ರಂದು ವಿಧಾನಸಭೆಗೆ ತಿಳಿಸಿದ್ದರು.

ಇದನ್ನೂ ಓದಿ:  Heart Warming Video: ಮಳೆಯಲ್ಲಿ ಪುಟ್ಟ ತಂಗಿಯನ್ನು ಬೆನ್ನ ಮೇಲೆ ಹೊತ್ತು ಸಾಗಿದ ಬಾಲಕ - ವಿಡಿಯೋ ನೋಡಿ

ಅಂಕಿ-ಅಂಶಗಳ ಪ್ರಕಾರ, ಕೇರಳದಲ್ಲಿ ಸರ್ಕಾರಿ ಮತ್ತು ಅನುದಾನಿತ ವಲಯಗಳಲ್ಲಿ ಒಟ್ಟು 280 ಬಾಲಕಿಯರ ಶಾಲೆಗಳು ಮತ್ತು 164 ಬಾಲಕರ ಶಾಲೆಗಳಿವೆ.
Published by:Ashwini Prabhu
First published: