ಚಂಡೀಗಢ: ಭಾರತೀಯ ಸೇನಾ ಪಡೆಯ ಚೇತಕ್ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಇತ್ತೀಚೆಗೆ ಭಾರತೀಯ ಸೇನಾ ಪಡೆಯ ಯುದ್ಧ ವಿಮಾನಗಳು ಹೀಗೆಯೇ ತುರ್ತು ಭೂಸ್ಪರ್ಶ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ರಾಜಸ್ತಾನ, ಪಂಜಾಬ್, ಗುಜರಾತ್‍ ಸೇರಿದಂತೆ ಹಲವೆಡೆ ತಾಂತ್ರಿಕ ದೋಷದ ಕಾರಣದಿಂದಲೇ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರೆ ಅತಿಶಯೋಕ್ತಿಯಾಗಲಾರದು.

ಚೇತಕ್​​ ಹೆಲಿಕಾಪ್ಟರ್​​

ಚೇತಕ್​​ ಹೆಲಿಕಾಪ್ಟರ್​​

 • Share this:
  ನವದೆಹಲಿ(ಫೆ.13): ಭಾರತೀಯ ಸೇನಾ ಪಡೆಯ ಚೇತಕ್​​​​​​​​ ಹೆಲಿಕಾಪ್ಟರ್​​​ವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ. ಪಂಜಾಬ್‍ನ ಚಂಡೀಗಢದ ರೂಪ್‍ನಗರದಲ್ಲಿ ಬೆಳಗ್ಗೆ 11.30ರ ವೇಳೆಗೆ ಎಂಜಿನ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಕಾರಣ ಚೇತಕ್​​ ಹೆಲಿಕಾಪ್ಪಟರ್​​​​​​ ತುರ್ತು ಭೂಸ್ಪರ್ಶ ಮಾಡಲಾಗಿದೆ ಎನ್ನುತ್ತಿವೆ ಮೂಲಗಳು.

  ಇನ್ನು, ಅದೃಷ್ಟವಶಾತ್​​ ಸೇನಾ ಪಡೆಯ ಚೇತಕ್​​​ ಹೆಲಿಕಾಪ್ಟರ್​​​ನಲ್ಲಿದ್ದ ಪೈಲಟ್ ಸೇರಿಂದತೆ ಮೂವರು ಸಿಬ್ಬಂದಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೂವರು ಸಿಬ್ಬಂದಿಯೂ ಸುರಕ್ಷಿತವಾಗಿದ್ಧಾರೆ ಎನ್ನಲಾಗುತ್ತಿದೆ.

  ಚಂಡೀಗಢದ ರೂಪ್​​ನಗರ ಸಮೀಪದ ಬನ್ ಮರ್ಜಾ ಗ್ರಾಮದ ರಸ್ತೆ ಬದಿಯ ಹೊಲದಲ್ಲಿ ಹೆಲಿಕಾಪ್ಟರ್​​​​ ದಿಢೀರ್​​​ ಕೆಳಗಿಳಿದಿದೆ. ಈ ಕೂಡಲೇ ಅಲ್ಲಿಯೇ ಸ್ಥಳದಲ್ಲಿದ್ದ ಗ್ರಾಮಸ್ಥರು ನೆರವಿಗೆ ಧಾವಿಸಿ ಹೆಲಿಕಾಪ್ಟರ್​​ನಲ್ಲಿದ್ದ ಮೂವರು ಸಿಬ್ಬಂದಿಯನ್ನು ಹೊರಗೆ ಎಳೆದಿದ್ಧಾರೆ.

  ಇದನ್ನೂ ಓದಿ: ದೆಹಲಿ ಫಲಿತಾಂಶ: ಆಪ್​​ ಗೆಲುವು ಸಂಭ್ರಮಿಸಿದ ಹಿರಿಯ ಕಾಂಗ್ರೆಸ್ಸಿಗರು; ಕೈ ಪಾಳಯದಲ್ಲಿ ಬಂಡಾಯ

  ಇತ್ತೀಚೆಗೆ ಭಾರತೀಯ ಸೇನಾ ಪಡೆಯ ಯುದ್ಧ ವಿಮಾನಗಳು ಹೀಗೆಯೇ ತುರ್ತು ಭೂಸ್ಪರ್ಶ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ರಾಜಸ್ತಾನ, ಪಂಜಾಬ್, ಗುಜರಾತ್‍ ಸೇರಿದಂತೆ ಹಲವೆಡೆ ತಾಂತ್ರಿಕ ದೋಷದ ಕಾರಣದಿಂದಲೇ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರೆ ಅತಿಶಯೋಕ್ತಿಯಾಗಲಾರದು.
  First published: