Farmers Protest: ಸಿನಿಮಾ ತಾರೆಯರು, ಕ್ರಿಕೆಟಿಗರ ಟ್ವೀಟ್​ಗಳಿಂದ ಅಸಾಂವಿಧಾನಿಕ ನಡೆಯನ್ನು ಸರಿಗಟ್ಟಲಾಗಲ್ಲ; ಶಶಿ ತರೂರ್​!

ಖ್ಯಾತ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್​, ರವಿಶಾಸ್ತ್ರಿ ಸಿನಿ ತಾರೆಯರಾದ ಅಕ್ಷಯ್​ ಕುಮಾರ್​, ಕಂಗನಾ ರಣಾವತ್​ ಸೇರಿದಂತೆ ಅನೇಕರು ಟ್ವೀಟ್​ ಮಾಡುವ ಮೂಲಕ ನಮ್ಮ ದೇಶದ ಆಂತರಿಕ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ವಿದೇಶಿಗರ ವಿರುದ್ಧ ಕಿಡಿಕಾರಿದ್ದರು.

ಶಶಿ ತರೂರ್​.

ಶಶಿ ತರೂರ್​.

 • Share this:
  ನವದೆಹಲಿ: "ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ಭಾರತದಾದ್ಯಂತ ರೈತರು ಹೋರಾಟ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಹೋರಾಟದ ಕಾವು ದಿನಿದಂದ ದಿನಕ್ಕೆ ಏರುತ್ತಲೇ ಇದೆ. ಈ ನಡುವೆ ಇಡೀ ಅಂತಾರಾಷ್ಟ್ರೀಯ ಸಮುದಾಯ ಭಾರತದ ಕಡೆ ನೋಡುತ್ತಿದ್ದು, ಭಾರತದ ಗೌರವಕ್ಕೆ ಅಂತಾರಾಷ್ಟ್ರೀಯ ಮಟ್ಟದದಲ್ಲಿ ಹಾನಿಯಾಗಿದೆ. ಆದರೆ, ಈ ಗೌರವ ಹಾನಿಯನ್ನು ಕ್ರಿಕೆಟಿಗರು ಹಾಗೂ ಸಿನಿ ತಾರೆಯರ ಟ್ವೀಟ್​ಗಳಿಂದ ಸರಿಗಟ್ಟಲು ಸಾಧ್ಯವಿಲ್ಲ" ಎಂದು ಸಂಸದ ಮಾಜಿ ಕೇಂದ್ರ ಸಚಿವ ಶಶಿ ತರೂರ್​ ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಹಲವಾರು ಸೆಲೆಬ್ರಿಟಿಗಳು ಬೆಂಬಲ ಸೂಚಿಸುತ್ತಿದ್ದಾರೆ. ಆದರೆ, ಈ ಬೆಂಬಲವೇ ಇದೀಗ ಭಾರತದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.  ಬುಧವಾರ ಟ್ವೀಟ್​ ಮಾಡುವ ಮೂಲಕ ತನ್ನ ಅಭಿಪ್ರಾಯವನ್ನು ಹೊರ ಹಾಕಿದ್ದ ಅಮೆರಿಕದ ಖ್ಯಾತ ಪಾಪ್ ಗಾಯಕಿ ರಿಹಾನ್ನಾ, "ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಕುರಿತು ನಾವು ಏಕೆ ಮಾತನಾಡುತ್ತಿಲ್ಲ" ಎಂದು ಪ್ರಶ್ನಿಸಿದ್ದರು. ಇನ್ನೂ ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್​ ಸಹ ದೆಹಲಿ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

  ಇದನ್ನೂ ಓದಿ: Farmers Protest: ದೇಶದ ರೈತ ಹೋರಾಟವನ್ನು ನಟ-ನಟಿಯರು ಕಲಾವಿದರು, ಸಾಹಿತಿಗಳು ಬೆಂಬಲಿಸಬೇಕು; ಸಿದ್ದರಾಮಯ್ಯ ಕರೆ

  ಆದರೆ, ರಿಹಾನ್ನಾ ಮತ್ತು ಗ್ರೇಟಾ ಥನ್ಬರ್ಗ್​ ಟೀಟ್ ಮಾಡುತ್ತಿದ್ದಂತೆ ಭಾರತದ ಅನೇಕ ಕ್ರೀಡಾಪಟುಗಳು ಹಾಗೂ ಸಿನಿ ತಾರೆಯರು ಎಚ್ಚರಾಗಿದ್ದರು. ಖ್ಯಾತ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್​, ರವಿಶಾಸ್ತ್ರಿ ಸಿನಿ ತಾರೆಯರಾದ ಅಕ್ಷಯ್​ ಕುಮಾರ್​, ಕಂಗನಾ ರಣಾವತ್​ ಸೇರಿದಂತೆ ಅನೇಕರು ಟ್ವೀಟ್​ ಮಾಡುವ ಮೂಲಕ "ನಮ್ಮ ದೇಶದ ಆಂತರಿಕ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಈ ವಿಚಾರದಲ್ಲಿ ವಿದೇಶಿಗರು ತಲೆ ಹಾಕುವುದು ಸರಿಯಲ್ಲ" ಎಂದಿದ್ದರು. ಈ ಮೂಲಕ ರಿಹಾನ್ನಾ ಮತ್ತು ಗ್ರೇಟಾ ಥನ್ಬರ್ಗ್​ ವಿರುದ್ಧ ಕಿಡಿಕಾರಿದ್ದರು.

  ಇದೀಗ ಭಾರತದ ಸ್ಟಾರ್​ಗಳ ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಸಂಸದ ಶಶಿ ತರೂರ್​, "ಕೇಂದ್ರ ಸರ್ಕಾರದ ಅಸಂವಿಧಾನಿಕ ನಡೆಯಿಂದಾಗಿ ಈಗಾಗಲೇ ಭಾರತದ ಚಿತ್ರಣಕ್ಕೆ ಜಾತಿಕ ಮಟ್ಟದಲ್ಲಿ ಹಾನಿಯಾಗಿದೆ. ಇನ್ನೂ ಭಾರತದ ಸೆಲೆಬ್ರಿಟಿಗಳು ವಿದೇಶಿಗರ ಟ್ವೀಟ್​ಗೆ ಪ್ರತಿಕ್ರಿಯಿಸುವ ಮೂಲಕ ಈ ಹಾನಿಯನ್ನು ಮತ್ತಷ್ಟು ಹೆಚ್ಚು ಮಾಡುತ್ತಿದ್ದಾರೆ. ಅಸಲಿಗೆ ಸರ್ಕಾರ ಅಪ್ರಚೋದಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳನ್ನು ಕ್ರಿಕೆಟಿಗರ ಅಥವಾ ಸಿನಿ ತಾರೆಯರ ಟ್ವೀಟ್​ಗಳ ಮೂಲಕ ಸರಿಪಡಿಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
  Published by:MAshok Kumar
  First published: