ಹೈದರಾಬಾದ್ (ಡಿ. 8): ಇಡೀ ಜಗತ್ತೇ ಕೊರೋನಾದಿಂದ ನಲುಗುತ್ತಿದೆ. ಭಾರತದಲ್ಲೂ ಕೊರೋನಾ ಅಟ್ಟಹಾಸ ಕಡಿಮೆಯಾಗಿಲ್ಲ. ದಿರ ನಡುವೆ ಶನಿವಾರದಿಂದ ಆಂಧ್ರ ಪ್ರದೇಶದ ಎಲೂರಿನಲ್ಲಿ ಮತ್ತೊಂದು ವಿಚಿತ್ರ ಮತ್ತು ನಿಗೂಢ ರೋಗ ಕಾಣಿಸಿಕೊಂಡಿದೆ. ಆಂಧ್ರ ಪ್ರದೇಶ ಮಾತ್ರವಲ್ಲದೆ ಇಡೀ ದೇಶದಲ್ಲೇ ಆತಂಕ ಸೃಷ್ಟಿಸಿರುವ ಈ ವಿಚಿತ್ರವಾದ ರೋಗದಿಂದ 450ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಈ ರೋಗಕ್ಕೆ ಕೀಟನಾಶಕಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿದ್ದ ರಾಸಾಯನಿಕವೇ ಕಾರಣ ಎನ್ನಲಾಗುತ್ತಿದೆ.
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರಿನಲ್ಲಿ ಕಾಣಿಸಿಕೊಂಡಿರುವ ಈ ನಿಗೂಢ ಕಾಯಿಲೆ ಸಾಂಕ್ರಾಮಿಕವೆಂಬ ಅನುಮಾನವಿದೆ. ಶನಿವಾರ ರಾತ್ರಿಯಿಂದ 450ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ಸೇರಿದ್ದಾರೆ. ಈಗಾಗಲೇ ಈ ಕಾಯಿಲೆಗೆ ಒಬ್ಬರು ಬಲಿಯಾಗಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿರುವವರನ್ನು ಎಲೂರಿನಿಂದ ವಿಜಯವಾಡ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇದ್ದಕ್ಕಿದ್ದಂತೆ ಅಸ್ವಸ್ಥರಾದ ಎಲೂರು ಪಟ್ಟಣದ ಜನರು ನಿಗೂಢ ರೋಗದಿಂದ ಬಳಲುತ್ತಿದ್ದಾರೆ. ವಾಂತಿ, ಪ್ರಜ್ಞಾಹೀನತೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಈ ಮೂರ್ಛೆ ರೋಗದ ಲಕ್ಷಣಗಳು ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಒಂದೇ ಬಾರಿಗೆ ಒಂದೇ ರೀತಿಯ ರೋಗ ಲಕ್ಷಣಗಳಿರುವ 450ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: Nishant Singh: ಮಿಗ್-29ಕೆ ಯುದ್ಧ ವಿಮಾನ ಪತನವಾದ 11 ದಿನಗಳ ಬಳಿಕ ಪೈಲಟ್ ಕಮಾಂಡರ್ ನಿಶಾಂತ್ ಸಿಂಗ್ ಮೃತದೇಹ ಪತ್ತೆ
ಎಲೂರಿನಲ್ಲಿ ಹೆಚ್ಚಾಗಿರುವ ನಿಗೂಢ ರೋಗಕ್ಕೆ ತರಕಾರಿ, ಕೃಷಿ ಉತ್ಪನ್ನಗಳಿಗೆ ಸಿಂಪಡಿಸುವ ಕೀಟನಾಶಕಗಳಲ್ಲಿರುವ ಅಧಿಕ ರಾಸಾಯನಿಕವೇ ಕಾರಣ ಎಂದು ಹೇಳಲಾಗಿದೆ. ರೋಗಿಗಳ ದೇಹದಲ್ಲಿರುವ ರಾಸಾಯನಿಕದ ಅಂಶದ ವರದಿಯಿಂದ ಈ ರೀತಿ ಅಂದಾಜಿಸಲಾಗಿದೆ. ಈ ಕೀಟನಾಶಕಗಳನ್ನು ಸೊಳ್ಳೆ ನಿಯಂತ್ರಣ ಮತ್ತು ಕೃಷಿ ಉತ್ಪನ್ನಗಳ ಕೀಟಗಳನ್ನು ನಿಯಂತ್ರಿಸಲು ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಕೀಟನಾಶಕಗಳಲ್ಲಿ ಡಿಡಿಟಿ ಕೂಡ ಸೇರಿದೆ. ಸೊಳ್ಳೆಗಳನ್ನು ನಿಯಂತ್ರಿಸಲು ವಿಪರೀತವಾಗಿ ಡಿಡಿಟಿ ಸಿಂಪಡಣೆ ಮಾಡಿರುವುದರಿಂದ ಈ ರೀತಿ ಸಮಸ್ಯೆ ಉಂಟಾದ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆದರೆ, ಲ್ಯಾಬೋರೇಟರಿ ವರದಿ ಬಂದ ನಂತರವೇ ಈ ಕುರಿತು ಖಚಿತತೆ ಸಿಗಲಿದೆ.
Over 450 ill in #Eluru of Andhra Pradesh due to mysterious disease.
On the role of #organochlorine in being the disease-triggering agent, an official told PTI, “Mostly yes, but we are waiting for the laboratory report.
Via @VOLFdotTV -a nonprofit news org.#volftv #AndhraPradesh pic.twitter.com/VLcZIxSABz
— The Voice Of Liberty® (@VOLFdotTV) December 8, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ