ಟ್ವಿಟರ್ (Twitter) ಸಂಸ್ಥೆ ಖರೀದಿಸಿ ಸದ್ಯ ಸಾಕಷ್ಟು ಸುದ್ದಿಯಲ್ಲಿರುವ ಎಲೋನ್ ಮಸ್ಕ್ ( Elon Musk) ಅವರ ಸ್ಪೇಸ್ ಎಕ್ಸ್ ( SpaceX) ಸಂಸ್ಥೆಯ ಮೇಲೆ ಇದೀಗ ಹಿರಿಯ ಇಂಜಿನಿಯರ್ ಒಬ್ಬರು ಆರೋಪ ಮಾಡಿರುವ ಸುದ್ದಿ ಹೊರಬಂದಿದೆ. ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿರುವ 62ರ ಪ್ರಾಯದ ಪ್ರಿನ್ಸಿಪಲ್ ಇಂಜಿನಿಯರ್ ಒಬ್ಬರು ತಾವು ಮರಣಿಸಬಹುದು ಇಲ್ಲವೆ ನಿವೃತ್ತರಾಗಬಹುದೆಂಬ ಆತಂಕದಿಂದ ಕಡೆಗಣಿಸುತ್ತಿರುವುದಾಗಿ ಸಂಸ್ಥೆಯ ಮೇಲೆ ಆರೋಪ ಮಾಡಿದ್ದಾರೆಂದು ತಿಳಿದು ಬಂದಿದೆ.
ಜಾನ್ ಜಾನ್ಸನ್ ಆರೋಪ
ಇಂಜಿನಿಯರ್ ಜಾನ್ ಜಾನ್ಸನ್ ಅವರು ತಮ್ಮ ಬ್ಲಾಗಿನಲ್ಲಿ ಕಂಪನಿಯಲ್ಲಿ ತಮ್ಮ ಪ್ರಯಾಣದ ಕುರಿತು ವಿವರವಾಗಿ ಬರೆದುಕೊಂಡಿದ್ದಾರೆ. ತಮ್ಮ ಬರಹದಲ್ಲಿ ಅವರು ಯಾವ ರೀತಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು, ಹೇಗೆಲ್ಲ ಕೊಟ್ಟ ಗುರಿಗಳನ್ನು ತಲುಪಿದರು, ಇತರೆ ಸಹುದ್ಯೋಗಿಗಳಿಗಿಂತ ಹೇಗೆಲ್ಲ ದೀರ್ಘ ಸಮಯದವರೆಗೆ ಕೆಲಸ ಮಾಡಿದ್ದಾರೆಂಬುದನ್ನು ವಿವರಿಸಿರುವ ಅವರು ಕ್ರಮೇಣವಾಗಿ ಅವರನ್ನು ಹೊಸ ನೇಮಕಾತಿ ಹೊಂದಿದ ಇಂಜಿನಿಯರ್ ನಂತೆ ಪರಿಗಣಿಸಲಾಯಿತೆಂಬ ವಿಷಾದ ವ್ಯಕ್ತಪಡಿಸಿದ್ದಾರೆ.
lioness.co ಎಂಬ ತಾಣಕ್ಕೆ ಬ್ಲಾಗ್ ಬರೆದಿರುವ ಜಾನ್ಸನ್ ಅವರು, ಸಂಸ್ಥೆಯಲ್ಲಿ ತಮ್ಮ ಮೇಲೆ ವಯಸ್ಸಿನ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮಸ್ಕ್ ಒಡೆತನದ ರಾಕೆಟ್ ಕಂಪನಿಯು ಜಾನ್ಸನ್ ಅವರನ್ನು ಹಾಗೂ ಅವರ ಅನುಭವವನ್ನು ಪರಿಗಣಿಸದೆ ಕಡೆಗಣಿಸಿದ್ದಾರೆಂದು ಹೇಳಿರುವ ಜಾನ್ಸನ್ ಈ ಬಗ್ಗೆ ವಾಷಿಂಗ್ಟನ್ ನ ಮಾನವ ಹಕ್ಕುಗಳ ಸಂಸ್ಥೆಯಲ್ಲಿ ದೂರು ದಾಖಲಿಸುವುದಾಗಿ ಬರೆದುಕೊಂಡಿದ್ದಾರೆ.
ಕ್ಷೇತ್ರದಲ್ಲಿರುವ ಅಂದರೆ ಆಪ್ಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಾಹ್ಯಾಕಾಶದಿಂದ ಬರುವ ಚಿತ್ರಗಳನ್ನು ಸಂಸ್ಕರಿಸುವುದಕ್ಕೆ ಸಂಬಂಧಿಸಿದಂತೆ ಅವರಿಗಿದ್ದ ಆಳವಾದ ಪರಿಣತಿ ಹಾಗೂ ಅನುಭವವನ್ನು ಪರಿಗಣಿಸಿ ಅವರನ್ನು 2018 ರಲ್ಲಿ ಅವರ 58ರ ಪ್ರಾಯದಲ್ಲಿ ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ನೇಮಿಸಿಕೊಳ್ಳಲಾಯಿತು ಎಂದು ಜಾನ್ಸನ್ ಹೇಳಿಕೊಂಡಿದ್ದಾರೆ.
ಜಾನ್ಸನ್ ಅವರು ತಮ್ಮ ಬರಹದಲ್ಲಿ, "ಸಂದರ್ಶನದ ಸಮಯದಲ್ಲಿ ಸಂಸ್ಥೆಯ ಹಿರಿಯ ಸದಸ್ಯರೊಬ್ಬರು ನನ್ನನ್ನು ಕುರಿತು ನೀವು ಕಿರಿಯ ಕೆಲಸಗಾರರೊಂದಿಗೆ ಕೆಲಸ ನಿರ್ವಹಿಸುವಲ್ಲಿ ಕಂಫರ್ಟಬಲ್ ಆಗಿದ್ದೀರಾ ಅಂತಲೂ ಕೇಳಿದ್ದರು" ಎಂಬುದನ್ನೂ ಸಹ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Elon Musk Tweet: ಎಲಾನ್ ಮಸ್ಕ್ ಟ್ವೀಟ್ಗೆ ಯುಪಿ ಪೊಲೀಸರು ನೀಡಿದ ಉತ್ತರ ಸಿಕ್ಕಾಪಟ್ಟೆ ವೈರಲ್
ನಾನು ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ
ಟ್ವಿಟರ್ ನಿಂದ ಹಿಡಿದು ಸ್ಪೇಸ್ ಎಕ್ಸ್ ವರೆಗೆ ಮಸ್ಕ್ ಅವರಿಗೆ ಸಾಕಷ್ಟು ಪರಿಶ್ರಮ ಹಾಗೂ ಕಠಿಣ ಕೆಲಸ ಮಾಡುವಂತಹ ಉದ್ಯೋಗಿಗಳು ಬೇಕು. ಪ್ರಸ್ತುತ ವಯಸ್ಸಾದವರು ಪರಿಶ್ರಮದ ಕೆಲಸಗಳಿಗೆ ಒಗ್ಗಿಕೊಳ್ಳಲ್ಲ ಹಾಅಗೂ ಸವಾಲಿನ ಕೆಲಸಗಳನ್ನು ಮಾಡಲು ಅವರಿಂದ ಸಾಧ್ಯವಿಲ್ಲವೆಂದೇ ಎಲ್ಲೆಡೆ ಸಾಮಾನ್ಯವಾಗಿ ನಂಬಲಾಗುತ್ತದೆ. ಆದರೆ, ಇದಕ್ಕೆ ನಾನು ತದ್ವಿರುದ್ಧನಾಗಿದ್ದು ಕೆಲಸ ಮುಗಿಸಲು ಎಷ್ಟು ಪ್ರಯತ್ನ ಬೇಕಿದ್ದರೂ ಹಾಕುತ್ತೇನೆ ಹಾಗೂ ದೀರ್ಘಾವಧಿಯವರೆಗೂ ಕೆಲಸ ಮಾಡಬಲ್ಲೆ. ನಾನು ಸದಾ ಸವಾಲಿನ ಕೆಲಸಕ್ಕೆ ಸಿದ್ಧನಾಗಿರುತ್ತೇನೆ ಎಂಬ ವಿಚಾರವನ್ನೂ ಜಾನ್ಸನ್ ಅವರು ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.
ಮುಂದುವರೆಯುತ್ತ ಅವರು, "ನಾನು ಸ್ಪೇಸ್ ಎಕ್ಸ್ ನಲ್ಲಿಹಲವು ಬಾರಿ ವಾರದ ಏಳೂ ದಿನಗಳಲ್ಲಿ 10-12 ಗಂಟೆಗಳಷ್ಟು ಕೆಲಸ ಮಾಡಿದ್ದೇನೆ. ನಾನು ಮಾಡುತ್ತಿದ್ದ ದೀರ್ಘಾವಧಿಯ ಕೆಲಸವನ್ನು ಆ ಸಂಸ್ಥೆಯಲ್ಲಿ ಬೇರೆ ಯಾರೂ ಮಾಡಿಲ್ಲ ಎಂಬುದು ನನಗೆ ತಿಳಿದಿದೆ. ಕೋವಿಡ್ ನಂತರದ ಸಮಯದಲ್ಲಿ ಹಲವು ಇಂಜಿನಿಯರ್ ಗಳು ರಿಮೋಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರೂ ನಾನು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆ, ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುತ್ತಿದ್ದೆ, ನಾನೊಬ್ಬ ಹಾರ್ಡ್ ಕೋರ್ ವರ್ಕರ್" ಎಂಬುದಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ವಯಸ್ಸಿನ ಆಧಾರದಲ್ಲಿ ತಾರತಮ್ಯದ ಆರೋಪ
ಆದರೆ, ಜಾನ್ಸನ್ ಅವರು 2020 ರಲ್ಲಿ ಶಸ್ತ್ರ ಚಿಕಿತ್ಸೆಯೊಂದಕ್ಕೆ ಒಳಗಾಗಬೇಕಾಯಿತು. ಈ ಸಂದರ್ಭದಲ್ಲಿ ಅವರ ಜವಾಬ್ದಾರಿಗಳನ್ನು ಅವರಿಗಿಂತ ಕಡಿಮೆ ಅನುಭವ ಹಾಗೂ ಪರಿಣತಿ ಇರುವ ಕಿರಿಯ್ ಇಂಜಿನಿಯರ್ ಗಳಿಗೆ ವಿತರಿಸಲಾಯಿತು. ಈ ಬಗ್ಗೆ ತಿಳಿದುಕೊಂಡ ಜಾನ್ಸನ್ ಮುಂದೆ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ತಮಗಾಗುತ್ತಿರುವ ವಯಸ್ಸಿನ ತಾರತಮ್ಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರು ಬ್ಲಾಗ್ ನಲ್ಲಿ, "ನಾನು ಅವರನ್ನು ಭೇಟಿ ಮಾಡಿದೆ, ಅವರು ನನ್ನನ್ನು ಕುರಿತು ಇದೆಲ್ಲವೂ ಸಣ್ಣ ತಪ್ಪುಗ್ರಹಿಕೆಯಿಂದುಂಟಾಗಿದ್ದು ಇನ್ನು ಮೇಲೆ ಕಂಪನಿಯ ಆಂತರಿಕ ಜಾಬ್ ಲಿಸ್ಟ್ ಗಳ ಮೇಲೆ ಗಮನವಿರಿಸುವ ಕೆಲಸ ನಿರ್ವಹಿಸಿ" ಎಂದು ಹೇಳಿರುವುದಾಗಿ ಬರೆದುಕೊಂಡಿದ್ದಾರೆ.
ಜಾನ್ಸನ್ ಅವರೊಂದಿಗೆ ನಡೆದ ಸಭೆಯಲ್ಲಿ ಅಧಿಕಾರಿಗಳು ಜಾನ್ಸನ್ ಅವರಿಗೆ ಪ್ರಸ್ತುತ ವಿದ್ಯಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದರಿಂದ ಅವರ ಕ್ಷೇತ್ರಕ್ಕೆ ಸಂಬಂಧಿಸಿದ ಯಾವ ಉದ್ಯೋಗವೂ ಇಲ್ಲವೆಂದಿದ್ದಲ್ಲದೆ ಅವರಿಗೆ ಸೂಕ್ತವಾಗಿರುವ ಜವಾಬ್ದಾರಿಯೊಂದನ್ನು ಹುಡುಕುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಯಾವ ಹೊಸ ಕೆಲಸ ಲಭ್ಯವಿಲ್ಲದ ಕಾರಣ ಕಂಪನಿಯು ಜಾನ್ಸನ್ ಅವರು ಅಂತಿಮವಾಗಿ ಜೂನ್ 2022 ರಲ್ಲಿ ಕೆಲಸ ತೊರೆಯುವಂತೆ ಒತ್ತಡ ಹೇರಿತೆನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ