ವಾಷಿಂಗ್ಟನ್(ಡಿ.21): ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ ಅನ್ನು ಖರೀದಿಸಿದಾಗಿನಿಂದಲೂ ಪ್ರಕ್ಷುಬ್ಧತೆ ಮುಂದುವರೆದಿದೆ. ಹಿಂಬಡ್ತಿ, ಬದಲಾವಣೆಗಳು ಮತ್ತು ನಂತರ ಚಂದಾದಾರಿಕೆ ಶುಲ್ಕದ ನಂತರ, ಮಸ್ಕ್ ಅವರು ಸಿಇಒ ಹುದ್ದೆಯಿಂದ ಕೆಳಗಿಳಿಯುವುದಾಗಿ ಸಮೀಕ್ಷೆಯ ಮೂಲಕ ಹೇಳಿದ್ದಾರೆ. ಟ್ವಿಟ್ಟರ್ ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹುತೇಕ ಬಳಕೆದಾರರು ಸಿಇಒ ಹುದ್ದೆಯಿಂದ ಪದಚ್ಯುತಿಗೆ ಮತ ಹಾಕಿದ್ದು, ಆ ಬಳಿಕ ಈ ಜವಾಬ್ದಾರಿಯಿಂದ ಹೊರಬರಲು ಚಿಂತನೆ ನಡೆಸುತ್ತಿದ್ದೇನೆ ಎಂದಿದ್ದಾರೆ.
ಈ ಹಿಂದೆ, ಮಸ್ಕ್ ಅವರು ಟ್ವಿಟರ್ನಲ್ಲಿ ಬಳಕೆದಾರರ ನಡುವೆ ಸಮೀಕ್ಷೆಯನ್ನು ನಡೆಸಿದ್ದರು, ಅದರಲ್ಲಿ ಅವರು ಈ ಕಂಪನಿಯ ಸಿಇಒ ಹುದ್ದೆಯನ್ನು ತೊರೆಯಬೇಕೇ ಎಂದು ಕೇಳಿದ್ದರು. ಈ ಸಮೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯ ಬಳಕೆದಾರರು ಭಾಗವಹಿಸಿದ್ದಾರೆ. ಅಲ್ಲದೇ 58 ಪ್ರತಿಶತ ಬಳಕೆದಾರರು ಹೌದು ಎಂದು ಉತ್ತರಿಸಿದ್ದಾರೆ. ಅಂದರೆ, ಮಸ್ಕ್ ಸಿಇಒ ಹುದ್ದೆ ತೊರೆಯಲು ಹೆಚ್ಚಿನ ಜನರು ಒಲವು ತೋರಿದ್ದರು. 42 ರಷ್ಟು ಬಳಕೆದಾರರು ಮಸ್ಕ್ ಇನ್ನೂ CEO ಹುದ್ದೆಯಲ್ಲಿ ಮುಂದುವರೆಯಬೇಕು ಎಂದಿದ್ದರು. ಪ್ರಸ್ತುತ, ಸಮೀಕ್ಷೆಯಲ್ಲಿ ಸೋತ ನಂತರ, ಮಸ್ಕ್ ಅವರು ಟ್ವಿಟರ್ನ ಸಿಇಒ ಹುದ್ದೆಯನ್ನು ತೊರೆಯುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Elon Musk: ಹೂಡಿಕೆದಾರರನ್ನು ಹುಡುಕುತ್ತಿರುವ ಎಲಾನ್ ಮಸ್ಕ್, ಸಂಕಷ್ಟದಲ್ಲಿದೆ ಟ್ವಿಟರ್! ಕಾರಣವೇನು ಗೊತ್ತಾ?
ನಿನ್ನೆಯಷ್ಟೇ ಬಂದಿದ್ದ ವರದಿ, ಹೊಸ CEOಗಾಗಿ ಎಲಾನ್ ಮಸ್ಕ್ ಹುಡುಕಾಟ
ಮಂಗಳವಾರದ ಸಿಎನ್ಬಿಸಿ ವರದಿಯ ಪ್ರಕಾರ, ಎಲಾನ್ ಮಸ್ಕ್ ಟ್ವಿಟರ್ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಹುಡುಕುತ್ತಿದ್ದಾರೆ. ವಾಸ್ತವವಾಗಿ, ಎಲಾನ್ ಮಸ್ಕ್ ಇತ್ತೀಚೆಗೆ ಟ್ವಿಟರ್ ಸಮೀಕ್ಷೆಯನ್ನು ನಡೆಸಿದರು, ಅದರಲ್ಲಿ ಅವರು ಟ್ವಿಟರ್ನ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಬೇಕೇ ಎಂದು ಕೇಳಿದ್ದರು. ಈ ಸಮೀಕ್ಷೆಗೆ ಪ್ರತಿಕ್ರಿಯೆಯಾಗಿ, ಒಟ್ಟು 57.5 ಪ್ರತಿಶತ ಬಳಕೆದಾರರು ಎಲಾನ್ ಮಸ್ಕ್ ಅವರ ಪದಚ್ಯುತಿಗೆ ಪರವಾಗಿ ಮತ ಚಲಾಯಿಸಿದರು ಮತ್ತು ಅವರು ರಾಜೀನಾಮೆ ನೀಡಬೇಕು ಎಂದು ಹೇಳಿದ್ದರು.
I will resign as CEO as soon as I find someone foolish enough to take the job! After that, I will just run the software & servers teams.
— Elon Musk (@elonmusk) December 21, 2022
2 ತಿಂಗಳ ಅವಧಿಯಲ್ಲೇ ಟ್ವಿಟರ್ನ ಸಿಇಒ ಹುದ್ದೆಯಿಂದ ಕೆಳಗಿಳಿಯುವಂತೆ ಮತ ಚಲಾವಣೆ
ಆದಾಗ್ಯೂ, ಈ ಸಮೀಕ್ಷೆಯ ಫಲಿತಾಂಶದಿಂದ ಎಲಾನ್ ಮಸ್ಕ್ ಅವರಿಗೂ ನಿರಾಶಾದಾಯಕವಾಗಿರಬೇಕು. ಏಕೆಂದರೆ ಅವರು ಟ್ವಿಟರ್ನ ಜವಾಬ್ದಾರಿಯನ್ನು ವಹಿಸಿಕೊಂಡು ಕೇವಲ 2 ತಿಂಗಳಾಗಿದೆ. ಈ ಭಾನುವಾರ, ಮಸ್ಕ್ ಅವರು ತಮ್ಮ ಸಮೀಕ್ಷೆಯ ಫಲಿತಾಂಶಗಳನ್ನು ಅನುಸರಿಸುವುದಾಗಿ ಮತ್ತು ಬಳಕೆದಾರರು ಬಯಸಿದರೆ, ಟ್ವಿಟರ್ನ ಸಿಇಒ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಕೋಟ್ಯಾಧಿಪತಿ ಕೈಗಾರಿಕೋದ್ಯಮಿ ಈ ಜನಾದೇಶವನ್ನು ಯಾವಾಗ ಪಾಲಿಸುತ್ತೇನೆ ಎಂದು ಹೇಳದಿದ್ದರೂ, ಸದ್ಯಕ್ಕೆ ತನಗೆ ಉತ್ತರಾಧಿಕಾರಿ ಇಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ