• Home
  • »
  • News
  • »
  • national-international
  • »
  • Twitter CEO ಪರಾಗ್ ಅಗರ್ವಾಲ್​ ವಜಾ​, ಪ್ರಧಾನ ಕಚೇರಿಯಿಂದ ಹೊರಹಾಕಿದ ಎಲೋನ್ ಮಸ್ಕ್​

Twitter CEO ಪರಾಗ್ ಅಗರ್ವಾಲ್​ ವಜಾ​, ಪ್ರಧಾನ ಕಚೇರಿಯಿಂದ ಹೊರಹಾಕಿದ ಎಲೋನ್ ಮಸ್ಕ್​

ಎಲಾನ್ ಮಸ್ಕ್

ಎಲಾನ್ ಮಸ್ಕ್

Twitter CEO Parag Agarwal: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟರ್‌ನ ಹೊಸ ಮಾಲೀಕರಾಗಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಎಲೋನ್ ಮಸ್ಕ್ ಮಾಲೀಕರಾದ ಬೆನ್ನಲ್ಲೇ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಮತ್ತು ಸಿಎಫ್‌ಒ ನೆಡ್ ಸೆಗಲ್ ಅವರನ್ನು ಕಂಪನಿಯಿಂದ ವಜಾ ಮಾಡಲಾಗಿದೆ.

  • Share this:

ವಾಷಿಂಗ್ಟನ್(ಅ.28): ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಟ್ವಿಟರ್‌ನ ಹೊಸ ಮಾಲೀಕರಾಗಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಎಲೋನ್ ಮಸ್ಕ್ ಮಾಲೀಕರಾದ ಬೆನ್ನಲ್ಲೇ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ (Twitter CEO Parag Agarwal) ಮತ್ತು ಸಿಎಫ್‌ಒ ನೆಡ್ ಸೆಗಲ್ ಅವರನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ಅಷ್ಟೇ ಅಲ್ಲ, ಕಂಪನಿಯ ಪ್ರಧಾನ ಕಚೇರಿಯಿಂದಲೂ ಅವರನ್ನು ಹೊರಹಾಕಲಾಗಿದೆ. ಎಲೋನ್ ಮಸ್ಕ್ ಈ ವರ್ಷದ ಏಪ್ರಿಲ್ 13 ರಂದು ಟ್ವಿಟರ್ ಖರೀದಿಸಿರುವುದಾಗಿ ಘೋಷಿಸಿದ್ದರು. ಪ್ರತಿ ಷೇರಿಗೆ $54.2 ದರದಲ್ಲಿ $44 ಶತಕೋಟಿಗೆ ಸೋಶಿಯಲ್ ಮೀಡಿಯಾ ಪ್ಲಾಟ್​ಫಾರಂನ್ನು ಖರೀದಿಸಲು ಅವರು ಪ್ರಸ್ತಾಪಿಸಿದ್ದರು. ಆದರೆ ನಂತರ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಕಾರಣ, ಅವರು ಆ ಒಪ್ಪಂದವನ್ನು ಸ್ಥಗಿತಗೊಳಿಸಿದ್ದರು.


ಇದನ್ನೂ ಓದಿ: Organic Farming: ಕಾರ್ಪೊರೇಟ್ ಕಂಪನಿ ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ ಟೆಕ್ಕಿ, ಸಂಪಾದನೆ ಕೋಟಿ ಕೋಟಿ!


ಇದಾದ ಬಳಿಕ ಜುಲೈ 8 ರಂದು, ಮಸ್ಕ್ ಒಪ್ಪಂದವನ್ನು ಮುರಿಯಲು ನಿರ್ಧರಿಸಿದರು. ಇದರ ವಿರುದ್ಧ ಟ್ವಿಟರ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಅಕ್ಟೋಬರ್ ಆರಂಭದಲ್ಲಿ, ಮಸ್ಕ್ ತನ್ನ ನಿಲುವನ್ನು ಬದಲಾಯಿಸಿದರು ಮತ್ತು ಒಪ್ಪಂದವನ್ನು ಮತ್ತೆ ಪೂರ್ಣಗೊಳಿಸಲು ಒಪ್ಪಿಕೊಂಡರು. ಏತನ್ಮಧ್ಯೆ, ಡೆಲವೇರ್ ನ್ಯಾಯಾಲಯವು ಅಕ್ಟೋಬರ್ 28 ರೊಳಗೆ ಒಪ್ಪಂದವನ್ನು ಪೂರ್ಣಗೊಳಿಸಲು ಆದೇಶಿಸಿತು. ಎಲೋನ್ ಮಸ್ಕ್ ಒಂದು ದಿನ ಮುಂಚಿತವಾಗಿ ಟ್ವಿಟ್ಟರ್ ಕಚೇರಿಗೆ ತಲುಪುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.


ಪರಾಗ್ ಅಗರ್ವಾಲ್ ಅವರನ್ನು ಹೊರ ಹಾಕಿದ್ದೇಕೆ?


ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್, ಸಿಎಫ್‌ಒ ನೆಡ್ ಸೆಗಲ್ ಮತ್ತು ಕಾನೂನು ವ್ಯವಹಾರ-ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ಹೊರ ಹಾಕಿರುವುದಾಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿದೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ನಕಲಿ ಖಾತೆಗಳ ಸಂಖ್ಯೆಯ ವಿಚಾರವಾಗಿ ತನ್ನನ್ನು ಮತ್ತು ಟ್ವಿಟರ್ ಹೂಡಿಕೆದಾರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಮಸ್ಕ್ ಆರೋಪಿಸಿದ್ದಾರೆ. ಮೂಲಗಳ ಪ್ರಕಾರ, ಟ್ವಿಟರ್‌ನೊಂದಿಗೆ ಎಲೋನ್ ಮಸ್ಕ್ ಒಪ್ಪಂದ ಪೂರ್ಣಗೊಂಡಾಗ, ಅಗರ್ವಾಲ್ ಮತ್ತು ಸೆಗಲ್ ಕಚೇರಿಯಲ್ಲಿ ಹಾಜರಿದ್ದರು. ಇದಾದ ಬಳಿಕ ಅವರನ್ನು ಕಚೇರಿಯಿಂದ ಹೊರ ಹಾಕಲಾಯಿತು. ಆದರೆ, ಈ ಬಗ್ಗೆ ಟ್ವಿಟರ್ ಅಥವಾ ಎಲೋನ್ ಮಸ್ಕ್ ಯಾವುದೇ ಹೇಳಿಕೆ ನೀಡಿಲ್ಲ.


Elon Musk may appoint a new Twitter CEO soon stg-hg
ಪರಾಗ್ ಅಗರ್ವಾಲ್


75% ಉದ್ಯೋಗಿಗಳಿಗೆ ಆತಂಕ


ಇತ್ತೀಚೆಗಷ್ಟೇ ಟ್ವಿಟರ್‌ಗೆ ಎಲಾನ್ ಮಸ್ಕ್ ಎಂಟ್ರಿಯಾದ ನಂತರ ಕಂಪನಿಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು ಎಂಬ ಸುದ್ದಿ ಇತ್ತು. ವಾಷಿಂಗ್ಟನ್ ಪೋಸ್ಟ್ ಸಂದರ್ಶನಗಳು ಮತ್ತು ದಾಖಲೆಗಳನ್ನು ಉಲ್ಲೇಖಿಸಿ ಟ್ವಿಟರ್ ಖರೀದಿಸಿದ ನಂತರ, ಮಸ್ಕ್ ಕಂಪನಿಯ 75 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾ ಮಾಡಬಹುದು ಎಂದು ಹೇಳಿದೆ.


ಎಲೋನ್ ಮಸ್ಕ್ ಟ್ವಿಟರ್ ಖರೀದಿಸಿದ್ದೇಕೆ?


ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸುವ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಅವರು, "ನಾನು ಟ್ವಿಟರ್ ಅನ್ನು ಏಕೆ ಖರೀದಿಸಿದೆ ಎಂಬುದರ ಕುರಿತು ಅನೇಕ ಊಹಾಪೋಹಗಳಿವೆ, ಆದರೆ ಅವುಗಳಲ್ಲಿ ಹೆಚ್ಚಿನವು ತಪ್ಪು ಎಂದು ಸಾಬೀತಾಗಿದೆ. ನಮ್ಮ ಭವಿಷ್ಯದ ನಾಗರಿಕತೆಯು ವಿಭಿನ್ನ ಸಿದ್ಧಾಂತಗಳು ಮತ್ತು ನಂಬಿಕೆಗಳ ಜನರು ಯಾವುದೇ ರೀತಿಯ ಹಿಂಸೆಯಿಲ್ಲದೆ ಆರೋಗ್ಯಕರ ಚರ್ಚೆಯನ್ನು ನಡೆಸುವ ಸಾಮಾನ್ಯ ಡಿಜಿಟಲ್ ಜಾಗವನ್ನು ಹೊಂದಲು ತಾನು ಟ್ವಿಟರ್ ಅನ್ನು ಖರೀದಿಸಿರುವುದಾಗಿ ಮಸ್ಕ್ ಬಹಿರಂಗಪಡಿಸಿದ್ದಾರೆ.


ಇದನ್ನೂ ಓದಿ: Organic Farming: ಕಾರ್ಪೊರೇಟ್ ಕಂಪನಿ ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ ಟೆಕ್ಕಿ, ಸಂಪಾದನೆ ಕೋಟಿ ಕೋಟಿ!


ಎಲೋನ್ ಮಸ್ಕ್ ಅವರು ಟ್ವಿಟರ್ ಜೊತೆಗಿನ ಒಪ್ಪಂದವನ್ನು ಹಣ ಗಳಿಸಲು ಮಾಡಿಲ್ಲ ಎಂದು ಬರೆದಿದ್ದಾರೆ. ನಾನು ಪ್ರೀತಿಸುವ ಮಾನವೀಯತೆಗಾಗಿ ನಾನು ಈ ಒಪ್ಪಂದವನ್ನು ಮಾಡಿದ್ದೇನೆ. ನಾನು ಇದನ್ನು ಅತ್ಯಂತ ನಮ್ರತೆಯಿಂದ ಮಾಡುತ್ತಿದ್ದೇನೆ ಏಕೆಂದರೆ ಅಂತಹ ಗುರಿಯನ್ನು ಸಾಧಿಸುವಲ್ಲಿ ವಿಫಲತೆ ಎದುರಾಗುವ ಸಾಧ್ಯತೆ ಇದೆ ಎಂಬುವುದನ್ನು ನೆನಪಿಟ್ಟುಕೊಂಡು ಮುಂದೆ ಸಾಗಬೇಕು ಎಂದಿದ್ದಾರೆ

Published by:Precilla Olivia Dias
First published: