ಥಾಯ್ಲೆಂಡ್​ ಮಕ್ಕಳ ರಕ್ಷಣೆಗೆ ಅಮೆರಿಕ ಉದ್ಯಮಿ ಕೊಟ್ಟ ನೆರವೇನು ಗೊತ್ತೇ?


Updated:July 9, 2018, 11:56 AM IST
ಥಾಯ್ಲೆಂಡ್​ ಮಕ್ಕಳ ರಕ್ಷಣೆಗೆ ಅಮೆರಿಕ ಉದ್ಯಮಿ ಕೊಟ್ಟ ನೆರವೇನು ಗೊತ್ತೇ?

Updated: July 9, 2018, 11:56 AM IST
ಬ್ಯಾಂಕಾಕ್: ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಕಳೆದ 9 ದಿನಗಳಿಂದ ಸಿಲುಕಿರುವ 12 ಬಾಲಕರು ಮತ್ತು ಓರ್ವ ಫುಟ್ಬಾಲ್ ತರಬೇತುದಾರರ ರಕ್ಷಣೆಗೆ ಥಾಯ್ಲೆಂಡ್‌ ನೌಕಾಪಡೆ ಅಮೆರಿಕ, ರಷ್ಯಾ, ಚೀನಾ ಮತ್ತು ಇಂಗ್ಲೆಂಡ್ ಸಹಕಾರದೊಂದಿಗೆ ಭಾರಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವೆಂಬಂತೆ ಟೆಸ್ಲಾ ಅಮೆರಿಕದ ಉದ್ಯಮಿ ಎಲಾನ್​ ಮಸ್ಕ್​ ಮಿನಿ ಸಬ್​ಮೆರಿನ್​ನ್ನು ಥಾಯ್ಲೆಂಡ್​ಗೆ ಕಳುಹಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಈ ವರೆಗೆ ಆರು ಬಾಲಕರನ್ನು ರಕ್ಷಿಸಲಾಗಿದ್ದು, ಬಿಡದೆ ಸುರಿಯುತ್ತಿರುವ ಮಳೆ ಹಾಗು ಅಧಿಕ ನೀರಿನ ಮಟ್ಟದಿಂದಾಗಿ ರಕ್ಷಣಾ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಇದೀಗ ಮಕ್ಕಳ ರಕ್ಷಣೆಗೆಂದು ಎಲನ್​ ತಂಡ ಸಣ್ಣಗಾತ್ರದ ಜಲಾಂತರ್ಗಾಮಿಯನ್ನು ಸಿದ್ಧಪಡಿಸಿದ್ದು, ಪ್ರಯೋಗಾರ್ಥವಾಗಿ ನಡೆಸಿದ ಇದರ ಚಿತ್ರಗಳು ಹಾಗು ವಿಡಿಯೊವನ್ನು ಸಾಮಾಜಿ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಆರು ಅಡಿ ಉದ್ದದ ಈ ಜಲಾಂತರ್ಗಾಮಿಯಲ್ಲಿ ನಾಲ್ಕು ಆಮ್ಲಜನಕ ಪೂರೈಕಯ ನಳಿಕೆಯನ್ನು ಅಳವಡಿಸಲಾಗಿದೆ, ನೀರಿನಡಿಯಲ್ಲಿರುವ ಕಲ್ಲುಗಳಿಂದ ರಕ್ಷಣೆಗೆಂದು ಶಂಕುವಿನಾಕೃತಿಯ ತುದಿಯನ್ನು ನಿರ್ಮಿಸಲಾಗಿದೆ, ಅತ್ಯಂತ ಕ್ಲಿಷ್ಟಕರ ಪ್ರದೇಶದಲ್ಲೂ ಈ ಜಲಾಂತಾರ್ಗಾಮಿಯನ್ನು ಬಳಸಬಹುದು.
Loading...

ಎಲನ್​ ಮಸ್ಕ್​ ಮತ್ತು ತಂಡ ಬೇಬಿ ಜಲಾಂತರ್ಗಾಮಿಯನ್ನು ಲಾಸ್​ ಎಂಜಲಿಸ್​ನ ಸ್ವಿಮ್ಮಿಂಗ್​ ಪೂಲ್​ನಲ್ಲಿ ಪರೀಕ್ಷೆ ನಡೆಸಿ ಯಶಸ್ವಿಯಾಗಿಗದ್ದು, ಈ ಯಂತ್ರವನ್ನು ಥಾಯ್ಲೆಂಡ್​ಗೆ ಕಳುಹಿಸಿರುವುದಾಗಿ ಮಸ್ಕ್​ ಟ್ವೀಟ್​ ಮಾಡಿದ್ದಾರೆ.ಭಾನುವಾರ ರಾತ್ರಿಯವರೆಗೂ ಸಾಹಸಮಯ ರಕ್ಷಣಾ ಕಾರ್ಯಾಚರಣೆ ಮಾಡಿದ ಡೈವರ್​ಗಳು 12 ಮಕ್ಕಳಲ್ಲಿ ನಾಲ್ಕು ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಸಫಲರಾಗಿದ್ದರು. ದಿನವಿಡೀ ವಿಶ್ರಮಿಸದೇ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಡೈವರ್​ಗಳು ವಿಶ್ರಾಂತಿಗೆ ತೆರಳಿದ್ದರು. ಜತೆಗೆ ನಾಲ್ವರನ್ನು ರಕ್ಷಿಸಿರುವ ಹಿನ್ನೆಲೆಯಲ್ಲಿ ಇನ್ನುಳಿದವರನ್ನೂ ರಕ್ಷಿಸಬಹುದು ಎಂಬ ಆತ್ಮವಿಶ್ವಾಸವೂ ಡೈವರ್​ಗಳಲ್ಲಿ ಬಂದಿತ್ತು.
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...