ಕಳೆದ ತಿಂಗಳು ಟ್ವಿಟರ್ ಅನ್ನು $44 ಶತಕೋಟಿಗೆ ಸ್ವಾಧೀನಪಡಿಸಿಕೊಂಡ ಬಿಲಿಯನೇರ್ ಎಲಾನ್ ಮಸ್ಕ್ (Elon Musk ) ಅವರು ಯುನೈಟೆಡ್ ಸ್ಟೇಟ್ಸ್ನ (United States) ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕಂಪನಿಯ ಪ್ರಧಾನ ಕಛೇರಿಯ "ನೈಜ" ಚಿತ್ರವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್ನ ಮುಖ್ಯ ಕಚೇರಿ ಅತ್ಯದ್ಭುತವಾಗಿದೆ ಎಂಬ ಶೀರ್ಷಿಕೆಯೊಂದಿಗೆ ಮಸ್ಕ್, ಹಸಿರು ಸಸ್ಯಗಳಿಂದ ಆವೃತವಾದ ಹಿನ್ನಲೆಯಲ್ಲಿ ಗೇಮ್ಓವರ್ ಎಂದು ಹ್ಯಾಶ್ಟ್ಯಾಗ್ (Hashtag) ಮಾಡಿರುವ ಬರಹವನ್ನು ಪ್ರದರ್ಶಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಏರಿಯಾವು ವಿಡಿಯೋ ಆರ್ಕೇಡ್ ಹಾಗೂ ಬಾರ್ನದ್ದಾಗಿದೆ ಎಂಬ ಒಕ್ಕಣೆಯನ್ನು ಫೋಟೋ ಒಳಗೊಂಡಿದೆ.
ಮಸ್ಕ್ ಅಪ್ಲೋಡ್ ಮಾಡಿದ ಚಿತ್ರಕ್ಕೆ ಬಂದಿದೆ ವಿವಿಧ ಕಾಮೆಂಟ್ಸ್
ಮಸ್ಕ್ ಅಪ್ಲೋಡ್ ಮಾಡಿರುವ ಚಿತ್ರವು ಇದುವರೆಗೆ 1,52,000 ಲೈಕ್ಗಳು ಮತ್ತು ಸುಮಾರು 2,000 ಕಾಮೆಂಟ್ಗಳನ್ನು ಗಳಿಸಿದೆ. ಚಿತ್ರಕ್ಕೆ ವಿಭಿನ್ನವಾದ ಪ್ರತಿಕ್ರಿಯೆಗಳು ಬಂದಿದ್ದು, ಬಳಕೆದಾರರು ಕೂಡ ಎಲಾನ್ ಮಸ್ಕ್ ಅವರ ಕಾಲೆಳೆಯುವಂತಹ ಕಾಮೆಂಟ್ಗಳಿಂದ ಟ್ವೀಟ್ ಮಾಡಿದ್ದಾರೆ. ಕಂಪನಿಯ ಭವಿಷ್ಯದ ಬಗ್ಗೆ ಮಸ್ಕ್ ಚಿತ್ರದ ಮೂಲಕ ಸುಳಿವು ನೀಡಿದ್ದಾರೆಯೇ ಎಂಬುದಾಗಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ಯಾವುದಾದರೂ ವಿಷಯದ ಮುನ್ಸೂಚನೆಯೇ ಎಂಬುದಾಗಿ ಇನ್ನೊಬ್ಬ ಬಳಕೆದಾರರು ಕುಹಕವಾಡಿದ್ದಾರೆ. ಇದೆಲ್ಲಾ ನಿಮಗೊಂದು ಆಟವಾಗಿದೆ ಎಂಬುದಾಗಿ ಮಸ್ಕ್ಗೆ ಇನ್ನೊಬ್ಬ ಟ್ವಿಟರ್ ಬಳಕೆದಾರರು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು @Twitter #HumanResources ಎಂಬುದಾಗಿ ಟ್ಯಾಗ್ ಮಾಡಿ ಟ್ವಿಟರ್ನ ಹೊಸ ಕಚೇರಿ ಘನಘೋರವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Twitter HQ is great (this is a real pic) pic.twitter.com/qjfOQCr533
— Elon Musk (@elonmusk) November 11, 2022
ಟ್ವಿಟರ್ ಅನ್ನು ಹಿಂಬಾಲಿಸುವ ಬಳಕೆದಾರರು ಎದುರಿಸುವ ಪ್ರಮುಖ ಸಮಸ್ಯೆಗಳನ್ನು ಗುರುತಿಸಲು ಹಾಗೂ ಅದಕ್ಕೆ ಪರಿಹಾರವನ್ನೊದಗಿಸಲು ಮೈಕ್ರೋ-ಬ್ಲಾಗಿಂಗ್ ಸೈಟ್ ಈ ವಾರದ ಆರಂಭದಲ್ಲಿ ಪ್ರಾರಂಭಿಸಿದ್ದ $8 ಚಂದಾದಾರಿಕೆಯ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ ಎಂಬ ಘೋಷಣೆಯ ನಂತರ ಮಸ್ಕ್ ಟ್ವೀಟ್ ಮಾಡಿದ್ದು, ಟ್ವಿಟರ್ ಕೆಲವೊಂದು ಖಾತೆಗಳಿಗೆ ನೀಡಿದ್ದ ಅಧಿಕೃತ ಹಣೆಪಟ್ಟಿಯನ್ನು ತೆಗೆದುಹಾಕಿದ ನಂತರ ಅದನ್ನು ಪುನಃಸ್ಥಾಪಿಸಿದ ಮೇಲೂ ಟ್ವೀಟ್ ಗಮನಸೆಳೆದಿದೆ. ಟ್ವಿಟರ್ನ ಹೊಸ ಯಜಮಾನಿಕೆಯನ್ನು ವಹಿಸಿಕೊಂಡಿರುವ ಎಲೋನ್ ಮಸ್ಕ್, ಪಾವತಿಸುವ ಚಂದಾದಾರಿಗೆ ನೀಲಿ ಚೆಕ್ ಗುರುತನ್ನು ಅನುಮತಿಸಿದಾಗಿನಿಂದ ಕಂಪನಿಯು ವಂಚಕ ಖಾತೆಗಳ ದಾಳಿಯನ್ನೆದುರಿಸುತ್ತಿದೆ.
ಹೊಸ ವೈಶಿಷ್ಟ್ಯದ ದುರುಪಯೋಗ
ಅಮೇರಿಕನ್ ಬಾಸ್ಕೆಟ್ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ನ ಪರಿಶೀಲಿಸಿದ ನಕಲಿ ಖಾತೆಯ ನೀಲಿ ಟಿಕ್ನೊಂದಿಗೆ ಹಿಡಿದು, ನಿಂಟೆಂಡೊ ಆಫ್ ಅಮೇರಿಕಾ ಅವರ ನಕಲಿ ಖಾತೆಗಳವರೆಗೆ, ಹಲವಾರು ಬಳಕೆದಾರರು ಇತರರಂತೆ ಸೋಗು ಹಾಕಲು ಹೊಸ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಪರಿಣಾಮವಾಗಿ ಕಂಪನಿಯು ಅಧಿಕೃತ ಟ್ಯಾಗ್ ಅನ್ನು ಮರಳಿ ತರುವ ಅನಿವಾರ್ಯತೆಯನ್ನು ಹೊಂದಿತು. ನಕಲಿ ಖಾತೆಯನ್ನು ಎದುರಿಸುವ ನಮ್ಮ ಪ್ರಯತ್ನದಲ್ಲಿ ಕೆಲವು ಖಾತೆಗಳಿಗೆ ಅಧಿಕೃತ ಎಂಬ ಹಣೆಪಟ್ಟಿಯನ್ನು ಸೇರಿಸಲು ನಾವು ಬಾಧ್ಯಸ್ಥರಾಗಿರುವೆವು ಎಂಬುದಾಗಿ ಟ್ವಿಟರ್ ಬೆಂಬಲವು ಟ್ವೀಟ್ ಮಾಡಿದೆ.
ಸೋಗು ಹಾಕುವಿಕೆ ಹಾಗೂ ನಕಲಿ ಖಾತೆಗಳ ಕುರಿತು ತಮ್ಮ ಹೇಳಿಕೆಯನ್ನು ಮಸ್ಕ್ ಟ್ವೀಟ್ ಮಾಡಿದ್ದು, ಅನುಕರಣೆಗೆ ಮುಂದಾಗಿರುವ ಖಾತೆಗಳು ತಮ್ಮ ಹೆಸರಿನಲ್ಲಿ ಕೂಡ ಇದೇ ಅಂಶವನ್ನು ಒಳಗೊಂಡಿರಬೇಕು ಕೇವಲ ಪ್ರೊಫೈಲ್ನಲ್ಲಲ್ಲ ಎಂದು ತಿಳಿಸಿದ್ದು, ಇನ್ನಷ್ಟು ಹೆಚ್ಚು ನಿಖರವಾಗಿ ಹೇಳಬೇಕೆಂದರೆ, ವಿನೋದ ಅಥವಾ ಮೋಸದ ಹಿನ್ನಲೆಯಲ್ಲಿ ಖಾತೆಗಳು ನಕಲಿ ಖಾತೆಯ ಮೂಲಕ ಅನುಕರಣೆಯನ್ನು ನಡೆಸುತ್ತಿವೆ. ಮೂಲತಃ ಜನರನ್ನು ಮೋಸಗೊಳಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಉದ್ಯೋಗಿಗಳಿಗೆ ಕಠಿಣ ಡೆಡ್ಲೈನ್, ಕಚೇರಿ ಕೆಲಸಕ್ಕೆ ನಿಯಮಾವಳಿಗಳಿಲ್ಲ
ಕಠಿಣ ಗಡುವನ್ನು ಪೂರೈಸಲು ಹೆಚ್ಚುವರಿ ಸಮಯವನ್ನು ವಿನಿಯೋಗಿಸುತ್ತಿರುವ ಸಿಬ್ಬಂದಿಗಳೊಂದಿಗೆ ಮಸ್ಕ್, ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿ ದೀರ್ಘಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಈ ಚಿತ್ರ ಬಹಿರಂಗಗೊಂಡಿದೆ ಎಂಬುದಾಗಿ ವರದಿಯಾಗಿದೆ. ಟ್ವಿಟರ್ನ 50% ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದ ಅತಿದೊಡ್ಡ ಉದ್ಯೋಗಿ ವಜಾಗೊಳಿಸುವಿಕೆಯಿಂದ ಪಾರಾದ ವರ್ಕ್ ಫ್ರಮ್ ಹೋಮ್ನಿಂದ ಕಚೇರಿಗೆ ಮರಳುತ್ತಿರುವ ಉದ್ಯೋಗಿಗಳನ್ನು ಮಸ್ಕ್ ಭೇಟಿಯಾಗಿದ್ದಾರೆ. ಕೆಲಸದ ಅವಧಿಯನ್ನು ವಿಸ್ತರಿಸುವ ಮೂಲಕ, ಡೆಡ್ಲೈನ್ ಗುರಿಯೊಂದಿಗೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಮಸ್ಕ್ ಧನ್ಯವಾದವನ್ನರ್ಪಿಸುವ ಮೇಲ್ ಒಂದನ್ನು ಕಳುಹಿಸಿದ್ದಾರೆ ಎಂಬುದು ತಿಳಿದುಬಂದಿದೆ. ಅದಾಗ್ಯೂ ಈ ಇಮೇಲ್ ಹೆಚ್ಚಿನ ಉದ್ಯೋಗಿಗಳಲ್ಲಿ ಅನೇಕ ಪ್ರಶ್ನೆಗಳು ಹಾಗೂ ಅನುಮಾನಗಳನ್ನುಂಟು ಮಾಡಿದೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: Twitter: ಸರ್ಚ್ ಆಪ್ಶನ್ ಸರಿಪಡಿಸಲು ಎಲಾನ್ ಮಸ್ಕ್ ನೇಮಿಸಿಕೊಂಡದ್ದು ಯಾರನ್ನು ಗೊತ್ತಾ?
ಕಠಿಣ ಡೆಡ್ಲೈನ್ ಸವಾಲುಗಳು ಹಾಗೂ ವರ್ಕ್ ಫ್ರಮ್ ಹೋಮ್ನಿಂದ ಕಚೇರಿಗೆ ಮರಳಿರುವ ಉದ್ಯೋಗಿಗಳಿಗೆ ಯಾವುದೇ ನಿಯಮಾವಳಿಗಳನ್ನು ಸಂಸ್ಥೆ ರೂಪಿಸಿಲ್ಲ ಎಂಬುದಾಗಿ ಉದ್ಯೋಗಿಗಳು ತಿಳಿಸಿದ್ದು, ಮಾನವ ಸಂಪನ್ಮೂಲ ವಿಭಾಗ ಕೂಡ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ