Elon Musk: ಇನ್ಮುಂದೆ ವರ್ಕ್ ಫ್ರಮ್ ಹೋಂ ಇಲ್ಲ! ಆಫೀಸಿಗೆ ಬರಲೇಬೇಕು; ಎಲೋನ್ ಮಸ್ಕ್ ಹೀಗಂದಿದ್ದೇಕೆ?

ಟೆಸ್ಲಾದ ಸಿಇಒ ಆದ ಎಲೋನ್ ಮಸ್ಕ್ ಅವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಇದರ ಬಗ್ಗೆ ಏನೆಂದು ಹೇಳಿದ್ದಾರೆ ನೋಡಿ. ಇವರು ಮಂಗಳವಾರ ತಮ್ಮ ಸಿಬ್ಬಂದಿಗಳಿಗೆ ‘ರಿಮೋಟ್ ಕೆಲಸವು’ ಇನ್ನು ಮುಂದೆ ಕಂಪನಿಯಲ್ಲಿ ಸ್ವೀಕಾರಾರ್ಹವಲ್ಲ ಎಂದು ತಿಳಿಸಿದ್ದಾರೆ.

ಎಲೋನ್ ಮಸ್ಕ್

ಎಲೋನ್ ಮಸ್ಕ್

  • Share this:
ಕಳೆದ ಎರಡು ವರ್ಷಗಳು ಸಾಂಕ್ರಾಮಿಕ ರೋಗ ಕೋವಿಡ್-19 ವೈರಸ್ ಹಾವಳಿಂದಾಗಿ ಬಹುತೇಕ ಕಂಪನಿಗಳು (Company) ತಮ್ಮ ಕಟ್ಟಡಗಳಿಗೆ ಬೀಗ ಹಾಕಿದ್ದು, ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿ (Work From Home) ಎಂದು ಹೇಳಿದ್ದವು ಮತ್ತು ಅವರಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಸಹ ಮಾಡಿಕೊಡುವಲ್ಲಿ ಅನೇಕ ಕಂಪನಿಗಳು ಬೆಂಬಲ ನೀಡಿದ್ದವು. ಆದರೆ ಈಗ ಕೆಲವು ತಿಂಗಳುಗಳಿಂದ ವಿಶ್ವದ ಬಹುತೇಕ ಭಾಗಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿನ (Covide Cases) ಇಳಿಕೆಯು ಕಂಡು ಬರುತ್ತಿದ್ದು ಎರಡು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಕಚೇರಿಗಳನ್ನು (Office) ಮತ್ತೆ ತೆರೆಯಲು ಕಾರಣವಾಗಿದೆ.ಕೆಲವು ಜನರು ಮತ್ತೆ ಕಚೇರಿಯಿಂದ ಕೆಲಸ ಮಾಡಲು ಉತ್ಸುಕರಾಗಿದ್ದರೆ, ಉಳಿದ ಅರ್ಧದಷ್ಟು ಜನರು ಕಚೇರಿಯಿಂದ ಕೆಲಸ ಮಾಡುವ ಆಲೋಚನೆಯನ್ನು ವಿರೋಧಿಸುತ್ತಿದ್ದರು ಎಂಬುದನ್ನು ನಾವು ಅನೇಕ ವರದಿಗಳಲ್ಲಿ ಈಗಾಗಲೇ ಓದಿದ್ದೇವು.

ಹೌದು..ಕೆಲ ಉದ್ಯೋಗಿಗಳು ಆಫೀಸಿಗೆ ಬಂದು ಕೆಲಸ ಮಾಡುವುದರಿಂದ ಉತ್ಪಾದಕತೆ ಕಡಿಮೆ ಆಗುತ್ತದೆ, ಪ್ರಯಾಣ ಸೇರಿದಂತೆ ಇತರ ವಿಷಯಗಳಿಗೆ ಹೆಚ್ಚಿನ ಸಮಯವನ್ನು ವ್ಯಯಿಸುತ್ತದೆ ಎಂದು ಅವರು ಭಾವಿಸುತ್ತಾರೆ. ಇತ್ತೀಚೆಗೆ ಆ್ಯಪಲ್ ಅಂತಹ ದೊಡ್ಡ ಕಂಪನಿಯ ಮಷಿನ್ ಲರ್ನಿಂಗ್ ನಿರ್ದೇಶಕ ಇಯಾನ್ ಗುಡ್ ಫೆಲೋ ಕೂಡ ಅದೇ ರೀತಿ ಭಾವಿಸಿ ಅವರು ಕಚೇರಿಗೆ ಮರಳಲು ಕೇಳಿದ ನಂತರ ಆ್ಯಪಲ್ ನಲ್ಲಿರುವ ತಮ್ಮ ಕೆಲಸವನ್ನು ತೊರೆದಿದ್ದಾರೆ ಎಂಬ ವರದಿಯನ್ನು ಸಹ ನಾವು ಓದಿದ್ದೆವು.

ಆಫೀಸಿಗೆ ಬಂದು ಕೆಲಸ ಮಾಡಲು ನಿರಾಕರಿಸುತ್ತಿರುವ ಉದ್ಯೋಗಿಗಳು
ಇದೇ ರೀತಿ ಕೆಲವು ಕಂಪನಿಗಳಲ್ಲಿ ಉದ್ಯೋಗಿಗಳು ಆಫೀಸಿಗೆ ಮತ್ತೆ ಬಂದು ಕೆಲಸ ಮಾಡುವ ರೀತಿಯನ್ನು ವಿರೋಧಿಸಿದ್ದಾರೆ. ಈಗ ಟೆಸ್ಲಾದ ಸಿಇಒ ಆದ ಎಲೋನ್ ಮಸ್ಕ್ ಅವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಇದರ ಬಗ್ಗೆ ಏನೆಂದು ಹೇಳಿದ್ದಾರೆ ನೋಡಿ. ಇವರು ಮಂಗಳವಾರ ತಮ್ಮ ಸಿಬ್ಬಂದಿಗಳಿಗೆ ‘ರಿಮೋಟ್ ಕೆಲಸವು’ ಇನ್ನು ಮುಂದೆ ಕಂಪನಿಯಲ್ಲಿ ಸ್ವೀಕಾರಾರ್ಹವಲ್ಲ ಎಂದು ತಿಳಿಸಿದ್ದಾರೆ. ಎಂದರೆ ಇದರರ್ಥ ಇನ್ನು ಮುಂದೆ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡ್ತೀವಿ ಅಂತ ಹೇಳಿದರೆ ಕಂಪನಿ ಅದನ್ನು ಒಪ್ಪುವುದಿಲ್ಲ ಅಂತ.



ವಾರಕ್ಕೆ ಕನಿಷ್ಠ 40 ಗಂಟೆ ಕಚೇರಿಯಲ್ಲಿ ಕೆಲಸ ಮಾಡಬೇಕು
ಟ್ವಿಟರ್ ನಲ್ಲಿ ಈಗಾಗಲೇ ಹರಿದಾಡುತ್ತಿರುವ ಇ-ಮೇಲ್ ನಲ್ಲಿ ಮಸ್ಕ್ ಅವರು "ರಿಮೋಟ್ ಕೆಲಸ ಮಾಡಲು ಬಯಸುವ ಉದ್ಯೋಗಿಗಳು ವಾರಕ್ಕೆ ಕನಿಷ್ಠ 40 ಗಂಟೆಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಬೇಕು ಅಥವಾ ಟೆಸ್ಲಾದಿಂದ ಹೊರ ಹೋಗಬಹುದು" ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. "ಇದು ನಾವು ಸಾಮಾನ್ಯವಾಗಿ ಕಾರ್ಖಾನೆ ಕಾರ್ಮಿಕರಲ್ಲಿ ಕೇಳುವುದಕ್ಕಿಂತ ಕಡಿಮೆ ಅವಧಿಯಾಗಿದೆ" ಎಂದು ಅವರು ಹೇಳಿದರು. ಕಚೇರಿಯಲ್ಲಿ ಕನಿಷ್ಠ ಗಂಟೆಗಳ ಕಾಲ ಕೆಲಸ ಮಾಡಲು ಸಾಧ್ಯವಾಗದ "ಅಸಾಧಾರಣ ಕೊಡುಗೆದಾರರು" ಇದ್ದರೆ, ಮಸ್ಕ್ ಸ್ವತಃ ಅವರನ್ನು ನೇರವಾಗಿ ಪರಿಶೀಲಿಸುತ್ತಾರೆ ಮತ್ತು ಅನುಮೋದಿಸುತ್ತಾರೆ ಎಂದು ಟೆಕ್ ಬಿಲಿಯನೇರ್ ಹೇಳಿದರು.

ಇದನ್ನೂ ಓದಿ: Microsoft: ಉದ್ಯೋಗಿಗಳ ಸಂಬಳ ಜಾಸ್ತಿ ಮಾಡುತ್ತಂತೆ ಮೈಕ್ರೋಸಾಫ್ಟ್! ಸಿಇಒ ಸತ್ಯ ನಾಡೆಲ್ಲಾ ಘೋಷಣೆ!

"ಕಚೇರಿ" ಎಂದರೆ ಅದು ಒಂದು ಮುಖ್ಯ ಟೆಸ್ಲಾ ಕಚೇರಿಯಾಗಿರಬೇಕೇ ಹೊರತು ದೂರದ ಯಾವುದೋ ಬ್ರ್ಯಾಂಚ್ ಆಫೀಸ್ ಅಲ್ಲ ಎಂದು ಇ-ಮೇಲ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕಚೇರಿಯಿಂದ ಕೆಲಸ ಮಾಡುವುದು "ಪ್ರಾಚೀನ ಪರಿಕಲ್ಪನೆ" ಎಂದು ಭಾವಿಸುವ ಜನರ ಬಗ್ಗೆ ಪ್ರತಿಕ್ರಿಯಿಸಲು ಮಸ್ಕ್ ಅವರನ್ನು ಕೇಳಿದಾಗ "ಅವರು ಬೇರೆಡೆ ಹೋಗಿ ಕೆಲಸ ಮಾಡಬಹುದು" ಎಂದು ಅವರು ಉತ್ತರಿಸಿದರು.

ಚೀನಾ ಜನರ ಕಠಿಣ ಪರಿಶ್ರಮದ ಬಗ್ಗೆ ಉದಾಹರಣೆ ತೆಗೆದುಕೊಂಡ ಮಸ್ಕ್
ಎಲೋನ್ ಮಸ್ಕ್ ಅವರು ಅಮೆರಿಕದ ಜನರು ಈಗ ಮತ್ತೆ ಆಫೀಸಿಗೆ ಹೋಗಿ ಕೆಲಸ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ಹಿಂದೆ ಹೇಳಿದ್ದರು. ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ಮಾತನಾಡಿದ ಅವರು, "ಚೀನಾದಲ್ಲಿ ಸಾಕಷ್ಟು ಪ್ರತಿಭಾವಂತ, ಕಠಿಣ ಪರಿಶ್ರಮಿ ಜನರು ಮಾತ್ರ ಉತ್ಪಾದನೆಯಲ್ಲಿ ಬಲವಾಗಿ ನಂಬಿಕೆ ಇಟ್ಟಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ: Sankarsh Chand: 100 ಕೋಟಿಯ ಒಡೆಯ ಈ 23ರ ಯುವಕ! ಕಾಲೇಜು ಓದಿದ್ದು ಎರಡೇ ವರ್ಷ! 

ಚೀನಾ ಜನರ ಕಠಿಣ ಪರಿಶ್ರಮದ ಬಗ್ಗೆ ಉದಾಹರಣೆ ತೆಗೆದುಕೊಂಡು ಮಸ್ಕ್ ಅವರು "ಚೀನಾದವರು ಕೇವಲ ಮಧ್ಯರಾತ್ರಿಯವರೆಗೆ ಕೆಲಸ ಮಾಡುವುದಿಲ್ಲ, ಅವರು ಮುಂಜಾನೆಯು ಸಹ ಬೇಗನೆ ಎಂದರೆ 3 ಗಂಟೆಗೆ ಎದ್ದೇಳುತ್ತಾರೆ" ಎಂದು ಮಸ್ಕ್ ಹೇಳಿದ್ದರು.
Published by:Ashwini Prabhu
First published: