Twitter v/s Elon Musk: ಕಾನೂನು ಹೋರಾಟದಲ್ಲಿ ಭಾರತ ಸರ್ಕಾರವನ್ನು ಉಲ್ಲೇಖಿಸಿದ ಮಸ್ಕ್‌

ಟ್ವಿಟ್ಟರ್ ಖರೀದಿ ಪ್ರಕ್ರಿಯೆಯಲ್ಲಿ ಆಗಿರುವ ಅತಿದೊಡ್ಡ ಟ್ವಿಸ್ಟ್‌ ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಜಗತ್ತಿನ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ ನಡುವೆ ಈಗ ನಡೆಯುತ್ತಿರುವ ಬಹು ದೊಡ್ಡ ಕಾನೂನು ಹೋರಾಟ ಇದಾಗಿದೆ. ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ನೀಡಲು ಕಂಪನಿಯು ವಿಫಲವಾದ ನಂತರ ವಿಶ್ವದ ಶ್ರೀಮಂತ ವ್ಯಕ್ತಿ, ಟೆಸ್ಲಾ ಕಂಪನಿ ಮಾಲೀಕ ಟ್ವೀಟರ್‌ ಕಂಪನಿಯನ್ನು ಖರೀದಿಸುವ ಪ್ರಕ್ರಿಯೆಯನ್ನು ರದ್ದು ಮಾಡಿದ್ದಾರೆ.

ಎಲಾನ್‌ ಮಸ್ಕ್‌

ಎಲಾನ್‌ ಮಸ್ಕ್‌

  • Share this:
ವಾಷಿಂಗ್ಟನ್: ಮಸ್ಕ್‌ (Musk) ಟ್ವಿಟರ್‌ (Twitter) ಖರೀದಿಯನ್ನು ರದ್ದು ಮಾಡಿದ ಬೆನ್ನಲ್ಲಿಯೇ, ಟೆಸ್ಲಾ ಮಾಲೀಕನ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಟ್ವಿಟರ್‌ ಘೋಷಣೆ ಮಾಡಿತ್ತು. ಈ ಖರೀದಿ ಪ್ರಕ್ರಿಯೆಯಲ್ಲಿ ಆಗಿರುವ ಅತಿದೊಡ್ಡ ಟ್ವಿಸ್ಟ್‌ ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಜಗತ್ತಿನ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ (Social Media) ವೇದಿಕೆ ಟ್ವಿಟರ್‌ ನಡುವೆ ಈಗ ನಡೆಯುತ್ತಿರುವ ಬಹು ದೊಡ್ಡ ಕಾನೂನು ಹೋರಾಟ ಇದಾಗಿದೆ. ನಕಲಿ ಖಾತೆಗಳ (Fake Accounts) ಸಂಖ್ಯೆಯ ಬಗ್ಗೆ ಮಾಹಿತಿಯನ್ನು ನೀಡಲು ಕಂಪನಿಯು (Company) ವಿಫಲವಾದ ನಂತರ ವಿಶ್ವದ ಶ್ರೀಮಂತ ವ್ಯಕ್ತಿ, ಟೆಸ್ಲಾ ಕಂಪನಿ ಮಾಲೀಕ ಟ್ವೀಟರ್‌ ಕಂಪನಿಯನ್ನು ಖರೀದಿಸುವ ಪ್ರಕ್ರಿಯೆಯನ್ನು ರದ್ದು (Cancellation) ಮಾಡಿದ್ದಾರೆ.

3.52 ಲಕ್ಷ ಕೋಟಿ ರೂಪಾಯಿಗೆ ಟ್ವಿಟರ್ ಖರೀದಿ ಮಾಡುವುದಾಗಿ ಘೋಷಣೆ 

ಬರೋಬ್ಬರಿ 3.52 ಲಕ್ಷ ಕೋಟಿ ರೂಪಾಯಿಗೆ ಟ್ವಿಟರ್ ಕಂಪನಿಯನ್ನು ಖರೀದಿ ಮಾಡುವುದಾಗಿ ಎಲಾನ್‌ ಮಸ್ಕ್‌ ಈ ಹಿಂದೆ ಘೋಷಿಸಿದ್ದರು. ಆದರೆ ವಿಫಲವಾದ ಟ್ವಿಟರ್‌ ಸ್ವಾಧೀನ ಬಿಡ್‌ನ ಕುರಿತು ಟ್ವಿಟರ್‌ನೊಂದಿಗೆ ನ್ಯಾಯಾಲಯದ ಯುದ್ಧದಲ್ಲಿ ಟೆಸ್ಲಾ ಸಿಇಓ ಎಲಾನ್‌ ಮಸ್ಕ್‌ ಲಾಕ್‌ ಆಗಿದ್ದಾರೆ.

ಟ್ವಿಟ್ಟರ್ ಬಗ್ಗೆ ಎಲಾನ್ ಮಾಸ್ಕ್ ಏನು ಹೇಳಿದ್ದಾರೆ ನೋಡಿ

ಈ ಸಾಮಾಜಿಕ ಮಾಧ್ಯಮ ಟ್ವಿಟರ್‌ ದೈತ್ಯ, ಭಾರತ ಸರ್ಕಾರದ ವಿರುದ್ಧ "ಅಪಾಯಕಾರಿ" ದಾವೆಗಳನ್ನು ಬಹಿರಂಗಪಡಿಸಲು ವಿಫಲವಾದ ಮೂಲಕ ತನ್ನ ಮೂರನೇ ಅತಿದೊಡ್ಡ ಮಾರುಕಟ್ಟೆಯನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಮಸ್ಕ್‌ ಹೇಳಿದ್ದಾರೆ. ಡೆಲವೇರ್ ನ್ಯಾಯಾಲಯದಲ್ಲಿ ಕಳೆದ ಶುಕ್ರವಾರ ಮುದ್ರೆಯಡಿಯಲ್ಲಿ ಸಲ್ಲಿಸಲಾದ ಮತ್ತು ಗುರುವಾರ ಸಾರ್ವಜನಿಕಗೊಳಿಸಲಾದ ಕೌಂಟರ್‌ಸ್ಯೂಟ್‌ನಲ್ಲಿ, ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಾಮಾಜಿಕ ಮಾಧ್ಯಮ ಕಂಪನಿಯಾದ "ಹುಡ್ವಿಂಕ್" ಅನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದೇನೆ ಎಂದು ಮಸ್ಕ್ ಹೇಳಿದ್ದಾರೆ.

ಇದನ್ನೂ ಓದಿ: Elon Musk: ಇವ್ರೇ ನೋಡಿ ಜಗತ್ತಿನ ನಂ 1 ಶ್ರೀಮಂತನ ಹೊಸ ಗರ್ಲ್​ಫ್ರೆಂಡ್​! ಅವ್ರಿಗೆ 50 ವರ್ಷ, ಇವ್ಳಿಗೆ 27 ವರ್ಷ ಏನ್​ ಕಥೆನೋ?

ನ್ಯಾಯಾಲಯದ ದಾಖಲೆಗಳ ಪ್ರಕಾರ ಟ್ವಿಟರ್ ಸಾಮಾಜಿಕ ಮಾದ್ಯಮವು ಭಾರತದಲ್ಲಿ ಸ್ಥಳೀಯ ಕಾನೂನನ್ನು ಅನುಸರಿಸಬೇಕು ಎಂದು ಮಸ್ಕ್ ಹೇಳಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಟೆಕ್ ರಿಪೋರ್ಟರ್ ಕೇಟ್ ಕಾಂಗರ್ ಅವರು ಪೋಸ್ಟ್ ಮಾಡಿದ ನ್ಯಾಯಾಲಯದ ದಾಖಲೆಗಳ ಸ್ನ್ಯಾಪ್‌ಶಾಟ್‌ಗಳು ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿರುವುದು ಕಂಡುಬಂದಿದೆ.

ಟ್ವಿಟರ್‌ ವರ್ಸ್‌ಸ್‌ ಮಸ್ಕ್‌

"2021 ರಲ್ಲಿ, ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತನಿಖೆ ಮಾಡಲು, ಮಾಹಿತಿಯನ್ನು ಕಂಡುಹಿಡಿಯಲು ನಿರಾಕರಿಸಿದ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ಅವಕಾಶ ನೀಡುವ ಕೆಲವು ನಿಯಮಗಳನ್ನು ವಿಧಿಸಿತು.

ಇದರ ಕುರಿತು “ಟ್ವಿಟರ್ ಯಾವ ದೇಶದಲ್ಲಿ ಕಾರ್ಯನಿರ್ವಹಿಸುತ್ತದೆಯೋ ಆ ದೇಶಗಳ ಕಾನೂನುಗಳ ನಿಯಮವನ್ನು ಅನುಸರಿಸುತ್ತದೆ" ಎಂಬ ಹೇಳಿಕೆ ನೀಡಿರುವ ಮಸ್ಕ್‌ ಬಗ್ಗೆ ಟ್ವಿಟರ್‌ಗಳ ಸರಣಿಯನ್ನು ಟ್ವಿಟರ್‌ ವರ್ಸ್‌ಸ್‌ ಮಸ್ಕ್‌ ಎಂದು, ಮೊಕದ್ದಮೆಯಲ್ಲಿನ ಕಾನೂನು ದಾಖಲಾತಿಗಳ ವಿವರಣೆಯನ್ನು ಇಲ್ಲಿ ಓದಿ ಎಂದು ಶೀರ್ಷಿಕೆಯನ್ನು ನೀಡಿ ನ್ಯೂಯಾರ್ಕ್ ಟೈಮ್ಸ್ ಟೆಕ್ ವರದಿಗಾರ್ತಿ ಕೇಟ್ ಕಾಂಗರ್ ಅವರು ಪೋಸ್ಟ್‌ ಮಾಡಿದ್ದಾರೆ.

ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯ ಕುರಿತು ಉಲ್ಲೇಖ

ನ್ಯಾಯಾಲಯದ ಹೋರಾಟದಲ್ಲಿ ಎಲಾನ್ ಮಸ್ಕ್ ಅವರ ಹೇಳಿಕೆಗಳಿಗೆ, ಟ್ವಿಟರ್ "ನ್ಯಾಯಾಲಯವು ಎಲ್ಲ ವಿಷಯವನ್ನು ಸಂಪೂರ್ಣ ಮತ್ತು ನಿಖರವಾಗಿ ಪರಿಶೀಲಿಸಿದೆ. ನ್ಯಾಯಾಲಯವು ಗೌರವಯುತವಾಗಿ ಎಲ್ಲ ವಿಷಯಗಳನ್ನು ಉಲ್ಲೇಖಿಸುತ್ತದೆ. ಟ್ವಿಟರ್ ಆರೋಪಗಳನ್ನು ಸುಳ್ಳು ಎಂದು ಹೇಳಲು ಸಾಕಷ್ಟು ಜ್ಞಾನ ಅಥವಾ ಮಾಹಿತಿಯನ್ನು ಹೊಂದಿಲ್ಲ ಎಂದು ಪ್ರತಿಕ್ರಿಯಿಸಿತು ಮತ್ತು ಆದ್ದರಿಂದ ಮಾಹಿತಿ ನೀಡಲು ಟ್ವಿಟರ್ ನಿರಾಕರಿಸುತ್ತದೆ” ಎಂದು ಹೇಳಿದೆ.

ಜುಲೈನಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯನ್ನು ಉಲ್ಲೇಖಿಸಿದ ಎಲಾನ್ ಮಸ್ಕ್, ಭಾರತ ಸರ್ಕಾರದ ವಿರುದ್ಧದ ಮೊಕದ್ದಮೆಯನ್ನು ಬಹಿರಂಗಪಡಿಸಲು ಟ್ವಿಟರ್ ವಿಫಲವಾದ ಬಗ್ಗೆಯೂ ಆಕ್ಷೇಪಣೆ ಹೊರಡಿಸಿದರು.

ಇದನ್ನೂ ಓದಿ: Elon Musk ಜೊತೆಗೆ ಒಪ್ಪಂದ ಮಾಡಿಕೊಂಡ ಅಮೆರಿಕ ಸೈನ್ಯ! 60 ನಿಮಿಷದಲ್ಲಿ ಶಸ್ತಾಸ್ತ್ರ ತಲುಪಿಸಲಿದೆ ಸ್ಟಾರ್​ಶಿಪ್​ ರಾಕೆಟ್​

ಸಾಮಾಜಿಕ ಮಾಧ್ಯಮ ಟ್ವಿಟರ್, ಕರ್ನಾಟಕ ಹೈಕೋರ್ಟ್‌ನಲ್ಲಿ ತನ್ನ ವಕೀಲರ ಮೂಲಕ, “ಸಮರ್ಥ ಅಧಿಕಾರಿಗಳು ಕಾನೂನುಬಾಹಿರವೆಂದು ಪರಿಗಣಿಸಿದ ವಿಷಯವನ್ನು ನಿರ್ಬಂಧಿಸಲು ಭಾರತ ಸರ್ಕಾರದ ಆದೇಶಗಳನ್ನು ಅನುಸರಿಸಿದರೆ ಅವರ ಭಾರತೀಯ ಕಂಪನಿಯ ವ್ಯವಹಾರವು ಸಂಪೂರ್ಣವಾಗಿ ಮುಚ್ಚಿ ಹೋಗುತ್ತದೆ ಮುಚ್ಚಲ್ಪಡುತ್ತದೆ”ಎಂದು ಟ್ವಿಟರ್‌ ಪರ ವಕೀಲರು ಸರ್ಮರ್ಥಿಸಿಕೊಂಡಿದ್ದಾರೆ. ಈ ವಿಚಾರಣೆಯನ್ನು ಹೈಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿದೆ.
Published by:Ashwini Prabhu
First published: