Space Expeditions | ಬಾಹ್ಯಾಕಾಶ ಪ್ರಯಾಣಕ್ಕಾಗಿ ವೆಚ್ಚ ಮಾಡುವ ಬದಲಿಗೆ ಭೂಮಿಯ ಸಮಸ್ಯೆಗಳತ್ತ ಗಮನ ಹರಿಸಿ: ಬಿಲ್ ಗೇಟ್ಸ್

Bill Gates: ಅಮೆರಿಕಾದ ಲೇಟ್ ನೈಟ್ ಶೋ ಜೇಮ್ಸ್ ಕಾರ್ಡೆನ್ ಆಯೋಸಿದ್ದ ಲೇಟ್ ಲೇಟ್ ಶೋ ವಿದ್ ಜೇಮ್ಸ್ ಕಾರ್ಡೆನ್ ಹವಾಮಾನ ಬಿಕ್ಕಟ್ಟಿನ ಕುರಿತಾಗಿ ಬಿಲ್ ಗೇಟ್ಸ್ ಅನ್ನು ಪ್ರಶ್ನಿಸಿದಾಗ ಶತಕೋಟ್ಯಾಧಿಪತಿಗಳ ಇತ್ತೀಚಿನ ನಡೆಯನ್ನು ಬಿಲ್ ಗೇಟ್ಸ್ ಟೀಕಿಸಿದ್ದು, ಇದೊಂದು ಅತ್ಯುನ್ನತ ಟೀಕೆ (ದ ಕ್ಲಾಸಿಯೆಸ್ಟ್ ಬರ್ನ್) ಎಂದು ಕಾರ್ಡೆನ್ ಇದನ್ನು ಕರೆದಿದ್ದಾರೆ.

Bill Gates / ಬಿಲ್ ಗೇಟ್ಸ್

Bill Gates / ಬಿಲ್ ಗೇಟ್ಸ್

  • Share this:
    Bill Gates: ಇತ್ತೀಚಿನ ದಿನಗಳಲ್ಲಿ ಬಿಲಿಯಾಧಿಪತಿಗಳು ಬಾಹ್ಯಾಕಾಶ ಪ್ರಯಾಣದಲ್ಲಿ ಹಣ ವಿನಿಯೋಗ ಮಾಡುತ್ತಿದ್ದು ಭೂಮಿಯ ಮೇಲಿರುವ ಹಲವಾರು ಸಮಸ್ಯೆಗಳನ್ನು ನಿವಾರಿಸುವುದರ ಬದಲಿಗೆ ಭೂಮಿಯಿಂದ ತಪ್ಪಿಸಿಕೊಂಡು ಬಾಹ್ಯಾಕಾಶದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ ಈ ನಿಟ್ಟಿನಲ್ಲಿ ಶತಕೋಟ್ಯಾಧಿಪತಿಗಳಾದ ರಿಚರ್ಡ್ ಬ್ರಾನ್ಸನ್, ಎಲಾನ್ ಮಸ್ಕ್ (Elon Musk) ಹಾಗೂ ಜೆಫ್ ಬೆಜೋಸ್‌ರನ್ನು(Jeff Bezos) ತರಾಟೆಗೆ ತೆಗೆದುಕೊಂಡಿದ್ದು ಅವರು ನಡೆಸುತ್ತಿರುವ ಬಾಹ್ಯಾಕಾಶ ಪ್ರಯಾಣ ನಿರರ್ಥಕ ಎಂದು ಟೀಕಿಸಿದ್ದಾರೆ . ಬಿಲ್ ಗೇಟ್ಸ್ ಹವಾಮಾನ ಬದಲಾವಣೆಗಳ ಮಹತ್ವಾಕಾಂಕ್ಷೆ ಹಾಗೂ ಭೂಮಿಯನ್ನು ಇನ್ನಷ್ಟು ಸಮರ್ಥನೀಯಗೊಳಿಸುವ ಅಂಶಗಳತ್ತ ಗಮನ ಹರಿಸಿದ್ದು, ಗಣ್ಯ ವ್ಯಕ್ತಿಗಳು ಇನ್ನೊಂದು ಗ್ರಹವನ್ನು ವಸಾಹತುವನ್ನಾಗಿಸಿ ಭೂಮಿಯಿಂದ ತಪ್ಪಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಖಂಡಿಸಿದ್ದಾರೆ.

    ಅಮೆರಿಕಾದ ಲೇಟ್ ನೈಟ್ ಶೋ ಜೇಮ್ಸ್ ಕಾರ್ಡೆನ್ ಆಯೋಸಿದ್ದ ಲೇಟ್ ಲೇಟ್ ಶೋ ವಿದ್ ಜೇಮ್ಸ್ ಕಾರ್ಡೆನ್ ಹವಾಮಾನ ಬಿಕ್ಕಟ್ಟಿನ ಕುರಿತಾಗಿ ಬಿಲ್ ಗೇಟ್ಸ್ ಅನ್ನು ಪ್ರಶ್ನಿಸಿದಾಗ ಶತಕೋಟ್ಯಾಧಿಪತಿಗಳ ಇತ್ತೀಚಿನ ನಡೆಯನ್ನು ಬಿಲ್ ಗೇಟ್ಸ್ ಟೀಕಿಸಿದ್ದು, ಇದೊಂದು ಅತ್ಯುನ್ನತ ಟೀಕೆ (ದ ಕ್ಲಾಸಿಯೆಸ್ಟ್ ಬರ್ನ್) ಎಂದು ಕಾರ್ಡೆನ್ ಇದನ್ನು ಕರೆದಿದ್ದಾರೆ. ಇತ್ತೀಚೆಗೆ ಹೆಚ್ಚಿನ ಗಣ್ಯವ್ಯಕ್ತಿಗಳು ಬಾಹ್ಯಾಕಾಶದಲ್ಲಿ ಹೂಡಿಕೆ ಮಾಡುತ್ತಿದ್ದು ಈ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಬಿಲ್ ಗೇಟ್ಸ್‌ರನ್ನು ಕಾರ್ಡೆನ್ ಪ್ರಶ್ನಿಸಿದ್ದಾರೆ. ನನಗೆ ಈ ಬಗೆಯ ಅಭಿಲಾಶೆ ಇಲ್ಲ ಬದಲಾಗಿ ಭೂಮಿಯ ಮೇಲಿರುವ ಕಂಡು ಕೇಳರಿಯದ ರೋಗಗಳನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿದ್ದೇನೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಭೂಮಿಯಿಂದ ತಪ್ಪಿಸಿಕೊಳ್ಳಲು ಬಾಹ್ಯಾಕಾಶ ನೌಕೆಯನ್ನು ಬಳಸದೇ ಇರುವ ಒಬ್ಬ ಬಿಲಿಯನೇರ್ ಎಂದು ಕಾರ್ಡೆನ್ ಬಿಲ್ ಗೇಟ್ಸ್‌ರನ್ನು ಹೊಗಳಿದ್ದಾರೆ.

    ಇದೇ ಸಮಯದಲ್ಲಿ ಬಾಹ್ಯಾಕಾಶದ ಗೀಳನ್ನು ಶತಕೋಟ್ಯಾಧಿಪತಿಗಳು ಯಾಕೆ ಹೊಂದಿದ್ದಾರೆ ಎಂದು ಕೇಳಿದಾಗ ಬಿಲ್ ಗೇಟ್ಸ್ ನೀಡಿದ ಉತ್ತರ ಮಾತ್ರ ಬಿರುಸಾಗಿತ್ತು ಹಾಗೂ ಪ್ರಖರವಾಗಿತ್ತು. ನಾನು ಮಲೇರಿಯಾ ಹಾಗೂ ಎಚ್‌ಐವಿಯಂತಹ ಕಾಯಿಲೆಗಳಿಂದ ಮುಕ್ತಿ ಹೊಂದಿರುವೆ. ಹಾಗೂ ಈ ರೋಗದ ಕುರಿತಾಗಿ ನಾನು ಕಾಕ್‌ಟೇಲ್ ಪಾರ್ಟಿಗಳಲ್ಲಿ ಜನರೊಂದಿಗೆ ಮಾತನಾಡಿದರೆ ಯಾರೂ ಆ ವಿಷಯಕ್ಕೆ ಆಸಕ್ತಿ ತೋರಿಸುವುದಿಲ್ಲ. ಇನ್ನು ಬಾಹ್ಯಾಕಾಶ? ನಿಮಗೆ ಗೊತ್ತೇ ಭೂಮಿಯಲ್ಲಿ ನಾವು ಮಾಡಬೇಕಾಗಿರುವುದು ಬಹಳಷ್ಟಿದೆ. ಹೀಗೆಂದು ಬಿಲ್ ಗೇಟ್ಸ್ ನುಡಿದಿದ್ದಾರೆ. ಈ ಸಮಯದಲ್ಲಿ ಹವಾಮಾನ ಬಿಕ್ಕಟ್ಟಿನ ಸಮಸ್ಯೆಯನ್ನು ಪರಿಹರಿಸಲು ಜನರೂ ಕೂಡ ಪ್ರಯತ್ನ ಮಾಡಬೇಕಾಗಿದೆ ಎಂಬುದಾಗಿ ಕರೆ ನೀಡಿದ್ದಾರೆ.

    ಬಿಲ್ ಗೇಟ್ಸ್ ಈ ರೀತಿಯ ಟೀಕೆಗಳನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಹವಾಮಾನ ವಿಪತ್ತನ್ನು ಹೇಗೆ ತಪ್ಪಿಸುವುದು ಎಂಬ ತಮ್ಮ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ನಡೆದ ಸಂದರ್ಶನವೊಂದರಲ್ಲಿ ತೆಸ್ಲಾ ಸಿಇಒ ಹಾಗೂ ಸ್ಪೇಸ್ ಎಕ್ಸ್ ಬಾಸ್ ಎಲಾನ್ ಮಸ್ಕ್‌ಗೂ ಚಾಟಿ ಏಟಿನಂತಿರುವ ಕಾಮೆಂಟ್ ಅನ್ನು ನೀಡಿದ್ದು ಎಲಾನ್ ಅವರು ಭೂಮಿಯ ಮೇಲಿನ ಸಮಸ್ಯೆಗಳನ್ನು ನಿವಾರಿಸಬೇಕಾಗಿದೆ ಬಾಹ್ಯಾಕಾಶದಲ್ಲಿರುವುದನ್ನಲ್ಲ ಎಂದು ಒತ್ತಿ ಹೇಳಿದ್ದರು. ಎಲಾನ್ ಬಾಹ್ಯಾಕಾಶಕ್ಕೆ ಸಂಬಂಧಿಸಿದ ವ್ಯಕ್ತಿಯಲ್ಲ ತೆಸ್ಲಾದಂತಹ ಕಂಪನಿಯು ಪ್ರಯಾಣಿಕ ಕಾರುಗಳಂತಹ ಸುಲಭವಾದ ವಿಷಯಗಳಿಗೆ ಆದ್ಯತೆ ನೀಡುತ್ತಿದೆ ಅದೇ ರೀತಿ ಹವಾಮಾನ ಬಿಕ್ಕಟ್ಟಿನ ಸಮಸ್ಯೆಗೂ ಈ ಸಂಸ್ಥೆಗಳು ಕೆಲವೊಂದು ಪರಿಹಾರಗಳನ್ನೊದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಬಿಲ್ ಗೇಟ್ಸ್ ಅಭಿಪ್ರಾಯ ಪಟ್ಟಿದ್ದಾರೆ.





    Read Also: Chip Shortage: ದೇಶೀಯ ಚಿಪ್ ಕೊರತೆ ನಿವಾರಣೆಗೆ ಭಾರತ ತೈವಾನ್ ಒಪ್ಪಂದ; ಚೀನಾಗೆ ಹೆಚ್ಚಿದ ಉದ್ವಿಗ್ನತೆ

    ಈ ವಾರದ ಆರಂಭದಲ್ಲಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಯುಎನ್ ಸಾಮಾನ್ಯ ಸಭೆಯಲ್ಲಿ ತನ್ನ ಆರಂಭಿಕ ಭಾಷಣದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿರುವ ಅಂತರವನ್ನು ವ್ಯಾಖ್ಯಾನಿಸಿದ್ದಾರೆ. ಭೂಮಿಯಲ್ಲಿ ಮಿಲಿಯಗಟ್ಟಲೆ ಜನರು ಉಪವಾಸದಿಂದ ನರಳುತ್ತಿದ್ದರೆ ಅತ್ತ ಶತಕೋಟ್ಯಾಧಿಪತಿಗಳು ಬಾಹ್ಯಾಕಾಶಕ್ಕೆ ಮೋಜಿನ ಪ್ರಯಾಣದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿದ್ದರು.
    First published: