ಫಾದರ್​ ಸ್ಟಾನ್​ ಸ್ವಾಮಿ ಮರಣ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಿಂದ ಉಪವಾಸ ಸತ್ಯಾಗ್ರಹ

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ತಳೋಜಾ ಜೈಲು ಅಧೀಕ್ಷಕ ಕೌಸ್ತುಭ್ ಕುರ್ಲೀಕರ್‌ ನೀಡಿದ ಸಾಂಸ್ಥಿಕ ಕಿರುಕುಳವು ಸ್ವಾಮಿ ಅವರ ನಿಧನಕ್ಕೆ ಕಾರಣವಾಯಿತು ಎಂದು ಆರೋಪಿಗಳು ಆಪಾದಿಸಿದ್ದಾರೆ. ಸ್ವಾಮಿಯವರು ಬಂಧನದಲ್ಲಿದ್ದಾಗ ಎನ್‌ಐಎ ಹಾಗೂ ಕುರ್ಲೇಕರ್ ಸ್ವಾಮಿ ಅವರಿಗೆ ಹಿಂಸಿಸುವ ಯಾವುದೇ ಸಣ್ಣ ಅವಕಾಶವನ್ನೂ ಬಿಡುತ್ತಿರಲಿಲ್ಲ ಎಂದು ಅವರುಗಳು ಹೇಳಿದ್ದಾರೆ.

ಸ್ಟಾನ್ ಸ್ವಾಮಿ

ಸ್ಟಾನ್ ಸ್ವಾಮಿ

 • Share this:
   ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರ ನಿಧನ ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ 10 ಜನ ಹೋರಾಟಗಾರು ಬುಧವಾರ (ಜುಲೈ 7) ತಾಲೋಜ ಜೈಲಿನೊಳಗೆ ಉಪವಾಸ ಸತ್ಯಾಗ್ರಹ ನಡೆಸಿದರು.  ಫಾದರ್ ಸ್ಟ್ಯಾನ್ ಸ್ವಾಮಿಯವರದು ಸಾಂಸ್ಥಿಕ ಹತ್ಯೆ ಎಂದಿರುವ ಎಲ್ಗರ್ ಪ್ರಕರಣದಲ್ಲಿ ಬಂಧಿತ ಹೋರಾಟಗಾರರು ಎನ್‌ಐಎ ಅಧಿಕಾರಿಗಳ ಕಿರುಕುಳದಿಂದಲೇ ಸ್ವಾಮಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
  ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ತಳೋಜಾ ಜೈಲು ಅಧೀಕ್ಷಕ ಕೌಸ್ತುಭ್ ಕುರ್ಲೀಕರ್‌ ನೀಡಿದ ಸಾಂಸ್ಥಿಕ ಕಿರುಕುಳವು ಸ್ವಾಮಿ ಅವರ ನಿಧನಕ್ಕೆ ಕಾರಣವಾಯಿತು ಎಂದು ಆರೋಪಿಗಳು ಆಪಾದಿಸಿದ್ದಾರೆ. ಸ್ವಾಮಿಯವರು ಬಂಧನದಲ್ಲಿದ್ದಾಗ ಎನ್‌ಐಎ ಹಾಗೂ ಕುರ್ಲೇಕರ್ ಸ್ವಾಮಿ ಅವರಿಗೆ ಹಿಂಸಿಸುವ ಯಾವುದೇ ಸಣ್ಣ ಅವಕಾಶವನ್ನೂ ಬಿಡುತ್ತಿರಲಿಲ್ಲ ಎಂದು ಅವರುಗಳು ಹೇಳಿದ್ದಾರೆ.

  ಪ್ರತಿಭಟನೆಯ ಸಂಕೇತವಾಗಿ, ಈ ಪ್ರಕರಣದ ಸಹ-ಆರೋಪಿಗಳಾದ  ರೋನಾ ವಿಲ್ಸನ್, ಸುರೇಂದ್ರ ಗ್ಯಾಡ್ಲಿಂಗ್, ಸುಧೀರ್ ಧವಾಲೆ, ಮಹೇಶ್ ರೌತ್, ಅರುಣ್ ಫೆರೀರಾ, ವೆರ್ನಾನ್ ಗೊನ್ಸಾಲ್ವೆಸ್, ಗೌತಮ್ ನವಲಖಾ, ಆನಂದ್ ತೆಲ್ಟುಂಬ್ಡೆ, ರಮೇಶ್ ಗೈಚೋರ್ ಮತ್ತು ಸಾಗರ್ ಗೋರ್ಖೆ ಅವರು ಇಂದು ಉಪವಾಸವನ್ನು ಕೈಗೊಂಡಿದ್ದು ಫಾದರ್ ಸ್ಟ್ಯಾನ್ ಸ್ವಾಮಿ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ.
  “ಸ್ವಾಮಿಯವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದ್ದರೂ ಅವರನ್ನು ಆಸ್ಪತ್ರೆಯಿಂದ ಜೈಲಿಗೆ ಮರಳಿ ಸ್ಥಳಾಂತರಿಸಿದ್ದು, ಜೈಲಿನಲ್ಲಿ ಕಳಪೆ ಚಿಕಿತ್ಸೆ ನೀಡುತ್ತಿದ್ದುದು, ತೀರಾ ಪ್ರಾಥಮಿಕ ಅವಶ್ಯಕತೆಗಳಾದ ಸ್ಟ್ರಾ (ಹೀರುಗೊಳವೆ) ಹಾಗೂ ಸಿಪ್ಪರ್‌ ಕೊಡಲೂ ಸಹ ನಿರಾಕರಿಸಿದ್ದು,” ಮುಂತಾದ ಸಂಗತಿಗಳು ಜೈಲು ಅಧಿಕಾರಿಗಳು ತೋರಿದ ದುಂಡಾವರ್ತನೆಗೆ ನಿರ್ಲಕ್ಷ್ಯಕ್ಕೆ ಉದಾಹರಣೆ ಎನ್ನಲಾಗಿದೆ.
  ಉಪವಾಸ ಸತ್ಯಾಗ್ರಹದ ಮೂಲಕ ಆರೋಪಿಗಳು ಸ್ವಾಮಿಯವರ ಕಸ್ಟಡಿ ಸಾವಿನ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ. ಸ್ವಾಮಿಯವರ ನಿಧನಕ್ಕೆ ಕಾರಣವಾಗಿದ್ದಕ್ಕಾಗಿ ಜೈಲು ಅಧೀಕ್ಷರ ವಿರುದ್ಧ ಕೊಲೆ ಆರೋಪ ದಾಖಲಿಸಿ ವಿಚಾರಣೆ ನಡೆಸಬೇಕು ಎನ್ನುವುದು ಆರೋಪಿಗಳ ಬೇಡಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
  ಈ ನಿಟ್ಟಿನಲ್ಲಿ ಮನವಿಯೊಂದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಬಂಧೀಖಾನೆಗಳ ಮುಖ್ಯಸ್ಥರಿಗೆ ನೀಡಲಾಗುವುದು ಎನ್ನಲಾಗಿದೆ.  ಕೇಂದ್ರ ಸರ್ಕಾರ ನಿನ್ನೆ ಹೇಳಿಕೆ ಬಿಡುಗಡೆ ಮಾಡಿ ಫಾದರ್ ಸ್ಟ್ಯಾನ್‌ ಸ್ವಾಮಿ ವಿಷಯದಲ್ಲಿ ಯಾವ ಕಾನೂನು ಉಲ್ಲಂಘನೆಯಾಗಿಲ್ಲ. ಕಾನೂನಿಗನುಗುಣವಾಗಿಯೇ ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದು ತನ್ನ ಪಾತ್ರವನ್ನು ನಿರಾಕರಿಸಿತ್ತು.

  ಇದನ್ನೂ ಓದಿ: ಕರ್ನಾಟಕಕ್ಕೆ ಒಲಿದ ನಾಲ್ಕು ಸಚಿವ ಸ್ಥಾನ; ಇಲ್ಲಿದೆ ನಾಲ್ಕು ಸಚಿವರ ಕಿರು ಪರಿಚಯ

  ಪಾರ್ಕಿನ್​ಸನ್​ ಕಾಯಿಲೆಯಿಂದ ಬಳಲುತ್ತಿದ್ದ ಇವರು ಲೋಟ ಎತ್ತಿಕೊಂಡು ನೀರು ಕುಡಿಯಲು ಸಾಧ್ಯವಿಲ್ಲ ಸ್ಟ್ರಾ ಅಥವಾ ಸಿಪ್ಪರ್​ ಕೊಡಬೇಕು ಎಂದು ಮನವಿ ಸಲ್ಲಿಸಿದ್ದರು ಆದರೆ ಅದನ್ನು ಪೂರೈಸಲು ಜೈಲಿನ ಅಧಿಕಾರಿಗಳು ಸತಾಯಿಸಿದ್ದರು ಎನ್ನುವ ಆರೋಪವಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.  Published by:HR Ramesh
  First published: