ಮದವೇರಿದ ಆನೆಯ ರಂಪಾಟಕ್ಕೆ 17 ಮಂದಿಗೆ ಗಾಯ; ವಿಡಿಯೋ ವೈರಲ್​​

3 ವರ್ಷಗಳ ಹಿಂದೆ ದೇವಾಲಯದ ಆಚರಣೆ ವೇಳೆ ಎರಡು ಆನೆಗLu ಕುಸ್ತಿಗಿಳಿದಿದ್ದವು. ಘಟನೆಯಲ್ಲಿ ಆನೆಗಳ ಕಾಲ್ತುಳಿತಕ್ಕೆ ಸಿಕ್ಕಿ ಓರ್ವ ಮಹಿಳೆ ಸಾವನ್ನಪ್ಪಿದರೆ, 12 ಮಂದಿ ಗಂಭೀರ ಗಾಯಗೊಂಡಿದ್ದರು.

Latha CG | news18-kannada
Updated:September 10, 2019, 6:25 PM IST
ಮದವೇರಿದ ಆನೆಯ ರಂಪಾಟಕ್ಕೆ 17 ಮಂದಿಗೆ ಗಾಯ; ವಿಡಿಯೋ ವೈರಲ್​​
ಆಚರಣೆಯಲ್ಲಿ ಭಾಗವಹಿಸಿದ್ದ ಆನೆಗಳು
Latha CG | news18-kannada
Updated: September 10, 2019, 6:25 PM IST
ಶ್ರೀಲಂಕಾ(ಸೆ.10): ಶ್ರೀಲಂಕಾದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮದವೇರಿದ ಆನೆಯೊಂದು ದಿಕ್ಕುಪಾಲಾಗಿ ಓಡಾಡಿದೆ. ಪರಿಣಾಮ ಆನೆಯ ಕಾಲ್ತುಳಿತಕ್ಕೆ ಸಿಲುಕಿ ಸುಮಾರು 17 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ 13 ಮಂದಿ ಮಹಿಳೆಯರು ಎಂದು ತಿಳಿದು ಬಂದಿದೆ. ಬೌದ್ಧ ಧರ್ಮೀಯರ ಹಬ್ಬದಲ್ಲಿ ಆನೆಯನ್ನು ಬಳಸಿಕೊಳ್ಳಲಾಗಿತ್ತು. ಆನೆಗೆ ವಿದ್ಯುತ್​ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಜೊತೆಗೆ ಆನೆಯ ಮೇಲೆ ಸವಾರಿ ಮಾಡುತ್ತಿದ್ದರು.

ಕೆಜಿಎಫ್​ನಲ್ಲಿ ಹೃದಯ ವಿದ್ರಾವಕ ಘಟನೆ; ಗಣೇಶ ವಿಸರ್ಜನೆ ವೇಳೆ 6 ಮಕ್ಕಳು ನೀರು ಪಾಲು

ಸುತ್ತಮುತ್ತಲಿನ ಜನ ಹಾಗೂ ಸದ್ದುಗದ್ದಲಕ್ಕೆ ಬೆಚ್ಚಿಬಿದ್ದ ಆನೆ ರೊಚ್ಚಿಗೆದ್ದು ದಿಕ್ಕುಪಾಲಾಗಿ ಓಡಿದ್ದರಿಂದ ಈ ಘಟನೆ ಸಂಭವಿಸಿದೆ. ಧಾರ್ಮಿಕ ಆಚರಣೆಯಲ್ಲಿ ಪ್ರಾಣಿಗಳನ್ನು ಬಳಸುವಂತಿಲ್ಲ. ಒಂದು ವೇಳೆ ಬಳಸಿದರೂ ಅನುಮತಿಯ ಮೇರೆಗೆ ಬಳಸಿಕೊಳ್ಳಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ವಿಡಿಯೋ ಕೃಪೆ: ಬಿಬಿಸಿ)

3 ವರ್ಷಗಳ ಹಿಂದೆ ದೇವಾಲಯದ ಆಚರಣೆ ವೇಳೆ ಎರಡು ಆನೆಗಳ ಕುಸ್ತಿಗಿಳಿದಿದ್ದವು. ಘಟನೆಯಲ್ಲಿ ಆನೆಗಳ ಕಾಲ್ತುಳಿತಕ್ಕೆ ಸಿಕ್ಕಿ ಓರ್ವ ಮಹಿಳೆ ಸಾವನ್ನಪ್ಪಿದರೆ, 12 ಮಂದಿ ಗಂಭೀರ ಗಾಯಗೊಂಡಿದ್ದರು.
Loading...

ಅಧಿಕೃತ ದಾಖಲೆಗಳ ಪ್ರಕಾರ, ಶ್ರೀಲಂಕಾ ದೇಶದಲ್ಲಿ ಸುಮಾರು 200 ಸಾಕು ಆನೆಗಳು ಇವೆ.
First published:September 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...