ಪ್ಲಾಸ್ಟಿಕ್(Plastic) ಬಿಟ್ಟು, ಮಾನವನ ಬದುಕೇ(Human Life) ಇಲ್ಲದಂಥ ಪರಿಸ್ಥಿತಿ(Situation) ನಿರ್ಮಾಣವಾಗಿದೆ. ಆದರೆ, ಇದೇ ಪ್ಲಾಸ್ಟಿಕ್ ಭೂಮಿಯನ್ನು(Earth) ಅಪೋಶನ ತೆಗೆದುಕೊಳ್ಳುತ್ತಿರುವುದು ಮಾತ್ರ ದುರಂತ. ಅದೇನೇ ಕಾನೂನು(Law) ಕಟ್ಟಳೆ ಜಾರಿಗೊಳಿಸಿದರೂ ಪ್ಲಾಸ್ಟಿಕ್ ರಾಶಿ ಮಾತ್ರ ಕರಗುತ್ತಿಲ್ಲ ಎನ್ನುವುದು ದುಃಖಕರ ಸಂಗತಿ. ಇಡೀ ಪರಿಸರವನ್ನು(Nature) ಹಾಳು ಮಾಡುತ್ತಿರುವ ಇದೇ ಪ್ಲಾಸ್ಟಿಕ್ ಅನ್ನು ಸಸ್ಯಾಹಾರಿ ಪ್ರಾಣಿಗಳೂ ಸೇವಿಸಿ, ಬದುಕಿಗೇ ಸಂಕಷ್ಟ ತಂದುಕೊಳ್ಳುತ್ತಿದೆ. ಈ ಪ್ಲಾಸ್ಟಿಕ್ ಪ್ರಾಣಿ(Animals) ಸಂಕುಲಕ್ಕೆ ಯಾವ ರೀತಿ ಸಮಸ್ಯೆ ತಂದೊಡ್ಡುತ್ತಿದೆ ಅಂದ್ರೆ ಮಾತು ಬಾರದ ಮುಖ ಪ್ರಾಣಿಗಳು ಅದನ್ನ ಸೇವನೆ ಮಾಡಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ.
ಅದ್ರಲ್ಲೂ ಮನುಷ್ಯ ಮತ್ತು ಕಾಡಾನೆಗಳ ಸಂಘರ್ಷ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ.. ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತಿರುವ ಕಾಡಾನೆಗಳು ಮನುಷ್ಯ ಬೆಳೆದ ಬೆಳೆಗಳನ್ನು ತಿಂದು ತುಳಿದು ನಾಶ ಮಾಡಿ ಹೋಗುತ್ತಿವೆ. ಆದರೆ ಇದಿಷ್ಟೇ ಆದ್ರೆ ಪರವಾಗಿಲ್ಲ ಪ್ರಾಣಿಗಳಿಗೆ ಏನು ಆಗಿಲ್ಲ ಎಂದು ಕೊಳ್ಳಬಹುದಿತ್ತು. ಆದರೆ ಈ ರೀತಿ ಕಾಡಾನೆಗಳು ಆಹಾರ ಅರಸಿ ನಗರಪ್ರದೇಶಕ್ಕೆ ಬರುವಾಗ ರಸ್ತೆ ದಾಟುವ ವೇಳೆ ಬೃಹತ್ ಗಾತ್ರದ ವಾಹನಗಳು ಡಿಕ್ಕಿಯಾಗಿ ಸಾವನ್ನಪ್ಪಿದ್ದ ಘಟನೆಗಳು ಕೂಡ ನಡೆದಿತ್ತು.. ಆದ್ರೆ ಈಗ ಇದನ್ನೆಲ್ಲಾ ಮೀರಿಸುವಂತಹ ಭಯಾನಕ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.
ಪ್ಲಾಸ್ಟಿಕ್ ಸೇವಿಸಿ ಶ್ರೀಲಂಕಾದಲ್ಲಿ 20 ಆನೆಗಳ ಸಾವು..
ಪೂರ್ವ ಶ್ರೀಲಂಕಾದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸಿ ಆನೆಗಳು ಸಾವನ್ನಪ್ಪುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದ್ದು ಈ ಕುರಿತು ಪ್ರಾಣಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.ಶ್ರೀಲಂಕಾ ರಾಜಧಾನಿ ಕೊಲೊಂಬೊದಿಂದ ಸುಮಾರು 210 ಕಿ.ಮೀ
ದೂರದಲ್ಲಿರುವ ಅಂಪಾರಾ ಜಿಲ್ಲೆಯ ಪಲ್ಲಕ್ಕಾಡು ಗ್ರಾಮದಲ್ಲಿರುವ ಕಸದ ಡಂಪಿಂಗ್ ಯಾರ್ಡ್ ನಲ್ಲಿ ಪ್ಲಾಸ್ಟಿಕ್ ಸೇವಿಸಿ ಕಳೆದ ಎಂಟು ವರ್ಷಗಳಲ್ಲಿ ಸುಮಾರು 20 ಆನೆಗಳು ಸಾವನ್ನಪ್ಪಿವೆ..
ಇದನ್ನೂ ಓದಿ: ನಾಯಿಗೆ ಹೊಡೆಯಬೇಡಿ ಎಂದು ಹೇಳಿದ ಯುವತಿಯನ್ನೇ ಕಚ್ಚಿದ ಮಹಿಳೆ!
ಇನ್ನು ಕಳೆದ ವಾರ ಪೂರ್ವ ಶ್ರೀಲಂಕಾದಲ್ಲಿ ಎರಡು ಆನೆಗಳು ಸಾವನ್ನಪ್ಪಿದ ಬಳಿಕ ಆನೆಗಳ ಸಾವಿಗೆ ನಿಖರ ಕಾರಣ ಏನು ಎಂದು ಹುಡುಕಿ ಹೊರಟಾಗ ಆನೆಗಳ ಸಾವಿಗೆ ಕಾರಣವಾಗಿರುವುದು ಪ್ಲಾಸ್ಟಿಕ್ ಎಂದು ತಿಳಿದುಬಂದಿದೆ
ಆನೆಗಳ ಹೊಟ್ಟೆಯಲ್ಲಿತ್ತು ಪ್ಲಾಸ್ಟಿಕ್..!
ಮೃತ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ ಅವುಗಳ ಹೊಟ್ಟೆಯಲ್ಲಿ ದೊಡ್ಡಪ್ರಮಾಣದಲ್ಲಿ ಪ್ಲಾಸ್ಟಿಕ್ ಗಳು ಇರುವುದು ಕಂಡುಬಂದಿದೆ ಎಂದು ವನ್ಯಜೀವಿ ಪಶುವೈದ್ಯ ನಿಹಾಲ್ ಪುಷ್ಪಕುಮಾರ್ ಹೇಳಿದ್ದಾರೆ.ಇನ್ನು
ಮರಣೋತ್ತರ ಪರೀಕ್ಷೆಯಲ್ಲಿ ಪ್ಲಾಸ್ಟಿಕ್ ಮಾತ್ರ ಪತ್ತೆಯಾಗಿರಲಿಲ್ಲ. ಪಾಲಿಥಿನ್, ಆಹಾರ ಪೊಟ್ಟಣಗಳ ಕವರ್ಗಳು ಕೂಡಾ ಪತ್ತೆಯಾಗಿದ್ದವು. ಆನೆಯೊಂದು ಸೇವಿಸಿ, ಜೀರ್ಣಿಸಿಕೊಳ್ಳಬಹುದಾದ ಗಿಡಮರಗಳ ಎಲೆಗಳಂಥಹ ಯಾವುದೇ ಅಂಶ ಪತ್ತೆಯಾಗಿಲ್ಲ .
ವನ್ಯಜೀವಿ ವಲಯಗಳ ಸಮೀಪದಲ್ಲಿ 54 ತ್ಯಾಜ್ಯ ಡಂಪ್ ಪ್ರದೇಶ..
ಶ್ರೀಲಂಕಾದಲ್ಲಿ ನೂರಾರು ತ್ಯಾಜ್ಯ ಡಂಪ್ಗಳಿವೆ. ಆದರಲ್ಲಿ ಸುಮಾರು 54 ತ್ಯಾಜ್ಯ ಡಂಪ್ ಪ್ರದೇಶಗಳು ವನ್ಯಜೀವಿ ವಲಯಗಳ ಸಮೀಪದಲ್ಲಿವೆ. ಸುಮಾರು 300 ಆನೆಗಳು ಅವುಗಳ ತ್ಯಾಜ್ಯ ಡಂಪ್ಗಳ ಬಳಿ ಸುತ್ತಾಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಲ್ಲದೆಆಹಾರ ಹುಡುಕಿಕೊಂಡು ನಗರಪ್ರದೇಶಗಳತ್ತ ಹೆಜ್ಜೆಹಾಕುವ ಆನೆಗಳು ಅಲ್ಲಿನ ಆಹಾರ ಸೇವಿಸುವ ಭರದಲ್ಲಿ ಪ್ಲಾಸ್ಟಿಕ್ ಗಳನ್ನು ಕೂಡ ನುಂಗುತ್ತಿವೆ. ಇವು ಕರಗದೆ ಹೊಟ್ಟೆಯಲ್ಲೇ ಉಳಿದು ಅವುಗಳ ಸಾವಿಗೆ ಕಾರಣವಾಗುತ್ತಿವೆ.
ಇನ್ನು ವಿಪರ್ಯಾಸವೆಂದರೆ ಶ್ರೀಲಂಕಾದಲ್ಲಿ ಆನೆಗಳನ್ನು ಪೂಜಿಸಲಾಗುತ್ತದೆ. ಆದರೆ ಇದೇ ರಾಷ್ಟ್ರದಲ್ಲಿ ಆನೆಗಳು ಅಳಿವಿನಂಚಿನಲ್ಲಿವೆ. 2011ರಲ್ಲಿ 14 ಸಾವಿರದಷ್ಟಿದ್ದ ಆನೆಗಳ ಸಂಖ್ಯೆ ಇದೀಗ 6 ಸಾವಿರಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ: 190ನೇ ವಸಂತಕ್ಕೆ ಕಾಲಿಟ್ಟ ವಿಶ್ವದ ದೀರ್ಘಾಯುಷಿ ಆಮೆ!
ಆನೆ ಕಸದ ರಾಶಿ ಮುಂದೆ ನಿಂತಿದ್ದ ಫೋಟೋ ಶೇರ್ ಮಾಡಿದ ಅರಣ್ಯ ಅಧಿಕಾರಿ
ಇನ್ನು ಶ್ರೀಲಂಕಾದಲ್ಲಿ ನಡೆದಿರುವ ಘಟನೆ ಹೋಲಿಕೆಯಾಗುವ ಈ ಹಿಂದೆ ಅರಣ್ಯಧಿಕಾರಿ ಪ್ರವೀಣ್ ಕಾಸ್ವಾನ್ ಎನ್ನುವವರು ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.. ಆ ಫೋಟೋದಲ್ಲಿ ರಾಶಿರಾಶಿ ಕಸದ ಮುಂದೆ ಆನೆಯೊಂದು ನಿಂತು ನೋಡುತ್ತಿತ್ತು.. ಅಲ್ಲದೇ ಆ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಬಯಲಾಗಿ ಪ್ಲಾಸ್ಟಿಕ್ ಮನುಕುಲವನ್ನು ಹೇಗೆ ನಾಶ ಮಾಡುತ್ತಿದ್ದೇವೆ ಎಂದು ಜನರು ಸಾಕಷ್ಟು ಆತಂಕ ಕೂಡ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ